Police Bhavan Kalaburagi

Police Bhavan Kalaburagi

Sunday, July 25, 2021

BIDAR DISTRICT DAILY CRIME UPDATE 25-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-07-2021

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸರಸ್ವತಿ ಗಂಡ ವೈಜಿನಾಥ ಹಜ್ಜರಗೆ ವಯ: 80 ವರ್ಷ, ಜಾತಿ: ಲಿಂಗಾಯತ, ಸಾ: ಸಿಕಿಂದ್ರಾಪೂರ ರವರ ಹಿರಿಯ ಮಗ ರವಿ ತಂದೆ ವೈಜಿನಾಥ ಹಜ್ಜರಿಗೆ ವಯ: 48 ಇತನು ತನ್ನ ಹೆಂಡತಿ ಮಕ್ಕಳೊಂದಿಗೆ ಹೈದ್ರಾಬಾದದಲ್ಲಿ ವಾಸವಾಗಿದ್ದು, ಆಟೋ  ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತಾನೆ, ಹೀಗಿರುವಾಗ ಈಗ ಎರಡು ದಿವಸಗಳ ಹಿಂದೆ ರವಿ ಇತನು ಹೈದ್ರಾಬಾದದಲ್ಲಿ ಬಹಳ ಮಳೆ ಬಿಳುತ್ತಿದೆ ಎನೂ ಕೆಲಸ ನಡಯುತ್ತಿಲ್ಲಾ ಅಂತ ಊರಿಗೆ ಬಂದು ರವಿ ಇತನು ತನ್ನ ಮಗಳ ಮದುವೆ ಸಲುವಾಗಿ ಖಾಸಗಿ ಸಾಲ ಮಾಡಿದ್ದು, ಇತ್ತಿಚಿಗೆ ಹೈದ್ರಾಬಾದದಲ್ಲಿ ಸರಿಯಾಗಿ ಕೆಲಸ ನಡೆಯದೇ ಇರುವುದರಿಂದ ಜೀವನ ನಡೆಸಲು ಹಣದ ತೊಂದರೆ ಆಗುತ್ತಿರುವ ಪ್ರಯುಕ್ತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮೂರಿನ ಮಲ್ಲರಾವ ಜಾಗಿರದಾರ ರವರ ಹೋಲದಲ್ಲಿನ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಆತನ ಸಾವಿನ ಬಗ್ಗೆ ನಮ್ಮದು ಯಾರ ಮೇಲೆ ಯಾವುದೆ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೇಟ್ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 46/2021, ಕಲಂ. 379 ಐಪಿಸಿ :-

ದಿನಾಂಕ 28-05-2021 ರಂದು 1100 ಗಂಟೆಯ ಸುಮಾರಿಗೆ ಫಿರ್ಯಾದಿ ದಿಲೀಪಕುಮಾರ ತಂದೆ ಶ್ರಾವಣ ಕಾಂಬಳೆ ಸಾ: ಬುತ್ತಿ ಬಸವಣ್ಣಾ ಮಂದಿರ ಹತ್ತಿರ ಬೀದರ ರವರು ತನ್ನ ದ್ವೀಚಕ್ರ ವಾಹನ ಸಂ. ಕೆ.-38/ಕೆ-8643, ಅ.ಕಿ 25,000/- ರೂ. ಬೆಲೆಬಾಳುವುದನ್ನು ರೇಲ್ವೇ ಸ್ಟೇಷನ್ ಮುಂದೆ ಇರುವ ಪಾರ್ಕಿಂಗ ಸ್ಥಳದಲ್ಲಿ ನಿಲ್ಲಿಸಿ ಚಹಾ ಕುಡಿಯುವ ಕುರಿತು ರೇಲ್ವೇ ಸ್ಟೇಷನ್ ಮುಂದೆ ಇರುವ ಹೊಟೆಲಗೆ ಹೋಗಿ ಚಹಾ ಕುಡಿದು ಮರಳಿ ಬಂದು ನೋಡಲು ಸದರಿ ದ್ವೀಚಕ್ರ ವಾಹನ ಇರಲಿಲ್ಲ, ಆಗ ಫಿರ್ಯಾದಿಯು ತನ್ನ ಗೆಳೆಯ ಪ್ರಮೋದ ಇಬ್ಬರೂ ಕೂಡಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಸದರಿ ವಾಹನ ಸಿಕ್ಕಿರುವುದಿಲ್ಲ, ಸದರಿ ದ್ವೀಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 125/2021, ಕಲಂ. 380 ಐಪಿಸಿ :-

ಫಿರ್ಯಾದಿ ನಾಗರಾಜ ತಂದೆ ಶಂಕರರಾವ ರೇಬಲ್ಲಿ, ವಯ: 37 ವರ್ಷ, ಜಾತಿ: ನೀಲಗಾರ, ಸಾ: ಬಸವಕಲ್ಯಾಣ, ಸದ್ಯ: ಶಿವನಗರ ಹುಮನಾಬಾದ ರವರಿಗೆ 2017 ನೇ ಸಾಲಿನಲ್ಲಿ ತಂದೆ ತಾಯಿಯವರು ಸಂಗಾರೆಡ್ಡಿ ನಗರದ ಮಾಣಿಕ್ಯಾಂ ಇವರ ಮಗಳಾದ ಮಾನಸ ಜಕ್ಕನಗಾರಿ ಇವಳೊಂದಿಗೆ ಮದುವೆ ಮಾಡಿದ್ದು, 3 ವರ್ಷದ ಗಂಡು ಮಗು ಇರುತ್ತಾನೆ, ಈಗ 3 ವರ್ಷಗಳಿಂದ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಮಧ್ಯ ಸಣ್ಣ ಸಣ್ಣ ವಿಷಯಕ್ಕೆ ಜಗಳ ಮಾಡಿ ತಕರಾರು ಮಾಡಿಕೊಂಡು ಫಿರ್ಯಾದಿಯ ಜೊತೆ ಇರದೇ ತನ್ನ ªÀರು ಮನೆಯಲ್ಲಿ ವಾಸವಿರುತ್ತಾಳೆ, ಹೆಚಿಡತಿಯು ಫಿರ್ಯಾದಿಯ ಮನೆಯವರ ವಿರುಧ್ಧ ಕೇಸ ಮಾಡುತ್ತೇನೆ ಅಂತಾ ಆಗಾಗ ಹೇದರಿಸುತ್ತಿರುವುದರಿಂದ ಫಿರ್ಯಾದಿಯು ಈಗ 3 ತಿಂಗಳಿಂದ ಹುಮನಾಬಾದ ಶಿವನಗರ ದಿಲ್ಲಿ ಪಟೇಲ ರವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ಇರುತ್ತದೆ, ಹೀಗಿರಲು ದಿನಾಂಕ 20-05-2021 ರಂದು 0800 ಗಂಟೆಗೆ ಫಿರ್ಯಾದಿಯು ಮನೆಯಲ್ಲಿರುವಾ ಹೆಂಡತಿ ಮಾನಸ ಇವಳು ಮನೆಗೆ ಬಂದು ಫಿರ್ಯಾದಿಯ ಜೊತೆ ಜಗಳ ಮಾಡಿ ಹೋಗಿರುತ್ತಾಳೆ, ನಂತರ ಫಿರ್ಯಾದಿಯು ತಮ್ಮ ಮನೆಯ ಟೇಬಲ ಮೇಲಿದ್ದ ಒಂದು ಬ್ಯಾಗಿನಲ್ಲಿ 1) ಒಂದು ಲಿನವೋ ಕಂಪನಿಯ ಲ್ಯಾಪಟಾಪ ಮತ್ತು ಚಾರ್ಚರ್ .ಕಿ 50,000/- ರೂ., 2) ಪ್ಯಾನಕಾರ್ಡ, 3) ಐಸಿಐಸಿ ಬ್ಯಾಂಕಿನ .ಟಿ.ಎಂ ಕಾರ್ಡ ನೇವು ಇರುವದನ್ನು ಹುಡಕಾಡಿ ನೋಡಲು ಎಲ್ಲಿಯೂ ಸಿಕ್ಕಿgÀÄವುದಿಲ್ಲ, ಫಿರ್ಯಾದಿಯ ಹೆಂಡತಿ ಮಾನಸ ಇವಳು ಜಗಳ ಮಾಡಿ ಮನೆಯಲ್ಲಿದ್ದ ಬ್ಯಾಗದಲ್ಲಿದ್ದ ಸದರಿ ವಸ್ತುಗಳು ¼Àವು ಮಾಡಿಕೊಂಡು ಹೋಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 24-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 49/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 23-07-2021 ರಂದು ಚವಳಿ ಗ್ರಾಮದ ಭವಾನಿ ಮಂದಿರದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಶಿವರಾಜ ಪಾಟೀಲ್ ಪೊಲೀಸ್ ಉಪ ನಿರೀಕ್ಷಕರು ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಚವಳಿ ಗ್ರಾಮದ ಭವಾನಿ ಮಂದಿರದ ಪಕ್ಕದಲ್ಲಿ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಂದಿರ ಮೇಲಿನ ಲೈಟಿನ ಬೆಳಕಿನಲ್ಲಿ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಸಂಜುಕುಮಾರ ತಂದೆ ಸಿದ್ರಾಮಶೆಟ್ಟಿ ವಾಲ್ದೊಡ್ಡ, 2) ಬಾಬುರಾವ ತಂದೆ ಕಂಟೆಪ್ಪಾ ಬಾಳೂರೆ, 3) ಆನಂದಕುಮಾರ ತಂದೆ ಶಾಮರಾವ ಕೊಳ್ಳೂರೆ, 4) ತುಕಾರಾಮ ತಂದೆ ಅಮೃತ ಖ್ಯಾಮಾ ಹಾಗೂ 5) ಅನೀಲ ತಂದೆ ಶರಣಪ್ಫಾ ಬಾಳೂರೆ ಎಲ್ಲರೂ ಸಾ: ಚವಳಿ ಗ್ರಾಮ ಇವರೆಲ್ಲರ ಮೇಲೆ ದಾಳಿ ಮಾಡಿ ಅವರಿಂದ ಒಟ್ಟು ನಗದು ಹಣ 7200/- ರೂ. ಹಾಗೂ ಒಟ್ಟು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 120/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 24-07-2021 ರಂದು ಬಸವಕಲ್ಯಾಣ ನಗರದ ಭಾಂಡೆ ಮಾರ್ಕೇಟ್ ಶಿವ ಹೊಟೇಲ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಅಮರ ಸಿ ಕುಲಕರ್ಣಿ ಪಿ.ಎಸ್. [ಕಾ&ಸೂ] ಬಸವಕಲ್ಯಾಣ ನಗರ ಪೋಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಭಾಂಡೆ ಮಾರ್ಕೇಟ್ ಶಿವ ಹೊಟೇಲ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಶಿವ ಹೊಟಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಪ್ರವೀಣ ತಂದೆ ಸುರ್ಯಕಾಂತ ವಾಡೆ ವಯ: 28 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಧರ್ಮ ಪ್ರಕಾಶ ಗಲ್ಲಿ ಬಸವಕಲ್ಯಾಣ ಹಾಗೂ 2) ತೋಸೀಫ ತಂದೆ ಅಬ್ದುಲ ಖಾದರ ಸೋಫೆವಾಲೆ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಪಾಶಾಪೂರ ಬಸವಕಲ್ಯಾಣ ಇವರಿಬ್ಬರು ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಅವರಿಂದ 1) ನಗದು ಹಣ 3700/- ರೂ., 2) 02 ಮಟಕಾ ಚೀಟಿಗಳು ಹಾಗು 3) 2 ಬಾಲ್ ಪೆನ್ ಬಾಲ್ ಪೆನ್ ಸಿಕ್ಕಿರುತ್ತದೆ, ನೇದವುಗಳನ್ನು ತನ್ನ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.