Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ 392 ಐಪಿಸಿ;- ದಿನಾಂಕ
29/10/2017 ರಂದು 7 ಪಿಎಂಕ್ಕೆ ಪಿರ್ಯಾದಿ ಶ್ರೀ ದವಲಪ್ಪ ಬಿ ಹೆಚ್ ವಃ 44 ಜಾಃ ಬೇಡರು
ಉಃ ಸಹಾಯಕ ಪ್ರದ್ಯಾಪಕರು ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ತರು ಸರಕಾರಿ ಡಿಗ್ರಿ
ಕಾಲೇಜ ಚಿತ್ತಾಪೂರ ರೋಡ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಲೇಟರ ಪ್ಯಾಡ
ಅಜರ್ಿ ಕೊಟ್ಟಿದ್ದರ ಸಾರಾಂಶವೆನೆಂದರೆ ನಾನು ಸರಕಾರಿ ಡಿಗ್ರಿ ಕಾಲೇಜ ಯಾದಗಿರಿದಲ್ಲಿ
ಸುಮಾರು ಹತ್ತು ವರ್ಷಗಳಿಂದ ಸಹಾಯಕ ಪ್ರಾದ್ಯಾಪಕರು ಹಾಗೂ ಭೌತಶಾಸ್ತ್ರ ವಿಭಾಗದ
ಮುಖ್ಯಸ್ತರು ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಬೇಡರು ಜಾತಿಯವನಾಗಿದ್ದು
ದಿನಾಲು ಕಲಬುರಗಿಯಿಂದ ಯಾದಗಿರಿಗೆ ರೈಲಿನ ಮೂಲಕ ಬಂದು ಹೋಗುವುದು ಮಾಡುತ್ತೇನೆ.ದಿನಾಂಕ
28/10/2017 ರಂದು ನಸುಕಿನ 2-30 ಗಂಟೆ ಸುಮಾರಿಗೆ ಬೌತಶಾಸ್ತ್ರ ವಿಭಾಗದ ಪ್ರಾಟಿಕಲ್
ಹಾಲ ಲ್ಯಾಬ ಒಂದಲ್ಲಿ ಅಕಡೆಮಿಕ್ ಮತ್ತು ರಿಸರ್ಚಗೆ ಸಂಭಂದಿಸಿದ ಕೆಲಸ ಮುಗಿಸಿಕೊಂಡು
ರೈಲಿನ ಮೂಲಕ ಕಲಬುರಗಿಗೆ ಹೋಗಲು ಒಂದನೇ ಮಹಡಿಯಿಂದ ಕೆಳಗೆ ಇಳಿದು ಬಂದಾಗ ಅಲ್ಲಿಯೇ ದ್ವಜ
ಸ್ಥಂಬದ ಕಟ್ಟೆಯ ಮೇಲೆ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ಮೂರು ಜನ ನಿಂತಿದ್ದರು.
ಅದರಲ್ಲಿ ಭಿಮರಾಯನು ಏ ಮಾಸ್ತರ ಸೇರಿ ಕುಡಿಯೋ ಎಂದು ಛೇಡಿಸಿ ಬೈಯುತ್ತಾ ವಿನಾಃಕಾರಣ
ಜಗಳಾ ತೆಗೆದು ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಮುಖದ ಮೇಲೆ ಕೈಯಿಂದ ಹೊಡೆದನು.
ನಂತರ ಮೂರು ಜನರು ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಪುನಃ ನನ್ನನ್ನು ಒಂದನೇ
ಮಹಡಿಗೆ ಲ್ಯಾಬ ಒಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಿ ಸಿಸಿ ಕ್ಯಾಮರಾದ ಕೇಬಲ
ವೈರನ್ನು ಕಡಿದು ಹಾಕಿದರು. ರಂಡಿ ಮಗನೇ ಬೋಸಡಿ ಮಗನೇ ಸರಾಯಿ ಕುಡಿಯೋ ಎಂದು ಒತ್ತಾಯ
ಪೂರ್ವಕವಾಗಿ ಬಿಯರ್ ಕುಡಿಸಲು ಯತ್ನಿಸಿದರು. ಆದರೆ ನಾನು ಕುಡಿಯಲಿಲ್ಲಾ, ಆಗ ಆ ಬಿಯರ್
ಬಾಟಲಿಯನ್ನು ನನ್ನ ಟೇಬಲ್ ಮೇಲೆ ಒಡೆದು ಇದರಿಂದಲೇ ನಿನ್ನನ್ನು ಕೊಂದು ಬಿಡುತ್ತೇವೆ
ನಿನ್ನ ಮೈಯಲ್ಲಾ ಕಡೆ ರಕ್ತ ಚೆಲ್ಲಿ ನಿನ್ನ ತಲೆ ಕೆಂಪಗಾಗಿ ಬಿಡುತ್ತದೆಂದು
ಹೆದರಿಸಿದರು. ನೀನು ಯಾವದೇ ಪರೀಕ್ಷೇಯಲ್ಲಿ ಪರೀಕ್ಷಕರಾಗಿ ಇರಕೂಡದು ಎಲ್ಲಾ
ವಿದ್ಯಾಥರ್ಿಗಳು ಉತ್ತಿರ್ಣರಾಗಬೇಕು ಯಾರು ಅನುತ್ತಿರ್ಣರಾಗಬಾರದು ಇಲ್ಲವಾದರೇ
ನಿನ್ನನ್ನು ಮುಗಿಸಿಬುಡುತ್ತೇವೆಂದರು ಅಲ್ಲದೆ ನಾಳಿನ ಥೇರಿ ಪ್ರಶ್ನೇ ಪತ್ರಿಕೆಗಳು ಯಾವ
ಲಾಕರನಲ್ಲಿವೆ ಎನ್ನುತ್ತಾ ತಮ್ಮ ಮೋಬೈಲನಲ್ಲಿ ರಿಕಾಡರ್ಿಂಗ ಮಾಡಿಕೊಳ್ಳುತ್ತಿದ್ದರು.
ನಾನು ಯಾವುದಕ್ಕೂ ಬಾಯಿ ಬಿಡದೆ ಇದ್ದಾಗ ಮುಖದ ಮೇಲೆ ಬೆನ್ನಮೇಲೆ ಕೈಯಿಂದ ಹೊಡೆದು
ಗುಪ್ತಗಾಯಮಾಡಿದ್ದು ಇರುತ್ತದೆ. ಈಗ ನನಗೆ ರೂ.20,000/- ರೂ ಕೊಡಲೇಬೆಕು ಇಲ್ಲವಾದರೆ
ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಹೆದರಿಸಿ ನನ್ನ ಕೈಯಲ್ಲಿದ್ದ ಚಿನ್ನದ
ಉಂಗುರ (6 ಗ್ರಾಂ) ಕಸಿದು ಕೊಂಡರು. ನಿನ್ನ ಎಟಿಎಂ ಕಾರ್ಡ ಎಲ್ಲಿದೆ ನಡಿ ಎಟಿಎಂನಿಂದ ಹಣ
ಡ್ರಾ ಮಾಡಿಕೊಡು ಎನ್ನುತ್ತಾ ಎಲ್ಲಾ ಜೇಬುಗಳಲ್ಲಿ ಕೈಹಾಕಿ ಪಾಕೆಟನ್ನು ಕಿತ್ತುಕೊಂಡರು
ಅದರಲ್ಲಿದ್ದ ರೂಪಾಯಿ 900-00 ರೂ ತೆಗೆದುಕೊಂಡು ಇನ್ನೂ ಹಣ ಬೇಕೆಂದು ಪಿಡಿಸುತ್ತಿದ್ದರು
ಕಡ್ಡಿ ಕೊರೆದು ಸೀಗರೇಟು ಸೇದುತ್ತಾ ನಿನ್ನ ಕಾಲೇಜಿಗೆ ಬೆಂಕಿ ಹಚ್ಚಿ ಸುಡುತ್ತೇವೆ ಹಣ
ಕೊಡದಿದ್ದರೆ ಇಲ್ಲಿರುವ ಕಂಪ್ಯೂಟರ ಮತ್ತು ಬೆಲೆ ಬಾಳುವ ಉಪಕರಣಗಳನ್ನು ತೆಗೆದುಕೊಂಡು
ಹೋಗುತ್ತೆವೆಂದು ಹೆದರಿಸಿದ್ದು ಇರುತ್ತದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ
ನಿನ್ನನ್ನು ಕೊಲೆ ಮಾಡಿ ಬಿಡುತ್ತೆವೆಂದು ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ನಾನು
ಜೀವದ ಭಯದಿಂದ ಅಂಜಿಕೊಂಡು ಸುಮ್ಮನಿದ್ದುಕೊಂಡು ಮೆಲ್ಲಗೆ ರೈಲು ನಿಲ್ದಾಣಕ್ಕೆ
ನಡೆದುಕೊಂಡು ಬಂದೆನು. ನಾನು ಪೊಲೀಸ್ ಠಾಣೆಗೆ ಅಥವಾ ಯಾರಿಗಾದರೂ ವಿಷಯ
ತಿಳಿಸುತ್ತೇನೆಂದು ರೈಲು ನಿಲ್ದಾಣದವರೆಗೆ ಬೈಯುತ್ತಾ ನನ್ನನ್ನು ಹಿಂಬಾಲಿಸಿದರು. ರೈಲು
ನಿಲ್ದಾಣದಲ್ಲಿ ನನ್ನ ಮೋಬೈಲನ್ನು ವಾಪಸ್ ಕೊಟ್ಟರು. ಕನರ್ಾಟಕ ಎಕ್ಸಪ್ರೆಸ್ ರೈಲಿನ ಮೂಲಕ
ನಾನು ಯಾದಗಿರಿಯಿಂದ ಕಲಬುರಗಿಗೆ ಬಂದು ಜೀವದ ಭಯದಿಂದ ಹೆದರಿ ಈ ವಿಷಯವನ್ನು ನಮ್ಮ
ಮನೆಯವರಿಗೆ ತಿಳಿಸಿದೆನು. ಅಣ್ಣ ತಮ್ಮಂದಿರಿಗೆ, ಹೆಂಡತಿಗೆ ವಿಚಾರಿಸಿ ತಮ್ಮಲ್ಲಿ ಬಂದು
ದೂರು ನೀಡಲು ತಡವಾಗಿರುತ್ತದೆ. ಇನ್ನೂ ಮುಂದೆಯೂ ನನಗೆ ಮತ್ತು ನನ್ನ ಕುಟುಂಬದವರ
ಜೀವಕ್ಕೆ ಏನಾದರೂ ಅಪಾಯವಾದರೆ ಅದಕ್ಕೆ ಇವರುಗಳೆ ನೇರ ಹೊಣೆಗಾರರಾಗಿರುತ್ತಾರೆ. ಇನ್ನೂ
ಮುಂದೆ ದಿನಾಲು ರೈಲಿನಲ್ಲಿ ಕಲಬುರಗಿಯಿಂದ ಯಾದಗಿರಗೆ ಬಂದು ಹೋಗುವುದು ಇರುತ್ತದೆ ಈ
ಮೇಲಿನ ಆರೋಪಿಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಂಡು ನನಗೆ ನ್ಯಾಯಾ
ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.ಅಂತಾ ನೀಡಿದ ಅಜರ್ಿಯ
ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.211/2017 ಕಲಂ.392 ಐಪಿಸಿ ಪ್ರಕಾರ ಗುನ್ನೆ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 299/2017 ಕಲಂಃ 341, 143, 147, 148, 323, 324, 504, 354, 307, 504, 506 ಸಂಗಡ 149 ಐ.ಪಿ.ಸಿ.;-
ದಿನಾಂಕ: 29-10-2017 ರಂದು 9:00 ಪಿ.ಎಮ್.ಕ್ಕೆ ಶ್ರೀಮತಿ ರಾಜಮ್ಮ ಗಂಡ ಮೌನುದ್ದೀನ
ಸಾ: ನಾಗರಾಳ ತಾ:ಸುರಪೂರ ಇವರು ಠಾಣೆಗೆ ಬಂದು ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ
ಅಜರ್ಿ ಹಾಜರು ಪಡಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:29-10-2017 ರಂದು ಸಾಯಂಕಾಲ
6:00 ಗಂಟೆಗೆ ಫಿಯರ್ಾದಿ ಮತ್ತು ಅವಳ ಮಾವನ ಮಗ ಮೌನುದ್ದೀನ ಇಬ್ಬರು ದೇವಾಪೂರ ಸೀಮಾಂತರದ
ತಮ್ಮ ಹೊಲದಿಂದ ಹೊರಟಾಗ ಹೊಲದ ಹತ್ತಿರ ಆರೋಪಿತರೆಲ್ಲರೂ ಕೂಡಿ ಅಕ್ರಮ ಕೂಟ ಕಟ್ಟಿಕೊಂಡು
ಕೈಯಲ್ಲಿ ಕುಡುಗೋಲು ಕುರುಪಿ ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ಫಿಯರ್ಾದಿವರು
ಹೊರಟಾಗ ಅಡ್ಡ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಗಾಯ
ಪಡಿಸಿದ್ದಲ್ಲದೇ ಅವರಿಗೆ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಬೆದರಿಕೆ
ಹಾಕಿದ್ದು ಇದೆ ಅವರ ಮೇಲೇ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಇದ್ದ
ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.299/2017 ಕಲಂ. 341, 143, 147, 148, 323,
324, 504, 354, 307, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ
ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 27/2017 ಕಲಂ 174[ಸಿ] ಸಿ.ಆರ್.ಪಿ.ಸಿ;- 27/2017
ಕಲಂ 174[ಸಿ] ಸಿ.ಆರ್.ಪಿ.ಸಿ;- ದಿನಾಂಕ 29/10/2017 ರಂದು ಸಾಯಂಕಾಲ 17-00 ಗಂಟೆಗೆ
ಫಿರ್ಯಾದಿ ಶ್ರೀ ಚನ್ನಬಸಯ್ಯ ತಂದೆ ಚಂದ್ರಶೇಖರಯ್ಯ ಷಡಕ್ಷರಿ ಮಠ ವಯ 22 ವರ್ಷ ಜಾತಿ
ಜಂಗಮ ಸಾಃ ಪರಹತಾಬಾದ ತಾಃ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್
ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ತಮ್ಮನಾದ ಪ್ರಭುದೇವ ವಯ 20 ವರ್ಷ
ಈತನು ಸುಮಾರು 1 ತಿಂಗಳಿನಿಂದ ಶಹಾಪೂರದ ಅಂಬ್ರಣ್ಣ ತಂದೆ ಮಹಾಂತಪ್ಪ ಕುಂಬಾರ ಇವರ
ಗುಡಗುಂಟಿ ಪೆಟ್ರೋಲ್ ಪಂಪದಲ್ಲಿ ಪೇಟ್ರೋಲ್ ಹಾಕುವ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೆ
ಇದ್ದನ್ನು ವಾರಕ್ಕೆ ಅಥವಾ 15 ದಿನಗಳಿಗೊಮ್ಮೆ ಉರಿಗೆ ಬಂದು ಹೋಗುವದು ಮಾಡುತಿದ್ದ.
ಹೀಗಿರುವಾಗ ದಿನಾಂಕ 26/10/2017 ರಂದು ರಾತ್ರಿ 23-45 ಗಂಟೆಗೆ ಶಹಾಪೂರದ ಶಂಕರ ತಂದೆ
ನಾಗಪ್ಪ ಮುಂಡಾಸ ಇವರು ನನ್ನ ತಮ್ಮನ ಮೋಬೈಲ್ ನಂಬರ 7406044765 ನೇದ್ದರಿಂದ
ಫಿರ್ಯಾದಿಯ ತಂದೆಯ ಮೋಬೈಲ್ ನಂಬರ 8971463935 ನೇದ್ದಕ್ಕೆ ಕಾಲ್ ಮಾಡಿ ನಾನು
ನಡೆದುಕೊಂಡು ಹೋಗುತಿದ್ದಾಗ ನಡೆದುಕೊಂಡು ಮನೆಯ ಕಡೆಗೆ ಹೋಗುತಿದ್ದಾಗ ರಾಂಕಗೇರಾ ಏರಿಯಾದ
ರಾಯಪ್ಪ ಮುತ್ಯಾ ದೇವರ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ನರಳಾಡುವ ಶಬ್ದ ಕೇಳಿ ಅವನ
ಹತ್ತಿರ ಹೋಗಿ ನನ್ನ ಹತ್ತಿರವಿದ್ದ ಮೋಬೈಲ್ ಟಾರ್ಚಜನಿಂದ ನೋಡಲಾಗಿ ಅಂದಾಜು 18 ವರ್ಷದ
ಹುಡಗನಿದ್ದು ಅವನ ಹತ್ತಿರ ಒಂದು ಮದ್ಯದ ಬಾಟಲಿ ಮತ್ತು ಒಂದು ಕ್ರಿಮಿನಾಶಕ ಔಷದಿಯ
ಬಾಟಲಿ ಹಾಗೂ ಒಂದು ಮೋಬೈಲ್ ಬಿದ್ದಿತ್ತು ಹುಡಗನಿಗೆ ವಿಚಾರಣೆ ಮಾಡಿದಾಗ ತನ್ನ ಹೆಸರು
ಪ್ರಭುದೇವ ತಂದೆ ಚಂದ್ರಶೇಖರಯ್ಯ ಸಾಃ ಪರಹತಾಬಾದ ನಾನು ಮದ್ಯ ಮತ್ತು ವಿಷ ಸೇವನೆ
ಮಾಡಿದ್ದೆನೆ ಅವುಗಳ ಬಾಟಲಿ ಇಲ್ಲೆ ಇವೆ ಅಂತ ಹೇಳಿದನು. ಅವನ ಹತ್ತಿರ ಬಿದ್ದ ಪೋನ್
ತೆಗೆದುಕೊಂಡು ನೋಡಿದಾಗ ಡೈಯಲ್ ಕಾಲ್ನಲ್ಲಿದ್ದ ಃಔಖಖ ಕಂಕಕಂ ಅಂತ ಇತ್ತು ಅದಕ್ಕೆ ಕರೆ
ಮಾಡಿದ್ದೆನೆ ನಿಮಗೆ ಈ ಹುಡಗ ಏನಾಗಬೇಕು ಅಂತ ಕೇಳಿದಾಗ ಫಿರ್ಯಾದಿ ನನ್ನ ಖಾಸಾ
ತಮ್ಮನಿದ್ದಾನೆ ಏನಾಗಿದೆ ಅವನಿಗೆ ಅಂತ ಕೇಳಿದಾಗ ಅವನ ಹತ್ತಿರ ಮದ್ಯದ ಬಾಟಲಿ ಮತ್ತು
ವಿಷದ ಬಾಟಲಿ ಇದೆ ಮದ್ಯ ಹಾಗೂ ವಿಷ ಸೇವನೆ ಮಾಡಿದಂತೆ ವಾಸನೆ ಬರುತ್ತಿದೆ ಅವನು
ಸಿರಿಯಸ್ದಲ್ಲಿದ್ದಾನೆ ಅಂತ ಹೇಳಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ
ಉಪಚಾರ ಮಾಡಿಸಿ ಹೆಚ್ಚಿನ ಉಪಚಾರ ಕುರಿತು 108 ವಾಹನದಲ್ಲಿ ಹಾಕಿ ಕಲಬುರಿಗೆ
ಕಳುಹಿಸಿಕೊಟಿದ್ದು ಫಿರ್ಯಾದಿ, ಹಾಗೂ ಫಿರ್ಯಾಧಿಯ ತಂದೆ ತಾಯಿಯವರು ಪರಹತಾಬಾದ ಬಸ್
ನಿಲ್ದಾಣದಲ್ಲಿ ನಿಂತುಕೊಂಡು ಸದರಿ 108 ವಾಹನದಲ್ಲಿ ಹತ್ತಿಕೊಂಡು ಕಲಬುರಗಿಯ ಯುನೈಟೆಡ್
ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಭುದೇವಿ ಈತನಿಗೆ ಉಪಚಾರ ಕುರಿತು ಸೇರಿಕೆ
ಮಾಡಿರುತ್ತಾರೆ. ಸದರಿ ಪ್ರಭುದೇವ ಈತನು ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ
ಪಡೆಯುತಿದ್ದಾಗ ಇಂದು ದಿನಾಂಕ 29/10/2017 ರಂದು ಮುಂಜಾನೆ 10-30 ಗಂಟೆಗೆ ಮೃತ
ಪಟ್ಟಿರುತ್ತಾನೆ ಸದರಿ ಸಾವಿನಲ್ಲಿ ಸಂಶಯ ವಿರುತ್ತದೆ ಈ ಬಗ್ಗೆ ಕ್ರಮಕೈಕೊಂಡು ಮೃತನ
ಸಾವಿನ ನಿಜಾಂಶ ತಿಳಿಯಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ
ಯು.ಡಿ.ಆರ್ ನಂಬರ 27/2017 ಕಲಂ 174 [ಸಿ] ಸಿ.ಆರ್.ಪಿ.ಸಿ ಅಡಿಯಲ್ಲಿ ಯು.ಡಿ.ಆರ್
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 184/2017 ಕಲಂ: 323, 354, 355, 504, 506 ಐಪಿಸಿ;- ದಿ:
29/10/17 ರಂದು 9 ಪಿಎಮ್ಕ್ಕೆ ಶ್ರೀಮತಿ ಸಿದ್ದಮ್ಮ ಗಂಡ ಹಣಮಂತ ಭೋವಿ ವಡ್ಡರ ಸಾ||
ಚಿಂಚೊಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೆನಂದರೆ, ನಿನ್ನೆ
ದಿನಾಂಕ: 28/10/2017 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ಸೊಸೆಯಾದ ಪವಿತ್ರಾ
ಇವಳು ಬಹಿದರ್ೆಸೆಗೆಂದು ಹೋದಾಗ ನಮ್ಮೂರ ಹೊಲೆಯ ಜನಾಂಗದವನಾದ ಪೀರಪ್ಪ ತಂದೆ ಗುತ್ತಪ್ಪ
ಮಾಳೂರ ಈತನು ಹಂದಿ ಹಿಡಿಯಲು ಬಂದಿದ್ದು ಆಗ ನನ್ನ ಸೊಸೆ ಪವಿತ್ರಾ ಇವರು ಹೆಣ್ಣುಮಕ್ಕಳು
ಬಹಿದರ್ೆಸೆಗೆ ಬರುವ ಜಾಗ ಗೊತ್ತಿದ್ದರೂ ಇಲ್ಲಿ ಏಕೆ ಬಂದಿರುವಿರಿ ಅಂತ ಕೇಳಿದ್ದಕ್ಕೆ
ಪೀರಪ್ಪ ಈತನು ಅವಾಚ್ಯವಾಗಿ ಬೈದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:
29/10/2017 ರಂದು 5.30 ಪಿಎಮ್ ಸುಮಾರಿಗೆ ಪೀರಪ್ಪ ತಂದೆ ಗುತ್ತಪ್ಪ ಮಾಳೂರ ಈತನು ನಮ್ಮ
ಮನೆಯ ಮುಂದೆ ಬಂದು ಲೇ ವಡ್ಡ ಸೂಳಿ ಸಿದ್ದಿ ನಿನ್ನೆ ನಿಮ್ಮ ನಾಯಿ ಕಡಿದಿದೆ ನನಗೆ ಯಾರು
ದವಾಖಾನೆಗೆ ತೋರಿಸಬೇಕು ಅಂದಾಗ ನಾಯಿ ಕಡಿದರೆ ನಾನೇನು ಮಾಡಬೇಕು ಅಂತ ಅಂದಾಗ ಪೀರಪ್ಪ
ಈತನು ಈ ವಡ್ಡ ಸೂಳೆ ಮಕ್ಕಳ ಸೊಕ್ಕು ಬಾಳ ಆಗಿದೆ ಅಂತ ಅಂದವನೆ ನನ್ನ ಸೀರೆ ಹಿಡಿದು
ಎಳೆದಾಡಿ ಕೈಯಿಂದ ಹೊಡೆಬಡೆ ಮಾಡುತ್ತಾ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಅಲ್ಲಿಯೇ
ಇದ್ದ ನಮ್ಮ ಸಂಬಂದಿಯಾದ ಮುದಕಪ್ಪ ತಂದೆ ಬಸಪ್ಪ ವಡ್ಡರ ಈತನು ಜಗಳ ಬಿಡಿಸಲು ಬಂದಾಗ
ಆತನಿಗೂ ಸಹ ಪೀರಪ್ಪ ಮಾಳೂರ ಈತನು ತನ್ನ ಎಡಗಾಲ ಚಪ್ಪಲಿಯಿಂದ ಮುಖಕ್ಕೆ ಹಾಗೂ ಬೆನ್ನಿಗೆ
ಹೊಡೆಯುತ್ತಿದ್ದಾಗ ಅಲ್ಲಿಯೇ ಇದ್ದ ಸಿದ್ದು ಅಗಸಿಮನಿ, ಮಹಿಬೂಬ ನಾಯ್ಕೋಡಿ ಇವರು ಬಂದು
ಬಿಡಿಸಿಕೊಂಡರು. ನಂತರ ಸದರಿಯವನು ಅಷ್ಟಕ್ಕೆ ಹೊಡೆಯುವದನ್ನು ಬಿಟ್ಟು ಮಕ್ಕಳೆ
ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ
ಬೆದರಿಕೆ ಹಾಕಿರುತ್ತಾರೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ
ಗುನ್ನೆ ನಂ 184/2017 ಕಲಂ: 323, 354, 355, 504, 506 ಐಪಿಸಿ ನೇದ್ದರ ಪ್ರಕಾರ
ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.