ಆಕ್ರಮವಾಗಿ
ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 29-10-2017 ರಂದು ಶಿವಪೂರ ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ
ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ
ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷಿ ಗುಡಿ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ
ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು
ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ
ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ
ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು John Deere ಕಂಪನಿಯದಿದ್ದು ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ
ಮರಳು ತುಂಬಿತ್ತು ಮತ್ತು ಅದರ Model 5050E V5 Chassis No
1PY5050EKHA017828 Engine NO
PY3029T259646 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ
ಇರಬಹುದು. ಸದರಿ ಟ್ರ್ಯಾಕ್ಟರದಲಿದ್ದ ಮರಳಿನ ಅ.ಕಿ 1800/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ
ಟ್ರ್ಯಾಕ್ಟರನ್ನು ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಪಘಾತ
ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 29-10-2017
ರಂದು ಶ್ರೀ ಎಮ್.ಡಿ ಸೈಯದ ಅನಾಸ ಮತ್ತು ಮೃತ ಸೊಹೆಬ
ಅಹ್ಮದ ಇವರು ಎಮ್.ಡಿ ನವಾಜಖಾನ ಇತನು ಚಲಾಯಿಸುತ್ತೀರುವ ಕಾರ ನಂಬರ ಕೆಎ-36-ಎನ್-1408 ನೇದ್ದರಲ್ಲಿ ಕುಳಿತು ಹೋಗುವಾಗ ಎಮ್.ಡಿ ನವಾಜ್ ಖಾನ
ಇತನು ಕಾರನ್ನು ಸೇಡಂ ರಿಂಗ ರೋಡ ಕಡೆಯಿಂದ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ
ಹೋಗಿ ವಿರೇಶ ನಗರ ಕ್ರಾಸ ಹತ್ತೀರ ರೋಡ ಪಕ್ಕದಲ್ಲಿರುವ ವಿದ್ಯೂತ ದೀಪದ ಕಂಬಕ್ಕೆ ಡಿಕ್ಕಿಪಡಿಸಿ ಹಾಗೆ
ಕಾರನ್ನು ರೋಡ ಪಕ್ಕದಲ್ಲಿರುವ ನೀರಿನ ನಾಲೆಯಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಸೊಹೆಬ ಅಹ್ಮದ
ಇತನು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ
ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವೀರಭದ್ರ ತಂದೆ
ಬಸವರಾಜ ರೆಡ್ಡಿ ಸಾ: ಮನೆ ನಂ. 45 ದೇವ ಸೂಗುರ ತಾ:ಜಿ: ರಾಯಚೂರ ಹಾ.ವ: ವೀರಶೈವ ಹಾಸ್ಟೇಲ ಸೇಡಂ ರೋಡ
ಕಲಬುರಗಿ ರವರು ದಿನಾಂಕ 28-10-2017 ರಂದು 7:30
ಪಿ.ಎಂ. ಸುಮಾರಿಗೆ ಏಶಿಯನ್ ಮಾಲ ಹತ್ತಿರ ಮೋಬೈಲನಲ್ಲಿ ಮಾತನಾಡುತ್ತಾ ನಿಂತಿರುವಾಗ ಒಬ್ಬ ಹುಡುಗ ನನ್ನ
ಹತ್ತಿರ ಬಂದು ನನ್ನ ಕೈಯಲ್ಲಿಯ ಮೋಬೈಲ್ ಕಸಿದುಕೊಂಡು ಸಿದ್ದಿಬಾಷಾ ದರ್ಗಾ ಕಡೆಗೆ ವೇಗವಾಗಿ ಓಡಿಹೋದನು
ನಾನು ಕಳ್ಳ ಕಳ್ಳ ಅಂತಾ ಒದರುತ್ತಾ ಬೆನ್ನು ಹತ್ತಿದ್ದು ಅವನು ನನ್ನ ಕೈಗೆ ಸಿಗದೇ ತಪ್ಪಿಸಿಕೊಂಡು
ಓಡಿಹೋದನು ಆತನು ಕಸಿದುಕೊಂಡ ಹೊದ ಮೋಬೈಲ್ ಒನ್ ಪ್ಲಸ್
-3 (1+3) ಮೋಬೈಲ್ ಐಎಮ್.ಇ.ಐ ನಂ.
862563031407657, 862563031407640 ಅ.ಕಿ 27,999/- ರೂ ಇರುತ್ತದೆ. ಕಾರಣ ನಾನು ಏಶಿಯನ್ ಮಾಲ
ಹತ್ತಿರ ಮೋಬೈಲನಲ್ಲಿ ಮಾತನಾಡುತ್ತಾ ನಿಂತಿರುವಾಗ ನನ್ನ ಕೈಯಲ್ಲಿಯ ಮೋಬೈಲ ಕಸಿದುಕೊಂಡು ತಪ್ಪಿಸಿಕೊಂಡು
ಹೋದವನ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ
ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ
ಕಾಣೆಯಾದ ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ಗುಡುಸುಲಕರ ಇವರ ಹೆಂಡತಿಯಾದ ಶ್ರೀದೇವಿ
ಗಂಡ ಶರಣಪ್ಪ ಗುಡುಸುಲಕರ ವಯ : 33 ವರ್ಷ ಇವಳು ದಿನಾಂಕ : 24-10-2017 ರಂದು ಸಾಯಂಕಾಲ 6 ಗಂಟೆಗೆ ಅಂಗಡಿಗೆ ಹೊಗಿ ಬರುತ್ತೆನೆಂದು
ಹೇಳಿ ಮನೆಯಿಂದ ಹೊದವಳು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಏಲ್ಲೊ ಹೊಗಿ ಕಾಣೆಯಾಗಿರುತ್ತಾಳೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment