ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-03-2021
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 51/2021, ಕಲಂ. 304(ಎ) ಐಪಿಸಿ :-
ದಿನಾಂಕ 28-03-2021 ರಂದು ಫಿರ್ಯಾದಿ ಮಾರೂನ ಬೀ ಗಂಡ ಸೈಯದ ಯುಸುಫ್ ವಯ: 35 ವರ್ಷ, ಸಾ: ರಾಜೋಳಾ, ತಾ: ಜಹಿರಾಬಾದ ರವರ ಗಂಡನಾದ ಸೈಯದ ಯುಸುಫ ಇತನು ಕೂಲಿಕೆಲಸಕ್ಕೆಂದು ಬೀದರ ನಗರದ ಚಿದ್ರಿ ರೋಡಿಗೆ ಇರುವ ಅಹಿಮದಖಾನ ಇವರ ಅಂಗಡಿಯ ಹಿಂದೆ ಇರುವ ಬಾವಿಯಲ್ಲಿ ಹೂಳು ತೆಗೆದು ಹಗ್ಗದಿಂದ ಮೇಲೆ ಬರುತ್ತಿರುವಾಗ ಕಾಲು ಜಾರಿ ಬಾವಿಯಲ್ಲಿ ಬಿದ್ದು ಗಾಯಗೊಂಡಿದ್ದರಿಂದ ಆತನಿಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಆರೋಪಿ ಅಹಿಮದಖಾನ ದುರಾಣಿ ಸಾ: ಬೀದರ ಮಾಲೀಕ ಇತನು ಯಾವುದೇ ಸುರಕ್ಷತಾ ಕ್ರಮ ಕೈಕೊಳ್ಳದೇ ಇರುವದರಿಂದ ಈ ಘಟನೆ ನಡೆದಿರುತ್ತದೆ, ಫಿರ್ಯಾದಿಯವರ ಗಂಡ ಸೈಯದ ಯುಸುಫ್ ಇವರು ಬೀದರರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ತನಗಾದ ಗಾಯಗಳಿಗೆ ಗುಣಮುಖವಾಗದೆ ದಿನಾಂಕ 29-03-2021 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 35/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 29-03-2021 ರಂದು ಫಿರ್ಯಾದಿ ಸಂಜಯ ತಂದೆ ಮಲ್ಲಪ್ಪಾ ದರ್ಗಾ ವಯ: 40 ವರ್ಷ ಜಾತಿ: ಎಸ್.ಸಿ ಹೊಲಿಯ, ಸಾ: ಮಿಲಿಂದ ನಗರ ಚಿದ್ರಿ ರಸ್ತೆ ಬೀದರ ರವರ ತಾಯಿ ನರಸಮ್ಮಾ ಇವರು ಮಿಲಿಂದ ನಗರ ಕ್ರಾಸ್ ಹತ್ತಿರ ಚಿದ್ರಿ ರಸ್ತೆ ಬೀದರದಲ್ಲಿ ತನ್ನ ಮನೆಯ ಮುಂದೆ ರೋಡ್ ದಾಟುತ್ತಿರುವಾಗ ಚಿದ್ರಿ ಕಡೆಯಿಂದ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಾಯಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲ ನಿಲ್ಲಿಸದೇ ಗಾಂಧಿಗಂಜ ಕಡೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ತಾಯಿಗೆ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ, ಎಡಗೈ ಮೊಳಕೈ ಹತ್ತಿರ ಭಾರಿ ಗುಪ್ತಗಾಯ, ಎಡಭಾಗದ ಹೊಟ್ಟೆಗೆ ತರಚಿದ ರಕ್ತಗಾಯವಾಗಿದ್ದರಿಂದ ತಾಯಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 13/2021, ಕಲಂ. 498(ಎ), 323, 504, ಜೊತೆ 34 ಐಪಿಸಿ :-
ಫಿರ್ಯಾದಿ ಸುನೀಲಕುಮಾರ ತಂದೆ ಮಲ್ಲಯ್ಯಾ ಸಾ: ಸಾಯಿರಾಮ ನಗರ ಪಟಂಚೂರ ಹೈದ್ರಾಬಾದ ರವರ ತಂಗಿಯಾದ ತುಳಸಿ ಇವಳಿಗೆ ಬೀದರನ ಘಾಳೆಪ್ಪರವರ ಮಗನಾದ ಬಬ್ಲು ಈತನೊಂದಿಗೆ ತಮ್ಮ
ಧರ್ಮದ ಪ್ರಕಾರ ದಿನಾಂಕ 23-11-2017 ರಂದು ಮದುವೆ ಮಾಡಕೊಟ್ಟಿದ್ದು, ತಂಗಿ ತುಳಸಿ ಇವಳು ಬೀದರದ ಹಳೆಯ ಆದರ್ಶ ಕಾಲೋನಿಯಲ್ಲಿ ತನ್ನ ಗಂಡನಾದ ಬಬ್ಲು, ಮಾವನಾದ ಘಾಳೆಪ್ಪ, ಅತ್ತೆಯಾದ ಕಮಳಾಬಾಯಿ, ನಾದನಿಯಾದ ಅನಿತಾ ಇವರೆಲ್ಲರೂ ಒಂದೇ ಕಡೆಗೆ ವಾಸವಾಗಿದ್ದು, ಅಲ್ಲದೇ ತುಳಸಿ ಇವಳಿಗೆ ಒಂದು ಗಂಡು, ಒಂದು ಹೆಣ್ಣು 2 ಜನ ಮಕ್ಕಳಿರುತ್ತಾರೆ, ಭಾವ
ಬಬ್ಲು ಈತನು ಸಾರಾಯಿ ಕುಡಿದು ಬಂದು ತಂಗಿಯ ಜೊತೆ ಯಾವಾಗಲೂ ಜಗಳ ಮಾಡುವುದು ಅವಳಿಗೆ ಹೊಡೆ-ಬಡೆ
ಮಾಡುವುದು ಮಾಡುತ್ತಿದ್ದನು, ಅಲ್ಲದೇ ಅತ್ತೆ, ಮಾವ, ನಾದನಿ ಇವರೂ
ಸಹ ತಂಗಿಗೆ ನೀನು ಭಿಕಾರಿ ಇದ್ದಿ ನಿನಗೆ ಏನು ಮಾಡಿದರೂ ಯಾರು ಕೇಳುತ್ತಾರೆ ನಿನಗೆ ಹಿಂದೆ ಮುಂದೆ ಯಾರು ಇಲ್ಲ ಅಂತ ಅವಳಿಗೆ ಹೀಯಾಳಿಸಿ ಮಾತನಾಡುತ್ತಿದ್ದರು, ಸದರಿ ವಿಷಯವನ್ನು ತಂಗಿಯು ಫಿರ್ಯಾದಿಗೆ ಹೇಳಿದಾಗ
ಫಿರ್ಯಾದಿಯವರು 3-4 ಸಾರಿ ಹೈದರಾಬಾದದಿಂದ ಬಂದು
ಬುದ್ಧಿ ಹೇಳಲು ಹೋದಾಗ ಆರೋಪಿತರಾದ ಭಾವ ಹಾಗೂ ಭಾವನ ಮನೆಯವರೆಲ್ಲರೂ ಘರಕೆ ಬಾಹರ್ ಜಾಕೆ ಬಾತ್ ಕರೊ ಆಪ್ ಲೋಗ್ ಭಿಕಾರಿ ಹೈ ಅಂತ ಫಿರ್ಯಾದಿಯವರ ಜೊತೆಯಲ್ಲಿ ಜಗಳ ಮಾಡಿರುತ್ತಾರೆ, ಅಲ್ಲದೇ ಸುಮಾರು ಒಂದು ವರ್ಷದ ಹಿಂದೆ ತಂಗಿಯ ಜೊತೆ ಜಗಳ ಮಾಡಿ ಅವಳ ಕೊರಳಲಿದ್ದ ಮಂಗಳಸೂತ್ರ ತೆಗೆದು ಕುತ್ತಿಗೆ ಒತ್ತಲು ಹೋಗಿ ಅವಳಿಗೆ ನೀನು ಡೈವರ್ಸ್ ದೇಕೇ
ಜಾವೋ ಅಂತ ಹೇಳಿರುತ್ತಾರೆ, ಹೀಗಿರುವಾಗ 29-03-2021 ರಂದು ಫಿರ್ಯಾದಿಯವರ ತಂಗಿಯು ತನಗೆ ಗಂಡ, ಅತ್ತೆ, ಮಾವ, ನಾದನಿಯಾದ ಅನೀತಾ ಇವರೆಲ್ಲರೂ ಕೊಡುವ ತ್ರಾಸಿನಿಂದ ತಾನೇ ನೇಣು ಹಾಕಿಕೊಂಡಿರುತ್ತಾಳೋ? ಅಥವಾ ಅವರೇ ಹಾಕಿರುತ್ತಾರೋ? ಎಂಬುವುದರ ಬಗ್ಗೆ ಗೊತ್ತಿಲ್ಲ, ಆದರೆ ಅವಳಿಗೆ ಅವಳ ಗಂಡ ಹಾಗೂ ಗಂಡನ ಮನೆಯವರು ತುಂಬಾ ತೊಂದರೆ ಕೊಟ್ಟಿರುತ್ತಾರೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.