Police Bhavan Kalaburagi

Police Bhavan Kalaburagi

Wednesday, July 1, 2020

BIDAR DISTRICT DAILY CRIME UPDATE 01-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-07-2020

ಚಿಟಗುಪ್ಪಾ ಪೊಲೀಸ ಠಾಣೆ 95/2020 ಕಲಂ 279, 304  (ಐಪಿಸಿ :-

ದಿನಾಂಕ: 30-06-2020 ರಂದು ಬೆಳಿಗ್ಗೆ 07:00 ಗಂಟೆಗೆ ಸಿಂಧನಕೇರಾ ಗ್ರಾಮದ ಹತ್ತಿರ ಇರುವ ನಿರಂಜಪ್ಪಾ ಪಟ್ಟವಾದ ರವರ ಹೋಲದ ರೋಡಿಗೆ ಹತ್ತಿದ್ದ ಬಾವಿಯ ದಡೆಗೆ ಮೋಟರ್ ಸೈಕಲ್ ಡಿಕ್ಕಿ ಮಾಡಿ ಅಪಘಾತವಾದ ಬಗ್ಗೆ ಮಾಹಿತಿ ಗೋತ್ತಾಗಿ 07:30 ಗಂಟೆಗೆ ಘಟನೆ ಸ್ಥಳಕ್ಕೆ ಭೇಟ್ಟಿನಿಡಿ ಹಾಜರಿದ್ದ ಮೃತನ ಅಣ್ಣನಾದ ಧೂಳಪ್ಪಾ ತಂದೆ ಅರ್ಜುನ ದೇವಗೊಂಡ ಸಾ: ಹುಡಗಿ ರವರ ಫೀರ್ಯಾದಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೇಂದರೆ,   ದಿನಾಂಕ : 29-06-2020 ರಂದು ಸಾಯಂಕಾಲ 06:30 ಗಂಟೆಗೆ ಫಿರ್ಯಾದಿ ತಮ್ಮನಾದ ಗುಂಡಪ್ಪಾ ಇತನು ಫಿರ್ಯಾದಿ ಹತ್ತಿರ ಬಂದು ಸಿಂಧನಕೇರಾ ಗ್ರಾಮದಲ್ಲಿ  ಭಾಷಣಕಿ ಕಾರ್ಯಕ್ರಮವಿದ್ದ ಪ್ರಯುಕ್ತ ಮೋಟರ ಸೈಕಲ್ ನಂ ಕೆಎ-39 ಎಲ್-6155 ನೇದ್ದು ತೆಗೆದುಕೊಂಡು ಸಿಂಧನಕೇರಾ ಗ್ರಾಮಕ್ಕೆ ಹೋಗಿರುತ್ತಾನೆ. ನಂತರ ಮರಳಿ ರಾತ್ರಿ 08:00 ಗಂಟೆಗೆ ನನ್ನ ಹತ್ತಿರ ಬಂದು ಮೋಟರ್ ಸೈಕಲ್ ಮೇಲೆ ಮನೆಗೆ ಬಿಟ್ಟು ಮರಳಿ ಸಿಂಧನಕೇರಾ ಗ್ರಾಮಕ್ಕೆ ಹೋಗಿ ಬರುತ್ತೆನೆ ಅಂತಾ ತಿಳಿಸಿ ಹೋಗಿರುತ್ತಾನೆ. ನಂತರ   ಬೆಳಗ್ಗಿನ ಜಾವ 01:30 ಗಂಟೆ ಸುಮಾರಿಗೆ ಮಾಹಿತಿ ಗೋತ್ತಾಗಿದೆನೇಂದರ ನನ್ನ ತಮ್ಮನಾದ ಗುಂಡಪ್ಪಾ ಇತನು ಸಿಂಧನಕೇರಾ ಗ್ರಾಮದ ಹತ್ತಿರ ಇರವು ಒಂದು ಬಾವಿಯ ದಡೆಗೆ ಮೋಟರ್ ಸೈಕಲ್ ಅಪಘಾತ ಪಡಿಸಿ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 98/2020 ಕಲಂ 420, 471 ಜೊತೆ 34 ಐಪಿಸಿ :-
ದಿನಾಂಕ 30/06/2020 ರಂದು 1300 ಗಂಟೆಗೆ ಎಸ್.ಪಿ ಬೀದರ ರವರ ಜ್ಞಾಪನದಲ್ಲಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರ ರವರ ಅರ್ಜಿ ಸಾರಾಂಶವೆನೆಂದರೆ ಮಾರ್ತಂಡ ಮಿಶ್ರಾ ತಂದೆ ಬಾಬು ಪ್ರಸಾದ ಮಿಶ್ರಾ, ಮನೆ ನಂ 121 ಸಾ. ಮಾಣಿನಗರ ಹುಮನಾಬಾದ, ಬೀದರ ಜಿಲ್ಲೆ ಇವರು ತಮ್ಮ ಅಂಗವಿಕಲತೆಯ ಬಗ್ಗೆ ವೈಧ್ಯಕೀಯ ಮಂಡಳಿ ಕಲಬುಗರ್ಿಯಿಂದ ನೀಡಿರುವುದಾಗಿ ಬಂದಿರುವ ವರದಿ ಸುಳ್ಳು ವರದಿಯಾಗಿರುವುದರಿಂದ ಹಾಗೂ ಈ ತರಹ ಸುಳ್ಳು ವೈಧ್ಯಕೀಯ ಮಂಡಳಿ ವರದಿಯನ್ನು ನೀಡಿರುವವರ ವಿರುದ್ಧ ಕೂಲಂಕುಶವಾಗಿ ತನಿಖೆ ನಡೆಸಿ ಈ ಅಭ್ಯಥರ್ಿಗಳ ವಿರುದ್ಧ ಕಾನೂನಿನ ರೀತ್ಯ ಕ್ರೀಮಿನಲ್ ಮೊಕದ್ದಮೆ ದಾಖಲಿಸಲು ಕೋರಿದ್ದು ಇರುತ್ತದೆ ಅಂತಾ ಇದ್ದ ಅಜರ್ಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಠಾಣೆ ಅಪರಾಧ ಸಂಖ್ಯೆ 50/2020 ಕಲಂ 20(ಬಿ)(2) ಎನ್ ಡಿ ಪಿ ಎಸ್ ಎಕ್ಟ :-

ದಿನಾಂಕ 30/06/2020 ರಂದು ಮದ್ಯಾಹ್ನ 1400 ಗಂಟೆಯ ಸುಮಾರಿಗೆ ಪಿಎಸ್ಐ ರವರಿಗೆ ಖಚಿತ ಮಾಹಿತಿ ಬಂದಿದೆನೆಂದರೆ ಜಂಬಗಿ- ನಾರಾಯಣಖೇಡ ರೋಡಿನ ಮೇಲೆ ಬಾರ್ಡರ ತಾಂಡಾ ಕಡೆಯಿಂದ ಮೋಟಾರ ಸೈಕಲ ಮೇಲೆ ಗಾಂಜಾ ಮಾರಾಟ ಮಾಡಲು ಇಟ್ಟುಕೊಂಡು ಜಂಬಗಿ ಭವಾನಿ ಧಾಭಾದ ಹತ್ತಿರ ಬರುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ಒಂದು ಹೋಲದಲ್ಲಿ ಭವಾನಿ ಧಾಭಾ ಇದ್ದು ಅದರ ಹಿಂದೆ ಮರೆಯಾಗಿ ನಿಂತು ನೋಡಿದಾಗ  ಬಾರ್ಡರ ತಾಂಡಾಕಡೆಯಿಂದ ಎರಡು ಮೋಟಾರ ಸೈಕಲಗಳು ಬರುತ್ತಿದ್ದು ಒಂದು ಮೋಟಾರ ಸೈಕಲ ಮೇಲೆ ಇಬ್ಬರೂ ವ್ಯಕ್ತಿಯು ಇದ್ದು ಇಬ್ಬರ ಮಧ್ಯ ಒಂದು ಗೋಣಿ ಚಿಲವನು ಇಟ್ಟುಕೊಂಡು ಬರುತ್ತಿದ್ದು ಇನ್ನೋಂದು ಮೊಟಾರ ಸೈಕಲ ಮೇಲೆ ಒಬ್ಬ ವ್ಯಕ್ತಿಯು ಹಿಂದೆ ಹಿಂದೆ ಹಿಂಬಾಲಿಸಿ ಬರುತ್ತಿದ್ದು ಅದನ್ನು ಖಚಿತ ಪಡಿಸಿಕೊಂಡು  ದಾಳಿ ಮಾಡಲು ಹೋಗಿದ್ದಾಗ ಒಂದು ಮೋಟಾರ ಸೈಕಲ ಮೇಲೆ ಇಬ್ಬರೂ ವ್ಯೆಕ್ತಿಯು ಇದ್ದು ಅದರಲ್ಲಿಂದಲೊಬ್ಬ ವ್ಯಕ್ತಿಯು ಸಿಕ್ಕಿದ್ದು ಹಿಂದೆ ಕುಳಿತ ವ್ಯೆಕ್ತಿಯು ನಮ್ಮನ್ನು ನೋಡಿ ಹಿಂದಿನಿಂದ ಜಿಗಿದು  ಓಡಿ ಹೋಗಿ ಹಿಂದೆ ಹಿಂದೆ ಬರುತ್ತಿದ್ದ ಇನ್ನೋಂದು ಮೋಟಾರ ಸೈಕಲ ಮೇಲೆ ಕುಳಿತು ಹಿಂದಿನಿಂದ ಬಾಡರ ತಾಂಡಾದ ಕಡೆಗೆ ಇಬ್ಬರು ಮೋಟಾರ ಸೈಕಲ್ ಮೇಲೆ ಓಡಿ ಹೊಗಿದ್ದು  ಬೆನ್ನ ಹತ್ತಿದರು ಸಹ ಸಿಕ್ಕಿರುವದಿಲ್ಲಾ ಮತ್ತು ಒಬ್ಬ ವ್ಯಕ್ತಿಯು ಸಿಕ್ಕಿದ್ದು ಇರುತ್ತದೆ   ಅಂಗ ಶೋಧನೆಯನ್ನು ಮಾಡಿ ಯಾವುದೆ ಮಾದಕ ವಸ್ತು ಇಲ್ಲವೆಂದು ಖಚಿತ ಪಡಿಸಿಕೊಂಡು 1800 ಗಂಟೆಗೆ ಸಿಕ್ಕ ವ್ಯಕ್ತಿಗೆ ದಾಳಿ ಮಾಡಿ ಡಿ,ಎಸ್,ಪಿ ಭಾಲ್ಕಿ ರವರು ಹೆಸರು ವಿಚಾರಿಸಲು ತನ್ನ  ಹೆಸರು 1) ಶಿವಾಜಿ ತಂದೆ ವಿಠಲ ರಾಠೋಡ ವ. 30 ವರ್ಷ ಜ/ ಲಮಣಿ ಉ/ ಕೂಲಿ ಸಾ/ ದೇವಲ ತಾಂಡಾ ಜಂಬಗಿ ಅಂತ ತಿಳಿಸಿದ್ದು ಇತನ ಅಂಗ ಶೋದನೆ ಮಾಡುವ ಬಗ್ಗೆ ಶಿವಾಜಿ ರಾಠೋಡ ಇತನಿಗೆ  ಪತ್ರಾಂಕಿಂತ ಅಧಿಕಾರಿ ಡಾ, ಪ್ರವೀಣ ಇವರು ನಿನ್ನ ಅಂಗ ಶೋಧನೆ ನಾನು ಮಾಡಬೇಕಾ ಇಲ್ಲಾ ನ್ಯಾಯಾಧೀಶರ ಮುಂದೆ ಮಾಡಬೇಕೋ ಅಂತ ವಿಚಾರಿಸಿದ್ದಾಗ ಶಿವಾಜಿ ರಾಠೋಡ ಇತನು ತಿಳಿಸಿದ್ದು ಪತ್ರಾಂಕಿತ ಅಧಿಕಾರಿ ಮುಂದೆ ಮಾಡಲು ನನ್ನ ಅಭ್ಯಂತರ ಇರುವದಿಲ್ಲಾ ಅಂತ ತಿಳಿಸಿದರಿಂದ ಶಿವಾಜಿ ಇತನಿಗೆ ಅಂಗ ಝಡತಿ ಮಾಡಿದ್ದು ಅವನ ಹತ್ತಿರ ಇದ್ದ  ಒಂದು ಮೋಟೋ  ಎ.1 ಕಂಪನಿಯ ಮೋಬೈಲ್ ಇದ್ದು ಅದರ ಐಎಮ್ಇಐ ನಂ. 1)356478086936182 2) 356478086936190 ಅಂ.ಕಿ. 5,000/ ರೂಪಾಯಿ.   ಶಿವಾಜಿ ರಾಠೋಡ ಇತನಿಗೆ ವಿಚಾರಿಸಿದ್ದು ನಿನ್ನ ಹತ್ತಿರ ಗೋಣಿ ಚೀಲದಲ್ಲಿ ಏನಿದೆ ಅಂತಾ ಕೇಳಿದಾಗ ಇದರಲ್ಲಿ ಗಾಂಜಾದ ಪಾಕೇಟಗಳು ಇರುತ್ತವೆ ಅಂತಾ ತಿಳಿಸಿದ್ದು ಮತ್ತು ಈ ಗಾಂಜಾವನು ಯಾರ ತಂದು ಕೊಡುತ್ತಾರೆ ಮತ್ತು  ಓಡಿ ಹೋದ ವ್ಯೆಕ್ತಿಗಳ ಬಗ್ಗೆ ವಿಚಾರಿಸಲಾಗಿ ನನ್ನ ಮೋಟಾರ ಸೈಕಲ ಹಿಂದೆ ಕುಳಿತ ಪ್ರಕಾಶ ರಾಠೋಡ ಸಾ, ಘಾಮಾ ತಾಂಡಾ ನಮ್ಮ ಹಿಂದೆ ಇನ್ನೊಂದು ಮೋಟಾರ ಸೈಕಲ ಮೇಲೆ ಬರುತ್ತಿದ್ದ ರಂಗಲಾಲ ರಾಠೋಡ ಸಾ, ಘಾಮಾ ತಾಂಡಾ ಅಂತಾ ತಿಳಿಸಿದ್ದು ನಂತರ  ಪತ್ರಾಂಕಿತ ಅಧಿಕಾರಿ ಮುಂದೆ ಪರಿಶಿಲಿಸಿ ನೋಡಿದ್ದು ಖಾಖಿ ಬಣ್ಣದ ಪ್ಲಾಸ್ಟಿಕದಿಂದ ಪ್ಯಾಕ ಮಾಡಿ ಅದರ ಮೇಲೆ ಅಡ್ಡಲಾಗಿ ಮತ್ತು ಉದ್ದಲಾಗಿ ಬ್ಯಾಡೆಜದಿಂದ ಸುತ್ತಿ ಪ್ಯಾಕ ಮಾಡಿದ ಪ್ಯಾಕೆಟಗಳು ಇದ್ದು ಅವುಗಳು ತೂಕ     ಮಾಡಿಸಿ ನೋಡಲಾಗಿ 1) 2. ಕಿಲೋ 2) 2. ಕಿಲೋ 40 ಗ್ರಾಂ. 3)2. ಕಿಲೋ 10 ಗ್ರಾಂ.. 4)1. ಕಿಲೋ 510 ಗ್ರಾಂ. 5) 2. ಕಿಲೋ 100 ಗ್ರಾಂ 6) 2.ಕಿಲೋ 70 ಗ್ರಾಂ. 7)  1. ಕಿಲೋ 790 ಗ್ರಾಂ. 8) 1. ಕಿಲೋ 990 ಗ್ರಾಂ. 9) 2. ಕಿಲೋ 70 ಗ್ರಾಂ. 10) 2. ಕಿಲೋ 40 ಗ್ರಾಂ. 11) 2.ಕಿಲೋ 10 ಗ್ರಾಂ. 12) 2. ಕಿಲೋ 90 ಗ್ರಾಂ. 13) 2.ಕಿಲೋ 20 ಗ್ರಾಂ. 14) 2.ಕಿಲೋ 120 ಗ್ರಾಂ. 15)1.ಕಿಲೋ 930 ಗ್ರಾಂ. 16)1. ಕಿಲೋ 990 ಗ್ರಾಂ. 17) 1. ಕಿಲೋ 930 ಗ್ರಾಂ 18 )1. ಕಿಲೋ 940 ಗ್ರಾಂ  ಗಂಜಾ ಇರುತ್ತದೆ. ಹೀಗೆ ಒಟ್ಟು ಎಲ್ಲಾ ಪಾಕೇಟಗಳ ಸಮೇತ ಒಟ್ಟು ತೂಕ 38 ಕಿಲೊ 800 ಗ್ರಾಂ ಗಾಂಜಾ ಇರುತ್ತದೆ ಒದರಲ್ಲಿ 1 ಕೆ.ಜಿ ಗಾಂಜಾದ ಕಿಮ್ಮತ್ತು 12.000 -/ ಸಾವಿರ ರೂಪಯಿ ಒಟ್ಟು 38 ಕೆ.ಜಿ 800 ಗ್ರಾಮ ಕಿಮ್ಮತ್ತು 4,65,600/- ಆಗ ಬಹುದು ಮತ್ತು ಮೋಟೋ ಎ.1 ಕಂಪನಿಯ ಮೋಬೈಲ ಅ,ಕಿ 5000-/  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.