Police Bhavan Kalaburagi

Police Bhavan Kalaburagi

Wednesday, September 9, 2020

BIDAR DISTRICT DAILY CRIME UPDATE 09-09-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-09-2020

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 104/2020, ಕಲಂ. 379 ಐಪಿಸಿ :-

ದಿನಾಂಕ 11-07-2020 ರಂದು 1330 ಗಂಟೆಯಿಂದ 1400 ಗಂಟೆಯ ಅವಧಿಯಲ್ಲಿ ಮೊಹನ ಮಾರ್ಕೆಟನಲ್ಲಿರುವ ಪಾಂಡೆ ನರ್ಸಿಂಗ ಹೋಮ  ಮುಂದೆ ನಿಲ್ಲಿಸಿದ ಫಿರ್ಯಾದಿ ಕುಮಾ ಸ್ವಾಮಿ ತಂದೆ ಕಾರ್ತಿಕ ಸ್ವಾಮಿ ಸಾ: ಬಸನಾಳ, ತಾ: ಕಮಲನಗರ, ಜಿಲ್ಲಾ: ಬೀದರ ರವರ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. KA-38/U-4750, Chasis No. MBLHAR085HHE61625, Engine No. HA10AGHHEF8390, ಮಾಡಲ್: 2017, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 35 ,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 119/2020, ಕಲಂ. 279, 337, 338 ಐಪಿಸಿ :-

ದಿನಾಂಕ 08-09-2020 ರಂದು ಫಿರ್ಯಾದಿ ದಯಾನಂದ ತಂದೆ ನಾಗೇಂದ್ರ ಜಾಮಖಂಡೆ, ವಯ: 35 ವರ್ಷ, ಜಾತಿ: ಮರಾಠಾ, ಸಾ: ಸೆಡೋಳ, ಸದ್ಯ: ಮಾರ್ಖೆಂಡೆಶ್ವರ ಮಂದಿರ ಹತ್ತಿರ ಚಿಟಗುಪ್ಪಾ ರವರು ತನ್ನ ಹೊಂಡಾ ಸಿಡಿ 110 ಡಿ.ಎಕ್ಸ್ ಮೋಟಾರ ಸೈಕಲ್ ನಂ. ಕೆಎ-39/ಆರ್-3768 ನೇದರ ಮೇಲೆ ಚಿಟಗುಪ್ಪಾದಿಂದ ನಿರ್ಣಾ ಗ್ರಾಮದ ಸ್ವಾಮಿ ವೀವೆಕಾನಂದ ಪ್ರೌಡ ಶಾಲೆಯಲ್ಲಿ ಹತ್ತನೇ ತರಗತಿ ಮಕ್ಕಳಿಗೆ ಬೋಧನೆ ಮಾಡಲು ನಿರ್ಣಾ ಗ್ರಾಮಕ್ಕೆ ಹೋಗುತ್ತಿರುವಾಗ ಚಿಟಗುಪ್ಪಾ ಶಿವಾರದ ಬಂದೇನವಾಜ ಪೀರ ಹತ್ತಿರ ಹೋಲಗಳಿಗೆ ಹೋಗುವ ಕಚ್ಚಾ ರಸ್ತೆಯಿಂದ ಆರೋಪಿ ಲಿಯಾಕತ್ ಅಲಿ ತಂದೆ ಶಿಲಾರ ಸಾಬ ಮೂಮಿನ್ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಉಡಬಾಳ ಇತನು ತನ್ನ ಮೋಟಾರ ಸೈಕಲ್ ನಂ. ಕೆಎ-38/ಹೆಚ್-6808 ನೇದನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಫಘಾತ ಪಡಿಸಿದ್ದು, ಸದತರಿ ಅಫಘಾತದಿಂದ ಫಿರ್ಯಾದಿಯ ಮೇಲಿನ ತುಟಿಗೆ ಭಾರಿ ರಕ್ತಗಾಯ ಮತ್ತು ಎಡಗಡೆಯ ಹಣೆಗೆ ಗುಪ್ತಗಾಯ ಹಾಗು ಎಡಗಣ್ಣಿಗೆ ಪೆಟ್ಟಾಗಿ ಉಬ್ಬಿರುತ್ತದೆ ಮತ್ತು ಮೂಗಿನಿಂದ ರಕ್ತಸ್ರಾವಾಗಿದ್ದು, ನಂತರ ಆರೋಪಿಗೆ ನೋಡಲು ಆತನ ಎಡಗಣ್ಣಿನ ಹುಬ್ಬಿನ ಮೇಲೆ ಮತ್ತು ಕಣ್ಣಿನ ಕೆಳಗಡೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಇಬ್ಬರಿಗೂ ದಾರಿ ಹೋಕರು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 63/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 08-09-2020 ರಂದು ಬಾಜೋಳಗಾ ಕ್ರಾಸ್ ನ  ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಎದುರುಗಡೆ ಯಲ್ಲಾಲಿಂಗ ಟೀಫಿನ್ ಸೆಂಟರ್ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಹುಲೇಪ್ಪಾ ಪಿ.ಎಸ್.ಐ ಖಟಕಚಿಂಚೊಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಜೋಳಗಾ ಕ್ರಾಸ್ ಹತ್ತಿರ ಹೊಗಿ ಅಲ್ಲಿ ವಾಟರ್ ಟ್ಯಾಂಕ್ ಮರೆಯಾಗಿ ನಿಂತು ನೊಡಲು ಬಾಜೋಳಗಾ ಕ್ರಾಸ್ ನ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಎದುರುಗಡೆ ಯಲ್ಲಾಲಿಂಗ ಟೀಫಿನ್ ಸೆಂಟರ್ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಆರೋಪಿ ಜೈಸಿಂಗ ತಂದೆ ರೂಪಚಂದ ರಾಠೋಡ ವಯ: 30 ವರ್ಷ, ಜಾತಿ: ಲಂಬಾಣಿ,  ಸಾ: ನಾವದಗಿ ತಾಂಡಾ ಇತನು ಒಂದು ರೂಪಾಯಿಗೆ 80/- ರೂ. ಕೊಡುತ್ತೆವೆ ಮಟಕಾ ಇದು ನಶಿಬಿನ ಆಟ ಇರುತ್ತದೆ ಅಂತಾ ಜೋರಾಗಿ ಚೀರಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದ್ದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದು ಸದರಿ ಆರೋಪಿಗೆ ಮಟಕಾ ಬರೆದುಕೊಳ್ಳಲು ಸರಕಾರದಿಂದ ಅನುಮತಿ ಪಡೆದಿದ್ದಿಯಾ ಅಂತಾ ಕೆಳಲು ಆತ ಇಲ್ಲಾ ಅಂತಾ ತಿಳಿಸಿರುತ್ತಾನೆ, ನಂತರ ಅವನ ಅಂಗ ಜಡ್ತಿ ಮಾಡಿ ನೋಡಲು ಸದರಿಯವನ ಶರ್ಟಿನ ಜೆಬಿನಲ್ಲಿ 1 ಮಟಕಾ ನಂಬರ ಉಳ್ಳ ಚಿಟಿ ಮತ್ತು 260/- ರೂಪಾಯಿ ನಗದು ಹಣ, 1 ಬಾಲ್ ಪೇನ್ ಹಾಗೂ ಒಂದು ಎಮ್.ಐ ಅಂಡ್ರಾಯ್ಡ ಮೋಬೈಲ್ ಅ.ಕಿ 5,000/- ರೂ. ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 75/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 08-09-2020 ರಂದು ಧನ್ನೂರ (ಕೆ) ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದಾನೆಂದು ವಸೀಮ ಪಟೇಲ್ ಪಿ.ಎಸ. (ಕಾಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಧನ್ನೂರ(ಕೆ) ಗ್ರಾಮದ ಹನುಮಾನ ಮಂದಿರದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಹನುಮಾನ ಮಂದಿರದ ಹತ್ತಿರ ಆರೋಪಿ ಹಣಮಂತ ತಂದೆ ಶಂಕ್ರೇಪ್ಪಾ ಬಿರಾದಾರ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರ(ಕೆ) ಇತನು ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಜೋರಾಗಿ ಕೂಗಿ ಕೂಗಿ ಕರೆದು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುವಾಗ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಅಂಗ ಜಡ್ತಿ ಮಾಡಲು ತನ ಹತ್ತಿರ 1) ನಗದು ಹಣ 1540/- ರೂ., 2) 3 ಮಟಕಾ ನಂಬರ ಬರೆದ ಚೀಟಿಗಳು ಹಾಗೂ 3) ಒಂದು ಬಾಲ ಪೆನ್ನು ಸಿಕ್ಕಿರುತ್ತದೆಮ, ಪುನಃ ವಿಚಾರಣೆ ಮಾಡಲು ತಿಳಿಸಿದ್ದೆನೆಂದರೆ ತಾನು ಮಟಕಾ ನಂಬರ ಬರೆದ ಚೀಟಿ ಮತ್ತು ಹಣವನ್ನು ರಂಡಗಿ ಗ್ರಾಮದ ಮಹೇಶ ತಂದೆ ಮಲ್ಲಿಕಾರ್ಜುನ ಹಟ್ಟೆ ರವರಿಗೆ ಕೊಡುತ್ತೇನೆಂದು ತಿಳಿಸಿದ್ದು, ನಂತರ ಆತನ ಹತ್ತಿರ ಸಿಕ್ಕ ನಗದು ಹಣ, ಮಟಕಾ ಚೀಟಿ ಮತ್ತು ಒಂದು ಬಾಲ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 82/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 08-09-2020 ರಂದು ಭೋಸಗಾ ಗ್ರಾಮದಲ್ಲಿರುವ ಅಂಬೇಡ್ಕರ ಸಮೂದಾಯ ಭವನದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭೋಸಗಾ ಗ್ರಾಮಕ್ಕೆ ತಲುಪಿ ಭೋಸಗಾ ಗ್ರಾಮದಲ್ಲಿರುವ ಅಂಬೇಡ್ಕರ ಸಮೂದಾಯ ಭವನದ ಹತ್ತಿರ ಒಂದು ಮನೆಯ ಗೋಡೆಯ ಮರೆಯಾಗಿ ನಿಂತು ನೋಡಲು ಅಲ್ಲಿ ಅಂಬೇಡ್ಕರ ಸಮೂದಾಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಂಗದ ತಂದೆ ಹರಿನಾಥ ಕಾಂಬಳೆ ವಯ: 40 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಭೋಸಗಾ, ತಾ: ಬಸವಕಲ್ಯಾಣ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ ಒಂದು ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವನಿಗೆ ಹಿಡಿದು ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಹಣವನ್ನು ರಾಜು ಜಮಾದಾರ ಸಾ: ಸುಂಠಾಣ ಎಂಬ ವ್ಯಕ್ತಿಗೆ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 1270/- ರೂಪಾಯಿ, 2) ಎರಡು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 113/2020, ಕಲಂ. 20(2), (ಬಿ), 20(ಸಿ), ಎನ್.ಡಿ.ಪಿ.ಎಸ್ ಕಾಯ್ದೆ :-  

ದಿನಾಂಕ 08-09-2020 ರಂದು ಕಿಟ್ಟಾ ಗ್ರಾಮದಿಂದ ನಾರಾಯಣಪೂರ ರಸ್ತೆ ಮಾರ್ಗವಾಗಿ ಒಬ್ಬ ವ್ಯಕ್ತಿ ಟಿ.ವಿ.ಎಸ್ ಎಕ್ಸ್.ಎಲ್ ಸೂಪರ ಮೋಟಾರ್ ಸೈಕಲ್ ನಂ. ಕೆಎ-56/-5672 ನೇದರ ಮೇಲೆ ಗಾಂಜಾವವನ್ನು ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದಾನೆಂದು ಸುನೀಲಕುಮಾರ ಪಿಎಸ್ಐ(ಕಾ&ಸು) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು, ನೈರ್ಮಲ್ಯ ನಿರೀಕ್ಷಕರು ಸಿ.ಎಂ.ಸಿ ಕಛೇರಿ ಬಸವಕಲ್ಯಾಣ, ಆರೋಗ್ಯ ನಿರೀಕ್ಷಕರು ಸಿ.ಎಂ.ಸಿ ಕಛೇರಿ ಬಸವಕಲ್ಯಾಣ ಇವರಿಗೆ ಹಾಗೂ ಗೆಜೆಟೆಡ ಅಧಿಕಾರಿ ತಹಸೀಲ್ದಾರ ಬಸವಕಲ್ಯಾಣ ಹಾಗೂ ಗಾಂಜಾ ತೂಕ ಮಾಡಲು ಭಾಸ್ಕರ ರವರೆಲ್ಲರಿಗೆ ಕರೆಯಿಸಿ, ತಮ್ಮ ಸಿಬ್ಬಂದಿಯವರೊಡನೆ ನಾರಾಯಣಪೂರ ಗ್ರಾಮದ ಕಡೆಗೆ ಹೋಗುವಾಗ ಹಾಲ ಬಸವಣ್ಣಾ ಮಂದಿರದ ಹತ್ತಿರ ತಲುಪಿ ಕಾಯುತ್ತಾ ನಿಂತಾಗ ಎದುರಿನಿಂದ ಟಿ.ವಿ.ಎಸ್ ಎಕ್ಸ್.ಎಲ್ ಸೂಪರ ಮೋಟಾರ್ ಸೈಕಲ್ ಮೇರೆ ಬರುತ್ತಿರುವ ವ್ಯಕ್ತಿಗೆ ಕೈ ಸನ್ನೆ ಮಾಡಿ ನಿಲ್ಲಿಸಿ ನೋಡಲು ಬಾತ್ಮಿಯಂತೆ ಅದೇ ವಾಹನ ಇರುತ್ತದೆ, ನಂತರ ಸದರಿಯವನಿಗೆ ಹೆಸರು ವಿಚಾರಿಸಲು ತನ್ನ ಹೆಸರು ಖಂಡೆಪ್ಪಾ ತಂದೆ ರಾಯಪ್ಪಾ ಸಸ್ತಾಪೂರೆ ವಯ: 60 ವರ್ಷ, ಜಾತಿ: ಕುರುಬ, ಸಾ: ಕಿಟ್ಟಾ, ತಾ: ಬಸವಕಲ್ಯಾಣ ಅಂತಾ ತಿಳಿಸಿದನು, ಸದರಿ ವಾಹನದ ಹ್ಯಾಂಡಲಗೆ ಒಂದು ಕೈ ಚೀಲ ಇದ್ದು ಇದರಲ್ಲಿ ಏನಿದೆ? ಅಂತಾ ವಿಚಾರಿಸಿದಾಗ ಇದರಲ್ಲಿ ಗಾಂಜಾ ಇರುತ್ತದೆ ಅಂತಾ ತಿಳಿಸಿದನು, ಜೊತೆಯಲ್ಲಿ ಬಂದ ಭಾಸ್ಕರ ಇವರಿಗೆ ಗಾಂಜಾ ತೂಕ ಮಾಡಲು ಸೂಚಿಸಿದಾಗ ಅವರು ತೂಕ ಮಾಡಿದ್ದು 2 ಕೆ.ಜಿ 250 ಗ್ರಾಂ. ಅ.ಕಿ 22,500/- ರೂಪಾಯಿ ಇರುತ್ತದೆ ಹಾಗೂ ಸದರಿ ವಾಹನದ ಅ.ಕಿ 10,000/- ರೂಪಾಯಿ ಆಗುತ್ತದೆ, ಗಾಂಜಾವನ್ನು ಗೆಜೆಟೆಡ್ ಅಧಿಕಾರಿ ಮತ್ತು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿ ಖಂಡೆಪ್ಪಾ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.