Police Bhavan Kalaburagi

Police Bhavan Kalaburagi

Friday, June 10, 2016

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಜಯಕುಮಾರ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಸಾ : ಹವಳಗಾ ಇವರು ದಿನಾಂಕ 09-06-2016 ರಂದು ಸಾಯಂಕಾಲ ಮನೆಯಲ್ಲಿದ್ದಾಗ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ ಪೂಜಾರಿ ಈತನು ನನಗೆ ಪೋನ ಮಾಡಿ ನಮ್ಮೂರಿನ ರೇಣುಕಾ ಸಕ್ಕರೆ ಕಾರ್ಖಾನೆಯ ಹತ್ತಿರ ಬಾ ಅಂತಾ ತಿಳಿಸಿದ ಮೇರೆಗೆ, ನಾನು ಕಾರ್ಖಾನೆಯ ಮುಂದೆ ಹೋದೆನು. ಅಲ್ಲಿ ನನಗೆ ಪೋನ ಮಾಡಿ ಕರೆಸಿದ ಮಾಳಪ್ಪ ಪೂಜಾರಿ ಹಾಗೂ ಅವನ ಗೆಳೆಯನಾದ ಭಗವಂತ ನಾಟಿಕಾರ ಸಾ : ಘತ್ತರಗಾ ಈತನು ಇದ್ದನು, ನಾನು ಅವರ ಹತ್ತಿರ ಹೋಗಿ ಮಾಳಪ್ಪನಿಗೆ ಯಾಕೋ ಏನೊ ಕೆಲಸ ಇತ್ತು ಬಾಂ ಅಂತಾ ಹೇಳಿದಿ ಅಂತಾ ಕೇಳಿದೆನು, ಆಗ ಮಾಳಪ್ಪನು ಏನೋ ಬೋಸಡಿ ಮಗನೆ ಊರಲ್ಲಿ ನಿಂದು ಮತ್ತು ನಿಮ್ಮ ಅಣ್ಣ ವಕೀಲಂದು ತಿಂಡಿ ಜಾಸ್ತಿ ಆಗ್ಯದಾ, ಊರಾಗ ನೀವು ಹ್ಯಾಂಗ ಸಂಸಾರ ಮಾಡ್ತಿರಿ ನೋಡ್ತನಿ ಅಂತಾ ಹೇಳಿದನು, ಆಗ ನಾನು ಯಾಕ ಬೈತಿ ಅಂತಾ ಕೇಳಿದಕ್ಕೆ, ಸದರಿ ಮಾಳಪ್ಪ ಮತ್ತು ಅವನ ಜೋತೆಗೆ ಇದ್ದ ಭಗವಂತ ಇಬ್ಬರು ಬೋಸಡಿ ಮಗನೆ ನಿನಗೆ ಬೈಯಲ್ಲಾ ಹೊಡಿತಿವಿ ಏನು ಮಾಡ್ಕೊತಿ ಮಾಡ್ಕೊ ಅಂತಾ ಇಬ್ಬರು ಕೂಡಿ ನನಗೆ ಕೈಯಿಂದ ಹೊಡೆದನು, ಮಾಳಪ್ಪ ಈತನು ಚಪ್ಪಲಿ ಬಿಚ್ಚಿ ಚಪ್ಪಲಿಯಿಂದ ಹೊಡೆದನು. ಆಗ ನಾನು ಕೇಳಗೆ ಬಿದ್ದಾಗ ಇಬ್ಬರು ಕೂಡಿ ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಹಾಗೂ ಬೆನ್ನಿನ ಮೇಲೆ ಒದ್ದರು, ಸದರಿಯವರು ನನಗೆ ಒದೆಯುತ್ತಿದ್ದಾಗ ಅಲ್ಲೆ ಇದ್ದ ನಮ್ಮೂರಿನ ಅಡಿವೆಪ್ಪ ತಂದೆ ಸಿದ್ದಪ್ಪ ಪೂಜಾರಿ ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಸಣ್ಣಗೌಡ ಬೋರಗಿ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿದರು, ಆಗ ಸದರಿಯವರು ಮಗನೆ ನಿಮ್ಮ ಅಣ್ಣನಿಗೆ ಹೇಳು ನಿನಗೂ ಮತ್ತು ನಿನ್ನ ಅಣ್ಣನಿಗೂ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಅಲ್ಲಿಂದ ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಂಗೀತಾ ಗಂಡ ಲೋಹಿತ ಖರಟಮಲ್ ಸಾ: ಮಹಾದೇವ ನಗರ ಲೋಹಾರಗಲ್ಲಿ ಪ್ರಕಾಶ ಟಾಕೀಜ ಹಿಂದುಗಡೆ ಸುಪರ ಮಾರ್ಕೇಟ ಕಲಬುರಗಿ ಇವರನ್ನು 2011 ರಲ್ಲಿ ಕಲಬುರಗಿಗೆ ಉಶೋದಯ ಕಂಪನಿ ಪ್ಲಾಟ ನಂ 19 ಯಲ್ಲಾಲಿಂಗೇಶ್ವರ ಕಾಲೋನಿ ಕೊಟನೂರ ಮಠದ ಹಿಂದುಗಡೆ ಕೆಲಸ ಮಾಡುತ್ತಿದ್ದೆ. ಲೋಹಿತ ತಂದೆ ಸೈದಪ್ಪ ಖರಟಮಲ್ ಎನ್ನುವನೊಂದಿಗೆ ಪರಿಚಯವಾಗಿ ಪ್ರೀತಿ ಪ್ರೇಮವಾಗಿ ಹುಮನಾಬಾದ ರಿಂಗ ರೋಡಿನ ತಾಜನಗರದಲ್ಲಿ ಬಾಡಿಗೆ ಮನೆಯಲ್ಲಿ 2013 ರಲ್ಲಿ ದೇವರೆದುರಿಗೆ ತಾಳಿ ಕಟ್ಟಿಕೊಂಡು ಅಂದಿನಿಂದ ಇಂದಿನವರೆಗೂ ಗಂಡ ಹೆಂಡತಿಯಾಗಿ ಸಂಸಾರ ಮಾಡಿಕೊಂಡು ಬರುತ್ತಿದ್ದೆನೆ. ನನ್ನ ಮದುವೆಯ ವಿಷಯ ದಾವಣಗೆರೆಯ ನನ್ನ ತಂದೆ ತಾಯಿಯವರಿಗೆ ಗೊತ್ತಾಗಿ ನನಗೆ ಮನೆಗೆ ಬಾರದಂತೆ ನಿರ್ಬಂದ ವಿದಿಸಿದ್ದಾರೆ. ಮೂರು ವರ್ಷಗಳವರೆಗೆ ಚೆನ್ನಾಗಿಯೇ ಇದ್ದೆ. ನನ್ನ ಗಂಡ ಲೋಹಿತ ಮೂರು ನಾಲ್ಕು ತಿಂಗಳಿಂದ ನನಗೆ ಕಿರುಕುಳ ಕೊಡಲು ಪ್ರಾರಂಬಿಸಿ ಹಣಕ್ಕಾಗಿ ಪೀಡಿಸ ತೊಡಗಿದ್ದ ಮತ್ತು ಬಿಜನೆಸ್ ಗಾಗಿ  1 ಲಕ್ಷ ರೂಪಾಯಿ ಎಲ್ಲಿಂದಾದರು ತಂದುಕೊಡು ಎಂದು ದೈಹಿಕ ಹಲ್ಲೆ ಮಾಡಿ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದಾನೆ, ತಂದೆ ತಾಯಿಯವರು ಇಲ್ಲ ದುಡಿಯಲು ಈಗ ಕೆಲಸವೂ ಇಲ್ಲ ಇಂಥದರಲ್ಲಿ ನಾನು ಗಂಡನಿಗೆ ದುಡ್ಡು ಕೊಡಲು ಆಗುತ್ತಿಲ್ಲ ಈ ಮೊದಲು ನಾನು ದುಡಿದಿದ್ದಲ್ಲವನ್ನು ಲೋಹಿತನೇ ತೆಗೆದುಕೊಳ್ಳೂತ್ತಿದ್ದ ತಿಂಗಳಿಗೆ 9 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಈಗ ನನಗೆ ತಿಳಿಯದ ಹಾಗೆ ದಿನಾಂಕ 22.04.2016 ರಂದು ಪ್ರಿಯಂಕಾ ಎನ್ನುವವರೊಂದಿಗೆ ಎರಡನೆಯ ಮದುವೆಯಾಗಿ ನನಗೆ ದ್ರೋಹ ಮಾಡಿದ್ದಾನೆ. ಯಾಕೆ ಹೀಗೆ ಮೋಸ ನಂಬಿಕೆ ದ್ರೋಹ ಮಾಡಿದೆ ಎಂದು ಕೇಳಿದಕ್ಕೆ ದಿನಾಂಕ 02.06.2016 ರಂದು ರಾತ್ರಿ 8-30 ಪಿ.ಎಂಕ್ಕೆ ನನಗೆ ಹೊಡೆದು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ದೂರು ಸಲ್ಲಿಸಿದರೆ ಕೊಂದು ಹಾಕುವದಾಗಿ ಜೀವ ಭಯ ಹಾಕಿದ್ದಾನೆ. ಈ ವಿಷಯ ಕಾವೇರಿ ಗಂಡ ಸಂಜುಕುಮಾರ ಪಾಂಚಾಳ ಮತ್ತು ಸುಹಾಸಿನಿ ತಂದೆ ರಾಜೇಂದ್ರ ಇವರಿಗೆ ಹೇಳಿದ್ದೆನೆ. ಅವರೂ ಲೋಹಿತನಿಗೆ ಬುದ್ದಿವಾದ ಹೇಳಿದ್ದಾರೆ ಅಲ್ಲದೇ ನಾಲ್ಕು ಸಲ ಗರ್ಭಪಾತ ಮಾಡಿಸಿದ್ದಾನೆ. ಕಾರಣ ನನಗೆ ದೈಹಿಕ ಕಿರುಕುಳ ನೀಡಿ ವರದಕ್ಷಿಣೆಗಾಗಿ ಮಾನಸಿಕ ಹಿಂಸೆ ನೀಡಿ ಜೀವ ಭಯ ಹಾಕುತ್ತಿರುವ ಮತ್ತು ನನಗೆ ತಿಳಿಯದಂತೆ ಎರಡನೆಯ ಮದುವೆಯಾದ ಲೋಹಿತ ತಂದೆ ಸೈದಪ್ಪ ಖರಟಮಲ್ ಸಾ: ಗಣಜಲಖೇಡ ತಾ;ಜಿ; ಗುಲಬರ್ಗಾ ಇವರ ಮೇಲೆ ಮತ್ತು ಲೋಹಿತನ ಅಣ್ಣ ಶ್ರೀಶೈಲ ಇತನು ಹೋಗಲಿ ಬಿಡಮ್ಮ ನಿನಗೆ ಮತ್ತೊಂದು ಮದುವೆ ಮಾಡುತ್ತೇವೆ. ಎಂದು ಹೆದರಿಸಿದ್ದು ಅವರಿಬ್ಬರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಚತ್ರೇಪ್ಪ ತಂದೆ ರಾಣಪ್ಪ ಬೌದ ಸಾ: ಪ್ಲಾಟ ನಂ. ಎಫ್-2 ದರ್ಶನ ಅಪಾರ್ಟಮೆಂಟ ಹಳೆ ಜೇವರ್ಗಿ ರಸ್ತೆ ಕಲಬುರಗಿ ರವರು ದಿನಾಂಕ. 08/06/2016  ರಂದು 9.00 ಎ.ಎಂ ಸುಮಾರಿಗೆ ನಾನು ನನ್ನ ಸ್ಯಾಮಸಾಂಗ ಜೆ-2 ಮೋಬೈಲ್  ಐ.ಎಮ್.ಇ.ಐ ನಂ. 359268071895783 ವಡಾಪೋನ್ ಸೀಮ್ ನಂ. 9513242568 ಬಿ.ಎಸ್.ಎನ್.ಎಲ್ ಸೀಮ್ ನಂ. 9448586152 ಅ.ಕಿ. 7590/- ರೂ ನೇದ್ದು ನಮ್ಮ ಮನೆಯ ಟೇಬಲ ಮೇಲೆ ಇಟ್ಟು ನಾನು ಕಟಿಂಗ ಮಾಡಿಸಿಕೊಂಡು ಮರಳಿ 10 ಎ.ಎಂ.ಕ್ಕೆ ಮರಳಿ ಬಂದು ನೋಡಲಾಗಿ ನನ್ನ ಮೋಬೈಲ್ ಇರಲಿಲ್ಲಾ. ಮನೆಯಲ್ಲಿ ಎಲ್ಲಾ ಕಡೆ ಹುಡಿಕಾಡಿದರೂ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ನನ್ನ ಮೋಬೈಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.