ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 02.02.2017 ರಂದು
ಸಾಯಂಕಾಲ 7-30 ಗಂಟೆ
ಸುಮಾರಿಗೆ ಮೃತ ಶರಣಗೌಡ @ ಶರಣಬಸಪ್ಪ
ಇತನು ಉದಯನಗರದೊಳಗಡೆಯಿಂದ ಸಂತೋಷ ಕಾಲೋನಿ ಕಡೆಗೆ ಹೋಗುವ ಕುರಿತು ನಡೆದುಕೊಂಡು ಹೋಗುತ್ತೀರುವಾಗ
ಸಂತೊಷ ಕಾಲೋನಿ ಕ್ರಾಸ ಹತ್ತೀರ ರೋಡ ಮೇಲೆ ಮೋ/ಸೈ ನಂ ಕೆಎ-32-ಇಸಿ-1996 ನೇದ್ದರ ಸವಾರನಾದ ಪ್ರಮೋದ ಇತನು ಆರ.ಪಿ ಸರ್ಕಲ ರೋಡ ಕಡೆಯಿಂದ
ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ಮೃತ ಶರಣಗೌಡ @ ಶರಣಬಸಪ್ಪ
ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನ ತೆಲೆಗೆ ಭಾರಿ ಒಳಪೆಟ್ಟು ಮತ್ತು ಎಡಗಾಲು ಕಿರುಬೆರಳಿಗೆ
ತೊರಬೆರಳಿಗೆ ರಕ್ತಗಾಯಗೊಳಿಸಿದ್ದರಿಂದ ಮೃತ ಶರಣಗೌಡ @ ಶರಣಬಸಪ್ಪ ಇತನ ಉಪಚಾರ ಕುರಿತು ಸತ್ಯ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಉಪಚಾರ ಮಾಡಿಸಿದ್ದು ಸತ್ಯ ಆಸ್ಪತ್ರೆಯಿಂದ ದಿನಾಂಕ 03-02-2017 ರಂದು
ಶರಣಗೌಡ @ ಶರಣಬಸಪ್ಪ
ಇತನ ಉಪಚಾರ ಕುರಿತು ಸಕಾರಿ ಆಸ್ಪತ್ರೆಗೆ ಸೇರಿಕೆಮಾಡಿದ್ದು ಶರಣಗೌಡ @ ಶರಣಬಸಪ್ಪ
ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 04.02.2017 ರಂದು
ಬೆಳಿಗ್ಗೆ ಸರಕಾರಿಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಲಕ್ಷಮಿಬಾಯಿ ಗಂಡ ಶರಣಗೌಡ
ಹತ್ತೆಕಾಳೆರ ಸಾ ಸರಸಂಬಾ ತಾ ಆಳಂದ ಸಧ್ಯ ಉಯನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಸಿದ್ದಮ್ಮ ಗಂಡ ಮಲ್ಲಪ್ಪ ಶಿವಗೊಂಡ ಸಾ: ಅವರಾದ ತಾ: ಜೇವರಗಿ ರವರ ಊರ ಸಿಮಾಂತರದ
ನಮ್ಮದೊಂದು ಹೊಲ ಸರ್ವೇ ನಂ 63 ನೇದ್ದರಲ್ಲಿನ 6 ಎಕರೆ 5 ಗುಂಟೆ ಜಮೀನು ಇರುತ್ತದೆ. ಅಲ್ಲದೆ ಈ
ಸರ್ವೆ ನಂ 63 (ಈ) ನೇದ್ದರಲ್ಲಿ ನಮಗೆ ಸರ್ವೇ ಹೊಲ ಬರುತ್ತದೆ ಎಂದು ಈಗ ಸುಮಾರು 6 ತಿಂಗಳದಿಂದ
ನಮ್ಮೂರ ಶರಣಪ್ಪ ತಂದೆ ಶಿವರಾಯ ಮದರಿ, ಸಂಗಣ್ಣಾ ತಂದೆ ಶಿವರಾಯ ಮದರಿ, ಬಸವರಾಜ ತಂದೆ ಜಗದೇವಪ್ಪ ಬಿರಾದಾರ ಇವರು ನಮ್ಮ ಸಂಗಡ ತಕರಾರು ಮಾಡುತ್ತಾ
ಬಂದಿರುತ್ತಾರೆ. ಅಲ್ಲದೇ ಈ ವಿಷಯ ನಾವು ಮತ್ತು ಮೇಲೆ ನಮೂದಿಸಿದವರು ಮಾನ್ಯ ಜೇ.ಎಮ್.ಎಫ್.ಸಿ
ಜೇವರಗಿ ನ್ಯಾಯಾಲಯದಲ್ಲಿ ದಾವೆ ಹಾಕಿರುತ್ತೇವೆ ಅದು ಓ.ಎಸ್. ನಂ 170/16 ರಲ್ಲಿ ವಿಚಾರಣೆ
ಹಂತದಲ್ಲಿ ಇರುತ್ತದೆ. ಈ ವರ್ಷ ಆ ಹೊಲದಲ್ಲಿ ನಾವು ಜೋಳದ ಬೆಳೆ ಬಿತ್ತಿರುತ್ತೆವೆ. ದಿನಾಂಕ 03.02.2017 ರಂದು ಮುಂಜಾನೆ ಸಮಯದಲ್ಲಿ ನಾನು ಮತ್ತು
ನಮ್ಮ ಮಕ್ಕಳಾದ ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ, ಕರಬಸಪ್ಪ ತಂದೆ ಮಲ್ಲಪ್ಪ ಶಿವಗೊಂಡ ಮೂವರು ಕೂಡಿ ಮೇಲೆ ನಮೂದಿಸಿದ
ನಮ್ಮ ಹೊಲಕ್ಕೆ ಹೋಗಿ ಜೊಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ಮದ್ಯಾಹ್ನ 2.30 ಗಂಟೆಯ
ಸುಮಾರಿಗೆ ನಮ್ಮೂರ 1. ಶರಣಪ್ಪ ತಂದೆ ಶಿವರಾಯ ಮದರಿ, 2. ಸಂಗಣ್ಣಾ ತಂದೆ ಶಿವರಾಯ ಮದರಿ, 3. ಬಸವರಾಜ ತಂದೆ ಜಗದೇವಪ್ಪ ಬಿರಾದಾರ 4. ನಾಗಮ್ಮ ಗಂಡ ಶಿವರಾಯ
ಮದರಿ ಎಲ್ಲರೂ ಕೂಡಿಕೊಂಡು ನಮ್ಮ ಹೊಲಕ್ಕೆ ಬಂದು ನಮ್ಮ ಜೋಳದ ಬೆಳೆಯ ಹೊಲದಲ್ಲಿ ನೀವು ಯಾಕೆ? ಬಂದಿರಿ ಎಂದು ನಮಗೆ ಅವಾಚ್ಯವಾಗಿ ಬೈಯ ಹತ್ತಿದ್ದರು, ಆಗ ನನ್ನ ಮಗ ಶಿವಲಿಂಗಪ್ಪನು ಅವರಿಗೆ ನಮ್ಮ
ಹೊಲದಲ್ಲಿ ನಾವು ಕೆಲಸ ಮಾಡುತ್ತಿದ್ದೆವೆ ಅಂತಾ ಅಂದಾಗ ಅವರಲ್ಲಿ ಶರಣಪ್ಪ ಇತನು ಏ ಬೊಸಡಿ ಮಗನೆ ಈ ಹೊಲ ನಮ್ಮದು ಇರುತ್ತದೆ ನೀವು ನಮ್ಮ ಹೊಲದಲ್ಲಿ ಬಂದು ನಮಗೆ
ಎದುರು ಮಾತನಾಡುತಿರಿ ಅಂತಾ ನನ್ನ ಮಗನಿಗೆ ಹೊಡೆಯಲು ಎದೆಯ ಮೇಲಿನ ಅಂಗಿ ಹಿಡಿದಾಗ ನಾನು ಬಿಡಿಸಲು
ಹೋದಾಗ ಸಂಗಣ್ಣ ಮದರಿ ಇತನು ನನಗೆ ಕಾಲಿನಿಂದ ಸೊಂಟದ ಮೇಲೆ ಒದ್ದು ಮೈ ಮೇಲಿನ ಸೀರೆ ಹಿಡಿದು
ಜಗ್ಗಿ ನನಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ನನ್ನ ಕುತ್ತಿಗೆ ಜೋರಾಗಿ ಹಿಡಿದು ನೇಲಕ್ಕೆ
ಕೇಡುವಿದಾಗ ಶರಣಪ್ಪ ಮತ್ತು ಬಸವರಾಜ ಇವರು ಕೈಯಿಂದ ನನ್ನ ಬೇನ್ನು ಮೇಲೆ ಹೆಡಕಿನ ಮೇಲೆ ಹೊಡೆದರು, ನಾಗಮ್ಮ ಇವಳು ಈ ರಂಡೀದು ಬಹಳ ಸೊಕ್ಕು ಆಗ್ಯಾದ ಅಂತಾ
ಬೈಯ್ದು ಕೂದಲು ಹಿಡಿದು ಜಗ್ಗಿರುತ್ತಾಳೆ, ನನ್ನ ಮಗ ಕರಬಸಪ್ಪ ಇತನು ಬಂದು ಬಿಡಿಸಲು ಬಂದಾಗ ಅವನಿಗೆ ದಬ್ಬಿ ಕೊಟ್ಟಿರುತ್ತಾರೆ ನಾನು
ಜೊರಾಗಿ ಚಿರಾಡುತ್ತಿದ್ದಾಗ ಪಕ್ಕದ ಹೊಲದವರಾದ ಚಂದಪ್ಪ ತಂದ ಅಪ್ಪಾಸಾಬ ತಳವಾರ, ಮಲ್ಲಪ್ಪ ತಂದೆ ಮೈಲಾರಿ ತಳವಾರ, ರಾಣಪ್ಪ ತಂದೆ ತಿಪ್ಪಣ್ಣ ಬುಟ್ನಾಳ ಇವರು ಬಂದು ಜಗಳ
ಬಿಡಿಸಿರುತ್ತಾರೆ. ಇಲ್ಲವಾದರೆ ಅವರು ನನಗೆ ಕೊಲೆ ಮಾಡಿಯೇ? ಬಿಡುತ್ತಿದ್ದರು. ನಂತರ ಆ ನಾಲ್ಕು ಜನರು ನಮ್ಮ ಹೊಲದಲ್ಲಿನ
ಸುಮಾರು ಐದು ಸಾವಿರ ರೂಪಾಯಿ (5000/-) ಕಿಮ್ಮತ್ತಿನ ಜೋಳದ ತೆನೆ ಸಮೇತ ಇದ್ದ ಕಣಕಿ
ಸುಟ್ಟಿರುತ್ತಾರೆ. ಅದನ್ನು ನಾವು ಆರಿಸಲು ಹೋದಾಗ ನೀವು ಸಮೀಪ ಬಂದರೆ ನೀಮ್ಮ ಜೀವ ಸಮೇತ
ಬಿಡಿವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಶರಣಪ್ಪ ತಂದೆ
ಶಿವರಾಯ ಮದರಿ ಸಾ: ಅವರಾದ ತಾ: ಜೇವರಗಿ ರವರ ಹೊಲ ಅವರಾದ ಸಿಮಾಂತರದ ಸರ್ವೆ ನಂ 63 ಈ ನೇದ್ದರಲ್ಲಿನ 8 ಎಕರೆ 30 ಗುಂಟೆ ಜಮೀನಿನ ಕಬ್ಜೆದಾರರು ಇರುತ್ತೇವೆ. ಈಗ ಸುಮಾರು 6 ತಿಂಗಳದಿಂದ
ನಮ್ಮೂರ ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ, ರಾಣಪ್ಪ ತಂದೆ ತಿಪ್ಪಣ್ಣ ಬುಟ್ನಾಳ, ಅಮೃತ ತಂದೆ ತಿಪ್ಪಣ್ಣ ಬುಟ್ನಾಳ, ಇವರು ನಮಗೆ ಆ ಹೊಲದಲ್ಲಿ ಇನ್ನು ಹೊಲ ಬರುತ್ತದೆ ಎಂದು ನಮ್ಮ ಸಂಗಡ
ತಕರಾರು ಮಾಡುತ್ತಾ ಬಂದಿರುತ್ತಾರೆ. ಅಲ್ಲದೇ ನಾವು ಸುಮಾರು 46 ವರ್ಷಗಳಿಂದ ನಾವೆ ಕಬ್ಜೆದಲ್ಲಿ
ಇದ್ದೇವು. ಈ ವಿಷಯ ನಾವು ಮತ್ತು ಮೇಲೆ ನಮೂದಿಸಿದವರು ಮಾನ್ಯ ಜೇ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ
ದಾವೆ ಹಾಕಿರುತ್ತೇವೆ. ಅದು ವಿಚಾರಣೆ ಹಂತದಲ್ಲಿ ಇರುತ್ತದೆ. ಈ ವರ್ಷ ಆ ಹೊಲದಲ್ಲಿ ಜೋಳದ ಬೆಳೆ
ಇರುತ್ತದೆ. ದಿನಾಂಕ: 03.02.2017 ರಂದು
ಮುಂಜಾನೆ ಸಮಯದಲ್ಲಿ ನನ್ನ ತಮ್ಮ ಸಂಗಣ್ಣಾ ಇತನು ಮೇಲೆ ನಮೂದಿಸಿದ ಹೊಲಕ್ಕೆ ಹೋಗಿ ಬರುತ್ತೇನೆ
ಅಂತ ಹೇಳಿ ಹೋದನು. ನಾನು ಊರಲ್ಲಿ ಇದ್ದೇನು. ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ನನ್ನ ತಮ್ಮ
ಸಂಗಣ್ಣ ಫೋನ ಮಾಡಿ ನಮ್ಮೂರ 1. ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ, ರಾಣಪ್ಪ ತಂದೆ ತಿಪ್ಪಣ್ಣ ಬುಟ್ನಾಳ, ಅಮೃತ ತಂದೆ ತಿಪ್ಪಣ್ಣ ಬುಟ್ನಾಳ ಇವರು
ಟ್ರ್ಯಾಕ್ಟರದಲ್ಲಿ ಇನ್ನು ಇತರ ಜನರೊಂದಿಗೆ ಬಂದು ಕೊಯ್ದು ಹಾಕಿದ ನಮ್ಮ ಜೋಳದ ಬೆಳೆ ತಗೆದುಕೊಂಡು
ಹೋಗಲು ಬಂದಿರುತ್ತಾರೆ ಅಂತ ಹೇಳಿದ ಕೂಡಲೇ ನಾನು ಮೇಲೆ ನಮೂದಿಸಿದ ಹೊಲಕ್ಕೆ ಹೋದಾಗ ಅಂದಾಜು 2.30
ಗಂಟೆ ಆಗಿರಬಹುದು. ಅಲ್ಲಿ ನಮ್ಮೂರ 1. ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ 2) ಕರಬಸಪ್ಪ ತಂದೆ
ಮಲ್ಲಪ್ಪ ಶಿವಗೊಂಡ 3) ಚಂದಪ್ಪ ತಂದೆ ಅಪ್ಪಾಸಾಬ ತಳವಾರ 4) ಮಲ್ಲಪ್ಪ ತಂದೆ ಮೈಲಾರಿ ತಳವಾರ 5)
ಈಸಪ್ಪ ತಂದೆ ಮಲ್ಲಪ್ಪ ದೊಡ್ಡಮನಿ 6) ರಾಣಪ್ಪ ತಂದೆ ತಿಪ್ಪಣ್ಣ ಬೂಟ್ನಾಳ 7) ಅಮೃತ ತಂದೆ
ತಿಪ್ಪಣ್ಣ ಬುಟ್ನಾಳ 8) ಸಂತೋಷ ತಂದೆ ರಾಣಪ್ಪ ಬೂಟ್ನಾಳ 9) ಮಲ್ಲಪ್ಪ ತಂದೆ ರಾಣಪ್ಪ ಬೂಟ್ನಾಳ
10) ಈಸಪ್ಪ ತಂದೆ ರಾಣಪ್ಪ ಬೂಟ್ನಾಳ ಇವರೆಲ್ಲರೂ ಇದ್ದು ಹೊಲದಲ್ಲಿನ ಜೋಳದ ಬೆಳೆ
ಟ್ರ್ತಾಕ್ಟರದಲ್ಲಿ ಹಾಕಿತ್ತಿದ್ದಾಗ ನನ್ನ ತಮ್ಮ ಅವರಿಗೆ ಈ ಜೋಳದ ಬೇಳೆ ಯಾಕೆ ತೆಗೆದುಕೊಂಡು
ಹೋಗುತ್ತಿದ್ದಿರಿ ಅಂತ ಕೇಳಿದಕ್ಕೆ ಅವರು ಈ ಹೊಲದಲ್ಲಿ ನಮಗೆ ಇನ್ನು ಹೊಲ ಬರುತ್ತದೆ ಅದಕ್ಕಾಗಿ
ನಾವು ತಗೆದುಕೊಂಡು ಹೋಗುತ್ತಿದ್ದೇವು ಅಂತ ಹೇಳಿದಕ್ಕೆ ನಾವು ಹೊಲದಲ್ಲಿ ಜೋಳದ ಬೆಳೆ ನಮ್ಮದು
ಇರುತ್ತದೆ ಅಂತ ಅಂದಾಗ ಶಿವಲಿಂಗಪ್ಪ ಶಿವಗೊಂಡ, ರಾಣಪ್ಪ ಬುಟ್ನಾಳ, ಅಮೃತ ಬುಟ್ನಾಳ ಇವರು ನನ್ನ ತಮ್ಮನಿಗೆ ತಡೆದು ನಿಲ್ಲಿಸಿದಾಗ
ಮಲ್ಲಪ್ಪ ತಳವಾರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅವನ ಮೊಳಕಾಲಿಗೆ ಹೋಡೆದನು. ಚಂದಪ್ಪ
ತಳವಾರ ಇತನು ಕೈಯಿಂದ ಜೋರಾಗಿ ಅವನ ಎದೆಗೆ ಹೊಡೆದನು. ಈಸಪ್ಪ ದೊಡ್ಡಮನಿ ಇತನು ಬಡಿಗೆಯಿಂದ ಅವನ
ಬಲಮುಂಗೈ ಹತ್ತಿರ ಹೊಡೆದನು. ಕರಬಸಪ್ಪ ಇತನು ಬಡಿಗೆಯಿಂದ ಅವನ ಹಣೆಗೆ ಹೊಡೆದನು ಅವನು ನೆಲಕ್ಕೆ
ಬಿದ್ದಾಗ ಶಿವಲಿಂಗಪ್ಪ ಇತನು ಕಾಲಿನಿಂದ ಅವನ ತೊರಡಿನ ಮೇಲೆ ಒದ್ದಿರುತ್ತಾನೆ. ಸಂತೋಷ ಇತನು
ಬಡಿಗೆಯಿಂದ ಅವನ ಬೆನ್ನ ಮೇಲೆ ಹೋಡೆದನು. ಈಸಪ್ಪ ಬುಟ್ನಾಳ ಇತನು ಕೊಲೆ ಮಾಡುವ ಉದ್ದೇಶದಿಂದ ಅವನ
ಕುತ್ತಿಗೆ ಒತ್ತುತ್ತಿದ್ದಾಗ ನಾನು ಬಿಡಿಸಲು ಹೋದಾಗ ಅಮೃತ ಇತನು ನನಗೆ ಕೈಯಿಂದ ಕಪಾಳದ ಮೇಲೆ
ಹೊಡೆದನು. ಉಳಿದವರು ಈ ರಂಡಿ ಮಕ್ಕಳಿಗೆ ಬಿಡಬ್ಯಾಡ ಹೋಡೆದು ಖಲಾಸ ಮಾಡ್ರಿ ಅಂತ ಬೈಯುತ್ತಿದ್ದರು.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಜಾ ಠಾಣೆ : ಶ್ರೀಮತಿ ರಹತಾ ಸುಲ್ತಾನ ಗಂಡ ಮಹ್ಮದ ಅಮಜದ ಪಟೇಲ್ ಸಾ: ಮಹೆಬೂಬ ನಗರ ಕಲಬುರಗಿ ರವರ ಮಗನಾದ
ಸೈಯದ ನವಾಜೊದ್ದೀನ ವಯ; 09
ವರ್ಷ ಈತನಿಗೆ
ದಿನಾಂಕ; 03-02-2017
ರಂದು ನನ್ನ ಮಗನಾದ ಸೈಯದ ನವಾಜೊದ್ದೀನ
ತನಿಗೆ ಮದರಸಾ ಜಿಯವುಲ್ಲಾ ವುಲ್ಲಂ ಬಾಗವಾನ ಅರಬಿಯಾ ಶಾಲೆಯಲ್ಲಿ
ಶಿಕ್ಷಣ ಕುರಿತು ದಾಖಲಾತಿ ಮಾಡಿಸಿರುತ್ತೇನೆ. ನಂತರ ದಿನಾಂಕ; 03-02-2017 ರಂದು ಮಧ್ಯಾಹ್ನ 1.ಗಂಟೆ ಸುಮಾರಿ ನಾನು ದಿನನಿತ್ಯದಂತೆ
ಅಂಗನವಾಡಿ ಶಾಲೆಯಲ್ಲಿದ್ದಾಗ ನನ್ನ ಮಗ ಸೈಯದ ನವಾಜೊದ್ದೀನ
ಈತನು ಅಳುತ್ತಾ ಓಡಿ ಬಂದು ನನಗೆ ತಿಳಿಸಿದ್ದೇನೆಂದರೆ
ಇಂದು ಬೆಳಿಗ್ಗೆ ಸಮಯದಲ್ಲಿ ನನಗೆ ಅರಬಿಯಾ ಶಾಲೆಯ ಶಿಕ್ಷಕನು ವಿನಾಕಾರಣ ನನಗೆ ಎದೆಯ ಮೇಲಿನ ಅಂಗಿ ಹಿಡಿದು ತಡೆದು ಏ ಭೋಸಡಕೆ ಅಂತಾ ಅವಾಚ್ಯ ಶಬ್ದಗಳಿಂದ
ಬೈದು ಕೈ ಮುಷ್ಠಿಯಿಂದ ನನ್ನ ಬೆನ್ನಿನ ಮೇಲೆ ಕೈಯಿಂದ ಹೊಡೆದಿರುತ್ತಾನೆ. ಇದರಿಂದ ಬೆನ್ನಿನ ಮೇಲೆ ಕಂದು ಬಣ್ಣದ ಒಳಪೆಟ್ಟಾಗಿರುತ್ತದೆ.
ಇದರಿಂದ ನಾನು ಅಂಜಿ ಓಡಿ ಬಂದಿರುತ್ತೇನೆ
ಅಂತಾ ತಿಳಿಸಿರುತ್ತಾನೆ. ಆಗ ನಾನು ಕೂಡಲೆ ಶಾಲೆಗೆ ಹೋಗಿ ವಿಚಾರಿಸಿದಾಗ
ಶಿಕ್ಷಕನ ಹೆಸರು ಮಹ್ಮದ ಜೈನೊದ್ದೀನ
ತಂದೆ ಲಾಲ ಪಟೇಲ್ ಅಂತಾ ತಿಳೀದು ಬಂದಿರುತ್ತದೆ. ಆಗ ಕೂಡಲೆ ನಾನು ನನ್ನ ಮಗನಿಗೆ ಉಪಚಾರ ಕುರಿತು. ಜಿಲ್ಲಾ ಸರಕಾರಿ ಆಸ್ಪತ್ರೆಗೆ
ಸೇರಿಕೆ ಮಾಡಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ
ನಿಂದನೆ ಮಾಡಿದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಜೈಭೀಮ ತಂದೆ ಪ್ರಭುಲಿಂಗ
ನಾಡಗಿರಿ ಸಾ:ಶಿರಸಗಿ ಮಡ್ಡಿ ಕಲಬುರಗಿ. ಇವರು ದಿನಾಂಕ 04.02.2017 ರಂದು ಅಫಜಲಪೂರ
ನ್ಯಾಯಾಲಯದಲ್ಲಿ ಪ್ರಕರಣದ ಸಂಬಂದವಾಗಿ ಹಾಜರಾಗಿ ಮರಳಿ ಬರುತ್ತಿರುವಾಗ ಅಫಜಲಪೂರ ಪಟ್ಟಣದ ಬಸ್ಸ
ನಿಲ್ದಾಣಕ್ಕೆ ಬಂದು ಗುಲಬರ್ಗಾಕ್ಕೆ ಬರುವ ಸರಕಾರಿ ಬಸ್ಸ ನಂ ಕೆಎ-32 ಎಫ-2090 ನಲ್ಲಿ ಸುಮಾರು
1-30 ಪಿಎಂ ಸುಮಾರಿಗೆ ಕುಳಿತು ಅದೆ ಬಸ್ಸಿನಲ್ಲಿ ಬರುತ್ತಿರುವಾಗ ಅಫಜಲಪೂರ ಪಟ್ಟಣ ದಾಟಿದ ನಂತರ
ಸದರಿ ಬಸ್ಸ ನಿರ್ವಾಹಕನಾದ ಈರಣ್ಣ ಎಂಬುವವರು ಟಿಕೇಟ ತೆಗೆದುಕೊಳ್ಳಲು ಹೇಳಿದರು ಆಗ ನನ್ನ ಹತ್ತಿರ
ಅಂಗವಿಕಲತೇಯ ಪಾಸ ಇದೆ ಎಂದು ತಿಳಿಸಿದೆನು ನಿರ್ವಾಹಕನ ಕೊರಿಕೆಯ ಮೇರೆಗೆ ಪಾಸನ್ನು ಅವನಿಗೆ
ನೀಡಿದೆನು ನನ್ನ ಪಾಸನ್ನು ಪರಿಶೀಲಿಸಿದ ನಿರ್ವಾಹಕ ಈರಣ್ಣ ಸದರಿ ಪಾಸ ಈ ಬಸ್ಸಿಗೆ ನಡೆಯುವದಿಲ್ಲ
ಎಂದು ತಿಳಿಸಿದೆನು ಅದಕ್ಕೆ ಉತ್ತರವಾಗಿ ಸದರಿ ಪಾಸ ನಿಮ್ಮ ಇಲಾಖೆಯವರೆ ನೀಡಿರುತ್ತಾರೆ ಎಂದು
ತಿಳಿಸಿದೆನು, ಅಷ್ಟೊತ್ತಿಗೆ ಆಗಲೆ ಬಸ್ಸು
ಮಲ್ಲಬಾದಯವರೆಗೆ ಬಂದಿತ್ತು ಆಗ ನಿರ್ವಾಹಕನು ನನಗೆ ಅವಾಚ್ಚ ಶಬ್ದಗಳಿಂದ ನಿಂದಿಸತೊಡಗಿದ್ದ ಮತ್ತು
ಜಾತಿ ನಿಂದನೆ ಮಾಡಿ ಅವಮಾನಿಸಿದನು ನಾನು ವಕಿಲನಿದ್ದೇನೆ ನನಗೆ ಯಾವ ಪಾಸು ಎಲ್ಲ ನಡೆಯುತ್ತೆ
ಎಂಬುವುದು ತಿಳದಿದೆ ಎಂದು ಹೇಳಿದಾಗ ಸಿಟ್ಟಿನಿಂದ ಸದರಿ ನಿರ್ವಾಹಕನಾದ ಈರಣ್ಣ ಇತನು ಜೊರಾಗಿ
ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಡ ಕಪಾಳಿಗೆ ಹೊಡೆದನು ನನಗೆ ಏಕೆ ಹೊಡೆಯುತ್ತಿ ಎಂದು
ಪ್ರಶ್ನಿಸಿದಾಗ ಮತ್ತೆ ಬಲ ಕಪಾಳಕ್ಕೆ ಹೊಡೆದನು ಮತ್ತು ಅವಾಚ್ಚ ಶಬ್ದಗಳಿಂದ ನಿಂದಿಸುತ್ತಾ ನಿಮ್ಮ
ಪೊಗರು ಜಾಸ್ತಿಯಾಗಿದೆ ಎಂದನು ಸದರಿ ಅವಮಾನವನ್ನು ಸಹಿಸಿಕೊಂಡು ಕಲಬುರಗಿ ಬಸ್ಸ ನಿಲ್ದಾಣಕ್ಕೆ
ಬಂದು ಇಳಿದು ಠಾಣೆಗೆ ಬಂದು ಇಳಿದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಬಂದು ದೂರನ್ನು
ಸಲ್ಲಿಸುತ್ತಿದೇನೆ. ಕಾರಣ ನಾನು ಒಬ್ಬ ನ್ಯಾಯವಾದಿ ಎಂಬುವದನ್ನು ತಿಳಿದರು ಕೂಡ ಉದ್ದೇಶ
ಪೂರ್ವಕವಾಗಿ ನನ್ನ ಹೆಸರು ಜೈಭೀಮ ಇರುವುದನ್ನು ನೋಡಿ ಜಾತಿ ನಿಂದನೆ ಮಾಡಿ ಹಲ್ಲೇ ಮಾಡಿ ಅಧಿಕಾರ
ದುರುಪಯೋಗ ಪಡಿಸಿಕೊಂಡು ಮತ್ತು ಅವಮಾನ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಉಷಾ ಗಂಡ ನಾಗೇಂದ್ರ @ ನಾಗೇಶ ತಳಕೇರಿ ಸಾ:ಗೋಬ್ಬರವಾಡಿ ಗ್ರಾಮ
ತಾ:ಜಿ:ಕಲಬುರಗಿ ಈಗ್ಗೆ ಸೂಮಾರು 8 ವರ್ಷಗಳ ಹಿಂದೆ ನಾನು
ಗೋಬ್ಬರವಾಡಿ ಗ್ರಾಮದ ನಾಗೇಂದ್ರ @ ನಾಗೇಶ ಇವರೊಂದಿಗೆ
ಮದುವೆಯಾಗಿದ್ದು. ನನಗೆ ಒಂದು ಗಂಡು ಮತ್ತು ಒಂದು ಹೆಣ್ಣು ಒಟ್ಟು ಇಬ್ಬರೂ ಮಕ್ಕಳಿದ್ದು. ನನ್ನ
ಗಂಡ ಒಕ್ಕಲುತನ ಕೆಲಸ ಮಾಡುತ್ತಾರೆ. ನನ್ನ ಗಂಡನವರು ಒಟ್ಟು ಇಬ್ಬರೂ ಅಣ್ಣತಮ್ಮಂದಿರಿದ್ದು. ನನ್ನ
ಗಂಡ ಹಿರಿಯರಾಗಿರುತ್ತಾರೆ. ಗೋಬ್ಬರವಾಡಿ ಗ್ರಾಮ ಸೀಮಾಂತರದಲ್ಲಿ ನಮ್ಮ ನನ್ನ ಗಂಡ ಹಾಗೂ ಮೈದುನ
ಮಲ್ಲಿಕಾರ್ಜುನ ಮತ್ತು ನನ್ನ ಅತ್ತೆಯಾಧ
ರುಕ್ಮಿಣಿ ಹೆಸರಿನಲ್ಲಿ ಜಂಟಿಯಾಗಿ ಹೋಲ ಸರ್ವೆ ನಂ.109 ರಲ್ಲಿ ಒಟ್ಟು 7 ಎಕರೆ 7 ಗುಂಟೆ ಜಮೀನಿದ್ದು. ನನ್ನ ಅತ್ತೆಯವರಿಗೆ 3 ಎಕರೆ ಹಾಗೂ ಇನ್ನೂಳಿದ 4
ಎಕರೆ 7 ಗುಂಟೆ ಹೋಲವನ್ನು ಇಬ್ಬರೂ ಅಣ್ಣತಮ್ಮಂದಿರು ಅರ್ಧ
ಭಾಗದಷ್ಟು ಹಂಚಿಕೊಂಡಿದ್ದು. ಇನ್ನೂ ಪ್ರತ್ಯಕವಾಗಿ ಪಹಣಿ ಪತ್ರ ಮಾಡಿಕೊಂಡಿರುವುದಿಲ್ಲ. ನನ್ನ ಗಂಡನವರ ಪಾಲಿಗೆ ಇದ್ದ ಹೋಲದಲ್ಲಿ ಈಗ್ಗೆ ಸೂಮಾರು
3-4 ವರ್ಷಗಳ ಹಿಂದೆ ಸೊಂತ ಕೆ.ಜಿ.ಬಿ ಬ್ಯಾಂಕನಲ್ಲಿ
ಒಕ್ಕಲುತನದ ಸಲುವಾಗಿ ನನ್ನ ಗಂಡನವರು 50 ಸಾವಿರ ರೂಪಾಯಿಗಳ ಸಾಲ
ತೆಗೆದುಕೊಂಡಿದ್ದು. ಸರಿಯಾಗಿ ಕಾಲಕ್ಕೆ ಮಳೆ ಆಗದ ಕಾರಣ ಹಾಗೂ ಸಂಸಾರ ನಡೆಸುವ ಸಲುವಾಗಿ ಬ್ಯಾಂಕನ
ಸಾಲ ಮುಟ್ಟಿಸಲು ಆಗದ ಕಾರಣ ನನ್ನ ಗಂಡ ಮಂಕಾಗಿ ಕುಡುವುದು ಹಾಗೂ ಮನಸ್ಸಿನ ಮೇಲೆ ಪರಿಣಾಮ
ಮಾಡಿಕೊಂಡು ಮಾನಸಿಕ ಮಾಡಿಕೊಂಡಿದ್ದು ಇರುತ್ತದೆ.
ನಿನ್ನೆ ದಿನಾಂಕ:03.02.2017 ರಂದು ರಾತ್ರಿ 07.00 ಗಂಟೆಯ ಸೂಮಾರಿಗೆ ನನ್ನ ಗಂಡ ನಾಗೇಂದ್ರ @ ನಾಗೇಶ ಇವರು ಗೋಬ್ಬರವಾಡಿ ಗ್ರಾಮದ ನಮ್ಮ
ಮನೆಯಲ್ಲಿ ಊಟ ಮಾಡಿಕೊಂಡು ರಾತ್ರಿ ನಮ್ಮ ಹೋಲದಲ್ಲಿ ಬೆಳೆದ ಉಳ್ಳಾಗಡ್ಡಿ ಹಾಗೂ ಹೂವಿನ ಗಿಡಗಳನ್ನು ಕಾಯಲು ರಾತ್ರಿ
ಹೋಲದಲ್ಲಿ ಮಲಗುತ್ತೇನೆ ಅಂತಾ ನನಗೆ ಹೇಳಿ ಹೋಗಿದ್ದು ರಾತ್ರಿ 09.30 ಗಂಟೆಯ ಸೂಮಾರಿಗೆ ನಮ್ಮೂರ ಶಂಕರ ಸಕ್ರಿ ಹಾಗೂ
ಅಳಿಯ ಬಸವರಾಜ ತಳಕೇರಿ ಇವರು ಗಾಬರಿಯಲ್ಲಿ ಓಡುತ್ತ ನನ್ನ ಮನೆಗೆ ಬಂದು ನನ್ನ ಗಂಡ ನಾಗೇಂದ್ರ @ ನಾಗೇಶ ಇವರು ನಮ್ಮ ಹೋಲದಲ್ಲಿನ ಹುಣಸಿ ಗಿಡಕ್ಕೆ
ನೇಣು ಹಾಕಿಕೊಂಡು ಸತ್ತಿರುತ್ತಾನೆ ಅಂತಾ ತಿಳಿಸಿದ್ದು. ಆಗ ನಾನು ಗಾಬರಿಗೊಂಡು ನಾನು ನನ್ನ
ಅತ್ತೆ ರುಕ್ಮಿಣಿ ಹಾಗೂ ಮೈದುನ ಮಲ್ಲಿಕಾರ್ಜುನ ನಮ್ಮ ಅಣತಮ್ಮಕೀಯ ಪುಂಡಲೀಕ ಇವರು ಕೂಡಿ ಹೋಲಕ್ಕೆ
ಹೋಗಿ ನೋಡಲು ಶಂಕರ ಮತ್ತು ಅಳೀಯ ಬಸವರಾಜ ಹೇಳಿದಂತೆ ನನ್ನ ಗಂಡ ನಾಗೇಶ ನಮ್ಮ ಹೋಲದಲ್ಲಿರುವ
ಹುಣಸಿ ಗಿಡಕ್ಕೆ ವೈರನ ಹಗ್ಗ ಕುತ್ತಿಗೆಗೆ ಹಾಕಿಕೊಂಡು ನೇಣು ಹಾಕಿಕೊಂಡು ಸತ್ತಿದ್ದು. ಅಲ್ಲದೆ
ಅವರ ಮುಖದ ಮೇಲೆ ಗಿಡದ ಟೊಂಗೆಗಳು ಹತ್ತಿದ್ದರಿಂದ ಹಣೆಯ ಮೇಲೆ ಹಾಗೂ ಅಲ್ಲಲ್ಲಿ ತರಚಿದ
ಗಾಯಗಳು ಆಗಿದ್ದು ಮತ್ತು ಮುಗಿನಿಂದ ಸುಂಬಳ
ಬಂದಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.