Police Bhavan Kalaburagi

Police Bhavan Kalaburagi

Wednesday, June 21, 2017

Yadgir District Reported Crimes

                                                        Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 33/2017 ಕಲಂ 279, 429 ಕಅ ;- ದಿನಾಂಕ 19/06/2017 ರಂದು ರಾತ್ರಿ 11-30 ಪಿ.ಎಂ. ಸುಮಾರಿಗೆ ಆರೋಪಿತನಾದ ಲಾರಿ ನಂ.ಎಮ್.ಎಚ್.-26, ಎಡಿ-1935 ನೇದ್ದರ ಚಾಲಕ ಶಿವಾನಂದ ತಂದೆ ರಾವುಸಾಹೇಬ ಸದಾವತರ್ಿ ಸಾ;ಪಿಂಪ್ರಿ ತಾ;ಜಿ;ನಾಂದೇಡ (ಮಹಾರಾಷ್ಟ್ರ) ಈತನು ತನ್ನ ಲಾರಿಯನ್ನು ರಾಮಸಮುದ್ರ ಕಡೆಯಿಂದ ಯಾದಗಿರಿಗೆ ಬರುವಾಗ ಯಾದಗಿರಿ ನಗರದ ಗಂಜ್ ಕ್ರಾಸ್ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎರಡು ಆಕಳುಗಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಅಪಘಾತದಲ್ಲಿ ಎರಡು ಆಕಳುಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಕಳುಗಳ ಅ.ಕಿ.ರೂ. 30,000/- ದಷ್ಟು ಲುಕ್ಸಾನ ಮಾಡಿದ್ದು ಇರುತ್ತದೆ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ಈ ಘಟನೆ ಜರುಗಿದ್ದು ಅಂತಾ ಫಿಯರ್ಾದು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2017 ಕಲಂ 279, 429 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ 78 (111) ಕೆ.ಪಿ.ACT;- ಆರೋಪಿ ನಾಗರಾಜ ತಂದೆ ಮಲ್ಲಯ್ಯ ಈತನು ಕೊಟಗೇರಾ ಗ್ರಾಮದ ಸಕರ್ಾರಿ ಶಾಲೆ ಮತ್ತು ಸಕರ್ಾರಿ ಆಸ್ಪತ್ರೆಯ ರೋಡಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಮಾಹಿತಿ ಮೇರೆಗೆ ಕೊಟಗೇರಾ ಗ್ರಾಮಕ್ಕೆ ಹೋಗಿ ಇಬ್ಬರು ಪಂಚರ ಸಮಕ್ಷಮದಲ್ಲಿ ಸದರಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ 3.15 ಪಿ.ಎಂಕ್ಕೆ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಚೀಟಿ, ನಗದು ಹಣ 1435/ರೂ ಮತ್ತು ಮಟಕಾ ಬರೆದುಕೊಳ್ಳಲು ಉಪಯೋಗಿಸಿದ ಒಂದು ಬಾಲ್ ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡಿದ್ದು , ನಂತರ ಆರೋಪಿತನ ವಿರುದ್ದ ಗುರುಮಠಕಲ್ ಠಾಣೆಯಲ್ಲಿ ಗುನ್ನೆ ನಂ: 135/2017 ಕಲಂ: 78(111) ಕೆ.ಪಿ.ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

BIDAR DISTRICT DAILY CRIME UPDATE 21-06-2017



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-06-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 84/2017, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-06-2017 ರಂದು ಮೊಹ್ಮದ ಹುಸ್ಸೇನ ತಂದೆ ಮೊಹ್ಮ ಮುಕ್ತಾರೋದ್ದಿನ ಕಾರಿಗಾರ, ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಧಾರಾಗಿರಿಗಲ್ಲಿ, ಸದ್ಯ: ಬಿರಾದಾರ ಕಾಲೋನಿ ಬಸವಕಲ್ಯಾಣ ರವರ ತಮ್ಮ ಮೊಹಸಿನ @ ಮೊಹ್ಮದ ಅಬ್ದುಲ ಖಾದರ ವಯ: 32 ವರ್ಷ ಇತನಿಗೆ ಅಪಘಾತವಾಗಿದೆ ಅಂತ ಗೊತ್ತಾಗಿ ಆಸ್ಪತ್ರೆಗೆ ಹೊಗಿ ನೋಡಲು ಮೋಹಸಿನ ತನ ಎದೆಗೆ ಭಾರಿ ರಕ್ತ ಮತ್ತು ಗುಪ್ತಗಾಯ, ಎರಡೂ ಮೊಣಕಾಲುಗಳಿಗೆ ಭಾರಿ ರಕ್ತ ಮತ್ತು ಗುಪ್ತಗಾಯ ಹಾಗೂ ಎಡಗೈಗೆ ಪೂರ್ತಿ ಗುಪ್ತಗಾಯವಾಗಿರುತ್ತದೆ, ಮತ್ತೊಬ್ಬ ಗಾಯಾಳು ಹೆಣ್ಣು ಮಗಳಿಗೆ ನೋಡಲು ಅವಳಿಗೂ ಸೊಂಟದಲ್ಲಿ ಭಾರಿ ಗುಪ್ತಗಾಯ, ಬಲಗಾಲಿಗೆ ಗುಪ್ತಗಾಯ ಹಾಗೂ ತುಟಿಗೆ ರಕ್ತಗಾಯವಾಗಿದ್ದು ಅವಳಿಗೆ ವಿಚಾರಿಸಲಾಗಿ ಅವಳು ತನ್ನ ಹೆಸರು ಸುನಿತಾ ಗಂಡ ಸಿದ್ರಾಮ ಗೌರೆ, ವಯ: 27 ವರ್ಷ, ಸಾ: ತ್ರಿಪುರಾಂತ ಬಸವಕಲ್ಯಾಣ ಅಂತ ತಿಳಿಸಿ ಹೇಳಿದ್ದೆನೆಂದರೆ ನಾನು ಬಂಗ್ಲಾ ಆಟೋನಗರದಲ್ಲಿ ಬಳಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಒಂದು ಅಪ್ಪಿ ಆಟೋ ನಂ. ಕೆಎ-56-460 ನೇದ್ದರಲ್ಲಿ ಕುಳಿತು ಮನೆಗೆ ಹೋಗುತ್ತಿರುವಾಗ ಸದರಿ ಆಟೋ ಚಾಲಕನಾದ ಆರೋಪಿ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ ಮಾಡದೇ ಬಂದವರ ಓಣಿಯ ಸಮೀಪ ಡಿವೈಡರಗೆ ಡಿಕ್ಕಿ ಮಾಡಿ ಆಟೋ ಪಲ್ಟಿ ಮಾಡಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ನನಗೆ ಸೊಂಟದಲ್ಲಿ ಭಾರಿ ಗುಪ್ತಗಾಯ ಮತ್ತು ಬಲಗಾಲಿಗೆ ಗುಪ್ತಗಾಯ ಹಾಗೂ ತುಟಿಗೆ ತರಚಿದ ಗಾಯವಾಗಿರುತ್ತದೆ ಮತ್ತು ಆಟೋದಲ್ಲಿ ಕುಳಿತ ಇನೋಬ್ಬ ಮೋಸಿನ ತಂದೆ ಮುಕ್ತರ ಕಾರಿಗಾರ ಅನ್ನವನಿಗೂ ಕೂಡಾ ಎದೆಯಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನು ಬಿಟ್ಟು ಓಡಿ ಹೋಗಿರುತ್ತಾನೆ. ನಂತರ ಖಾಸಗಿ ವಾಹನದಲ್ಲಿ ನಾವು ಗಾಯಾಳುಗಳು ಒಂದು ಖಾಸಗಿ ವಾಹನದಲ್ಲಿ ಬಸವಕಲ್ಯಾಣ ಸರಕಾರಿ ಆಸ್ಪತ್ರಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ತಿಳಿಸಿದಳು, ನಂತರ ವೈದ್ಯಾಧಿಕಾರಿಯವರ ಸಲಹೆಯ ಮೇರೆಗೆ ಫಿರ್ಯಾದಿ ಮತ್ತು ಫಿರ್ಯಾದಿಯ ಸಂಬಂಧಿ ಮೊಹ್ಮದ ಪರ್ವೇಜ ರವರಿಬ್ಬರೂ ಕೂಡಿಕೊಂಡು ಅಂಬುಲೆನ್ಸದಲ್ಲಿ ತಮ್ಮ ಮೊಹಸೀನ @ ಮೊಹ್ಮದ ಅಬ್ದುಲ ಖಾದರನಿಗೆ ಖಾಸಗಿ ಉಪಚಾರ ಕುರಿತು ವೈಯುತ್ತಿರುವಾಗ ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 85/2017, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-06-2017 ರಂದು ಫಿರ್ಯಾದಿ ಲಕ್ಷ್ಮಿ ಗಂಡ ಪ್ರಭು ತೆಲಂಗ ವಯ: 22 ವರ್ಷ, ಜಾತಿ: ತೆಲಂಗ, ಸಾ: ಲಾಲತಲಾಬ ಬಸವಕಲ್ಯಾಣ ರವರ ಗಂಡ ರಣದೀಪ ತಂದೆ ಸುನೀಲ ತೆಲಂಗ, ವಯ: 22 ವರ್ಷ, ಸಾ: ತೆಲಂಗ ಗಲ್ಲಿ ಬಸವಕಲ್ಯಾಣ ಹಾಗು ಅಬ್ದುಲ ವಾಜೀದ ಮೂವರು ಕೂಡಿಕೊಂಡು ಅಪ್ಪಿ ಆಟೋ ನಂ. ಕೆಎ-56/2931 ನೇದ್ದರಲ್ಲಿ ಕುಳಿತುಕೊಂಡು ಬಸನಿಲ್ದಾಣದಿಂದ ಬೆಟಬಾಲಕುಂದಾಕ್ಕೆ ಕೆಲಸದ ನಿಮಿತ್ಯ ಹೋಗುತ್ತಿರುವಾಗ ಸದರಿ ಆಟೋ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೇ ಮುಂಡಿಪಾಳಿ ವಾಟರ ಪಿಲ್ಟರ ಹತ್ತಿರ ಆಟೋ ಪಲ್ಟಿ ಮಾಡಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ರಣದೀಪ ಮತ್ತು ಅಬ್ದುಲ್ ವಾಜಿದ ರವರಿಗೆ ಯಾವದೇ ಗಾಯಗಳಾಗಿರುವುದಿಲ್ಲ, ಫಿರ್ಯಾದಿಯವರ ಗಂಡ ಪ್ರಭು ಇತನಿಗೆ ತಲೆಯಲ್ಲಿ ಭಾರಿ ರಕ್ತಗಾವಾಗಿ ಘಟನಾ ಸ್ಳಳದಲ್ಲಿಯೇ ಮೃತಪಟ್ಟಿರುತ್ತಾನೆ, ನಂತರ ಆರೋಪಿಯು ತನ್ನ ಆಟೋ ತೆಗೆದುಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಳ್ಳಲಾಗಿದೆ.