Police Bhavan Kalaburagi

Police Bhavan Kalaburagi

Monday, November 14, 2016

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಸಚೀನ್ ತಂದೆ ಶ್ರೀಕಾಂತ ಎಂದೆ ಸಾ : ವಿ.ಪಿ ಚೌಕ ಶಹಾಬಾದ ಇವರು ದಿನಾಂಕ  12-11-2016 ರಂದು ಹುಣಸಗಿ ಗ್ರಾಮದಲ್ಲಿ ತನ್ನ ಮಾವ ಮರಣ ಹೊಂದಿದ ಪ್ರಯುಕ್ತ ಅಂತ್ಯಕ್ರಿಯೇಯಲ್ಲಿ ಬಾಗವಹಿಸಲು ತಾನು, ತನ್ನ ತಾಯಿ ಸರೋಜಾ, ತಮ್ಮ ನಿತೀನ್ ಹಾಗು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಸುನೀಲ್ ದಂಡಗುಂಡಕರ ಎಲ್ಲರೂ ಕೂಡಿ ತಮ್ಮ ಕಾರ ನಂ ಎಂ.ಹಚ್ 14 ಬಿ.ಕೆ 5540 ನೇದ್ದರಲ್ಲಿ ಕುಳಿತು ಹೋಗಿದ್ದು ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ನಾವೇಲ್ಲರೂ ಶಹಾಬಾದಕ್ಕೆ ಬರುವ ಕುರಿತು ಸದರಿ ನಮ್ಮ ಕಾರನಲ್ಲಿ ಕುಳಿತುಕೊಂಡು ಹೋರಟಿದ್ದು ಈ ಕಾರನ್ನು ನನ್ನ ತಮ್ಮ ನಿತೀನ್ ಇತನು ಚಲಾಯಿಸುತ್ತಿದ್ದನು. ಸಾಯಂಕಾಲ 5-30 ಗಂಟೆಯ ಸುಮಾರಿಗೆ ಶಹಾಬಾದ ಇನ್ನೂ 10 ಕಿ.ಮಿ ದೂರ ಇರುವಾಗ ನಡುವಿನ ಹಳ್ಳಿ ಕ್ರಾಸ ಹತ್ತಿರ ರೋಡಿನ ಮೇಲೆ ನನ್ನ ತಮ್ಮ ನಿತಿನನು ಸದರಿ ಕಾರನ್ನು ಅತೀ ವೇಗ ಮತ್ತು ಮತ್ತು ಅಜಾಗೃತೆಯಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ನನ್ನ ತಾಯಿ ಸರೋಜಾ ಇವಳಿಗೆ ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬಂದು ದೇಹದ ಇತರೆ ಭಾಗಕ್ಕೆ ಚಿಕ್ಕ ಪುಟ್ಟ ಮತ್ತು ಭಾರಿ ರಕ್ತಗಾಯಗಳು ಆಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ. ಇನ್ನೂಳಿದ ನಮಗೂ ಕೂಡಾ ಚಿಕ್ಕ ಪುಟ್ಟ ಮತ್ತು ಭಾರಿ ರಕ್ತಗಾಯಗಳು ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಾಂತಪ್ಪ ತಂದೆ ರಾಮಚಂದ್ರ ರೂಪನೂರ ಸಾ|| ದುತ್ತರಗಾಂವ ತಾ||ಆಳಂದ ಹಾ|||| ಬಾಲಗಂಧರ್ವ ಪೆಜಾಹಾರ್ಟ ಅವಿತಾ ಬ್ಯಾಂಕ್  ರಮಾರತ್ನ ಬಿಲ್ಡಿಂಗ್ ಪುಣೆ ಇವರು ಈಗ 20 ವರ್ಷಗಳಿಂದ ನಾನು ಪುಣೆಯಲ್ಲಿ ವಾಸವಾಗಿದ್ದು ಆಗಾಗ ನಮ್ಮ ಸ್ವಂತ ಗ್ರಾಮವಾದ ದುತ್ತರಗಾಂವಕ್ಕೆ ಬಂದು ಹೋಗುವದು ಮಾಡುತ್ತೇನೆ. ನಾನು ಈಗ ಸುಮಾರು 15 ದಿವಸಗಳ ಹಿಂದೆ  ದುತ್ತರಗಾಂವ ಗ್ರಾಮಕ್ಕೆ ಬಂದಿರುತ್ತೇನೆ. ದಿನಾಂಕ 06/11/2016 ರಂದು ಅಮಾವಾಸೆ ಇದ್ದ ಪ್ರಯುಕ್ತ ನಾನು ಘತ್ತರಗಾ ಗ್ರಾಮದಲ್ಲಿರುವ ಶ್ರೀ ಭಾಗ್ಯವಂತಿ ದೇವಿ ದರ್ಶನಕ್ಕಾಗಿ ನಮ್ಮ ಗ್ರಾಮದ ಕುಮಾರ ತಂದೆ ಪೀರಪ್ಪ ಭಜಂತ್ರಿ ಈತನ ಮೋಟಾರ ಸೈಕಲ ನಂ ಕೆಎ-01 ಇಎಲ್ -7683 ನೇದ್ದನ್ನು ತಗೆದುಕೊಂಡು ನಾನು ಹಾಗು ಕುಮಾರ ಇಬ್ಬರು ಸದರಿ ಮೋಟಾರ ಸೈಕಲ್ ಮೇಲೆ ಘತ್ತರಗಾ ಗ್ರಾಮಕ್ಕೆ ಬಂದಿರುತ್ತೇವೆ. ದೇವರ ದರ್ಶನ ಮಾಡಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ಸಾಯಂಕಾಲ ಘತ್ತರಗಾದಿಂದ ಹೊರಟಿರುತ್ತೇವೆ ಆಗ ಕುಮಾರ ಮೋಟಾರ ಸೈಕಲ್ ನಡೆಸುತಿದ್ದು ನಾನು ಆತನ ಹಿಂದೆ ಕುಳಿತಿದ್ದೇನು. ನಾನು ಕುಮಾರನಿಗೆ ತುಂಬಾ ಆಯಾಸವಾಗಿದೆ ಅಫಜಲಪೂರದಲ್ಲಿ ವಸತಿ ಮಾಡೋಣ ಅಂತ ಅಂದಾಗ ಕುಮಾರ ಇತನು ಮುಂದೆ ಜಾಗ ಸಿಕ್ಕರೆ ವಸತಿ ಮಾಡಿ ಬೆಳಿಗ್ಗೆ ಹೋಗೊಣ ಅಂತ ಅಂದಾಗ  ಸಾಯಂಕಾಲ 7.30 ಗಂಟೆಯ ಸುಮಾರಿಗೆ ಅಫಜಲಪುರ ದಾಟಿ ಕಲಬುರಗಿ ರೋಡಿಗೆ ಇರುವ ಕಾರ್ಯದ ಲಕ್ಷ್ಮಿ ಗುಡಿ ಹತ್ತಿರ ಇಬ್ಬರು ವ್ಯಕ್ತಿಗಳು ಕುಳಿತಿದ್ದರು ನಾನು ಕುಮಾರನಿಗೆ ಇಲ್ಲೆ ನಿಲ್ಲಿಸು ಅಂತ ಅಂದಾಗ ಕುಮಾರ ಇತನು ಸದರಿ ವ್ಯಕ್ತಿಗಳಿಗೆ ನೋಡಿ ಇವರು ನನ್ನಗೆ ಪರಿಚಯದವರು ಇರುತ್ತಾರೆ ಅಂತ ಹೇಳಿ ಮೋಟಾರ ಸೈಕಲ್ ಇಲ್ಲಿಸಿದನು ನಂತರ ನಾವು ಅವರೊಂದಿಗೆ ಮಾತನಾಡುತ್ತಾ ಅವರಿಗೆ ಕುಮಾರನು ನನ್ನ ಪರಿಚಯ ಮಾಡಿಸಿದನು ಆಗ ನಾನು  ಅವರ ಹೆಸರು ವಿಚಾರಿಸಿದಾಗ 1) ಗಂಗಾಧರ ತಂದೆ ಭಿಮಶ್ಯಾ ಭಜಂತ್ರಿ ಸಾ||ಧುದನಿ ಹಾ|||| ತಾವರಗೇರಾ ತಾ||ಜಿ|| ಕಲಬುರಗಿ 2) ಸುರೇಶ ಪೂಜಾರಿ ಸಾ||ನಾಗೂರ ಹಾ||||ತಾವರಗೇರಾ ತಾ||ಜಿ|| ಕಲಬುರಗಿ ಅಂತ ಹೇಳಿ ಅಮವಾಸೆ ಪ್ರಯುಕ್ತ ಘತ್ತರಗಾ ಗ್ರಾಮ ದೇವರ ದರ್ಶನಕ್ಕೆ ಹೋಗಿದ ಬಗ್ಗೆ ಹೆಳಿದರು ಎಲ್ಲರು ಅಲ್ಲೆ ಮಾತನಾಡುತ್ತಾ ಗುಡಿಯ ಕಟ್ಟೆಯ ಮೇಲೆ ಮಲಗಿಕೊಂಡಿರುತ್ತೇವೆ ನಂತರ ನಾನು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಎದ್ದು ನೋಡಿದಾಗ ನನ್ನ ಬಲಕೈ ಬೆರಳುಗಳಲ್ಲಿ ಇದ್ದ ಒಂದು ತೊಲೆಯ(10 ಗ್ರಾಂ) ಒಂದು ಬಂಗಾರದ ಉಂಗುರ ಅ.ಕಿ 30,000/-ಇರಲಿಲ್ಲ ಗಾಬರಿಯಿಂದ  ನೋಡಲಾಗಿ ನಾನು ಕುಮಾರ ಇಬ್ಬರೆ ಇದ್ದು ಗಂಗಾಧರ ಹಾಗೂ ಸುರೇಶ ಇರಲಿಲ್ಲ. ನಮಗೆ  ಏನು ದಿಕ್ಕು ತೊಚದಂತಾಗಿ ನಮ್ಮ ಗ್ರಾಮಕ್ಕೆ ಹೋಗಿ ನಂತರ ತಡವಾಗಿ ಠಾಣೆಗೆ ಬಂದಿರುತ್ತೇನೆ . ದಿನಾಂಕ 06/11/2016 ರಂದು 9.30 ಪಿಎಮ್ ದಿಂದ ದಿನಾಂಕ 07/11/2016 ರಂದು 06.00 ಎಎಮ್ ಮದ್ಯದ ಅವದಿಯಲ್ಲಿ ನನ್ನ ಬಲಗೈ ಬೆರಳುಗಳಲಿದ್ದ ಒಂದು ತೊಲೆಯ(10 ಗ್ರಾಂ) ಬಂಗಾರದ ಒಂದು ಉಂಗುರ (ಅ.ಕಿ 30,000/-ರೂ) ಗಂಗಾಧರ ತಂದೆ ಭಿಮಶ್ಯಾ ಭಜಂತ್ರಿ ಹಾಗೂ ಸುರೇಶ ಪೂಜಾರಿ ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.