ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-08-2021
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 26/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸಿದ್ದಮ್ಮಾ ಗಂಡ ಸೋಮರಾಜ ಸಜ್ಜನಶೇಟ್ಟಿ ವಯ: 34 ವರ್ಷ, ಸಾ: ನದಿಗಡ್ಡಾ ಮಣೂರ ಮಂಡಲ, ತಾ: ನಾರಾಯಣಖೇಡ, ಸದ್ಯ: ರಾಂಪುರೆ ಕಲೋನಿ ಬೀದರ ರವರ ಗಂಡನಾದ ಸೋಮರಾಜ ತಂದೆ ವೀರಭದ್ರಪ್ಪಾ ಸಜ್ಜನಶೇಟ್ಟಿ ವಯ: 55 ವರ್ಷ ರವರು ತನಗಾದ ಪಾರ್ಶ್ವವಾಯು ಕಾಯಿಲೆಯಿಂದ ಗುಣಮುಖವಾಗದೆ ಇರುವದರಿಂದ ದಿನಾಂಕ 19-08-2021 1200 ಗಂಟೆಯಿಂದ 2000 ಗಂಟೆಯ ಅವಧಿಯಲ್ಲಿ ರಾಂಪುರೆ ಕಾಲೋನಿಯಲ್ಲಿನ ಬಾಡಿಗೆ ಮನೆಯಲ್ಲಿಯ ಬಾತರೂಂದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 140/2021, ಕಲಂ. 279, 337, 304(ಎ) ಐಪಿಸಿ :-
ದಿನಾಂಕ 18-08-2021 ರಂದು ಫಿರ್ಯಾದಿ ರವಿ ತಂದೆ ಅಂಬಾಜಿ ಹೇಳವ, ವಯ: 27 ವರ್ಷ, ಜಾತಿ: ಹೇಳವ, ಸಾ: ಮುದ್ದಡಗಾ, ತಾ: ಆಳಂದ, ಜಿ: ಕಲಬುರ್ಗಿ ರವರು ತನ್ನ ಹೆಂಡತಿಯಾದ ಶಾಂತಬಾಯಿ ವಯ: 25 ವರ್ಷ ಇಬ್ಬರು ಕೂಡಿಕೊಂಡು ಮಂಠಾಳದಿಂದ ಹುಮನಾಬಾದ ತಾಲೂಕಿನ ಕರಕನಳ್ಳಿ ಬಕ್ಕಂಪ್ರಭು ದೇವರಿಗೆ ತಮ್ಮ ಮೋಟಾರ್ ಸೈಕಲ್ ನಂ. ಕೆ-32/ಇ.ಯು-9397 ನೇದರ ಮೇಲೆ ಹೋಗಿ ರಾತ್ರಿ ಉಳಿದುಕೊಂಡು ಮುಂಜಾನೆ ದರ್ಶನ ಮಾಡಿ ದಿನಾಂಕ 19-08-2021 ರಂದು ಮರಳಿ ತಮ್ಮೂರಿಗೆ ಚಿಟಗುಪ್ಪಾ ಮಾರ್ಗವಾಗಿ ಹೋಗುವಾಗ ಚಿಟಗುಪ್ಪಾ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ನಂ. 75 ಚಿಟಗುಪ್ಪಾ ಹುಮನಾಬಾದ ರೋಡ ಚಿಟಗುಪ್ಪಾ ಶಿವಾರದ ಚಾಮರಡ್ಡಿ ರವರ ಹೊಲದ ಹತ್ತಿರ ತಿರುವುನಲ್ಲಿ ಹಿಂದಿನಿಂದ ಬಂದ ಒಂದು ನಂಬರ ಇರದ ಮಹೀಂದ್ರಾ 295 ಡಿ.ಐ ಟರ್ಬೊ ಸರಪಂಚ್ ಅಂತಾ ಬರೆದ ಚಾಕಲೇಟ ಬಣ್ಣದ ಇಂಜೀನ ಹಾಗು ನೀಲಿ ಬಣ್ಣದ ಟ್ರಾಲಿ ಇರುವ ಟ್ರಾಕ್ಟರ ಚಾಲಕನಾದ ಆರೋಪಿ ಅಂಬರೀಶ ತಂದೆ ಘಾಳೆಪ್ಪಾ ಚಿಟಗುಪ್ಪಾ ವಯ: 22 ವರ್ಷ, ಸಾ: ಬೇಳಕೇರಾ ಇತನು ತನ್ನ ಟ್ರಾಕ್ಟರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಮಾಡಿ ಫಿರ್ಯಾದಿಯವರ ಹೆಂಡತಿ ಶಾಂತಾಬಾಯಿ ರವರ ಸೊಂಟದ ಮೇಲಿಂದ ಹಾಗೂ ಫಿರ್ಯಾದಿಯ ಹೆಲ್ಮೆಟ ಮೇಲಿಂದ ಟ್ರಾಕ್ಟರ ಟೈರಗಳನ್ನು ಹಾಯಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಹಣೆಗೆ, ಮೂಗಿಗೆ ತರಚಿದ ರಕ್ತಗಾಯವಾಗಿದ್ದು, ಬಲ ಮೋಳಕೈ ಹಾಗೂ ಬಲಮೋಳಕಾಲಿಗೆ ತರಚಿದ ಹಾಗೂ ಗುಪ್ತಗಾಯವಾಗಿರುತ್ತವೆ, ಹೆಂಡತಿ ಶಾಂತಾಬಾಯಿಗೆ ಸೊಂಟದಿಂದ ಬಲಗಾಲ ಪಾದದವರೆಗೆ ಭಾರಿ ರಕ್ತಗಾಯ ಹಾಗೂ ಮೂಳೆಗಳು ಮುರಿದು ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿದ್ದು, ಸೊಂಟದ ಭಾಗಕ್ಕೆ ಮೂಳೆಗಳು ಮುರಿದು ಭಾರಿ ಗುಪ್ತಗಾಯವಾಗಿದ್ದು, ಎದೆಗೆ, ಬಲಮೆಲುಕಿನಲ್ಲಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ, ನಂತರ ದಾರಿ ಹೊಕರು ಖಾಸಗಿ ವಾಹನದಲ್ಲಿ ಇಬ್ಬರಿಗೂ ಹಾಕಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 60/2021, ಕಲಂ. ಮನುಷ್ಯ ಕಾಣೆ :-
ದಿನಾಂಕ 18-08-2021 ರಂದು 1500 ಗಂಟೆಗೆ ಫಿರ್ಯಾದಿ ಮೊಹ್ಮದ ಸಲೀಮ ತಂದೆ ಮೊಹ್ಮದ ಮಹೇತಾಬ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಅಹ್ಮದ ಬಾಗ ಗೊಲೆ ಖಾನಾ ಬೀದರ ರವರು ಊಟ ಮಾಡಲು ಮನೆಗೆ ಬಂದಾಗ ಅದೇ ಸಮಯಕ್ಕೆ ತಮ್ಮನಾದ ಮೊಹ್ಮದ ಅನ್ವರ ತಂದೆ ಎಂ.ಡಿ ಮಹೇತಾಬ ವಯ: 25 ವರ್ಷ ಇತನು ಗುತ್ತೆದಾರ ಕೆಲಸಕ್ಕೆ ಮನೆಯಿಂದ ಹೋಗಿ 2200 ಗಂಟೆಯಾದರು ಆತನು ಮನೆಗೆ ಮರಳಿ ಬರಲಿಲ್ಲ, ಆಗ ಫಿರ್ಯಾದಿಯು ಆತನ ಮೊಬೈಲ್ ನಂ. 7259381633 ನೇದಕ್ಕೆ ಕರೆ ಮಾಡಿದಾಗ ಅದು ಸ್ವೀಚ್ಡ್ ಆಫ್ ಅಂತ ಹೇಳುತ್ತಿದ್ದರಿಂದ ಎಲ್ಲಾದರೂ ಅವನ ಗೆಳೆಯರ ಜೊತೆಯಲ್ಲಿ ಕುಳಿತಿರಬಹುದು ಅಂತ ತಿಳಿದು ಬೀದರ ನಗರದ ವಿವಿಧ ಕಡೆಗಳಲ್ಲಿ ಹೋಗಿ ನೋಡಲು ಎಲ್ಲಿಯು ಆತನ ಪತ್ತೆ ಆಗಿರುವುದಿಲ್ಲ, ಪುನಃ ದಿನಾಂಕ 19-08-2021
ರಂದು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಲು ಎಲ್ಲಿಯು ಪತ್ತೆಯಾಗಿರುವುದಿಲ್ಲ ಆತನು ಕಾಣೆಯಾಗಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ
ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.