Police Bhavan Kalaburagi

Police Bhavan Kalaburagi

Sunday, May 2, 2021

BIDAR DISTRICT DAILY CRIME UPDATE 02-05-2021


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-05-2021

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2021 ಕಲಂ 32, 34 ಕೆ.. ಕಾಯ್ದೆ ;-

ದಿನಾಂಕ 01/05/2021 ರಂದು 2030 ಗಂಟೆಗೆ ಶ್ರೀ ಜಗದೀಶ ನಾಯ್ಕ ಪಿ.ಎಸ್.ಐ (ಕಾಸು-1) ರವರು ಪೊಲೀಸ ಠಾಣೆಯಲ್ಲಿದ್ದಾಗ, ಬೀದರ ನಗರದ ವಡ್ಡರ ಕಾಲೋನಿಯಲ್ಲಿ  ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚೀತ ಮಾಹಿತಿ ಬಂದ ಮೇರೆಗೆ ಪಂಚರಾದ ಪಂಚರು ಹಾಗೂ ಸಿಬ್ಬಂದಿಯೊಂದಿಗೆ 1830 ಗಂಟೆಗೆ ಸ್ಥಳಕ್ಕೆ ಹೋಗಿ ಅಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಜನರಾದ 1) ರವಿಕುಮಾರ ತಂದೆ ಪ್ರಭು ಚಿಟ್ಟಾದೊರ ವಯ 28 ವರ್ಷ ಉದ್ಯೋಗ: ಖಾಸಗಿ ಕಂಪನಿ ಕೆಲಸ ಜಾತಿ ಕುರುಬ ಸಾ: ಕುತ್ತಾಬಾದ 2) ಶಿವಕುಮಾರ ಪ್ರಭು ಚಿಟ್ಟಾದರ ವಯ 35 ವರ್ಷ ಜಾತಿ: ಕುರುಬ ಉದ್ಯೋಗ: ಕೂಲಿ ಸಾ: ಕುತ್ತಾಬಾದ 3) ಈರಮ್ಮಾ ಗಂಡ ಮಾಣಿಕ ವಯ 55 ವರ್ಷ ಜಾತಿ: ವಡ್ಡರ ಉದ್ಯೋಗ: ಕೂಲಿ ಕೆಲಸ ಸಾ: ವಡ್ಡರ ಕಾಲೋನಿ ಬೀದರ ರವರ ಮೇಲೆ ದಾಳಿ ಮಾಡಿ ಸದರಿಯವರ ವಶದಲ್ಲಿ ಇದ್ದ 1) 90 ಎಂ.ಎಲ್. ಉಳ್ಳ ಓರಿಜಿನಲ್ ಚಾಯಿಸ್ಸ ವಿಸ್ಕಿ ಒಟ್ಟು 79 ಪ್ಯಾಕೇಟಗಳು,  ಒಟ್ಟು ಕಿಮ್ಮತ ರೂ. 2775.25/- ಇರುತ್ತದೆ. 2) 180 ಎಂ.ಎಲ್ ಉಳ್ಳ ಓರಿಜಿನಲ್ ಚಾಯಿಸ್ಸ ವಿಸ್ಕಿ ಒಟ್ಟು 10 ಪ್ಯಾಕೇಟ ಒಟ್ಟು ಕಿಮ್ಮತ್ತ ರೂ. 702.6/- ಇರುತ್ತದೆ. 3) 180 ಎಂ.ಎಲ್. ಉಳ್ಳ ಮೇಗಡೌಲ್ ನಂ.1 ಲಕ್ಷರಿ ವಿಸ್ಕಿಯ 4 ಬಾಟಲಗಳು ಒಟ್ಟು ಕಿಮ್ಮತ್ತ ರೂ. 792.92/- ನೇದ್ದವುಗಳ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,ಆರೋಪಿತರಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2021 ಕಲಂ 457, 380 ಐಪಿಸಿ :-      

ದಿನಾಂಕ 01-05-2021 ರಂದು 14:30 ಗಂಟೆಗೆ ಫಿರ್ಯಾದಿ ಶ್ರೀಮತಿ ಕಲಾವತಿ ಗಂಡ ಕಾಶಿನಾಥ ಬೆಂಡೆ ವಯ 53 ವರ್ಷ   ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಉರ್ದು ಹಿರಿಯ ಪ್ರಾಥಾಮಿಕ ಶಾಲೆ ಭೋಸಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ, ಕೋವಿಡ್-19 ರೋಗದ ಪ್ರಯುಕ್ತ ಶಾಲೆಗಳಿಗೆ ರಜೆ ಇದ್ದುದ್ದರಿಂದ   ದಿನಾಂಕ 26/04/2021 ರಂದು ಶಾಲೆಯ ಎಲ್ಲಾ ಬಾಗಿಲುಗಳು ಮುಚ್ಚಿ ಕೀಲಿ ಹಾಕಿದ್ದು ಇರುತ್ತದೆ. ಹೀಗಿರುವಾಗ  ದಿನಾಂಕ 01/05/2021 ರಂದು ಬೆಳಗ್ಗೆ 11 ಗಂಟೆಗೆ   ಶಾಲೆಯ ಸಹಶಿಕ್ಷಕರಾದ ಮೈನೋದ್ದಿನ ರವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ, ಯಾರೋ ಕಳ್ಳರು   ಶಾಲೆ ಅಡುಗೆ ಕೋಣೆಯ ಬಾಗಿಲಿನ ಕೊಂಡಿ ಮುರಿದು ಒಳಗಡೆ ಇದ್ದ ಅಡುಗೆ ಸಾಮಾನುಗಳು ತಗೆದುಕೊಂಡು ಹೋಗಿದ್ದಾರೆ ಅಂತಾ   ಅಂತಾ ಹೆಳಿದಾಗ  ಫಿರ್ಯಾದಿರವರು ಹೋಗಿ ನೋಡಿದಾಗ   ಕೋಣೆಯಲ್ಲಿದ್ದ ಎರಡು ಅಡುಗೆ ಸಿಲಿಂಡಗಳು ಅ: ಕಿ 15000/- ರೂಪಾಯಿ, ಒಂದು ಭೋಗೊಣಿ ಅ: ಕಿ: 5000/- ರೂಪಾಯಿ, ಒಂದು ಕುಕ್ಕರ ಅ:ಕಿ 4000/- ರೂಪಾಯಿ ಹಿಗೆ ಒಟ್ಟು 24000/- ರೂಪಾಯಷ್ಟು ವಸ್ತುಗಳು ಕಳ್ಳತನವಾಗಿದ್ದು ಕಂಡು ಬಂದಿರುತ್ತದೆ. ಯಾರೋ ಕಳ್ಳರು ದಿನಾಂಕ 26/04/2021 ರಂದು ರಾತ್ರಿ 9 ಗಂಟೆಯಿಂದ ದಿನಾಂಕ 01/05/2021 ರಂದು ಬೆಳಗಿನ ಜಾವ 4 ಗಂಟೆಯ ಮಧ್ಯ ರಾತ್ರಿ ವೇಳೆಯಲ್ಲಿ ಮೇಲೆ ತೋರಿಸಲಾದ ವಸ್ತಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.