ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-02-2020
ಬೀದರ
ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2020, ಕಲಂ. 174 (ಸಿ) ಸಿ.ಆರ್.ಪಿ.ಸಿ :-
ಫಿರ್ಯಾದಿ ಲಕ್ಷ್ಮೀ ಗಂಡ ಸುನೀಲ್ ರೆಡ್ಡಿ ವಯ: 30 ವರ್ಷ, ಜಾತಿ: ಅಗಸ, ಸಾ: ಭೋವಿ ಗಲ್ಲಿ ನಯಾ ಕಮಾನ ಬೀದರ ರವರ ಗಂಡನಾದ ಸುನೀಲ್ ರೆಡ್ಡಿ ತಂದೆ ಗಣಪತ್ ರೆಡ್ಡಿ
ವಯ: 35 ವರ್ಷ ಇತನು ಸರಾಯಿ ಕುಡಿಯುವ ಮತ್ತು ಗುಟಕಾ ತಿನ್ನುವ ಚಟ
ಉಳ್ಳವನಿದ್ದು ಅದರಿಂದಲೇ ಕುತ್ತಿಗೆಗೆ ಯಾವುದೋ ಕಾಯಿಲೆ ಆಗಿರುತ್ತದೆ, ಹೀಗಿರುವಾಗ ದಿನಾಂಕ 21-02-2020 ರಂದು ಗಂಡನಿಗೆ ಗಂಟಲು ನೋವು ಜಾಸ್ತಿ ಆಗುತ್ತಿದ್ದರಿಂದ ಅವರಿಗೆ ಕರೆದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದು, ನಂತಗರ ಗಂಟಲು ನೋವು ಜಾಸ್ತಿ ಆಗುತ್ತಿದ್ದರಿಂದ ಚಿಕಿತ್ಸೆ ಕುರಿತು ಪ್ರತಾಪ ನಗರದಿಂದ ದಿನಾಂಕ 22-02-2020 ರಂದು ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದಾಗ
ಚಿಕಿತ್ಸೆ ಫಲಕಾರಿಯಾಗದೇ
ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಅವರ ಗಂಟಲು ಕಾಯಿಲೆ ಯಿಂದಲೇ ಮೃತಪಟ್ಟಿರುತ್ತಾರೋ? ಅಥವಾ ಬೇರೆ ಏನಾದರೂ ಕಾರಣದಿಂದ ಮೃತ ಪಟ್ಟಿರುತ್ತಾರೋ ಎಂಬ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಬೀದರ
ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 29/2020, ಕಲಂ. 379 ಐಪಿಸಿ :-
ದಿನಾಂಕ 14-02-2020 ರಂದು 2130 ಗಂಟೆಯಿಂದ 2230 ಗಂಟೆಯ ಅವಧಿಯಲ್ಲಿ ಬೀದರನ ಕೆ.ಎಚ.ಬಿ. ಕಾಲೋನಿಯ ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಭೀಮರಾವ ಸಾ: ಎಕಲಾರ,
ಸದ್ಯ:
ಕೆ.ಇ.ಬಿ. ಕಾಲೋನಿ
ಗುಂಪಾ ಬೀದರ ರವರು ತಮ್ಮ ಮಾಲಿಕರ ಮನೆಯ ಮುಂದೆ ನಿಲ್ಲಿಸಿದ ಹೀರೊ ಸ್ಪ್ಲೆಂಡರ ಪ್ರೊ
ಮೋಟರ ಸೈಕಲ ನಂ. ಕೆಎ-38/ಕ್ಯೂ-4502 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಮೋಟಾರ್ ಸೈಕಲ್ ವಿವರ 1) ಹೀರೊ ಸ್ಪ್ಲೆಂಡರ ಪ್ರೊ
ಮೋಟರ ಸೈಕಲ ನಂ. ಕೆಎ-38/ಕ್ಯೂ-4502, 2) ಚಾಸಿಸ್ ನಂ.
ಎಮ್.ಬಿ.ಎಲ್.ಹೆಚ್.ಎ.10.ಎ.ಎಸ್.ಡಿ.ಹೆಚ್.ಇ.17502, 3) ಇಂಜಿನ್ ನಂ.
ಹೆಚ್.ಎ.10.ಇ.ಎಲ್.ಡಿ.ಹೆಚ್.ಇ.22892, 4) ಮಾಡಲ್: 2013s, 5) ಬಣ್ಣ: ನೀಲಿ ಬಣ್ಣ ಹಾಗೂ ಅ.ಕಿ 25,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ದಿನಾಂಕ 22-02-2020
ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 29/2020, ಕಲಂ. 457, 380 ಐಪಿಸಿ :-
ದಿನಾಂಕ 13-02-2020
ರಂದು ಫಿರ್ಯಾದಿ ನವನಾಥ ತಂದೆ ಪ್ರಕಾಶ ಬಿರಾದಾರ ವಯ: 36 ವರ್ಷ, ಜಾತಿ: ಮರಾಠಾ, ಸಾ: ಪ್ಲಾಟ್
ನಂ. 158 ಶ್ರೀ ಕೃಷ್ಣ ಕುಟೀರ ಚಿಟ್ಟಾ ರೋಡ ಶಿವಾಜಿ ನಗರ (ಅಲ್ಲಮ ಪ್ರಭು ನಗರ) ಬೀದರ ರವರು ತನ್ನ
ಕಛೇರಿಯ ಕೆಲಸಕ್ಕಾಗಿ ಬೆಂಗಳೂರಿಗೆ ಹೋದಾಗ ದಿನಾಂಕ 14-02-2020 ರಂದು 0043 ಗಂಟೆಗೆ
ಫಿರ್ಯಾದಿಯವರ ಮನೆಗೆ ಕಳ್ಳರು ನುಗ್ಗಿ 1) ನಗದು ಹಣ 1 ಲಕ್ಷ ರೂಪಾಯಿಗಳು, 2) ಬಂಗಾರದ
ಬ್ರಾಸ್ಲೇಟ್ 01 (29.600 ಗ್ರಾಂ), 3) ಬಂಗಾರದ ಲಾಕೇಟ್ 01 (22.100 ಗ್ರಾಂ), 4) ಬಂಗಾರದ
ಉಂಗುರಗಳು 03 (25.300 ಗ್ರಾಂ), 5) ಬೆಳ್ಳಿ 250 ಗ್ರಾಂ, 6) ನೀಲಿ ಬಣ್ಣದ ಬ್ಯಾಗ್ 01 ಹಾಗೂ
7) ಸೂಟ್ಸ ಮತ್ತು ಪ್ಯಾಂಟ ಬಟ್ಟೆಗಳು 02 ಜೋಡಿ ಹೀಗೆ ಒಟ್ಟು 5,00,000/- (ಐದು ಲಕ್ಷ) ರೂಪಾಯಿ ಬೆಲೆಬಾಳುವ ನಗದು ಮತ್ತು ಬಂಗಾರ ಹಾಗೂ ಇತರೆ
ವಸ್ತುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ, ಫಿರ್ಯಾದಿಯವರ ಮನೆಯಲ್ಲಿ ಸಿ.ಸಿ ಟಿ.ವಿ ಕ್ಯಾಮರಾ
ಸಹ ಅಳವಡಿಸಲಾಗಿದ್ದು, ಸದರಿ ಕ್ಯಾಮರಾದಲ್ಲಿ ಕಳ್ಳರು ಸೆರೆಯಾಗಿರುತ್ತಾರೆಂದು ಕೊಟ್ಟ
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-02-2020 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.