Police Bhavan Kalaburagi

Police Bhavan Kalaburagi

Sunday, February 23, 2020

BIDAR DISTRICT DAILY CRIME UPDATE 22-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-02-2020

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 08/2020, ಕಲಂ. 379 ಐಪಿಸಿ :-
ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ ಮನೆ ನಂ. 19-5-162/1- ರಾಮಚಂದ್ರ ನಗರ ನೌಬಾದ, ಬೀದರು ರವರು ನಿಶಾ ಕಂಪನಿಯಲ್ಲಿ ಸುಮಾರು 5 ವರ್ಷಗಳಿಂದ ಸೆಕ್ಯೂರಿಟಿ ಸೂಪರವೈಜರ್ ಎಂದು ಬೀದರ ಜಿಲ್ಲೆಯಲ್ಲಿರುವ ಸುಮಾರು 250 ಗೋಪುರಗಳ ಪೇಟ್ರೊಲಿಂಗ್ ನೋಡಿಕೊಳ್ಳುತ್ತಿದ್ದು, ಹೀಗಿರಲು ದಿನಾಂಕ 21-02-2020 ರಂದು ಮನ್ನಳ್ಳಿ ಗ್ರಾಮದ ವಗದಾಳೆ ಪೇಟ್ರೊಲಿಂಗ್ ಪಂಪ್ ಹತ್ತಿರ ಅಳವಡಿಸಿರುವ ಯು.ಬಿ.ಡಿ.ಆರ್ 901-ಡಬ್ಲೂ-1115044 ನೇದಕ್ಕೆ ಎರಟೆಲ್ ಗೋಪುರಕ್ಕೆ ಫಿರ್ಯಾದಿ ಮತ್ತು ಎರಟೇಲ್ ಟೆಕ್ನಿನಿಶನ್ ರವರಾದ ಅಮೃತ್ತ ತಂದೆ ಚೆನ್ನಪ್ಪಾ ಮಡಿವಾಳ ಸಾ: ಖೇಣಿರಂಜೋಳ, ಬಾಬು ಂದೆ ಚಂದ್ರಪ್ಪಾ ನರಸಗೊಂಡ ಸಾ: ದುಬಲಗುಂಡಿ ರವರೊಂದಿಗೆ ಹೋಗಿ ನೋಡಲಾಗಿ ಅದಕ್ಕೆ ಅಳವಡಿಸಿದಂತಹ ಅಮರ ರಾಜ ಕಂಪನಿಯ (2 ವೋಲ್ಟೇಜ್) 600 .ಹೆಚ್ 24 ಬ್ಯಾಟರಿಗಳು ಕಳುವಾಗಿರುತ್ತವೆ, ಅವುಗಳ .ಕಿ 20,000/- ರೂ. ಗಳಾಗಬಹುದು, ಸದರಿ ಕಳವು ದಿನಾಂಕ 18-02-2020 ರಂದು 0300 ಗಂಟೆಯಿಂದ 0530 ಗಂಟೆಯ ವೇಳೆಯಲ್ಲಿ ಘಟನೆ ನಡೆದಿರುತ್ತದೆ, ಸದರಿ ಗೋಪುರಕ್ಕೆ ಸಿ.ಸಿ ಕ್ಯಾಮರಾ ಅಳವಡಿಸಿದ್ದು ಸದರಿ ಕ್ಯಾಮರಾದಲ್ಲಿ ಆರೋಪಿಯ ಭಾವಚಿತ್ರ ಕಂಡು ಬರುತ್ತಿದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 30/2020, ಕಲಂ. 457, 380 ಐಪಿಸಿ :-
ದಿನಾಂಕ 20-02-2020 ರಂದು 2300 ಗಂಟೆಗೆ ಫಿರ್ಯಾದಿ ಶೊಭಾವತಿ ಗಂಡ ಸೂರ್ಯಕಾಂತ ಮುಸ್ತಾಪೂರೆ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ತರನಳ್ಳಿ ರವರು ತನ್ನ ಮಗಳಾದ ಶಾಂತಮ್ಮಾ ಇಬ್ಬರು ಮನೆಯಲ್ಲಿ ಮಲಗಿರುವಾಗ ರಾತ್ರಿ ವೇಳೆ ಯಾರೋ ಕಳ್ಳರು ಮನೆಗೆ ಬಂದು ಮಲಗಿದ ಪಕ್ಕದ ಕೊಣೆಯ ಬಾಗಿಲು ಕೊಂಡಿ ಮುರಿದು ಮನೆಯಲ್ಲಿ ಪ್ರವೇಶಮಾಡಿ ಮನೆಯಲ್ಲಿನ ಅಲಮಾರಾದಲ್ಲಿದ್ದ ನಗದು ಹಣ 65,000/- ರೂಪಾಯಿ, ಬಂಗಾರದ ಗುಂಡಿನ ಸರ 10 ಗ್ರಾಂ. .ಕಿ 42,000/- ರೂಪಾಯಿ, ಬಂಗಾರದ ಉಂಗುರು 5 ಗ್ರಾಂ .ಕಿ. 20,000/- ರೂಪಾಯಿ, ಬಂಗಾರದ ಝಮಕಾ 6 ಗ್ರಾಂ .ಕಿ 24,000/- ರೂಪಾಯಿ, ಬೇಳ್ಳಿಯ ಚವಕಾ 4 ತೊಲಿ .ಕಿ 2,000/- ರೂಪಾಯಿ ಮತ್ತು ಬೇಳ್ಳಿಯ ಚೈನ್ 20 ತೊಲಿ .ಕಿ 10,000/- ರೂಪಾಯಿ ಇವುಗಳನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 21-02-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 28/2020, ಕಲಂ. ಮನುಷ್ಯ ಕಾಣೆ :-
ಸತೀಷ ತಂದೆ ಮಾರುತಿ ದೇಸಾಯಿ ವಯ: 36 ವರ್ಷ, ಜಾತಿ: ಪರಿಶಿಷ್ಟ, ಸಾ: ಸಿದ್ದಾಪುರ, ಸದ್ಯ: ಖರ್ಗೆ ಕಾಲೋನಿ ಚಿಟ್ಟಾ ಬೀದರ ರವರ ಹೆಂಡತಿಯಾದ ಪ್ರಿಯಾಂಕ ಮತ್ತು ಮಕ್ಕಳಾದ ಸಮರ್ಥ ಮತ್ತು ಸಮೃದಿಯೊಂದಿಗೆ ಖರ್ಗೆ ಕಾಲೋನಿ ಚಿಟ್ಟಾವಾಡಿ ಬೀದರನಲ್ಲಿ ವಾಸವಾಗಿದ್ದು, ಹೆಂಡತಿಯಾದ ಪ್ರಿಯಾಂಕಾ ರವರು ಬೀದರ ನಗರದ ಮೇಡಿ ಸ್ಕಾನಿಂಗ ಲ್ಯಾಬ ಟೆಕ್ನಿಸಿಯನ ಅಂತಾ ಕೆಲಸ ಮಾಡಿಕೊಂಡಿದ್ದು, ಮಕ್ಕಳಾದ ಸಮರ್ಥ ಇತನು 1 ನೇ ಕ್ಲಾಸನಲ್ಲಿ ವಿದ್ಯಾಶ್ರೀಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ಸಮೃದ್ದಿ ಇವಳು ವಿದ್ಯಾ ಶಾಲೆಯಲ್ಲಿ ಎಲ್.ಕೆ.ಜಿ ಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾಳೆ, ಹೀಗಿರುವಾಗ ದಿನಾಂಕ 05-02-2020 ರಂದು ಮಗಳಾದ ಸಮೃದ್ದಿ ಇವಳು ಶಾಲೆಗೆ ಹೊಗಿರುವುದಿಲ್ಲಾ, ಮಗ ಸಮರ್ಥ ಇತನು ಶಾಲೆಗೆ ಹೊಗಿದ್ದು ಅವನಿಗೆ ಮನೆಗೆ ಕರದುಕೊಂಡು ಬರಲು ಸಮೃದ್ದಿ ಮನೆಯಿಂದ 1400 ಗಂಟೆಗೆ ಹೊಗಿ ವಿದ್ಯಾಶ್ಯೀ ಶಾಲೆಯಿಂದ ಫಿರ್ಯಾದಿಯವರ ಹೆಂಡತಿ ಪ್ರಿಯಾಂಕಾ, ಮಗ ಸಮರ್ಥ ಮತ್ತು ಸವೃದ್ದಿ ಇವರುಗಳು ಮನೆಗೆ ಬರದೆ ಕಾಣೆಯಾಗಿದ್ದು, ಫಿರ್ಯಾದಿಯು ತನ್ನ ಸಂಬಂಧಿಕರಲ್ಲಿ ಹುಡುಕಾಡಲು ಮತ್ತು ಎಲ್ಲಾ ಕಡೆ ತಿರುಗಾಡಲು ಮತ್ತು ಎಲ್ಲಾ ರೀತಿಯ ಪ್ರಯತ್ನಗಳು ಮಾಡಲಾಗಿ ಅವರ ಬಗ್ಗೆ ಪತ್ತೆಯಾಗಿರುವುದಿಲ್ಲ, ಕಾಣೆಯಾದ ಪ್ರಿಯಾಂಕಾ ಇವಳ ಚಹರೆ ಪಟ್ಟಿ 1) ಹೆಸರು: ಪ್ರಿಯಾಂಕಾ ಗಂಡ ಸತೀಷ ವಯ 26 ವರ್ಷ, 2) ಎತ್ತರ:   ಅಡಿ 6 ಇಂಚು, 3)  ಮೈಬಣ್ಣ:- ಬಿಳಿ ಬಣ್ಣ, 4) ಮೈಕಟ್ಟು: ಸಾಧಾರಣ, 5) ಭಾಷೆ: ಕನ್ನಡ, ಹಿಂದಿ & ತಲಗು ಮಾತನಾಡುತ್ತಾಳೆ, 6) ಧರಿಸಿದ ಬಟ್ಟೆ: ಪಿಂಕ ಬಣ್ಣದ ಶಲವಾರ ಬಿಳಿ ಓಡಣಿ ಪ್ಯಾಂಟ ಬಿಳಿ ಬಣ್ಣದು ಹಾಗೂ 7) ಗುರುತು: ಎಡ ಮೂಗಿನ ಪಕ್ಕದಲ್ಲಿ ಮೆಲಕನ ಮೇಲೆ ಕುತ್ತಿಗೆಯ ಹಿಂಬದಿಯಲ್ಲಿ ಒಂದು ನರೋಲಿ ಇರುತ್ತದೆ, ಕಾಣೆಯಾದ ಸಮರ್ಥ ಇವನ ಚಹರೆ ಪಟ್ಟಿ 1) ಹೆಸರು: ಸಮರ್ಥ ತಂದೆ ಸತೀಷ, 2) ಎತ್ತರ: 4 ಅಡಿ, 3) ಮೈಬಣ್ಣ: ಕಪ್ಪು ಬಿಳಪು, 4)   ಭಾಷೆ: ಕನ್ನಡ, 5) ಬಟ್ಟೆ:- ಬಿಳಿ ಶರ್ಟ ಬಿಳಿ ಹಾಫ ಪ್ಯಾಂಟ ಬಿಳಿ ಶೂಜ್ ಹಾಗೂ 6) ಮೈಕಟ್ಟು: ಸಾಧಾರಣ ಮತ್ತು ಕಾಣೆಯಾದ ಸಮೃದ್ದಿ ಇವಳ ಚಹರೆ ಪಟ್ಟಿ 1) ಹೆಸರು: ಸಮೃದ್ದಿ ತಂದೆ ಸತೀಷ, 2) ಎತ್ತರ: 3 ಅಡಿ, 3) ಮೈಬಣ್ಣ: ಕಪ್ಪು ಬಿಳಪು, 4) ಭಾಷೆ: ಕನ್ನಡ, 5) ಬಟ್ಟೆ: ಕೆಂಪು ಶರ್ಟ ಬಿಳಿ ಪ್ಯಾಂಟ ಬಿಳಿ ಬೂದಿ ಬಣ್ಣದ ಸ್ಯಾಂಡಲ, 6) ಮೈಕಟ್ಟು: ಸಾಧಾರಣ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ದಿನಾಂಕ 21-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: