Police Bhavan Kalaburagi

Police Bhavan Kalaburagi

Monday, August 5, 2019

BIDAR DISTRICT DAILY CRIME UPDATE 05-08-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-08-2019

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 73/2019, PÀ®A. 279, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 02-08-2019 ರಂದು ಫಿರ್ಯಾದಿ ಎಮ್.ಡಿ ನಜೀರ ತಂದೆ ಅಬ್ದುಲ ರಜಾಕ, ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ದರ್ಗಾಪೂರ, ಬೀದರ ರವರ ತಂದೆ ಅಬ್ದುಲ ರಜಾಕ ತಂದೆ ಕರಿಂಸಾಬ, ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ದರ್ಗಾಪೂರ ಬೀದರ ರವರು ಉಸ್ಮಾನಿಯ ಮಜ್ಜಿದ ಹತ್ತಿರ ಇರುವ ಕಮಾನ ಒಳಗಿನಿಂದ ಮುಲ್ತಾನಿ ಪಾಶಾ ದರ್ಗಾ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಉಸ್ಮಾನಿಯ ಮಜ್ಜಿದ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಎಸ್-8646 ನೇದ್ದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂದು ಬಂದು ಡಿಕ್ಕಿ ಮಾಡಿ, ಮೊಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಮುಲ್ತಾನಿ ಪಾಶಾ ದರ್ಗಾ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಂದೆಗೆ ತಲೆಯ ಹಿಂದೆ ಭಾರಿ ಗುಪ್ತಗಾಯ, ಎಡ ಕಿವಿಯಿಂದ ರಕ್ತ ಬಂದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಉಸ್ಮಾನಿಯ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 04-08-2019 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 135/2019, ಕಲಂ. 3 & 4 ಪಿ.ಐ.ಟಿ ಕಾಯ್ದೆ 1956:-
ದಿನಾಂಕ 04-08-2019 ರಂದು ಭಾಲ್ಕಿಯ ಅಂಬೀಕಾ ಲಾಡ್ಜಿನಲ್ಲಿ ಒಬ್ಬ ಗಂಡು ಹಾಗು ಒಬ್ಬ ಹೆಣ್ಣು ಮಗಳು ವೇಶಾವಾಟಿಕೆಯಲ್ಲಿ ತೋಡಗಿದ್ದಾರೆ ಅಂತ ವೆಂಕನಗೌಡ.ಎನ.ಪಾಟೀಲ ಡಿ.ಎಸ್.ಪಿ ಭಾಲ್ಕಿ ರವರಿಗೆ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಖಾಸಗಿ ಜೀಪಿನಲ್ಲಿ ಕುಳಿತು ಠಾಣೆಯಿಂದ ಬಿಟ್ಟು ಅಂಬೀಕಾ ಲಾಡ್ಜಿಗೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ವಿಕ್ಷಿಸಲಾಗಿ ರೂಮ ನಂ. 1 ರಲ್ಲಿ ಒಬ್ಬ ಗಂಡು ಹಾಗು ಒಬ್ಬ ಹೆಣ್ಣು ಮಗಳು ಸಂಭೊಗದಲ್ಲಿ ತೊಡಗಿರುವದನ್ನು ಖಚಿತವಾದ ನಂತರ ಮಹಿಳಾ ಸಿಬ್ಬಂದಿ ಹಾಗೂ ಸಿಬ್ಬಂದಿಯವರ ಸಹಾಯದಿಂದ ಸದರಿ ಕೋಣೆಯ ಬಾಗಿಲನ್ನು  ತೆರೆಸಿ ಕೋಣೆಯಲ್ಲಿ ಹೋಗಿ ಪರಿಶೀಲಿಸಲಾಗಿ ಒಳಗಡೆ ಒಬ್ಬ ಗಂಡು ಹಾಗು ಒಬ್ಬ ಹೆಣ್ಣು ಮಗಳು ಅರೆ ಬರೆ ಬಟ್ಟೆಯಲ್ಲಿ ಇರುವದನ್ನು ಗಮನಿಸಿ ಸದರಿ ಹೆಣ್ಣು ಮಗಳಿಗೆ ವಿಚಾರಿಸಲು ತನ್ನ ಹೆಸರು ಲಕ್ಷ್ಮೀ ತಂದೆ ವಿಠಲ ವಗ್ಗೆ ವಯ: 24 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಸುಲ್ತಾನಬಾದವಾಡಿ, ತಾ: ಹುಮನಾಬಾದ ಅಂತಾ ತಿಳಿಸಿ ಪುನಃ ತಿಳಿಸಿದ್ದೆನೆಂದರೆ ತನಗೆ ಸಂಗಮೇಶ ತಂದೆ ಧೂಳಪ್ಪಾ ಕುಮಾರ ಚಿಂಚೋಳಿ ಇವನು ನಿನಗೆ ಹಣ ಕೊಡುತ್ತೆನೆ ಸಂಭೊಗದ ಸಲುವಾಗಿ ಭಾಲ್ಕಿಗೆ ನಡಿ ಅಂತಾ ನನಗೆ ಇಲ್ಲಿಗೆ ಕರೆದುಕೊಂಡು ಬಂದಿರುತ್ತಾನೆ ಅಲ್ಲದೇ ನಾವು ಇಲ್ಲಿಗೆ ಬಂದ ನಂತರ ಅಂಬೀಕಾ ಲಾಡ್ಜ ವ್ಯವಸ್ಥಾಪಕರಾದ ಸರದಾರ ಮತ್ತು ಸಂದೀಪ ಅಷ್ಟೂರೆ ಸಾ: ಭಾಲ್ಕಿ ರವರು ಸಂಗಮೇಶ ಇವನಿಂದ ಹಣ ಪಡೆದು ನಮಗೆ ಇಲ್ಲಿ ಸ್ಥಳಾವಕಾಶ ನೀಡಿದ್ದು ಇರುತ್ತದೆ ಅಂತಾ ತಿಳಿಸಿದಳು, ನಂತರ ಆರೋಪಿತರಾದ 1) ಸಂಗಮೇಶ ತಂದೆ ಧೂಳಪ್ಪಾ ಕುಮಾರ ಚಿಂಚೋಳಿ, 2) ಸರದಾರ ಹಾಗೂ 3) ಸಂದೀಪ ಅಷ್ಟೂರೆ ಸಾ: ಭಾಲ್ಕಿ ಸದರಿಯವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಯು.ಡಿ.ಆರ್ ನಂ. 10/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 17-07-2019 ರಂದು ಫಿರ್ಯಾದಿ ಡಾ|| ಅಬ್ದುಲ ಮತೀನ ಜೂನಿಯರ ರೆಸಿಡೆನ್ಸ ಬ್ರಿಮ್ಸ ಆಸ್ಪತ್ರೆ ಬೀದರ ರವರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗ ಭಾಲ್ಕಿ ಸರಕಾರಿ ಆಸ್ಪತ್ರೆಯಿಂದ 108 ಅಬುಲೆನ್ಸದಲ್ಲಿ ಒಬ್ಬಳು ವಾರಸುದಾರರಿಲ್ಲದವಳಾದ ರಾಧಿಕಾ ಗಂಡ ವಿಶ್ವಂಭರ ಸಾ: ಔರಾದ ಅನ್ನುವಳು ಭಾಲ್ಕಿಯ ರೈಲ್ವೇ ನಿಲ್ದಾಣದ ಹತ್ತಿರ ಅನಾರೋಗ್ಯದಿಂದ ಆಶಕ್ತಳಾಗಿ ಬಳಲುತ್ತಿರುವದನ್ನು ಕಂಡು ತಂದು ಉಪಚಾರಕ್ಕೆ ದಾಖಲು ಮಾಡಿದ್ದು ಇರುತ್ತದೆ, ನಂತರ ಸದರಿ ಹೆಣ್ಣು ಮಗಳು ರಾಧಿಕಾ ವಯ 36 ವರ್ಷ ಅನ್ನುವವಳು ಅವಳಿಗಿರುವ ರಕ್ತದ ಕಾಯಿಲೆಯಿಂದ ಉಪಚಾರ ಫಲಕಾರಿಯಾಗದೆ ದಿನಾಂಕ 23-07-2019 ರಂದು ಮೃತಪಟ್ಟಿರುತ್ತಾಳೆಂದು ಕೊಟ್ಟ ಲಿಖಿತ ಸಾರಾಂಶದ ಮೇರೆಗೆ ದಿನಾಂಕ 04-08-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.