ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-05-2021
ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 08-05-2021 ರಂದು ಹೊಲದಲ್ಲಿ ಕಬ್ಬಿಗೆ ನೀರು ಬಿಡಲು ಫಿರ್ಯಾದಿ ಶಿವಕುಮಾರ ತಂದೆ ಚಿದಾನಂದ ಸಾ: ಖಾಸೆಂಪೂರ(ಪಿ) ರವರ ತಂದೆಯಾದ ಚಿದಾನಂದ ರವರು ಹೋಲಕ್ಕೆ ಬಂದಿರುತ್ತಾರೆ, ಅವರು ಮೋಟಾರ ಚಾಲು ಮಾಡಿ ಕಬ್ಬಿಗೆ ನೀರು ಬಿಡುತ್ತಿರುವಾಗ ಕರೆಂಟ ಹೋಗಿರುತ್ತದೆ ಮತ್ತು ಸ್ವಲ್ಪ ಮಳೆಯು ಬರುತ್ತಿದ್ದು ಗುಡುಗು ಮಿಂಚು ಬರುತಿತ್ತು, ಮಳೆಯು ಜೋರಾದಾಗ ಹೋಲದಲ್ಲಿದ್ದ ಬೇವಿನ ಗಿಡದ ಕೇಳಗಿರುವ ಗುಡಿಸಲಿನಲ್ಲಿ ಫಿರ್ಯಾದಿ ಮತ್ತು ತಂದೆ ಚಿದಾನಂದ ಮಾತನಾಡುತ್ತಾ ಕುಳಿತಿರುವಾಗ ಆಕಾಶದಲ್ಲಿ ಒಮ್ಮೇಲೆ ಮಿಂಚಿದ ಹಾಗೆ ಆಗಿ ಜೋರಾಗಿ ಶಬ್ದ ಬಂದು ಫಿರ್ಯಾದಿಯು ಕುಳಿತ ಗುಡಿಸಲಿನ ಮೇಲೆ ಸಿಡಿಲು ಬಿದ್ದಿರುತ್ತದೆ ತಕ್ಷಣ ತಂದೆಯವರು ಬೇಹೋಶ ಆಗಿದ್ದು ಅವರ ಎರಡು ಕಾಲಿನ ತೋಡೆಯ ಮೇಲೆ ಸುಟ್ಟಂತೆ ಗಾಯಗಳು ಕಂಡು ಬಂದಿದ್ದು, ಫಿರ್ಯಾದಿಗೂ ಸಹ ಎಡ ತೊಡೆಯ ಹತ್ತಿರ ಸುಟ್ಟಂತೆ ಗಾಯವಾಗಿದ್ದು, ನಂತರ ಅಲ್ಲೆ ಪಕ್ಕದ ಹೋಲದಲ್ಲಿದ್ದ ಮಾರುತಿ ಕಮಠಾಣೆ ಮತ್ತು ಅವರ ಮಗ ಶಿವರಾಜ ಕಮಠಾಣೆ ಇವರು ಬಂದು ನೋಡಿ ಎತ್ತಿನ ಭಂಡಿಯಲ್ಲಿ ತಂದೆಗೆ ಹಾಕಿಕೊಂಡು ಬರುವಷ್ಟರಲ್ಲಿ ಹೋಲದಲ್ಲಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆಯೂ ಯಾವುದೇ ಸಂಶಯವಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 72/2021, ಕಲಂ. 392 ಐಪಿಸಿ :-
ದಿನಾಂಕ 07-05-2021 ರಂದು 2000 ಗಂಟೆಗೆ ಫಿರ್ಯಾದಿ ಸಾಯಿದರ್ಶನ ತಂದೆ ಶಿವಪುತ್ರ ಕೌಡಗಾಂವ ವಯ: 19 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 9-3-157 ಸಾಯಿ ಕಾಲೋನಿ ಮೈಲೂರ ಬೀದರ ರವರು ತನ್ನ ತಮ್ಮನಾದ ರೋಹಿತ ಇತನು ಕೆಮ್ಮುತ್ತಿರುವ ಕಾರಣ ಗುಳಿಗೆ ತರಲು ಲಕ್ಷ್ಮೀ ಮೇಡಿಕಲ ಅಂಗಡಿಗೆ ಹೋಗಿ ಗುಳಿಗೆ ತೆಗೆದುಕೊಂಡು ನಡೆದುಕೊಂಡು ಮನೆಗೆ ಬರುತ್ತಿರುವಾಗ ಫಿರ್ಯಾದಿಯವರಿಗೆ ಮೋಬೈಲ್ ಕರೆ ಬಂದಿದ್ದು ಫಿರ್ಯಾದಿಯು ಕರೆಯನ್ನು ಸ್ವೀಕರಿಸಿ ಮಾತನಾಡುತ್ತಾ ಹೋಗುವಾಗ ಬಾಂಬೆ ಬಿಲ್ಡಿಂಗ ಹತ್ತಿರ ಇಬ್ಬರು ಯಾರೋ ಅಪರಿಚಿತರು ಪಲ್ಸರ ಕಪ್ಪು ಬಣ್ಣದ ವಾಹನದ ಮೇಲೆ ಹಿಂದಿನಿಂದ ಬಂದು ವಾಹನದ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಫಿರ್ಯಾದಿಯವರ ಮೊಬೈಲ ಕಸಿದುಕೊಂಡು ವಾಹನದ ಮೇಲೆ ಓಡಿ ಹೋಗಿರುತ್ತಾರೆ, ದೋಚಿಕೊಂಡು ಹೋದ ಮೋಬೈಲ್ ಓಪೋ ಎ-53 ಕಪ್ಪು ಬಣ್ಣದು ಅದರ ಐಎಂಇಐ ನಂಬರ 1) 860694053316757 2) 860694053316740 ನೇದು ಇದ್ದು, ಅ.ಕಿ 12000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-05-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೇಟ್ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 25/2021, ಕಲಂ. ಮನುಷ್ಯ ಕಾಣೆ :-
ದಿನಾಂಕ 05-05-2021 ರಂದು 1700 ಗಂಟೆಯ ಸುಮಾರಿಗೆ ಫಿರ್ಯಾದಿ P್ಲೇಮನಸಿಯಾ ಗಂಡ ಪಾಲ ವಯ: 55 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಎಡೆನ್ ಕಾಲೋನಿ ಬೀದರ ರವರ ಮೂgÀನೆ ಮಗಳಾದ ಫೀಲೊಮಿನಾ ವಯ: 25 ವರ್ಷ ಇವಳು ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲಾ, ಫಿರ್ಯಾದಿ ಮತ್ತು ಫಿರ್ಯಾದಿಯವರ ಹಿರಿಯ ಮಗಳಾದ ಪ್ರೀಸ್ಕಾ ಇಬ್ಬರು ಕೂಡಿ ಫೀಲೊಮಿನಾ ಇವಳಿಗೆ ಬೀದರ ನಗರದಲ್ಲಿ ಎಲ್ಲಾ ಕqೆಗೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 35/2021, ಕಲಂ. 279, 337, 338 ಐಪಿಸಿ :-
ದಿನಾಂಕ 09-05-2021 ರಂದು ಫಿರ್ಯಾದಿ ನಾರಾಯಣ ತಂದೆ ದೇವಿದಾಸ ಪವಾರ ಸಾ: ಎಕಲಾರ ತಾಂಡಾ ರವರ ಹಾಗು ತಾಂಡಾದ ಆಕಾಶ ತಂದೆ ಗೊವಿಂದ ಜಾಧವ ಇಬ್ಬರೂ ಸಂತಪೂರಗೆ ಮೊಟಾರ ಸೈಕಲ್ ನಂ. ಕೆಎ-38/ಯು-9149 ನೇದರ ಮೇಲೆ ಕಿರಾಣಾ ಹಾಗೂ ತರಕಾರಿ ತರಲು ಹೋಗಿ ಕಿರಾಣಾ ಹಾಗೂ ತರಕಾರಿ ಖರಿದಿಸಿಕೊಂಡು ಅದೇ ಮೊಟಾರ ಸೈಕಲ್ ಮೇಲೆ ಎಕಲಾರ ತಾಂಡಕ್ಕೆ ಬರುವಾಗ ಸಂತಪೂರ ಔರಾದ ರೋಡಿನ ಮೇಲೆ ಮುರಾರ್ಜಿ ದೇಸಾಯಿ ಶಾಲೆಯ ಹತ್ತಿರ ವಾಹನ ಚಲಾಯಿಸುತ್ತಿದ್ದ ಆಕಾಶ ಈತನು ಮೊಟಾರ ಸೈಕಲನ್ನು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಎದರುಗಡೆ ರೋಡಿನ ಮೇಲೆ ಮೊಟಾರ ಸೈಕಲ್ ನಂ. ಎಂಎಚ್-12/ಕೆಕೆ-803 ನೇದರ ಮೇಲೆ ಒಬ್ಬ ವ್ಯಕ್ತಿ ಕುಳಿತು ನಿಂತಿದ್ದ ಮೊಟಾರ ಸೈಕಲಗೆ ಹಾಗೂ ಅದರ ಪಕ್ಕದಲ್ಲಿ ನಿಂತಿದ್ದ ಮಹಿಳೆಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎರಡೂ ಅಂಗೈಗೆ ತರಚಿದ ಗಾಯವಾಗಿರುತ್ತದೆ, ಆಕಾಶ ಈತನಿಗೆ ಎಡಗಡೆ ಹಣೆಗೆ ರಕ್ತಗಾಯ, ಹೊಟ್ಟೆಯ ಮೇಲೆ ತರಚಿದ ಗಾಯ, ಬಲಗೈ ಮೊಣಕೈಗೆ ತರಚಿದ ಗಾಯ, ಎಡಗೈ ಅಂಗೈ ಹತ್ತಿರ ತರಚಿದ ಗಾಯ ಮತ್ತು ಗಟೈಗೆ ಭಾರಿ ಗುಪ್ತಗಾಯವಾಗಿರುತ್ತದೆ, ಅಪಘಾತಕ್ಕೆ ಒಳಗಾದ ಮೊಟಾರ ಸೈಕಲ್ ಮೇಲೆ ಕುಳಿತ ವ್ಯಕ್ತಿಯ ಹೆಸರು ಶಿವಲಿಂಗ ತಂದೆ ವೈಜಿನಾಥ ಸ್ವಾಮಿ ಎಂದು ತಿಳಿಸಿದ್ದು ಈತನಿಗೆ ಯಾವುದೇ ಗಾಯಗಳು ಆಗಿಲ್ಲಾ, ಅದೇ ಮೊಟಾರ ಸೈಕಲಗೆ ಹತ್ತಿಕೊಂಡು ನಿಂತಿದ್ದ ಶಿವಲಿಂಗ ಈತನ ಹೆಂಡತಿ ಶಿವಲೀಲಾ ರವರ ಸೊಂಟಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿ ಮತ್ತು ಆಕಾಶ ಇಬ್ಬರೂ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಇಲ್ಲಿ ಔರಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.