ಅಪಘಾತ
ಪ್ರಕರಣಗಳು
ಅಫಜಲಪೂರ ಠಾಣೆ : ಶ್ರೀ ಯಲ್ಲಾಲಿಂಗ
ತಂದೆ ಶಿವರಾಯ ಅಂದೋಡಗಿ ಸಾ: ದೇಸಾಯಿ ಕಲ್ಲೂರ ರವರು ದಿನಾಂಕ 09-10-2019 ರಂದು ಸಂಜೆ 7:45 ಗಂಟೆ ಸುಮಾರಿಗೆ
ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸಿದ್ದಯ್ಯ ತಂದೆ ಗುರುಲಿಂಗಯ್ಯ ಆಕಾಶಮಠ ಇವರು ನನಗೆ ಪೋನ್
ಮಾಡಿ, ನಿನ್ನ ತಮ್ಮನಾದ ಮಲ್ಲಪ್ಪನು ಅಫಜಲಪೂರದಿಂದ ಮೋಟರ ಸೈಕಲ ಮೇಲೆ ಊರಿಗೆ ಬರುತ್ತಿದ್ದಾಗ ತಾಂಡಾದ
ಹತ್ತಿರ ಮಹ್ಮದಅಲಿ ಮಾಸ್ತಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಎದರುಗಡೆಯಿಂದ ಮೋಟರ ಸೈಕಲ ನಂ ಕೆಎ-32
ಇಎಸ್-6416 ನೇದ್ದರ ಚಾಲಕ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು
ನಿಮ್ಮ ತಮ್ಮನ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದಾನೆ, ಅವನಿಗೂ ಸಹ ಗಾಯಗಳು ಆಗಿದ್ದು, ಘಟನೆ ನಂತರ
ಮೋಟರ ಸೈಕಲ ತಗೆದುಕೊಂಡು ಹೋಗಿರುತ್ತಾನೆ. ಈಗ ನಿನ್ನ ತಮ್ಮನನ್ನು ನಾನು ಮತ್ತು ನನ್ನ ಜೋತೆಗೆ ಇದ್ದ
ಯಲ್ಲಪ್ಪ ಉಕ್ಕಲಿ, ಪವನ ಬಾಸಗಿ ಮೂರು ಜನರು ಕೂಡಿ ರೋಡಿಗೆ ಬರುತ್ತಿದ್ದ ಟಂ ಟಂ ದಲ್ಲಿ ಹಾಕಿಕೊಂಡು
ಅಫಜಲಪೂರಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ, ನೀವು ಬನ್ನಿ ಎಂದು ತಿಳಿಸಿದ ಮೇರೆಗೆ, ನಾನು ಮತ್ತು
ನನ್ನ ತಂದೆ ತಾಯಿ ಹಾಗೂ ನನ್ನ ಅಣ್ಣನಾದ ಸಿದ್ದಪ್ಪ, ಮತ್ತು ನನ್ನ ತಮ್ಮನ ಹೆಂಡತಿಯಾದ ರೇಣುಕಾ ಎಲ್ಲರೂ
ಕೂಡಿ ಅಫಜಲಪೂರಕ್ಕೆ ಬಂದು, ನನ್ನ ತಮ್ಮನನ್ನು ಟಕ್ಕಳಕಿ ಆಸ್ಪತ್ರೆಯಿಂದ ಒಂದು ಖಾಸಗಿ ವಾಹನದಲ್ಲಿ
ಹಾಕಿಕೊಂಡು ಕಲಬುರಗಿಯ ಗಂಗಾ ಸನರೈಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ದಿನಾಂಕ
10-10-2019 ರಂದು ಬೆಳಿಗ್ಗೆ 11:00 ಗಂಟೆಗೆ ನನ್ನ ತಮ್ಮನಿಗೆ ಯಾವುದೆ ಬದಲಾವಣೆ ಆಗದ ಕಾರಣ ಬೇರೆ
ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಬೆಕೆಂದು ಆಸ್ಪತ್ರೆಯಿಂದ ಡಿಸಚಾರ್ಜ್ ಮಾಡಿಕೊಂಡು ಅಂಬ್ಯೂಲೆನ್ಸದಲ್ಲಿ
ಹಾಕಿಕೊಂಡು ಹೋಗುತ್ತಿದ್ದಾಗ, 11:30 ಎ ಎಮ್ ಕ್ಕೆ ಮೃತ ಪಟ್ಟಿರುತ್ತಾನೆ. ದಿನಾಂಕ 09-10-2019 ರಂದು
7:30 ಪಿ ಎಮ್ ಕ್ಕೆ ನನ್ನ ತಮ್ಮನಾದ ಮಲ್ಲಪ್ಪ ತಂದೆ ಶಿವರಾಯ ಅಂದೋಡಗಿ ಈತನು ಮೋಟರ ಸೈಕಲ ನಂ ಕೆಎ-32
ಇಜಿ-9171 ನೇದ್ದರ ಮೇಲೆ ಅಫಜಲಪೂರದಿಂದ ದೇಸಾಯಿ ಕಲ್ಲೂರ ಗ್ರಾಮಕ್ಕೆ ಹೋಗುತ್ತಿದ್ದಾಗ, ದೇಸಾಯಿ ಕಲ್ಲೂರ
ತಾಂಡಾದ ಹತ್ತಿರ ಇರುವ ಮಹ್ಮದ ಅಲಿ ಮಾಸ್ತಾರ ರವರ ಹೊಲದ ಹತ್ತಿರ ರೋಡಿನ ಮೇಲೆ ಎದುರುಗಡೆಯಿಂದ ಮೋಟರ
ಸೈಕಲ ನಂ ಕೆಎ-32 ಇಎಸ್-6416 ನೇದ್ದರ ಚಾಲಕ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ
ಚಾಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮನ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ
ಇಂದು ಮೃತ ಪಟ್ಟಿರುತ್ತಾನೆ. ಕಾರಣ ನನ್ನ ತಮ್ಮನ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ಕೆಎ-32
ಇಎಸ್-6416 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. :
ಜೇವರಗಿ ಠಾಣೆ : ಶ್ರೀ ಪರಮೇಶ್ವರ
ತಂದೆ ನಿವೃತ್ತಿ ರೋಡೆ ಸಾ; ಬೊರಸುರಿ ತಾ; ನಿಲಂಗಾ ಜಿ; ಲಾತೂರ ಮಹಾರಾಷ್ಟ್ರ
ನಿವಾಸಿ ಇದ್ದು ನಾನು ಜೈ ಭವಾನಿ ಟ್ರಾನ್ಸ ಪೋರ್ಟ ಮಾಲಕ ಶ್ರೀ ಹರಿ ಭೋಸ್ಲೆ ಇವರ ಲಾರಿ ಟ್ರಕ್ ನಂ;
MH-12-QW-9587 ನೇದ್ದರ
ಮೇಲೆ ೦7
ತಿಂಗಳಿಂದ
ಚಾಲಕ ಕೆಲಸ ಮಾಡಿಕೊಂಡಿರುತ್ತೇನೆ. ದಿ; 07.10.19 ರಂದು ಸಾಯಂಕಾಲ ನಾನು ಲಾರಿ
ನಂ;
MH-12-QW-9587 ನೇದ್ದರಲ್ಲಿ
ಜಹಿರಾಬಾದ ಕಂಪನಿಯಿಂದ ಹೊಸದಾದ ಟ್ರಾಕ್ಟ್ರರಗಳನ್ನು ( ಇಂಜಿನ್ ) ಲಾರಿಯಲ್ಲಿ ತುಂಬಿಕೊಂಡು ದಾರವಾಡದಲ್ಲಿ
ಇರುವ ಸ್ಟಾಕಯಾರ್ಡ್ ಡೀಪುಕ್ಕೆ ಹೋರಟಿದ್ದೇವು. ದಿನಾಂಕ; 09.10.19 ರಂದು ರಾತ್ರಿ ಕಲಬುರಗಿ
ಜೇವರ್ಗಿ ಮಾರ್ಗವಾಗಿ ದಾರವಾಡಕ್ಕೆ ಹೋಗುತ್ತಿದ್ದಾಗ ಜೇವರ್ಗಿ ಸಮೀಪದ ಲಲಿತ ಗಾರ್ಡನ್ ಹತ್ತಿರ ಬಂದಾಗ
ರಾತ್ರಿ 7-20
ಪಿ.ಎಮ್
ವೇಳೆಗೆ ಯಾವುದೋ ಒಂದು ಟಿಪ್ಪರ್ ವಾಹನ ಚಾಲಕನು ಜೇವರ್ಗಿ ಕಡೆಯಿಂದ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದವನೆ ನಮ್ಮ ಲಾರಿಯ ಬಲಗಡೆ ಸೈಡಿಗೆ ಡಿಕ್ಕಿ ಪಡಿಸಿ ವಾಹನ ಹಾಗೆ ಚಲಾಯಿಸಿಕೊಂಡು
ಕಲಬುರಗಿ ಕಡೆಗೆ ಹೋದನು. ನಾನು ನಮ್ಮ ಲಾರಿ ನಿಲ್ಲಿಸಿ ನೋಡುವಷ್ಟರಲ್ಲಿ ವಾಹನದೊಂದಿಗೆ ಓಡಿ ಹೋಗಿದ್ದನು.
ಕತ್ತಲಿದ್ದರಿಂದ ಅಪಘಾತ ಮಾಡಿದ ವಾಹನ ನಂಬರ್ ಮತ್ತು ಚಾಲಕನಿಗೆ ನೋಡಿರುವದಿಲ್ಲ. ನಂತರ ನಮ್ಮ ವಾಹನ
ಸೈಡಿಗೆ ನಿಲ್ಲಿಸಿ ನೋಡಲಾಗಿ ಲಾರಿಯಲ್ಲಿ ಇದ್ದ 01) ಟ್ರಾಕ್ಟರ್ ಪಾರ್ಟ
ನಂ;
TR415NSTPCMPSLT3AS, ಟ್ರಾಕ್ಟರ್ ಇಂಜಿನ್ ನಂ; ZKF4YBA4651, ಟ್ರಾಕ್ಟರ್ ಸೀರಿಯಲ್
ನಂ;
MBNADABGDKZF01477, ನೇದ್ದಕ್ಕೆ ಹಿಂದಿನ 02 ಟಾಯರ್‌ಗಳು, ಹಿಂದಿನ ಬಿಡಿಭಾಗಗಳು, ಜಖಂಗೊಂಡಿದ್ದು ಇರುತ್ತದೆ.02) ಟ್ರಾಕ್ಟರ್ ಪಾರ್ಟ
ನಂ;
TR415NSTPCMPSLT3AS, ಟ್ರಾಕ್ಟರ್ ಇಂಜಿನ್ ನಂ; ZKF4YBA4665, ಟ್ರಾಕ್ಟರ್ ಸೀರಿಯಲ್
ನಂ;
MBNADABGDKZF01478, ನೇದ್ದಕ್ಕೆ ಮುಂದಿನ ಭಾಗ ಜಖಂಗೊಂಡಿದ್ದು ಇರುತ್ತದೆ. 3) ಟ್ರಾಕ್ಟರ್ ಪಾರ್ಟ
ನಂ;
TR415NSTPCMPSLT3AS, ಟ್ರಾಕ್ಟರ್ ಇಂಜಿನ್ ನಂ; ZKF4YBA4677, ಟ್ರಾಕ್ಟರ್ ಸೀರಿಯಲ್
ನಂ;
MBNADABGDKZF01479, ನೇದ್ದಕ್ಕೆ ಮುಂದಿನ ಭಾಗ ಪೂರ್ತಿ ಜಖಂಗೊಂಡಿದ್ದು ಇರುತ್ತದೆ. ಕಾರಣ ಯಾವುದೋ ಟಿಪ್ಪರ್ ವಾಹನದ ಚಾಲಕನು ತನ್ನ ವಶದಲ್ಲಿ ಇದ್ದ
ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಓಡಿ
ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಸ್ವಾಭಾವಿಕ
ಸಾವು ಪ್ರಕರಣಗಳು :
ವಾಡಿ ಠಾಣೆ : ಶ್ರೀಮತಿ ಗಂಗಮ್ಮ
ಗಂಡ ಸಿದ್ದಣ್ಣಾ ನರಬೋಳಿ ಸಾ:ಕಡಬುರ ರವರು. ಸ್ವಂತ ಕುರಿಗಳಿದ್ದು ಅವುಗಳನ್ನು ನನ್ನ ಗಂಡ ಮೇಯಿಸಿಕೊಂಡು
ಬರುತ್ತಾನೆ. ಹೀಗಿದ್ದು ಇಂದು ದಿನಾಂಕ 10/10/2019 ರಂದು ಬೆಳಗ್ಗೆ 10-00 ಗಂಟೆ
ಸುಮಾರು ನನ್ನ ಮಗ ರಮೇಶ ಮತ್ತು ನಮ್ಮ ಸಂಬಂಧಿ ನಾಗಪ್ಪ ನರಬೋಳಿ ರವರು ಕೂಡಿಕೊಂಡು ಕುರಿಗಳನ್ನು ಮೇಯಿಸುತ್ತ
ನಮ್ಮೂರ ಸಿಮೇಯ ಮಾಳಪ್ಪ ರವರ ಹೊಲದ ಹತ್ತಿರ ಕುರಿಗಳನ್ನು ಮೇಯಿಸುವ ಕಾಲಕ್ಕೆ 01-00 ಪಿ.ಎಮ್
ಸುಮಾರಿಗೆ ಮಳೆ ಬರುತ್ತಿದ್ದರಿಂದ ಗೀಡದ ಆಸರೆಗಾಗಿ ನನ್ನ ಮಗ ರಮೇಶ ಮತ್ತು ನಾಗಪ್ಪ ರವರು ನಿಂತುಕೊಂಡಾಗ
ನನ್ನ ಮಗನಿಗೆ ಒಮ್ಮೇಲೆ ಸಿಡಿಲು ಬಡಿದ ಪರಿಣಾಮ ಆತನ ಬಲಭುಜ ಹಾಗೂ ಎದೆಗೆ ಸುಟ್ಟಗಾಯವಾಗಿದ್ದು ಅಲ್ಲದೇ
ನಾಗಪ್ಪ ಇತನಿಗೂ ಸಹ ಎಡಗೈ ಸಿಡಿಲು ಬಡಿದು ಗಾಯವಾಗಿದ್ದು ಈ ಬಗ್ಗೆ ನಾಗಪ್ಪ ಇತನು ಮನೆಗೆ ಬಂದು ವಿಷಯ
ತಿಳಿಸಿದ್ದರಿಂದ ನಾವು ಘಟನಾ ಸ್ಥಳಕ್ಕೆ ಹೋಗಿ ನೋಡಿ ನಂತರ ನನ್ನ ಮಗನಿಗೆ ಉಪಚಾರ ಕುರಿತು 02-00 ಪಿ.ಎಮ್
ಸುಮಾರಿಗೆ ವಾಡಿ ಸರ್ಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಪರೀಕ್ಷೆ ಮಾಡಿ ಮರಣ ಹೊಂದಿರುತ್ತಾನೆ ಅಂತಾ
ತಿಳಿಸಿದರು. ನನ್ನ ಮಗನು ಕುರಿ ಕಾಯಲು ಹೋದಾಗ ಮಳೆ ಬರುವ ಕಾಲಕ್ಕೆ ಆಸರೆಗಾಗಿ ಗೀಡದ ಕೆಳಗಡೆ ನಿಂತುಕೊಂಡು
ಅಕಸ್ಮಿಕವಾಗಿ ಸಿಡಿಲು ಬಡಿದಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ಮರಣ ಹೊಂದಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ
05.10.19 ರಂದು ಖಾಸೀಂಸಾಬ್ ತಂದೆ ಖಾಜಾಸಾಬ್ ದೂದವಾಲೆ ಸಾ|| ಕೋಳಕೂರ ರವರು
ಹೋಲದಲ್ಲಿ ಬೆಳೆದಿದ್ದ ಹೊಲದಲ್ಲಿನ ತೊಗರಿ ಬೇಳೆಗಳಿಗೆ ಕ್ರಿಮಿನಾಶಕ ಔಷಧಿಯನ್ನು ಹೊಡೆಯುವಾಗ
ಗಾಳಿಯಿಂದ ಕ್ರಿಮಿನಾಷಕ ಔಷಧಿಯು ಮೈಮೆಲ ಬಿದ್ದು ಮೂಗಿನಿಂದ ದೇಹದ ಒಳಗಡೆ ಹೋಗಿದ್ದರಿಂದ ದಿನಾಂಕ
06.10.19 ರಂದು ಖಾಸೀಂಸಾಬ ಈತನು ಅಸ್ವಸ್ಥನಾದಾಗ ಅವರ ಮನೆಯವರು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ
ಜೇವರಗಿಗೆ ತಂದು ಸೇರಿಕೆ ಮಾಡಿದ್ದು ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ
ಸೇರಿಕೆ ಮಾಡಿದ್ದು, ಗುಣಮುಖವಾಗದೆ ನಿನ್ನೆ ದಿನಾಂಕ 09.10.19 ರಂದು ರಾತ್ರಿ 09:45
ಕ್ಕೆ ಮೃತಪಟ್ಟಿರುತ್ತಾರೆ ಅಂತಾ ಶ್ರೀಮತಿ ಫಾತಿಮಾ ಬೇಗಂ ಗಂಡ ಖಾಸೀಂಸಾಬ್ ಮಂದೆವಾಲ ಸಾ|| ಕೋಳಕೂರ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಶ್ರೀನಿವಾಸ
ತಂದೆ ರಾಜಾಚಾರ್ಯ ಜೋಶಿ ಸಾ; ಜೇರಟಗಿ ಗ್ರಾಮ ತಾ; ಜೇವರ್ಗಿ ಜಿ; ಕಲಬುರಗಿ ರವರು ದಿನಾಂಕ; 08.10.19 ರಂದು
ನಾನು ಕಲಬುರಗಿಯಲ್ಲಿ ಇರುವ ನಮ್ಮ ಅಳಿಯನಾದ ಸದಾನಂದ ಪಾಟಿಲ್ ಇವರಿಗೆ ಭೇಟಿಯಾಗಿ ಮಾತನಾಡಿಸಿಕೊಂಡು
ಬರಲು ಹೋಗಿದ್ದೇನು. ಅವರಿಗೆ ಭೇಟಿಯಾಗಿ ಅಂದು ಅಲ್ಲಿಯೇ ಇದ್ದು ಮರು ದಿನ ದಿನಾಂಕ; 09.10.19 ರಂದು
ಬೆಳಿಗ್ಗೆ ಒಂದು ಕ್ರೂಜರ್ ಜೀಪದಲ್ಲಿ ಕಳಿತು ಜೇವರಗಿಗೆ ಹೊರಟಿರುತ್ತೇನೆ. ದಿನಾಂಕ; 09.10.19 ರಂದು
ಮದ್ಯಾಹ್ನ 1-00 ಘಂಟೆಯ ಸುಮಾರಿಗೆ ಜೇವರ್ಗಿಗೆ ಬಂದು ಅಲ್ಲಿಂದ ಬಸ್ ಹಿಡಿದು ಜೇರಟಗಿಗೆ ಹೋಗಲು ಬಸ್
ನಿಲ್ದಾಣದಲ್ಲಿ ಬಂದು ವಿಜಯಪೂರ ಕಡೆಗೆ ಹೋಗುವ ಬಸ್ ನಿಲ್ಲುವ ಸ್ಥಳದಲ್ಲಿ ನಿಂತಿದ್ದಾಗ ಮದ್ಯಾಹ್ನ
1-15 ಘಂಟೆಯ ಸುಮಾರಿಗೆ ಒಬ್ಬ ವ್ಯಕ್ತಿ ನ್ನನ ಹತ್ತಿರ ಬಂದು ನಾನು ಪೊಲೀಸ ಇದ್ದೇನೆ ಅಲ್ಲಿ ಪಿ.ಎಸ್.ಐ
ಸಾಹೇಬ ಬುಲಾರಹೆ ಇದರ್ ಆವೋ ಎಂದು ನನಗೆ ಕರೆದುಕೊಂಡು ಬಸ್ ನಿಲ್ಲುವ ಸ್ಥಳದಲ್ಲಿ ಸ್ವಲ್ಪ ದೂರ ಕರೆದುಕೊಂಡು
ಹೋದನು. ಅಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಯು ನನಗೆ, ಇದರ್ ಮರ್ಡರ್, ಚೋರಿ ಹೋ ರಹಾ ಹೈ, ತುಮ್ ಅಂಗುಟಿ ಕಾ
ಗೋಲ್ಡ್ ರಿಂಗ್ ನಿಕಾಲ್ ಕೆ ಬ್ಯಾಗ್ ಮೇ ರಖೋ ಎಂದು ನನ್ನ ಬ್ಯಾಗಿನಲ್ಲಿ ಹಾಕಿಸಿದರು. ಆಮೇಲೆ ನನಗೆ
ಅಲ್ಲಿಂದ ಕರೆದುಕೊಂಡು ಹೋದವನು ನನ್ನ ಬ್ಯಾಗ್ ಚೆಕ್ ಮಾಡಿ ಬ್ಯಾಗದಲ್ಲಿ ಕೈಯಾಡಿಸಿ ಕಲಿಬಿಲಿ ಮಾಡಿ
ಬ್ಯಾಗದಲ್ಲಿದ್ದ ಟಾವೆಲ್ ತೆಗೆದು ನನ್ನ ಮುಂದೆ ಜಾಡಿಸಿದನು. ನಂತರ ಅವರು ನನಗೆ ಆರಾಮವಾಗಿ ಹೋಗಿರಿ
ಎಂದು ಹೇಳಿ ನನಗೆ ಸಿಂದಗಿ ಕಡೆಗೆ ಹೋಗುವ ಒಂದು ಬಸ್‌ದಲ್ಲಿ ಕೂಡಿಸಿ ಅವರು ಮೋಟಾರ ಸೈಕಲ್ ಮೇಲೆ ಕುಳಿತು
ಹೋದರು. ಅವರು ನೋಡಲು 30-32 ವರ್ಷ ವಯಸ್ಸಿನವರಿದ್ದು, 5.5 ದಿಂದ 5.7 ಫೀಟ್
ಎತ್ತರ ಇದ್ದು,
ಒಬ್ಬನು
ಬದಾಮಿ ಕಲರ್ (ಮುಲ್ತಾನಿ) ಸಫಾರಿ ಹಾಕಿದ್ದು ನೋಡಲು ತೆಳ್ಳನೆ ಮೈಕಟ್ಟು ಹೊಂದಿದ್ದನು. ಇನ್ನೊಬ್ಬನು
ಖಾಕಿ ಪ್ಯಾಂಟ್ ಮತ್ತು ಬಿಳಿ ಬಣ್ಣದ ಶರ್ಟ ಧರಿಸಿದ್ದನು. ಇವನು ಗೋದಿ ಮೈಬಣ್ಣ ಮತ್ತು ಪ್ರೆಂಚ್ ದಾಡಿ
ಹೊಂದಿದ್ದನು. ಅವರ ಮೋಟಾರ ಸೈಕಲ್ ಹಿಂದೆ ನಂಬರ್ ಪ್ಲೇಟ್ ಮೇಲೆ ಎಲ್ ಐ ಸಿ ಎಂದು ಬರೆದಿದ್ದು ಸದರಿ
ಮೋಟಾರ ಸೈಕಲಿನ ಮೇಲೆ ಇರುವ ಮೊದಲಿನ 64 ನಂಬರ ಮಾತ್ರ ನನಗೆ ನೆನಪಿರುತ್ತದೆ ಮುಂದಿನ ನಂಬರ್ ಗೊತ್ತಾಗಿರುವದಿಲ್ಲ.
ನಂತರ ಬಸ್ ಮೂಲಕ ಜೇರಟಗಿಗೆ ಹೋಗಿ ಬಸ್ ನಿಲ್ದಾಣದಲ್ಲಿ ಇಳಿದು ನಾನು ನನ್ನ ಬ್ಯಾಗ್ ನೋಡಿಕೊಂಡಿದ್ದು
ನಾನು ಜೇವರ್ಗಿ ಬಸ್ ನಿಲ್ದಾಣದಲ್ಲಿ ನನ್ನ ಬೆರಳಿನಿಂದ
ತೆಗೆದು ಬ್ಯಾಗದಲ್ಲಿ ಹಾಕಿದ್ದ ಒಂದೊಂದು ತೊಲೆಯ ಎರಡು ಬಂಗಾರದ ಉಂಗುರಗಳು (20 ಗ್ರಾಂ) ಅಕಿ: 49,000/- ರೂ ಕಿಮ್ಮತ್ತಿನ
ಎರಡು ಉಂಗುರಗಳು ಇರಲಿಲ್ಲ. ನನ್ನ ಹತ್ತಿರ ಬಂದಿದ್ದ ಅಪರಿಚಿತ ಇಬ್ಬರು ಕಳ್ಳರು ನನ್ನ ಘಮನವನ್ನು ಬೇರೆ
ಕಡೆಗೆ ಸೆಳೆದು ಜೇವರ್ಗಿ ಬಸ್ ನಿಲ್ದಾಣದಲ್ಲಿ ನನಗೆ ಗೊತ್ತಾಗದಂತೆ ಬ್ಯಾಗದಲ್ಲಿ ಕೈಯಾಡಿಸಿ ಒಂದೊಂದು
ತೊಲೆಯ 2 ಬಂಗಾರದ ಸುತ್ತುಂಗುರಗಳು ಅಕಿ; 49000/- ರೂ ಕಿಮ್ಮತ್ತಿನ ಆಭರಣಗಳು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ವಿನಾಯಕ್ ತಂದೆ ನಾರಾಯಣ ಬಡಿಗೇರ ಸಾ;ಆಂದೋಲಾ ತಾ; ಜೇವರ್ಗಿ ಜಿ; ಕಲಬುರಗಿ ರವರು ದಿನಾಂಕ; 24.09.19 ರಂದು
ನಾನು ಮತ್ತು ನನ್ನ ತಮ್ಮ ವೆಂಕಟೇಶ ಬಡಿಗೇರ ಮತ್ತು ರವಿಕುಮಾರ ತಂದೆ ಶರಣಪ್ಪ ಪೂಜಾರಿ ಸಾ; ಅವರಾಧ ಇವರು ಕೂಡಿ
ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಅಂಗಡಿ ಬಂದ್ ಮಾಡಿ ಮನಗೆ ಹೋಗಿರುತ್ತೇವೆ. ನಂತರ ದಿ; 25.09.19 ರಂದು
ಬೆಳಿಗ್ಗೆ 8-00 ಘಂಟೆಯ ವೇಳೆಗೆ ಎಂದಿನಂತೆ ನಾನು ಮತ್ತು ನಮ್ಮಲ್ಲಿ ಕೆಲಸ ಮಾಡುವ ರವಿಕುಮಾರ ತಂದೆ
ಶರಣಪ್ಪ ಪೂಜಾರಿ ಇವರು ಕೂಡಿಕೊಂಡು ಅಂಗಡಿಗೆ ಬಂದು ಅಂಗಡಿ ಶಟರ್ ತೆರೆದು ನೋಡಲಾಗಿ ಅಂಗಡಿಯಲ್ಲಿ ಇಟ್ಟಿದ್ದ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಚೆಕ್ ಮಾಡಿ
ನೋಡಲಾಗಿ ಅಂಗಡಿಯಲ್ಲಿದ್ದ 01) Epson 380, ಕಂಪನಿಯ ಎರಡು ಪ್ರಿಂಟರ್‌ಗಳು
ಅ.ಕಿ;
10000, 2) ಒಂದು ಹೆಚ್.ಪಿ
ಲ್ಯಾಪಟ್ಯಾಪ್ ಅ.ಕಿ; 115೦೦/- ರೂ 3) ಒಂದು ಮಾನಿಟರ್ ಅಕಿ; 2೦೦೦/- ರೂ 4) ಒಂದು
ಕಂಪೂಟರ್ ಕೀ ಬೋರ್ಡ ಮತ್ತು ಮೌಸ್ ಅಕಿ; 1000/- ರೂ ಹೀಗೆ ಒಟ್ಟು 24,500/- ರೂ ಕಿಮ್ಮತ್ತಿನ ಸಾಮಾನುಗಳು
ಅಂಗಡಿಯಲ್ಲಿ ಇರಲಿಲ್ಲ. ಅಂಗಡಿಯ ಮಗ್ಗಲಿನ ಪತ್ರ ಕೊಯ್ದುದ್ದು ಯಾರೋ ಕಳ್ಳರು ಅಂಗಡಿಯ ಪತ್ರಾ ಮುರಿದು
ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿ ಇದ್ದ ಈ ಮೇಲಿನ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ವಾಡಿ ಠಾಣೆ : ಶ್ರೀ ಸಂತೋಷ ತಂದೆ
ದೀಪ್ಲಾ ಚವ್ಹಾಣ ಸಾ:ಕಡಬೂರ ತಾ:ಚಿತ್ತಾಪೂರ ರವರು ಮತ್ತು ಚಾಮನೂರ ಗ್ರಾಮ ಭೀಮು ತಂದೆ ದ್ಯಾವಪ್ಪ ಕೂಡಿಕೊಂಡು
ಬಳವಡಗಿ ಗ್ರಾಮದ ರಿಯಾಜಖಾನ ಎನ್ನುವರ ಪರ್ಶಿ ಖಣಿಯನ್ನು ಬಾಡಿಗೆಯಿಂದ ಪಡೆದು ವ್ಯಾಪಾರ ಮಾಡಿಕೊಂಡು
ಉಪ ಜೀವಿಸುತ್ತೆನೆ. ಈಗ ಸುಮಾರು 15 ದಿವಸಗಳ ಹಿಂದೆ ರಾಮು ತಂದೆ ಜಗನ್ನಾಥ ರಾಠೋಡ ಇತನು
ನಮ್ಮ ಖಣಿಯಿಂದ ಪರ್ಶಿಯನ್ನು ತೆಗೆದುಕೊಂಡು ಹೋಗಿ ಬೇರೆಯವರಿಗೆ ಮಾರಾಟ ಮಾಡಿದ್ದು 22 ಸಾವಿರ ರೂಪಾಯಿ ನನಗೆ
ಹಣ ಕೊಡಬೇಕಾಗಿತ್ತು ಅದರಲ್ಲಿ 20 ಸಾವಿರ ರೂಪಾಯಿ ಕೊಟ್ಟಿದ್ದು
ಇನ್ನೂ 02 ಸಾವಿರ ರೂಪಾಯಿ ಹಣವನ್ನು ಕೊಡಬೇಕಾಗಿದ್ದು ನಾನು ಹಣವನ್ನು
ಕೇಳಿದರೆ ಪೂರ್ತಿ ಹಣ ಕೊಟ್ಟಿರುತ್ತೆನೆ ನಿನಗೆ ಯಾವ ಹಣ ಕೊಡುವದಿಲ್ಲ ಅಂತಾ ಹೇಳುತ್ತ ಬಂದಿರುತ್ತಾನೆ.
ದಿನಾಂಕ 10/10/2019
ರಂದು
11-30
ಎ.ಎಮ್
ಸುಮಾರು ನಾನು ಮತ್ತು ನಮ್ಮ ಖಣಿಯ ಮಾಲಕ ರಿಯಾಜಖಾನ ಕೂಡಿಕೊಂಡು ಮೊಟರ ಸೈಕಲ ಮೇಲೆ ನಮ್ಮ ಖಣಿಯ ಕಡೆಗೆ ಹೊರಟಿದ್ದೆವು ಮುಂದೆ ಬಳವಡಗಿ ಬ್ರೀಡ್ಜ್ ಹತ್ತಿರ
ಮೊಟರ ಸೈಕಲ ಮೇಲೆ ಸೀತಾರಾಮ ಇತನು ಹೊರಟಿದ್ದು ಆಗ ನಾನು
ಮೊಟರ ಸೈಕಲ ನಿಲ್ಲಿಸಿ ಸೀತಾರಾಮ ಇತನಿಗೆ 2 ಸಾವಿರ ರೂಪಾಯಿ ಹಣ
ಕೊಡು ಅಂತಾ ಕೇಳಿದ್ದಕ್ಕೆ ‘’ಬೋಸಡಿ ಮಗನೇ ನಿನಗೆ ರೊಕ್ಕ ಕೊಡುವದಿಲ್ಲ ಏನು ಮಾಡುಕೋತಿ
ಮಾಡಕೋ ಅಂತಾ ಬೈಯ ಹತ್ತಿದನು.ಆಗ ನಾನು ನನಗೆ ಏಕೆ ಬೈಯುತ್ತಿ ಅಂತಾ ಕೇಳುತ್ತಿದ್ದಂತೆ ಸೀತಾರಾಮ ಇತನು
ತನ್ನ ತಮ್ಮ ರಾಮು ಇತನಿಗೆ ಫೋನ ಮಾಡಿದಾಗ ಆತನು ಮೊಟರ
ಸೈಕಲ ಮೇಲೆ ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ‘’ಬೋಸಡಿ ಮಗನೇ ನಿನ್ನ
ಸೊಕ್ಕು ಹೆಚ್ಚಾಗಿದೆ ಅಂತಾ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡತಲೆಗೆ ಜೋರಾಗಿ ಹೊಡೆದನು
ಅದರಿಂದ ನನ್ನ ತಲೆಗೆ ರಕ್ತ ಬರುತ್ತಿದ್ದು ಆಗ ರಿಯಾಜಖಾನ ಮತ್ತು ಭೀಮು ರವರು ಜಗಳ ಬಿಡಿಸಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.