ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-07-2021
ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 09/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 09-07-2021 ರಂದು ಫಿರ್ಯಾದಿ ರೇಖಾ ಗಂಡ ಪುಲಿಕೇಶಿ ಸೊಲಾಪುರೆ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಕಮಲನಗರ ರವರ ಗಂಡ ಪುಲಿಕೇಶಿ ತಂದೆ ಜಗನ್ನಾಥ ಸೊಲಾಪುರೆ ರವರು ಹೊಲದ ಮೇಲೆ ಕೃಷಿ ಸಾಲ ಪಿಕೆಪಿಎಸ್ ಕಮಲನಗರ ಬ್ಯಾಂಕನಲ್ಲಿ 55,000/- ರೂಪಾಯಿ ಸಾಲ ಮಾಡಿದ್ದು, ಅಲ್ಲದೇ ಸಿದ್ದಿಸಿರಿ ಸೌಹಾದ್ರ ಸಹಕಾರಿ ಬ್ಯಾಂಕ್ ಕಮಲನಗರನಲ್ಲಿ 1,00,000/- ರೂ. ಸಾಲ ಮಾಡಿದ್ದು ಮತ್ತು ವಯಕ್ತಿಕವಾಗಿ ಸಂಬಂಧಿಕರಲ್ಲಿ ಮತ್ತು ಗೆಳೆಯರಲ್ಲಿ ಹಣ ಪಡೆದುಕೊಂಡಿದ್ದು, ಕಳೆದ 2 ವರ್ಷಗಳಿಂದ ಹೊಲದಲ್ಲಿ ಬಿತ್ತಿದ ಬೇಳೆ ಎಲ್ಲಾ ನಾಶವಾಗಿದ್ದು, ಈ ಎಲ್ಲಾ ವ್ಯವಹಾರ ಗಂಡ ಪುಲಕೇಶಿ ಇವರು ಮಾಡುತ್ತಿದ್ದು ಇರುತ್ತದೆ, ಬ್ಯಾಂಕಿನಲ್ಲಿ ಆದ ಸಾಲಗಳು ಮತ್ತು ಗೇಳೆಯರಲ್ಲಿ ಮತ್ತು ಸಂಬಂಧಿಕರಲ್ಲಿ ಕೈಕಡವಾಗಿ ತೆಗೆದುಕೊಂಡ ಹಣವೆಲ್ಲಾ ಹೇಗೆ ತೀರಿಸುವುದು ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿಯ ಮೇಲಿನ ಕೊಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 75/2021, ಕಲಂ. 457, 380 ಐಪಿಸಿ :-
ದಿನಾಂಕ 08-07-2021 ರಂದು 1030 ಗಂಟೆಯಿಂದ ದಿನಾಂಕ 09-07-2021 ರಂದು 0220 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಶಾಮಕುಮಾರ ತಂದೆ ರಾವಸಾಹೇಬ ವಯ: 50 ವರ್ಷ, ಜಾತಿ: ಭೌಸಾರ ಕ್ಷತ್ರಿಯ, ಸಾ: ಮನೆ ನಂ. 8-9-631 ಫರ್ಡಿನ ಕಾಲೋನಿ ಬೀದರ ರವರ ಮನೆಯಲ್ಲಿಟ್ಟಿರುವ 70 ಗ್ರಾಮ ಬಂಗಾರದ ಆಭರಣಗಳು ಅ.ಕಿ 2,80,000/- ರೂ. ಹಾಗು 28,000/- ರೂ. ನಗದು ಹಣ ಹೀಗೆ ಒಟ್ಟು ಎಲ್ಲ ಸೇರಿ 3,08,000/- ರೂ. ಬೆಲೆ ಬಾಳವು ಬಂಗಾರದ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 44/2021, ಕಲಂ. 78 ಕೆ.ಪಿ ಕಾಯ್ದೆ :-
ದಿನಾಂಕ 10-09-2020 ರಂದು ಸುಂಠಾಣ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಬಸಲಿಂಗಪ್ಪ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸುಂಠಾಣ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೋಗಿ ಒಂದು ಗಿಡದ ಪೊದೆಯ ಮರೆಯಾಗಿ ನಿಂತು ನೋಡಲು ಸುಂಠಾಣ ಸರಕಾರಿ ಶಾಲೆಯ ಹತ್ತಿರ ರಾಜೇಶ್ವರ - ಮುಡಬಿ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಜಕುಮಾರ ತಂದೆ ಶರಣಪ್ಪಾ ಜಮಾದಾರ ವಯ: 34 ವರ್ಷ, ಜಾತಿ: ಕಬ್ಬಲಿಗ, ಸಾ: ಸುಂಠಾಣ, ತಾ: ಬಸವಕಲ್ಯಾಣ ಇತನು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ ಒಂದು ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿದ್ದು ಕಂಡು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 1) 4800/- ರೂಪಾಯಿ ನಗದು ಹಣ, 2) ಒಂದು ಬಾಲ್ ಪೆನ್ನು ಹಾಗೂ 3) 3 ಚೀಟಿಗಳು ಅದರ ಮೇಲೆ ಮಟಕಾ ನಂಬರ ಬರೆದದ್ದು, ನಂತರ ಅವುಗಳನ್ನು ವಶಪಡಿಸಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 65/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 09-07-2021 ರಂದು ನೇಳಗಿ ಗ್ರಾಮದ ಬಸ ನಿಲ್ದಾಣದ ಹತ್ತಿರ ಮಹೇಶ ಜಾಂತಿ ಇವರ ಹೊಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 80/- ರೂ. ಕೊಡುತ್ತೆವೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿದ್ದಾನೆಂದು ವೀರಣ್ಣ ಎಸ್. ದೊಡ್ಡಮನಿ ಸಿಪಿಐ ಭಾಲ್ಕಿ ಗ್ರಾಮಿಣ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ನೇಳಗಿ ಗ್ರಾಮದ ಬಸ ನಿಲ್ದಾಣದಿಂದ ಸ್ವಲ್ಪ ಅಂತರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ನೇಳಗಿ ಗ್ರಾಮದ ಬಸ ನಿಲ್ದಾಣದ ಹತ್ತಿರ ಮಹೇಶ ಜಾಂತಿ ಇವರ ಹೊಟೆಲ್ ಮುಂದೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿ ಮಯೂರ ತಂದೆ ಹಾವಗೆಪ್ಪಾ ಗುತ್ತೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ನೇಳಗಿ ಇತನು ಒಂದು ರೂಪಾಯಿಗೆ 80/- ರೂ. ಕೊಡುತ್ತೆವೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಸ್ಥಳದಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಹಿಡಿದುಕೊಂಡ ಆರೋಪಿಗೆ ಪಂಚರ ಸಮಕ್ಷಮ ಅಂಗ ಜಡ್ತಿ ಮಾಡಲು ಆತನ ಹತ್ತಿರದಿಂದ ಮಟಕಾ ನಂಬರ ಬರೆದಿರುವ 10 ಚೀಟಿಗಳು, ನಗದು ಹಣ 4300/- ರೂಪಾಯಿ ಹಾಗು ಒಂದು ಬಾಲ ಪೆನ್ನ ಸಿಕ್ಕಿರುತ್ತದೆ, ನಂತರ ಅವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 119/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 09-07-2021 ರಂದು ರವಿಕುಮಾರ ಪಿಎಸ್ಐ (ಕಾಸು) ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹುಮನಾಬಾದ ಪಟ್ಟಣದ ಕೆ.ಇ.ಬಿ ಬೈಪಾಸ ಹತ್ತಿರ ಹೋಗಿ ನೋಡಲು ಕೆ.ಇ.ಬಿ ಬೈಪಾಸ ಹತ್ತಿರ ರಾಮ & ರಾಜ ಕಾಲೇಜ ಎದುರುಗಡೆ ಆರೋಪಿ ಆನಂದ ತಂದೆ ಪ್ರಭು ಚಂಚಿ ವಯ: 38 ವರ್ಷ, ಜಾತಿ: ಕುರುಬ, ಸಾ: ಮುಸ್ತರಿ ವಾಡಿ ಇತನು ಒಂದು ಬೀಳಿ ಚೀಲ ಹಿಡಿದುಕೊಂಡು ನಿಂತಿದ್ದು ಅವನ ಚೀಲದಲ್ಲಿ ಸರಾಯಿ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಪಂಚರೊಂದಿಗೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರವಿದ್ದ ಬಿಳಿ ಚೀಲ ತೆಗೆದು ಚೇಕ ಮಾಡಿ ನೋಡಲು ಅದರಲ್ಲಿ 90 ಎಂ.ಎಲ್ ವುಳ್ಳ 20 ಯು.ಎಸ ವಿಸ್ಕಿ ಬಾಟಲಗಳು ಅ.ಕಿ 702.6 ರೂ. ಇದ್ದು, ಇವು ಎಲ್ಲಿಂದ ತಂದಿರುವೆ ಅಂತಾ ವಿಚಾರಿಸಲು ಇಲ್ಲಿ ಒಬ್ಬ ವ್ಯಕ್ತಿ ಒಂದು ಗಾಡಿ ಮೇಲೆ ತಂದು ಕೋಟಿದ್ದು ಅವನ ಹೆಸರು ನನಗೆ ಗೊತ್ತಿಲ್ಲಾ ನಾನು ಈ ಸಾರಾಯಿ ತೆಗೆದುಕೊಂಡು ಹೋಗಿ ನಮ್ಮ ಊರಲ್ಲಿ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿದ್ದೆನೆಂದು ತಿಳಿಸಿದನು, ನಂತರ ಆರೋಪಿಗೆ ಸರಾಯಿ ಬಾಟಲಗಳು ತೆಗೆದುಕೊಂಡು ಹೊಗಲು ಲೈಸನ್ಸ ಪರವಾನಿಗೆ ವಿಚಾರಣೆ ಮಾಡಲು ಅವನು ತಿಳಿಸಿದೆನೆಂದರೆ ನನ್ನ ಹತ್ತಿರ ಯಾವುದೇ ರಿತೀಯ ಲೈಸನ್ಸ ಪರವಾನಿಗೆ ಇರುವುದಿಲ್ಲಾ ನಾನು ಅಕ್ರಮವಾಗಿ ಸರಾಯಿ ಬಾಟಲಗಳನ್ನು ತೆಗೆದುಕೊಂಡು ಹೋಗಿ ಅಕ್ರಮವಾಗಿ ಮಾgÁಟ ಮಾಡುತ್ತೇನೆ ಅಂತ ತಿಳಿಸಿದನು, ನಂತರ ಸರಾಯಿ ಬಾಟಲಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 76/2021, ಕಲಂ. ಮುನುಷ್ಯ ಕಾಣೆ :-
ದಿನಾಂಕ 09-07-2021 ರಂದು ಫಿರ್ಯಾದಿ ಭಾಗ್ಯಶ್ರೀ ಗಂಡ ವೀರಯ್ಯಾ ಕಂತಿ ವಯ: 35 ವರ್ಷ, ಜಾತಿ: ಸ್ವಾಮಿ, ಸಾ: ದುಬಲಗುಂಡಿ ರವರ ಗಂಡನಾದ ವೀರಯ್ಯಾ ತಂದೆ ಗುರುಶಾಂತಯ್ಯಾ ಕಂತಿ ವಯ: 44 ವರ್ಷ ರವರು ಈಗ ಸುಮಾರು 10-12 ವರ್ಷಗಳಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಾಗಿರುತ್ತಾರೆ, ಅವರಿಗೆ ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ತೋರಿಸಿದ್ದು ಗುಳಿಗೆಗಳು ಕೊಟ್ಟಿರುತ್ತಾರೆ, ಗಂಡ ಗುಳಿಗೆಗಳು ತೆಗೆದುಕೊಂಡಾಗ ಹುಷಾರಿರುತ್ತಾರೆ, ಗುಳಿಗೆಗಳು ತೆಗೆದುಕೊಳ್ಳದಿರುವಾಗ ಹುಚ್ಚನಂತೆ ವರ್ತಿಸುತ್ತಾರೆ, ಹೀಗಿರುವಾಗ ದಿನಾಂಕ 14-06-2021 ರಂದು 1030 ಗಂಟೆ ಸುಮಾರಿಗೆ ಗಂಡ ವೀರಯ್ಯಾ ರವರು ಮನೆಯಿಂದ ಹೇಳದೆ ಕೇಳದೆ ಹೋರಗಡೆ ಹೋಗಿ 1700 ಗಂಟೆಯಾದರು ಗಂಡ ಮನೆಗೆ ಬಾರದ ಕಾರಣ ಫಿರ್ಯಾದಿಯು ತನ್ನ ಗಂಡನ ಮೊಬೈಲ್ ನಂ. 9632939218 ನೇದಕ್ಕೆ ಕರೆ ಮಾಡಲು ಗಂಡ ಕರೆಯನ್ನು ಸ್ವೀಕರಿಸಿ ನಾನು ಬಸವಕಲ್ಯಾಣದಲ್ಲಿದ್ದೆನೆ ನಾಷ್ಟಾ ಮಾಡುತ್ತಿದ್ದೆನೆ ಆಮೇಲೆ ಮನೆಗೆ ಬರುತ್ತೇನೆ ಅಂತ ಹೇಳಿರುತ್ತಾರೆ, ನಂತರ 2000 ಗಂಟೆಗೆ ಪುನಃ ಕರೆ ಮಾಡಲು ಗಂಡ ಬಸವಕಲ್ಯಾಣದ ಲಾರಿ ಮೇಲೆ ಮದ್ರಾಸಗೆ ಹೋಗುತ್ತಿದ್ದೆನೆ ನೀನು ಹುಡುಗರನ್ನು ಸರಿಯಾಗಿ ನೋಡಿಕೊಳ್ಳು ನಾನು ಮದರಾಸಗೆ ಹೋಗಿ ಬರುತ್ತೇನೆ ಅಂತ ಹೇಳಿದಾಗ ಗಂಡನಿಗೆ ನೀವು ಈಗಾಗಲೆ ಮಾನಸಿಕವಾಗಿ ಅಸ್ವಸ್ಥರಿದ್ದಿರಿ ನೀವು ದಿನಾಲು ಗುಳಿಗೆಗಳು ತೆಗೆದುಕೊಳ್ಳಬೇಕಾಗುತ್ತದೆ ಲಾರಿ ಮೇಲೆ ಏಕೆ ಹೋಗುತ್ತಿದ್ದಿರಿ ಬೇಡ ಅಂತ ಹೇಳದರು ಗಂಡ ಇಲ್ಲ ನಾನು ಲಾರಿ ಮೇಲೆ ಹೋಗಿ ಬರುತ್ತೇನೆ ಅಂತ ಹೇಳಿರುತ್ತಾರೆ, ನಂತರ ದಿನಾಂಕ 24-06-2021 ರವರೆಗೆ ದಿನಾಲು ಅವರ ಜೊತೆ ಮೋಬೈಲನಲ್ಲಿ ಮಾತಾಡಿಕೊಂಡಿದ್ದು, ಗಂಡ ಮದ್ರಾಸನಲ್ಲಿದ್ದೆನೆ ಇನ್ನೂ ಲಾರಿ ಲೋಡ್ ಖಾಲಿ ಮಾಡಿ ಲೋಡ್ ಮಾಡಿಕೊಳ್ಳುವುದಿದೆ ಲೋಡ್ ಮಾಡಿಕೊಂಡ ನಂತರ ಬರುತ್ತೇನೆ ಅಂತ ತಿಳಿಸಿರುತ್ತಾರೆ, ನಂತರ ದಿನಾಂಕ 25-06-2021 ರಂದು ಗಂಡನಿಗೆ ಕರೆ ಮಾಡಿ ನೀವು ಎಲ್ಲಿದ್ದಿರಿ ಅಂತ ವಿಚಾರಿಸಲು ಗಂಡ ತಿಳಿಸಿದ್ದೆನೆಂದರೆ ನಾನು ಸದ್ಯ ಮದ್ರಾಸನಲ್ಲಿದ್ದೆನೆ ಲಾರಿ ಚಾಲಕ ನನಗೆ 100/- ರೂಪಾಯಿ ಕೊಟ್ಟು ನೀನು ನಾಷ್ಟಾ ಮಾಡಿ ಇಲ್ಲೆ ಇರು ಅಂತ ಹೇಳಿ ನನಗೆ ಬಿಟ್ಟು ಲಾರಿ ತೆಗೆದುಕೊಂಡು ಹೋಗಿರುತ್ತಾನೆ ಎಲ್ಲಿಗೆ ಹೋಗಿರುತ್ತಾನೆ ಏನೊ ನನಗೆ ಗೊತ್ತಿಲ್ಲಾ ಅಂತ ತಿಳಿಸಿರುತ್ತಾರೆ, ಆಗ ಫಿರ್ಯಾದಿಯು ತನ್ನ ಗಂಡನಿಗೆ ನೀವು ಟ್ರೇನಿಗೆ ಅಥವಾ ಬಸವಕಲ್ಯಾಣದ ಯಾವುದಾದರು ಲಾರಿ ಹಿಡಿದುಕೊಂಡು ವಾಪಸ ಬನ್ನಿ ಅಂತ ಹೇಳಿದ್ದು ಇರುತ್ತದೆ, ನಂತರ ತನ್ನ ಗಂಡನ ಮೊಬೈಲ್ ಸ್ವೀಚ್ ಆಫ್ ಆಗಿದ್ದು, ಇಲ್ಲಿಯವರೆಗೆ ಮನೆಗೆ ಬರದೆ ಕಾಣೆಯಾಗಿರುತ್ತಾರೆ, ಕಾಣೆಯಾದ ಗಂಡನ ಚಹರೆ ಪಟ್ಟಿ 1) ವೀರಯ್ಯಾ ತಂದೆ ಗುರುಶಾಂತಯ್ಯಾ ಕಂತಿ ವಯ: 44 ವರ್ಷ, ಜಾತಿ: ಸ್ವಾಮಿ, ಸಾ: ದುಬಲಗುಂಡಿ 2) ನೀಲಿ ಬಣ್ಣದ ಪ್ಯಾಂಟ್ ಮತ್ತು ಬೂದಿ ಬಣ್ಣದ ಫುಲ್ ಶರ್ಟ ಧರಿಸಿರುತ್ತಾರೆ, 3) ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ನೇರವಾದ ಮೂಗು, ತಲೆಯ ಮೇಲೆ ಕಪ್ಪು ಮತ್ತು ಬಿಳಿಪು ಕೂದಲು ಇರುತ್ತವೆ, 4) ಎತ್ತರ 5’’6” ಇದ್ದು, ಹಾಗೂ 5) ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 09-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 66/2021, ಕಲಂ. 447, 427 ಐಪಿಸಿ :-
ದಿನಾಂಕ 05-07-2021 ರ ರಾತ್ರಿ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಕಾರಂಜಾ ಅಣೆಕಟ್ಟಿನ ಕೆಳಗಡೆ ಭಾಗದಲ್ಲಿ ನಿರ್ಭಂದಿತ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶಗೈದು ಅಣೆಕಟ್ಟಿನಡಿ ಭೂಸ್ವಾಧಿನ ಪಡಿಸಿಕೊಂಡ ಗಡಿಯ ರಕ್ಷಣೆಗಾಗಿ ನಿರ್ಮಿಸಿದ ಮುಳುತಂತಿ ಬೇಲಿಯನ್ನು [10 ರಿಂದ 15 ಸಂಖ್ಯೆಯ] ದ್ವಂಶಮಾಡಿ ಆಣೆಕಟ್ಟಿನಡಿ ಭೂಸ್ವಾಧಿನ ಮಾಡಿಸಿಕೊಂಡು ಜಮೀನಿನಲ್ಲಿ ಅರಣ್ಯ ಇಲಾಖೆಯವರಿಂದ ಬೇಳೆಸಿದ ಸುಮಾರು 4 ರಿಂದ 5 ದೊಡ್ಡ ಮರಗಳನ್ನು ನೇಲಸಮ ಮಾಡಿ ಜಮೀನನ್ನ ಸಮತಟ್ಟಿ ಮಾಡಿರುತ್ತಾರೆ, ಈ ಕ್ರತ್ಯವು ಕಾರಂಜಾ ಆಣೆಕಟ್ಟಿನಡಿ ಭೂಸ್ವಾಧಿನ ಪಡಿಸಿಕೊಂಡಿರುವ ಬ್ಯಾಲಹಳ್ಳಿ ಗ್ರಾಮದ ಸರ್ವೆ ನಂ. 165 ರಲ್ಲಿ ಜರುಗಿರುತ್ತದೆ ಅಂತ ಫಿರ್ಯಾದಿ ಶಿವಕುಮಾರ ಸ್ವಾಮಿ ಎಇಇ ಕನಿನಿನಿ ಕೆ.ಪಿ.ಡ್ಯಾಂ ಉಪ ವಿಭಗ ನಂ. 03 ಹಾಲಹಳ್ಳಿ ರವರು ನೀಡಿದ ದೂರಿನ ಮೇರೆಗೆ ದಿನಾಂಕ 09-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.