ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-11-2019
ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್
ನಂ. 19/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 24-11-2019
ರಂದು ಫಿರ್ಯಾದಿ ಸಲಾಹೊದ್ದಿನ ತಂದೆ ಗಫುರಸಾಬ ಮುಕ್ತೆದಾರ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ:
ಕೊನಮೆಳಕುಂದಾ, ತಾ: ಭಾಲ್ಕಿ ರವರ ಅಣ್ಣ ಶಾನುಮಿಯಾ ಮುಕ್ತೆದಾರ ಇವರ ಮಗಳಾದ ಶಂಸುನ ವಯ: 22 ವರ್ಷ
ಇವಳು ತಮ್ಮ ಮನೆಯಲ್ಲಿ ಕಟ್ಟಿಗೆಯ ಒಲೆಯಲ್ಲಿ ಬೆಂಕಿ ಹಚ್ಚಿ ಅಡುಗೆ ಮಾಡುವಾಗ ಒಲೆಯ ಪಕ್ಕದಲ್ಲೆದ್ದ
ಸಿಮೆಎಣ್ಣೆಯ ಡಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಾಗ ಶಂಸುನ ಇವಳು ಬೆಂಕಿ ಹತ್ತಿದ
ಸಿಮೆಎಣ್ಣೆಯ ಡಬ್ಬಿ ಎತ್ತಿಕೊಂಡು ಮನೆಯಿಂದ ಹೊರಗೆ ಬಿಸಾಡಲು ಹೊಗುವಾಗ ಸಿಮೆಎಣ್ಣೆಯ ಡಬ್ಬಿಗೆ
ಹತ್ತಿದ ಬೆಂಕಿಯು ಆಕಸ್ಮಿಕವಾಗಿ ಶಂಸುನ ಇವಳಿಗೆ ಹತ್ತಿರುತ್ತದೆ ಆಗ ಅಲ್ಲೆ ಇದ್ದ ಶಂಸುನ ಇವಳ
ತಾಯಿ ಮದಿನಾಬೆಗಂ ಇವರು ಶಂಸುನ ಇವಳಿಗೆ ಹತ್ತಿರ ಬೆಂಕಿ ಆರಿಸಲು ಹೊದಾಗ ಮದಿನಾಬೆಗಂ ಇವರಿಗು ಸಹ
ಬೆಂಕಿ ಹತ್ತಿರುತ್ತದೆ, ನಂತರ ಅಕ್ಕಪಕ್ಕದ ಜನರು ನೊಡಿ ಇಬ್ಬರಿಗೆ ಹತ್ತಿದ ಬೆಂಕಿಯನ್ನು
ಆರಿಸಿರುತ್ತಾರೆ, ಸದರಿ ಘಟನೆಯಲ್ಲಿ ಶಂಸುನ ಇವಳ ಮುಖ, ಎದೆ,
ಹೊಟ್ಟೆ
ಎರಡು ಕೈ ಮತ್ತು ಕಾಲುಗಳಿಗೆ ಭಾರಿ ಸುಟ್ಟಗಾಯವಾಗಿರುತ್ತವೆ ಹಾಗು ಮದಿನಾಬೆಗಂ ಇವರ ಕೈಗಳಿಗೆ
ಮತ್ತು ಕಾಲುಗಳಿಗೆ ಸಾದಾ ಸುಟ್ಟಗಾಯವಾಗಿರುತ್ತವೆ, ನಂತರ ಇಬ್ಬರಿಗೆ ಚಿಕಿತ್ಸೆ ಕುರಿತು ಬೀದರ
ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಶಂಸುನ ಇವರಿಗೆ
ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ 25-11-2019 ರಂದು ಹೈದ್ರಾಬಾದನ ಉಸ್ಮಾನಿಯಾ ಆಸ್ಪತ್ರೆಗೆ ತಂದು
ದಾಖಲು ಮಾಡಿದಾಗ ಶಂಸುನ ಇವಳಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 28-11-2019 ರಂದು ಮೃತಪಟ್ಟಿರುತ್ತಾಳೆ,
ಈ ಘಟನೆಯು ಆಕಸ್ಮಿಕವಾಗಿ ಆಗಿದ್ದು ಶಂಸುನ ಇವಳ ಸಾವಿನಲ್ಲಿ ಯಾರ ಮೆಲೆ ಯಾವುದೆ ರೀತಿಯ ಸಂಶಯ
ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 88/2019, ಕಲಂ. 78(3)
ಕೆ.ಪಿ ಕಾಯ್ದೆ :-
ದಿನಾಂಕ 28-11-2019 ರಂದು ಹಳ್ಳಿ ಗ್ರಾಮದಲ್ಲಿ ಮೊರಖಂಡಿ ಗ್ರಾಮಕ್ಕೆ ಹೋಗುವ ರಸ್ತೆಯ
ಹತ್ತಿರ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ ಒಂದು ರೂಪಾಯಿಗೆ 80/- ರೂಪಾಯಿ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ
ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುರೇಷ ಎಎಸ್ಐ ಪ್ರಭಾರಿ ಪಿಎಸ್ಐ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ
ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳ್ಳಿ
ಗ್ರಾಮದ ಮೊರಖಂಡಿ ಗ್ರಾಮಕ್ಕೆ ಹೋಗುವ ರಸ್ತೆಯಿಂದ ಒಂದು ಫರ್ಲಾಂಗ ದೂರದಿಂದ ನೋಡಲು ಹೊಟೆಲ್
ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿದ್ದಲಿಂಗ ತಂದೆ ದುರ್ಯೋಧನ ಪಾಟೀಲ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿ ಇತನು ಜೋರಾಗಿ ಕುಗುತ್ತಾ ಒಂದು ರೂಪಾಯಿಗೆ 80/- ರೂಪಾಯಿ ಅಂತಾ ಚೀರುತ್ತಾ ಜನರಿಂದ ಹಣ ಪಡೆದುಕೊಂಡು
ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಆತನ ಮೇಲೆ ಪಂಚರ ಸಮಕ್ಷಮ
ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ
ಹಿಡಿದು ಆತನ ಅಂತ ಝಡ್ತಿ ಮಾಡಿ ಆತನಿಂದ 4500/- ರೂ. ನಗದು ಹಣ, ಒಂದು ಬಾಲ ಪೇನ್ ಹಾಗೂ ಮಟಕಾ
ಬರೆದ ಚೀಟಿ ಸಿಕ್ಕಿರುತ್ತವೆ, ಅವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ಆರೋಪಿತನ
ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 199/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 28-11-2019 ರಂದು ಚಿಟ್ಟಾ ಗ್ರಾಮದ ಹೌಸಿಂಗ ಬೋರ್ಡ ಕಾಲೋನಿಯಲ್ಲಿರುವ ವಾಟರ ಟ್ಯಾಂಕ ಕೆಳಗೆ ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆಂದು ಕೃಷ್ಣಕುಮಾರ ಪಾಟೀಲ್ ಪಿಎಸ್ಐ ಗಾಂಧಿಗಂಜ ಪೊಲೀಸ ಠಾಣೆ ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟ್ಟಾ ಗ್ರಾಮದ ಹೌಸಿಂಗ ಬೋರ್ಡ ವಾಟರ ಟ್ಯಾಂಕ ಸಮಿಪ ಹೋಗಿ ಮರೆಯಾಗಿ ನಿಂತು ನೋಡಲು ಚಿಟ್ಟಾ ಗ್ರಾಮದ ಹೌಸಿಂಗ ಬೋರ್ಡ ವಾಟರ ಟ್ಯಾಂಕ ಕೆಳಗೆ ಆರೋಪಿ ಕಾಶಿನಾಥ ತಂದೆ ಮಾರುತಿ ಮೇತ್ರೆ ವಯ: 45 ವರ್ಷ, ಜಾತಿ: ಕುರುಬ, ಸಾ: ರಾಜೋಳಾ, ತಾ: ಜಹೀರಾಬಾದ (ಟಿ.ಎಸ್.) ಇತನು ಒಂದು ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟಕಾ ಚೀಟಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗ ಖಚಿತ ಪಡಿಸಿಕೊಂಡು ಆತನ ಮೇಲೆ ದಾಳಿ ನಡೆಯಿಸಿ ಅವನನ್ನು ವಶಕ್ಕೆ ಪಡೆದುಕೊಂಡು ಅವನ ಅಂಗ ಜಡ್ತಿ ಮಾಡಲಾಗಿ ಅವನ ಬಳಿ ಒಟ್ಟು ನಗದು ಹಣ 42,000/- ರೂ., ಎರಡು ಮಟಕಾ ಚಿಟಿಗಳು ಹಾಗೂ ಒಂದು ಬಾಲಪೆನ್ ಸಿಕ್ಕಿದ್ವು, ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 104/2019, ಕಲಂ. ಮನುಷ್ಯ ಕಾಣೆ :-
ದಿನಾಂಕ 14-10-2019 ರಂದು ಫಿರ್ಯಾದಿ ಪ್ರಕಾಶ ತಂದೆ ಅಡೆಪ್ಪಾ ಬೀರಗೊಂಡ ವಯ: 32 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕುತ್ತಾಬಾದ ಗ್ರಾಮ, ತಾ: & ಜಿ: ಬೀದರ ರವರ ತಂದೆಯಾದ ಅಡೆಪ್ಪಾ ಇವರು ಫಿರ್ಯಾದಿಯ ಅಕ್ಕ ಪ್ರಭಾವತಿ ಇವಳ ಮನೆ ಡಪ್ಪೋರ ಗ್ರಾಮಕ್ಕೆ ಹೋಗುತ್ತೇನೆಂದು ಹೇಳಿದ್ದರಿಂದ ತಮ್ಮ ತಂದೆಗೆ ತನ್ನ ದ್ವಿಚಕ್ರ ವಾಹನದ ಮೇಲೆ ಕೂಡಿಸಿಕೊಂಡು ತಮ್ಮೂರಿಂದ ಬೀದರಕ್ಕೆ ಬಂದು ಬೀದರ ನಗರದ ಬಸವೇಶ್ವರ ವೃತ್ತದ ಹತ್ತಿರ ಆಂದ್ರಾ ಬಸ್ಸ ನಿಲ್ದಾಣದ ಹತ್ತಿರ ಡಪ್ಪೋರ ಗ್ರಾಮಕ್ಕೆ ಹೋಗಲು ಬಿಟ್ಟು ಹೋಗಿದ್ದು, ಆದರೆ ಅವರು ಡಪ್ಪೋರ ಗ್ರಾಮಕ್ಕೆ ಹೋಗಿರುವುದಿಲ್ಲಾ ಮತ್ತು ಮರಳಿ ಮನೆಗೂ ಸಹ ಬರದೇ ಕಾಣೆಯಾಗಿರುತ್ತಾರೆ, ಅವರ ತಂದೆಯವರ ಚಹರೆ ಪಟ್ಟಿ 1) ಹೆಸರು: ಅಡೆಪ್ಪಾ ಬೀರಗೊಂಡ, 2) ವಯ: 70 ವರ್ಷ, 3) ಚಹರೆ ಪಟ್ಟಿ: ದುಂಡು ಮುಖ ಗೋಧಿ ಮೈಬಣ್ಣ ಸಾಧರಣ ಮೈಕಟ್ಟು ಎತ್ತರ 5 ಫೀಟ್ 6 ಇಂಚ್, 4) ಬಟ್ಟೆ: ಒಂದು ಬಿಳಿ ಬಣ್ಣದ ಶರ್ಟ ಮತ್ತು ಬಿಳಿ ಬಣ್ಣದ ಧೊತಿ ಧರಿಸಿದ್ದು ತಲೆಗೆ ಬಿಳಿ ಬಣ್ಣದ ರುಮಾಲ್ ಕಟ್ಟಿಕೊಂಡಿರುತ್ತಾರೆ ಹಾಗೂ 5) ಭಾಷೆ: ಕನ್ನಡ ಭಾಷೆ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.