Police Bhavan Kalaburagi

Police Bhavan Kalaburagi

Tuesday, June 26, 2018

Yadgir District Reported Crimes Updated on 26-06-2018

                                   Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 45/2018 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ;- ದಿನಾಂಕ 25/06/2018 ರಂದು ಸಮಯ ಮದ್ಯಾಹ್ನ 2-30 ಪಿ.ಎಂ. ದ ಸುಮಾರಿಗೆ ಯಾದಗಿರಿ -ವರ್ಕನಳ್ಳಿ  ಮುಖ್ಯ ರಸ್ತೆಯ ಮೇಲೆ ಫಿಯರ್ಾದಿಯವರು ಮೋಟಾರು ಸೈಕಲ್ ನಂ.ಕೆಎ-33, ಕ್ಯೂ-5433 ನೇದ್ದರಲ್ಲಿ ಹೊರಟಿದ್ದಾಗ .ಆರೋಪಿತನು ತನ್ನ ಅಶೋಕ್ ಲೆಲ್ಯಾಂಡ್ ದೋಸ್ತ್ ಗೂಡ್ಸ್  ಟಿಪಿ ನಂ. ಕೆಎ-35, ಟಿ.ಆರ್-0852 ಅದರ ಚೆಸ್ಸಿ ನಂಬರ ಆಔಖಖಿ+ಕ13226-18ಈ01ಃ037 ನೆದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯವರು ಹೊರಟಿದ್ದ್ ಮೋಟಾರು ಸೈಕಲಗೆ ಹಿಂದಿನಿಂದ  ಡಿಕ್ಕಿಕೊಟ್ಟು ಅಪಗಾತ ಮಾಡಿದ್ದರಿಂದ ಫಿಯರ್ಾದಿಗೆ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯ, ಎಡ ತೊಡೆಗೆ ತರಚಿದ ಗಾಯ, ಎಡ ಮತ್ತು ಬಲ ಮೊಣಕೈಗಳಿಗೆ ತರಚಿದ ಗಾಯವಾಗಿರುತ್ತವೆ  ಮತ್ತು ಮೋಟಾರು ಸೈಕಲ್ ಸವಾರನಿಗೆ ಎಡಮೊಣಕಾಲು  ಕೆಳಗೆ  ಭಾರೀ ರಕ್ತಗಾಯವಾಗಿದ್ದು ಕಾಲು ಮುರಿದಂತೆ ಕಾಣುತ್ತಿದ್ದು, ತಲೆಯ ಹಿಂಬದಿಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ ಅಪಘಾತ ಪಡಿಸಿದ ವಾಹನದ ಸವಾರನು ಸ್ತಳದಲ್ಲಿ ವಾಹನವನ್ನು ಬಿಟ್ಟು ಓಡಿ ಹೋಗಿದ್ದರ ಬಗ್ಗೆ ಮುಂದಿನ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ 276/2018 ಕಲಂ: 279 337 338 ಐಪಿಸಿ;-ದಿ: 25/06/2018 ರಂದು 10-15 ಎ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ತಾಯಮ್ಮ ತಂದೆ ಶಿವಪ್ಪ ಚವಲ್ಕರ ಸಾ: ಸುರಪೂರ ಇವರ ಹೇಳಿಕೆ ಫಿರ್ಯದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ನಮ್ಮ ಓಣಿಯ ನಾಗಮ್ಮ ಕುದರಿಮನಿ ಇವರ ಮಗಳ ಮದುವೆ ಕಾರ್ಯಕ್ರಮವು ರಾಯಚೂರ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇರುವದರಿಂದ ನಾನು ಮತ್ತು ನನ್ನ ತಾಯಿ 2) ಚಂದಮ್ಮ, ತಂಗಿಯಾದ 3) ಮರೆಮ್ಮ ಹಾಗು ನಮ್ಮ ಓಣಿಯ 4) ತಾಯಮ್ಮ ತಂದೆ ಸುಕ್ಕಪ್ಪ ಕುಂಕುಮದೋರ 5) ಗೀತಾ ಗಂಡ ಅಯ್ಯಪ್ಪ ಪೂಜಾರಿ 6) ಲಕ್ಷ್ಮೀಬಾಯಿ ಗಂಡ ಸಾಯಬಣ್ಣ ಕುಲಕಣರ್ಿ 7) ಮಲ್ಲಮ್ಮ ಗಂಡ ಈರಪ್ಪ ಬಡಿಗೇರ 8) ಮಲ್ಲಮ್ಮ ಗಂಡ ಶರಣಪ್ಪ ಬಡಿಗೇರ 9) ಅಕ್ಕಮ್ಮ ಗಂಡ ಲಕ್ಷ್ಮಣ ಪ್ಯಾರಸೇಲರ 10) ಶಂಕ್ರಮ್ಮ ಗಂಡ ಪರಶುರಾಮ ಚಾಮನಾಳ 11) ಯಲ್ಲಮ್ಮ ಗಂಡ ಅಂಬ್ರಪ್ಪ ಚವಲ್ಕರ 12) ತಿಪ್ಪಮ್ಮ ಗಂಡ ಮಲ್ಲಪ್ಪ ಚಾಮನಾಳ ಹಾಗು ಮೂರು ಜನ ಸಣ್ಣ ಮಕ್ಕಳು 13) ಗಣೇಶ ತಂದೆ ಹಣಮಂತ ಕುದರಿಮನಿ, 14) ಶ್ಲೋಕ ತಂದೆ ಕಾಶಿನಾಥ 15) ಅನುಶಾ ತಂದೆ ಯಂಕಪ್ಪ ಎಲ್ಲರೂ ಸದರಿ ಮದುವೆ ಕಾರ್ಯಕ್ರಮಕ್ಕೆ ಕೃಷರ ಜೀಪ ನಂಬರ ಕೆ.ಎ 36 ಎ 3696 ನೇದ್ದರಲ್ಲಿ ಕುಳಿತುಕೊಂಡು ಹೋಗುವಾಗ ಸದರಿ ಜೀಪ ಚಾಲಕನಾದ ಪ್ರಭು ತಂದೆ ಮುದಕಪ್ಪ ಸಾ: ಪೈದೊಡ್ಡಿ ಇತನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ, 9-30 ಎ.ಎಮ್ ಸುಮಾರಿಗೆ ಕುಂಬಾರಪೇಟ ಅಂಬೇಡ್ಕರ ಸರ್ಕಲ್ ಹತ್ತಿರ ಪಲ್ಟಿ ಮಾಡಿದ್ದರಿಂದ ನನಗೆ ಹಾಗು ಜೀಪಿನಲ್ಲಿ ಕುಳಿತಿದ್ದ ಎಲ್ಲರಿಗೂ ಸಾದಾ ಹಾಗು ತೀವೃ ಸ್ವರೂಪದ ರಕ್ತಗಾಯ, ಗುಪ್ತಗಾಯಗಳಾಗಿರುವದಲ್ಲದೇ, ಜೀಪ ಚಾಲಕನಿಗೂ ಸಹ ಭಾರಿ ಗಾಯಗಳಾಗಿರುತ್ತವೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 276/2018 ಕಲಂಃ 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

BIDAR DISTRICT DAILY CRIME UPDATE 26-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-06-2018

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 78/2018, PÀ®A. 279, 337 L¦¹ eÉÆvÉ 187 LJA« PÁAiÉÄÝ :-
ದಿನಾಂಕ 26-06-2018 ರಂದು ಫಿರ್ಯಾದಿ ಅಬ್ದುಲ ಕಲೀಮ ತಂದೆ ಅಬ್ದುಲ ಸಲೀಮ, ವಯ: 44 ವರ್ಷ, ಜಾತಿ: ಮುಸ್ಲಿಂ, ಸಾ: ಗಾಂಧಿನಗರ ಮೈಲೂರ ಬೀದರ ರವರು ತನ್ನ ಮೊಟಾರ ಸೈಕಲ ನಂ. ಕೆಎ-38/ಎಲ್-6252 ನೇದ್ದರ ಮೇಲೆ ತನ್ನ ಮಗಳಾದ ಮುಸ್ಕಾನ ತಂದೆ ಅಬ್ದುಲ ಕಲೀಮ, ವಯ: 16 ವರ್ಷ ಇವಳನ್ನು ಹಿಂದೆ ಕೂಡಿಸಿಕೊಂಡು ಮೊಟಾರ ಸೈಕಲ ಚಲಾಯಿಸುತ್ತಾ ಚಿದ್ರಿ ಕಡೆಯಿಂದ ಮೈಲೂರದಲ್ಲಿನ ಮನೆಯ ಕಡೆಗೆ ರಿಂಗ ರೋಡ ಮುಖಾಂತರ ಬರುತ್ತಿದ್ದು, ಚಿದ್ರಿ ಮೈಲೂರ ರಿಂಗ್ ರೋಡ ಗೊಯೇಲ್ ಲೇ ಔಟದಲ್ಲಿನ ವಾಯ್.ಹೆಚ್ ಬಿಲ್ಡಿಂಗ್ ಹತ್ತಿರ ಬಂದಾಗ ಎದುರಿನಿಂದ ರಾಂಗ ಸೈಡನಿಂದ ಅರುಣೋದಯ ಸ್ಕೂಲ ವ್ಯಾನ ನಂ. ಕೆಎ-38/7939 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಾಯಿಯ ಮೇಲೆ, ಗಟಾಯಿಯ ಮೇಲೆ, ಹಣೆಯ ಮೇಲೆ, ಬಲ ಭುಜದ ಮುಂದಗಡೆ ತರಚಿದ ರಕ್ತಗಾಯ, ಎಡ ತೊಡೆಯ ಮೇಲೆ ಗುಪ್ತಗಾಯ ಮತ್ತು ಬಲ ಮೊಳಕಾಲ ಕೆಳಗೆ ರಕ್ತಗಾಯವಾಗಿರುತ್ತದೆ, ಮಗಳಾದ ಮುಸ್ಕಾನ ಇವಳಿಗೆ ಮೂಗಿನ ಮೇಲೆ, ಎಡಗಣ್ಣಿನ ಕೆಳಗೆ ಮತ್ತು ಬಾಯಿಯ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೆ ಹೋಗುತ್ತಿದ್ದ ಮಹ್ಮದ ಇಬ್ರಾಹಿಂ ತಂದೆ ಬಾಬುಮಿಯಾ ಮತ್ತು ಅಬ್ದುಲ ಫಾರೂಕ ತಂದೆ ಅಬ್ದುಲ ಸಲೀಮ ಸಾ: ಮೈಲೂರ ಬೀದರ ರವರು ಕೂಡಿ 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಇಬ್ಬರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALBURAGI DISTICT REPORTED CRIMES

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 25.06.18 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮೃತ ಆಶಾ ಇವಳು ಒಂದು ಮೋಟಾರ ಸೈಕಲ ಹಿಂದುಗಡೆ ಕುಳಿತ ಏಷಿಯನ ಮಹಲದಿಂದ ಮನೆಯ ಕಡೆಗೆ ಹೋಗುವಾಗ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ ಸೈಕಲ ಸ್ಕಿಡ ಮಾಡಿ ಅಪಘಾತ ಮಾಡಿದ್ದರಿಂದ ಆಶಾ ಇವಳಿಗೆ ಭಾರಿ ಒಳಪೆಟ್ಟು ಬಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ದಿನಾಂಕ 25-06-2018 ಸಾಯಂಕಾಲ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ.ಅಂತಾ ಶ್ರೀ ನಿಜಲಿಂಗಪ್ಪಾ ತಂದೆ ಶಿವಶಂಕರ ಕಟ್ಟಿ ಸಾ: ಭೀಮ ನಗರ ಬಡಾ ರೋಜಾ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 24-6-2018 ರಂದು ಮುಂಜಾನೆ. ನನ್ನ ಮಗ ದಯಾಸಾಗರ ಊರ್ಫ ಚಿಂಟು ತಂದೆ ಮನೋಹರ ನವಲೆ  ಇತನು ಹೊರಗಡೆ ಹೋಗಿ ಬರುತ್ತೇನೆಂದು ಹೊಸದಾಗಿ ತೆಗೆದುಕೊಂಡು ತನ್ನ ಬಜಾಜ ಪಲ್ಸರ ಮೋಟಾರ ಸೈಕಲನ್ನು ತೆಗೆದುಕೊಂಡು ಹೋದನು ಮದ್ಯಾಹ್ನ ಅದರು ಮನೆಗೆ ಬರಲಿಲ್ಲಾ ನಂತರ ಅವನ ಗೆಳೆಯನಾದ ನಾಗಯ್ಯಾ ಊರ್ಫ ನಾಗು ಮಠ ಈತನಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ ನನ್ನ ಮಗ ದಯಾಸಾಗರ ಇತನು ಮುಂಜಾನೆ. ಆಳಂದ ಖಜ್ಜೂರಿಗೆ ಹೋಗಿ ಬರುತ್ತೆನೆಂದು  ತನ್ನ ಮೊಟಾರ ಸೈಕಲ್ ಮೇಲೆ ಹೋಗಿ ಬರುತ್ತೇನೆಂದು ದಿನಾಂಕ.25-6-2018 ರಂದು ಬೆಳಗ್ಗೆ 5-30 ಎ.ಎಂ.ಕ್ಕೆ. ಮರಳಿ ಬರುತ್ತೆನೆಂದು ಹೋಗಿರುತ್ತಾನೆ ಎಂದು ತಿಳಿಸಿದನು. ಇಂದು ದಿನಾಂಕ. 25-6-2018 ರಂದು ಮುಜಾನೆ ಬರಬಹುದೆಂದು ನಾವು ಕಾಯುತ್ತಾ ಕುಳಿತಿರುವಾಗ ಮುಂಜಾನೆ.8-30 ಎ.ಎಂ.ದ ಸುಮಾರಿಗೆ ನಮ್ಮ ಕಾಲೂನಿಯಲ್ಲಿ ಜನರು ಅಂದಾಡುತಿದ್ದು ಏನೆಂದರೆ ನನ್ನ ಮಗ ದಯಾಸಾಗರ ಇತನು ಆಳಂದ ರೋಡ ಪಟ್ಟಣ ಟೂಲ ನಾಕಾ ನಂತರ ಜವಳಿ ಸ್ಕೂಲ  ಹತ್ತಿರ ಆಳಂದ ರೋಡಿಗೆ ತನ್ನ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದಿದ್ದು ಮೆಲಕಿಗೆ  ಮತ್ತು ಕುತ್ತಿಗೆ ಹತ್ತಿರ ಹಾಗೂ ಎಡಗಾಲು ತೊಡೆಗೆ ಮತ್ತು ಪಾದಕ್ಕೆ ರಕ್ತಗಾಯಗಳಾಗಿದ್ದವು ಸ್ಥಳದಲ್ಲಿಯೇ ಮೃತಪಟ್ಟದ್ದು ಶವವನ್ನು ಸರ್ಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಗೊತ್ತಾಗಿ ನಾನು ಮತ್ತು ನನ್ನ ಮಕ್ಕಳಾದ ಅಂಜು ನವಲೆ, ಮೀನಾ, ಸೃಷ್ಟಿ ನವಲೆ  ಎಲ್ಲರೂ ಕೂಡಿಕೊಂಡು ಕಲಬುರಗಿ ಸರಕಾರಿ ದವಖಾನಯ ಶವಗಾರಕ್ಕೆ ಬಂದು ನೋಡಲಾಗಿ ತನ್ನ ಮಗನ ಶವವನ್ನು ಗುರುತಿಸಿದ್ದು ನೋಡಲಾಗಿದೆ ನನ್ನ ಮಗ ದಯಾಸಾಗ ಇತನಿಗೆ  ಬಲಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯ ಹಾಗೂ ಕುತ್ತಿಗೆಯ ಹಿಂದೆ  ಎಡ ಮತ್ತು ಬಲಕ್ಕೆ ಕಂದುಗಟ್ಟಿದ್ದ ಗಾಯ , ಎಡಗಾಲು ತೊಡೆಗೆ ತರಚಿದ ಪೆಟ್ಟಾಗಿದ್ದು ಎಡಗಾಲು ಪಾದಕ್ಕೆ ,ರಕ್ತಗಾಯ ಆಗಿರುತ್ತದೆ ಹಾಗೂ ಹಿಬ್ಬಟ್ಟಿಗೆ ರಕ್ತಗಾಯ ಆಗಿರುತ್ತದೆ. ಮತ್ತು ಬಲಗೈ ಮೊಳಕೈಗೆ ತರಚಿದ ಗಾಯಗಳಾಗಿದ್ದು ನನ್ನ ಮಗ ದಯಾಸಾಗರ ಊರ್ಫ ಚಿಂಟು ಇತನು ತನ್ನ ಹೊಸದಾಗಿ ತೆಗೆದುಕೊಂಡ ಬಜಾಜ ಪಲ್ಸರ ಮೋಟಾರ ಸೈಕಲ್ ಚಸ್ಸಿ ನಂಬರ MD2A13EYXACC43863 ನೆದ್ದರ ಮೇಲೆ ಆಳಂದ ಖಜ್ಜೂರಿಗೆ ಹೋಗಿ ಮರಳಿ ಕಲಬುರಗಿಗೆ ಬರುತ್ತಿರುವಾಗ ದಿನಾಂಕ. 25-6-2018 ರಂದು ಬೆಳಗ್ಗಿನ ಜಾವ 3-30 .ಎ.ಎಂ.ದಿಂದ 6-00 ಎ.ಎಂ.ದ  ಮದ್ಯಾದ ಅವಧಿಯಲ್ಲಿ ಪಟ್ಟಣ ಸೀಮಾಂತರದ ಕಲಬುರಗಿ ಆಳಂದ ರೋಡಿನ ಜವಳಿ ಸ್ಕೂಲ ಕ್ರಾಸ ಸಮೀಪ ತನ್ನ ಮೋಟಾರ ಸೈಕಲನ್ನು ವೇಗವಾಗಿ ಓಡಿಸಿಕೊಂಡು ಬರುತ್ತಿರುವಾಗ ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದು  ಮೆಲಕ್ಕಿಗೆ, ಕುತ್ತಿಗೆ ಹತ್ತಿರ ಹಾಗೂ ಕಾಲೂಗಳಿಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಜೈಶೀಲಾ ಗಂಡ ಮನೋಹರ ನವಲೆ ಸಾ/ ಬುದ್ದಮಂದಿರ ಹತ್ತಿರ ಬಸವನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಚಂದ್ರಭಾಗ ಗಂಡ ಕರಬಸಪ್ಪಾ ಕಂಟೇಕರ ಸಾ|| ನ್ಯೂ ರಾಘವೇಂದ್ರ ಕಾಲೋನಿ ಬಾಳೆ ಲೇಔಟ ಕಲಬುರಗಿ  ರವರ ಮದುವೆಯು ದಿನಾಂಕ 11.05.2011 ರಂದು ರೇವಣಸಿದ್ದೇಶ್ವರ ಕೋರಿ ಮಠ ಧನಗರ ಗಲ್ಲಿ ಬಹ್ಮಪೂರ ಕಲಬುರಗಿಯಲ್ಲಿ ನಮ್ಮ ಸಂಪ್ರದಾಯದಂತೆ  ಕರಬಸಪ್ಪಾ ತಂದೆ ವಿಠ್ಠಲ್ ಕಂಟೇಕರ ಸಾ|| ಕಡಗಂಚಿ ತಾ|| ಆಳಂದ ಜಿ|| ಕಲಬುರಗಿ ಇತನೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆ ಸಮಯದಲ್ಲಿ 2 ತೊಲೆ ಬಂಗಾರ  ರೂ 51.000 ರೂಪಾಯಿ ಮತ್ತು ಮನೆಬಳಕೆ ಎಲ್ಲಾ ಸಾಮಾನುಗಳನ್ನು ಕೊಟ್ಟು ನಮ್ಮ ತಂದೆತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಾದ ನಂತರ ನಾನು  ನನ್ನ ಗಂಡನೊಂದಿಗೆ ಕಡಗಂಚಿಯಲ್ಲಿಯೆ ವಾಸವಾಗಿದ್ದೇನು. ಕೆಲವು ದಿವಸಗಳಾದ ನಂತರ ನನ್ನ ಗಂಡ ಕರಬಸಪ್ಪಾ ಮತ್ತು ನನ್ನ ಮಾವ ವಿಠಲ ಅತ್ತೆ ಬಸಮ್ಮಾ ಮೈದುನ ಶಂತಪ್ಪಾ ಇವರೆಲ್ಲರು ಕೂಡಿ ನೀನು ತವರು ಮನೆಯಿಂದ  ರೂ 50.000 ಹಣ ಮತ್ತು 5 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ದಿನಾಲೂ ನನಗೆ ದೈಹಿಕ ಮಾನಸಿಕ ಕಿರುಕುಳ ಕೊಡುತ್ತಿದ್ದರು ಆ ಕಿರುಕುಳವನ್ನು ನಾನು ಸಹಿಸಿಕೊಂಡು 2 ಮಕ್ಕಳಿಗೆ ಜನ್ಮ ಕೊಟ್ಟಿರುತ್ತೇನೆ. ಮೊದಲನೆ ಮಗಳು ಸ್ಪೂರ್ತಿ ಮತ್ತು ಎರಡನೇ ಮಗಳು ಕೀರ್ತಿ ಅಂತಾ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ಇದಾದ ನಂತರವು ನನಗೆ ಕಿರುಕುಳ ಕೊಡುವುದು ಹೆಚ್ಚು ಮಾಡಿ ನನಗೆ ಹೊಡೆದು ಮನೆಯಿಂದ ಹೊರಗೆ ಹಾಕಿದರು. ಮೆಲೆ ತೋರಿಸಿದ ಎಲ್ಲರೂ ಕೂಡಿಕೊಂಡು ನನ್ನ ಗಂಡನಿಗೆ 2ನೇ ಮದುವೆ ಮಾಡಿದ್ದಾರೆ. ಅವಳ ಹೆಸರು ಪ್ರವೀಣಾ ಅಂತಾ ಇದ್ದು ಅವಳು ಮುಚಳಂಬಿ ಗ್ರಾಮದವಳಾಗಿದ್ದು ಈ ಬಗ್ಗೆ ನನಗೆ ಗೊತ್ತಾಗಿ ನನ್ನ ಗಂಡನ ಮನೆಗೆ ಹೋಗಿ ವಿಚಾರಿಸಲಾಗಿ ನಾವು ಮದುವೆ ಮಾಡಿದ್ದೇವೆ ಏನು ಮಾಡಿಕೊಳ್ಳುತ್ತೀ ಮಾಡಿಕೊ ಎಂದು ನನಗೆ ನನ್ನ ಗಂಡ ಅತ್ತೆ ಮಾವ ಮೈದುನ ಮತ್ತು ನನ್ನ ಗಂಡನ 2ನೇ ಹೆಂಡತಿ ಪ್ರವೀಣಾ ಇವಳು ಎಲ್ಲರು ಸೇರಿ ಹೊಡೆಬಡೆ ಮಾಡಿ ಮನೆಯಿಂದ ಹೊರೆಗೆ ಹಾಕಿರುತ್ತಾರೆ ಮತ್ತೆ ದಿನಾಂಕ 13.05.2018 ರಂದು ಸಾಯಂಕಾಲ 5 ಗಂಟೆಗೆ ನನ್ನ ಗಂಡ ಮತ್ತು ನನ್ನ ಅತ್ತೆ ಮಾವ ಮೈದುನ ಮತ್ತು ಪ್ರವೀಣಾ ಇವರೆಲ್ಲರು ಕೂಡಿ ನಮ್ಮ ತವರು ಮನೆ ಕಲಬುರಗಿಗೆ ಬಂದು ನನಗೆ ರಂಡಿ ಭೋಸಡಿ ಅಂತಾ ಬೈದು ನಾವು ನಮ್ಮ ಮಗನಿಗೆ 2ನೇ ಮದುವೆ ಮಾಡಿದ್ದೇವೆ ನೀನು ಪಾರೀಖತ್ ಕೊಡು ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಬೈದು ನಂತರ ನನ್ನ ಗಂಡ ನನಗೆ ನೆಲಕ್ಕೆ ಹಾಕಿ  ಹೊಡೆಬಡೆ ಮಾಡುತ್ತಿದ್ದನು. ಉಳಿದವರೆಲ್ಲಾ ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ಆಗ ನಾನು ಚೀರಾಡುವುದು ಕೇಳಿ ನನ್ನ ತಾಯಿ ಶಾಂತಾಬಾಯಿ ನನ್ನ ತಂದೆ ಲಕ್ಷ್ಮಿಕಾಂತ ಇವರು ಬಂದು ಬಿಡಿಸಿದರು ಇಲ್ಲದೆ ಇದ್ದರೆ ಸದರಿಯವರು ನನಗೆ ಖಲಾಸ ಮಾಡಿ ಬಿಡುತ್ತಿದ್ದರು. ನನಗೆ ಕಿರುಕುಳ ನೀಡಿ ಹೊಡೆಬಡೆ ಮಾಡಿದ ಮತ್ತು 2ನೇ ಮದುವೆ ಮಾಡಿದ ನನ್ನ ಗಂಡ ಅತ್ತೆ ಮಾವ ಮೈದುನ ಹಾಗೂ ನನ್ನ ಸವತಿ ಪ್ರವೀಣಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.