ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ
ಅಬ್ದುಲ್‌ಬಾಶಾ ತಂದೆ ದಸ್ತಗಿರ ಸಾಬ ಸಾ:ಪ್ಲಾಟ ನಂ.54 ಸಹರಾ ಫಂಕ್ಷನಹಾಲ ಹಿಂದುಗಡೆ ಅಹ್ಮದ ನಗರ
ಕಲಬುರಗಿ ಇವರು, ದಿನಾಂಕ:08/11/2018 ರಂದು 7.40 ಪಿ.ಎಂ ಸುಮಾರಿಗೆ ನಾನು ನಮ್ಮ ಕುಟುಂಬ ಸಮೇತ
ಮುಂಬೈಗೆ ಹೋಗುವ ಸಲುವಾಗಿ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು ನಂತರ ದಿನಾಂಕ:09/11/2018 ರಂದು
ಬೆಳಗ್ಗೆ 5.54 ಎ.ಎಂಕ್ಕೆ ನಮ್ಮ ಮನೆಯ ಪಕ್ಕದ ಮನೆಯವರಾದ ಮಹೇಬೂಬಸಾಬ ಇವರು ಪೋನ ಮಾಡಿ ನಿಮ್ಮ
ಮನೆಯ ಬಾಗಿಲ ಕೀಲಿ ಮುರಿದಿದೆ ಅಂತಾ ತಿಳಿಸಿದ್ದು ಅದರಂತೆ ನಾನು ಮರಳಿ 9.00 ಪಿ.ಎಂಕ್ಕೆ ಮನೆಗೆ
ಬಂದು ನೋಡಲಾಗಿ ಮನೆಯ ಬಾಗಿಲ ಕೀಲಿ ಮುರಿದಿದ್ದು ಮನೆಯಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ
ಆಲಮಾರಿದಲ್ಲಿ ಇಟ್ಟಿದ್ದ ಬಂಗಾರದ ಬೆಳ್ಳಿಯ ಆಭರಣಗಳು
ಒಟ್ಟು 142800/-ರೂ ಬೆಲೆಬಾಳುವ ವಸ್ತುಗಳು ಯಾರೋ ಕಳ್ಳರು ರಾತ್ರಿ ವೇಳೆ ನಮ್ಮ ಮನೆಯ ಬಾಗಿಲ
ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ
09.11.2018 ರಂದು ರಾತ್ರಿ
ಶರಣಗೌಡ ಇವರು ಮೃತ ರಾಜು @ ಪರಮಾನಂದ
ಇತನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-32/ಇಪಿ-6648 ನೇದ್ದರ ಮೇಲೆ ಹೊಸ ಜೇವರಗಿ ರೋಡ ಭಾವನಾ
ರೆಸ್ಟೊರೆಂಟ ಹತ್ತೀರ ಬರುವ ರೊಟ್ಟಿ ಕೇಂದ್ರದಲ್ಲಿ ರೊಟ್ಟಿ ತರುವ ಸಲುವಾಗಿ ಹೋಗಿ ಸಾಹಿ ಗಣೇಶ ಟ್ರೇಡರ್ಸ
ಗ್ರಾನೇಟ್ಸ, ಮಾರ್ಬಲ
ಟೈಲ್ಸ್ ಅಂಗಡಿ ಎದುರುಗಡೆ ರೋಡ ಪಕ್ಕದಲ್ಲಿ ಮೋಟಾರ ಸೈಕಲ ನಿಲ್ಲಿಸಿ ರೊಟ್ಟಿ ಕೇಂದ್ರದಿಂದ ರೊಟ್ಟಿ
ತಗೆದುಕೊಂಡು ಶಾಂತಿ ನಗರದಲ್ಲಿರುವ ಅವರ ಸಂಬಂದಿಕರ ಮನೆಗೆ ಹೋಗುವ ಸಲುವಾಗಿ ಮೃತ ರಾಜು @ ಪರಮಾನಂದ ಇತನು ಮೋಟಾರ ಸೈಕಲ ಹಿಂದುಗಡೆ
ಶರಣಗೌಡ ಇವರನ್ನು ಕೂಡಿಸಿಕೊಂಡು ನಿಲ್ಲಿಸಿದ ಮೋಟಾರ ಸೈಕಲ ಚಾಲು ಮಾಡುತ್ತಿದ್ದಾಗ ಕಾರ ನಂ ಎಮ್.ಹೆಚ್.-02/ಬಿವಾಯ್-476 ನೇದ್ದರ ಚಾಲಕನು ಆರಪಿ ಸರ್ಕಲ ಕಡೆಯಿಂದ
ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಎದುರಿನಿಂದ ರಾಜು @ ಪರಮಾನಂದ
ಇವರ ಮೋಟಾರ ಸೈಕಲ ನಂ ಕೆಎ-32/ಇಪಿ-6648 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ
ಶರಣಗೌಡ ಹಾಗೂ ರಾಜು @ ಪರಮಾನಂದ
ಇವರಿಗೆ ಭಾರಿಗಾಯಪಡಿಸಿ ತನ್ನ ಕಾರ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಶರಣಗೌಡ ಮತ್ತು ಮೃತ ರಾಜು @ ಪರಮಾನಂದ ಇಬ್ಬರಿಗೆ ಉಪಚಾರ ಕುರಿತು ಬಸವೇಶ್ವರ
ಆಸ್ಪತ್ರೆಗೆ ಸೇರಿಕೆ ಮಾಡಿದಾಗ ರಾಜು @ ಪರಮಾನಂದ
ಇತನು ಬಸವೇಶ್ವರ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು
ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ:06/11/2018
ರಂಧು
ಮುಂಜಾನೆ ನಾನು ಮತ್ತು ನನ್ನ ಮಗಳಾದ ಕಾವೇರಿ ವಯ-6 ವರ್ಷ ಹಾಗು ಸರಸ್ವತಿ
ಗಂಡ ಅರ್ಜುನ ಹಾದಿಮನಿ,
ಭೀಮಬಾಯಿ
ಗಂಡ ದ್ಯಾವಮ್ಮ ತಳವಾರ ಎಲ್ಲರೂ ಕೂಡಿಕೊಂಡು ಟೆಂಗಳಿ ಕ್ರಾಸ್ ಹತ್ತಿರ ಇರುವ ನಮ್ಮ ಬಾಳಗೇರಿ ಹೊಲದಲ್ಲಿ
ಕಡಲೆ ಪಲ್ಲೆ ಕಡೆಯಲು ನಡೆದುಕೊಂಡು ಹೋಗುತ್ತಿದ್ದೇವು. ಟೆಂಗಳಿ ಕ್ರಾಸ್ ವೇರ ಹೌಸ ಹಾಗು ದಾಭಾ ಸಮೀಪ
ನಡೆದುಕೊಂಡು ಹೋಗುತ್ತಿರುವಾಗ ನಾನು ನನ್ನ ಮಗಳು ಕಾವೇರಿ ಇವಳ ಕೈಹಿಡಿದುಕೊಂಡು ಹೋಗುತ್ತಿರುವಾಗ ಸೇಡಂ
ಮತ್ತು ಕಲಬುರಗಿ ರಾಜ್ಯ ಹೆದ್ದಾರಿಯ ಸೇಡಂ ಕಡೆಯಿಂದ ಒಂದು ಕಾರು ಚಾಲಕನು ಕಾರನ್ನು ಅತಿವೇಗ ಹಾಗು
ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೇ ರೋಡಿನ ಎಡಭಾಗದ ನಡೆದುಕೊಂಡು ಹೋಗುವ ರಸ್ತೆಯ ಮೇಲೆ ಬಂದು
ಎದುರುಗಡೆಯಿಂದ ಒಮ್ಮೇಲೆ ಸೈಡಿನಿಂದ ಡಿಕ್ಕಿಪಡಿಸಿ ಹೋದ ಪರಿಣಾಮ ಈ ಅಪಘಾತದಲ್ಲಿ ನನ್ನ ಮಗಳು ಕಾವೇರಿ
ಎಡಗಡೆ ಟೊಂಕಕ್ಕೆ ಮತ್ತು ಹೊಟ್ಟೆಯ ಮೇಲೆ ಗುಪ್ತಗಾಯ ಹಾಗು ತರಚಿದ ಗಾಯ ಹಾಗು ತಲೆಯ ಹಿಂಬದಿಯಲ್ಲಿ
ಭಾರಿ ರಕ್ತಗಾಯವಾಗಿ ಬೇಹೋಷ ಆಗಿ ಬಿದ್ದಿರುತ್ತಾಳೆ. ಇದನ್ನು ನಾವೆಲ್ಲರೂ ನೋಡಿಕೊಂಡು ಮಗಳು ಕಾವೇರಿ ಇವಳನ್ನು ಎಬ್ಬಿಸಿರುತ್ತೇವೆ. ನಂತರ ರಸ್ತೆ
ಅಪಘಾತಪಡಿಸಿದ ಕಾರು ಚಾಲಕನು ತನ್ನ ಕಾರನ್ನು ಅಲ್ಲೆ ಸ್ವಲ್ಪ ಮುಂದಕ್ಕೆ ನಿಲ್ಲಿಸಿ ಓಡಿಹೋಗಿರುತ್ತಾನೆ.
ಕಾರು ನಂಬರ ನೋಡಲು ಎಮ್.ಎಚ್-12-ಕೆ.ಜೆ-7429 ಇರುತ್ತದೆ. ನನ್ನ
ಮಗಳಾದ ಕಾವೇರಿ ವಯ-6 ವರ್ಷ ಹಾಗು ಸರಸ್ವತಿ ಗಂಡ ಅರ್ಜುನ ಹಾದಿಮನಿ,
ಭೀಮಬಾಯಿ
ಗಂಡ ದ್ಯಾವಮ್ಮ ತಳವಾರ ಎಲ್ಲರೂ ಕೂಡಿಕೊಂಡು ಟೆಂಗಳಿ ಕ್ರಾಸ್ ಹತ್ತಿರ ಇರುವ ನಮ್ಮ ಬಾಳಗೇರಿ ಹೊಲದಲ್ಲಿ
ಕಡಲೆ ಪಲ್ಲೆ ಕಡೆಯಲು ನಡೆದುಕೊಂಡು ಹೋಗುತ್ತಿದ್ದೇವು. ಟೆಂಗಳಿ ಕ್ರಾಸ್ ವೇರ ಹೌಸ ಹಾಗು ದಾಭಾ ಸಮೀಪ
ನಡೆದುಸಕೊಂಡು ಹೋಗುತ್ತಿರುವಾಗ ನಾನು ನನ್ನ ಮಗಳು ಕಾವೇರಿ ಇವಳ ಕೈಹಿಡಿದುಕೊಂಡು ಹೋಗುತ್ತಿರುವಾಗ
ಸೇಡಂ ಮತ್ತು ಕಲಬುರಗಿ ರಾಜ್ಯ ಹೆದ್ದಾರಿಯ ಸೇಡಂ ಕಡೆಯಿಂದ ಎಮ್.ಎಚ್-12-ಕೆ.ಜೆ-7429
ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗು ಅಲಕ್ಷ್ಯತನದಿಂದ ಚಲಾಯಿಸಿಕೊಂಡು
ಬಂದವನೇ ರೋಡಿನ ಎಡಭಾಗದ ನಡೆದುಕೊಂಡು ಹೋಗುವ ರಸ್ತೆಯ ಮೇಲೆ ಬಂದು ಎದುರುಗಡೆಯಿಂದ ಒಮ್ಮೇಲೆ ಸೈಡಿನಿಂದ
ಡಿಕ್ಕಿಪಡಿಸಿ ಹೋಗಿದ ಪರಿಣಾಮ ಈ ಅಪಘಾತದಲ್ಲಿ ನನ್ನ ಮಗಳು ಕಾವೇರಿ ಎಡಗಡೆ ಟೊಂಕಕ್ಕೆ ಮತ್ತು ಹೊಟ್ಟೆಯ
ಮೇಲೆ ಗುಪ್ತಗಾಯ ಹಾಗು ತರಚಿದ ಗಾಯ ಹಾಗು ತಲೆಯ ಹಿಂಬದಿಯಲ್ಲಿ ಭಾರಿ ರಕ್ತಗಾಯವಾಗಿ ಬೇಹೋಷ ಆಗಿ ಬಿದ್ದಿರುತ್ತಾಳೆ.
ನಂತರ ರಸ್ತೆ ಅಪಘಾತಪಡಿಸಿದ ಕಾರು ಚಾಲಕನು ತನ್ನ ಕಾರನ್ನು ಅಲ್ಲೆ ಸ್ವಲ್ಪ ಮುಂದಕ್ಕೆ ನಿಲ್ಲಿಸಿ ಓಡಿಹೋಗಿರುತ್ತಾನೆ.
ದಿನಾಂಕ:11/11/2018 ರಂದು ಬಸವೇಶ್ವರ ಆಸ್ಪತ್ರೆಯಿಂದ ಉಪಚಾರಕ್ಕಾಗಿ ಹೈದ್ರಾಬಾದಗೆ ವಾಹನದಲ್ಲಿ
ತೆಗೆದುಕೊಂಡು ಹೋಗುತ್ತಿದ್ದಾಗ ಮೃತಪಟದಟಿರುತ್ತಾಳೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಕಮಲಾಪೂರ
ಠಾಣೆ : ಶ್ರೀಮತಿ ಜಯಶ್ರೀ ಗಂಡ ದಾಸಿಮಯ್ಯ ಮರತೂರ
ಮು:ಕಮಲಾಪೂರ ತಾ:ಜಿ:ಕಲಬುರಗಿ ಇವರನ್ನು ದಿನಾಂಕ:18/05/2010 ರಂದು ಶ್ರೀ ದಾಸಿಮಯ್ಯ ಸುಭಾಶ್ಚಂದ್ರ ಮರತೂರ ಇವರಿಗೆ ಕೋಟ್ಟು ಮದುವೆ
ಮಾಡಿರುತ್ತಾರೆ. ಮದುವೆಯಾದ ಮೇಲೆ ನಾನು ನನ್ನ ಪಗಾರನ್ನು ನನ್ನ ಮಾವನವರಿಗೆ ಕೋಡುತ್ತ
ಬಂದಿರುತ್ತೇನೆ. ಕೆಲವು ತಿಂಗಳ ನಂತರ ನನ್ನ ಗಂಡನು ನನ್ನ ಪಗಾರಗಾಗಿ ನನ್ನೊಂದಿಗೆ ಜಗಳ
ಮಾಡಿರುತ್ತಾರೆ,
ಆಗ ನನ್ನ ಮಾವನಿಂದ ಪಗಾರನ್ನು
ನನ್ನ ಗಂಡನಿಗೆ ಕೋಡುತ್ತ ಬಂದಿರುತ್ತೇನೆ. ಹೀಗೆ ಹಲವು ತಿಂಗಳ ನಂತರ ನನ್ನ ಅತ್ತೆ ಮಾವನವರ ಮಾತು
ಕೇಳಿ ನನ್ನ ಗಂಡ ನನಗೆ ಹೊಡೆಬಡೆ ಮಾಡಿರುತ್ತಾನೆ. ಆದರೂ ನಾನು ಸಹಿಸಿಕೊಂಡಿರುತ್ತೇನೆ ನಂತರ ನನಗೆ
ತುಂಬಾ ತೊಂದರೆ ಕೊಡುತ್ತಿದ್ದ ಕಾರಣ ನಾನು ನನ್ನ ಗಂಡನ ಮನೆಯಿಂದ ಕಮಲಾಪೂರದಲ್ಲಿರುವ ನನ್ನ ತವರು
ಮನೆಗೆ ಹೋದಾಗ ನನಗೆ ದಸರಾ ಹಬ್ಬದ ದಿನದಂದು ನನ್ನ ಗಂಡನು ನನಗೆ ಕರೆದುಕೊಂಡು ಹೋಗಿರುತ್ತಾನೆ. ನಂತರ
ಕೆಲವು ತಿಂಗಳುಗಳು ನಾನು ಗಂಡನ ಮನೆಯಲ್ಲಿಯೇ ಇದ್ದು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ
ಮತ್ತೆ ನನ್ನ ಗಂಡ ನನ್ನ ಅತ್ತೆಮಾವನ ಮಾತು ಕೇಳಿ ನನಗೆ ಹೊಡೆಬಡೆ ಮಾಡಲು ಪ್ರಾರಂಭ ಮಾಡಿದ್ದರಿಂದ
ಅವರ ಕಿರುಕುಳ ತಾಳದೇ ಮತ್ತೆ ನಾನು ನನ್ನ ತವರು ಮನೆಗೆ ಹೋಗಿರುತ್ತೇನೆ. ನಂತರ ನನ್ನ ಗಂಡನು ನನ್ನ
ವಿರುಧ್ದ ಕುಟುಂಬ ನ್ಯಾಯಾಲಯ ಕಲಬುರಗಿಯಲ್ಲಿ ನನ್ನ ಮೇಲೆ ಮೊಕ್ಕದಮ್ಮೆ ಹೂಡಿ ಕೆಲವು ಇಲ್ಲಸಲ್ಲದ
ಆರೋಪಗಳನ್ನು ಮಾಡಿ ನನ್ನ ಹೆಂಡತಿಯನ್ನು ನನ್ನೋಂದಿಗೆ ದಾಂಪತ್ಯ ಜೀವನ ನಡೆಸಲು ಅವಕಾಶ ಕೋಡಿ ಅಂತಾ
ನ್ಯಾಯಾಲಯದ ಮುಂದೆ ಪ್ರಾರ್ಥನೆ ಮಾಡಿರುತ್ತಾನೆ ಅದರಂತೆ ನ್ಯಾಯಾಲಯದಲ್ಲಿ ಪರ ವಿರೋಧ ವಿಷಯಗಳ ಚರ್ಚೆ
ನಡೆಸಿ ಮಾನ್ಯ ನ್ಯಾಯಧೀಶರು ನನಗೆ ನನ್ನ ಗಂಡನೊಂದಿಗೆ ಇದ್ದು ದಾಂಪತ್ಯ ಜೀವನ ನಡೆಸಲು ಆದೇಶ
ಮಾಡಿರುತ್ತಾರೆ ಅದರಂತೆ ನಾನು ದಿನಾಂಕ:13/09/2018 ರಂದು ನಾನು ನನ್ನ ಗಂಡನ ಮನೆಗೆ ಹೋಗಿರುತ್ತೇನೆ. ಆಗ ಮತ್ತೆ ನನ್ನೋಂದಿಗೆ
ನನ್ನ ಗಂಡ ಅತ್ತೆ ಮಾವ ವಾಗ್ವಾದ ಮಾಡಿ ಪಂಚರನ್ನು ಕರೆಯಿಸಿ ಗಂಡ ಬೇಕೆಂದರೆ ನಿನಗಿರುವ ಸರಕಾರಿ ನೌಕರಿಯನ್ನು ಬಿಡು ಎಂದು ಪಟ್ಟು ಹಿಡಿದಿರುತ್ತಾರೆ.
ಮತ್ತು ನಿನ್ನಷ್ಟಕ್ಕೆ ನೀನು ಇರು ನನ್ನಷ್ಟಕ್ಕೆ ನಾನು ಇರುತ್ತೇನೆ ಎಂದು ಬರೆದುಕೊಡುವಂತೆ ನನ್ನ
ಗಂಡ ಒತ್ತಾಯಿಸಿರುತ್ತಾನೆ. ಆಗ ನಾನು ನನಗೆ ಗಂಡನು ಬೇಕು ನೌಕರಿಯು ಬೇಕು ಸರಕಾರಿ ನೌಕರಿ
ಸಿಗುವುದು ದುರ್ಲಬ ಎಂದು ಹೇಳಿರುತ್ತೇನೆ. ನಾನು ಯಾವುದನ್ನು ಬರೆದುಕೊಡುವದಿಲ್ಲವೆಂದು ಹೇಳಿದಾಗ
ನನ್ನ ಗಂಡನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ನನ್ನ ಕುತ್ತಿಗೆ ಹಿಡಿದು ಮನೆಯಿಂದ ಹೊರಗೆ ದಬ್ಬಿ
ನಿನಗೆ ಕಟ್ಟಿಕೊಂಡ ತಪ್ಪಿಗೆ ಕೊಟ್ಟಿಗೆ ರೂಮನಲ್ಲಿ ಇರು ನನ್ನ ಮನೆಯಲ್ಲಿ ಬರಬೇಡ ನಿನ್ನಷ್ಟಕ್ಕೆ
ನೀನು ಇರು ನನ್ನಷ್ಟಕ್ಕೆ ನಾನು ಇರುತ್ತೇನೆ ಎಂದು ನನಗೆ ಹೊರಗೆ ಹಾಕಿ ನನಗೆ ಕೊಟ್ಟಿಗೆ ರೂಮ್
ಕೊಟ್ಟಿರುತ್ತಾನೆ ಅದರಂತೆ ನಾನು ಅಲ್ಲಿಯೇ ಉಳಿದಾಗ ನನ್ನ ಗಂಡನ ಸೋದರ ಮಾವನಾದ ಶಿವಶರಣಪ್ಪ
ರಾಜೇಶ್ವರ ಮತ್ತು ಪಂಚರು ನನಗೆ ನಿನ್ನ ಗಂಡ
ಸಿಟ್ಟಿನಿಂದ ಹೀಗೆ ಮಾಡುತ್ತಿದ್ದಾನೆ ಮುಂದೆ ಸಿಟ್ಟು ಕರಗಿ ದಾಂಪತ್ಯ ಜೀವನ ನಡೆಸಲು ಬಂದಾಗ
ಒಂದಾಗಿ ಇರಿ ದಾಂಪತ್ಯ ಜೀವನಕ್ಕೆ ನೀನು ವಿರೋಧಿಸಬೇಡ ಎಂದು ನನಗೆ ತಿಳಿ ಹೇಳಿರುತ್ತಾರೆ. ಅದರಂತೆ
ನಾನು ನನ್ನ ಎರಡು ಮಕ್ಕಳೊಂದಿಗೆ ಕೊಟ್ಟಿಗೆ ರೂಮನಲ್ಲಿ ಉಪಜೀವನ ಸಾಗಿಸುತ್ತಿದ್ದೇನೆ. ಇದಾದ
ಕೆಲವು ದಿನಗಳಲ್ಲಿ ನನ್ನ ಅತ್ತೆ ಚಿಕ್ಕಪುಟ ಮಾತುಗಳಿಗಾಗಿ ನನ್ನ ಮೇಲೆ ಜಗಳ ಮಾಡುವುದು
ರೇಗಾಡುವುದು ಮಾಡಿರುತ್ತಾರೆ ನನ್ನ ಗಂಡ ಹೊಡೆಬಡೆ ಒದೆಯುವುದು ಮಾಡಿರುತ್ತಾನೆ. ಆದರೂ ನಾನು
ಸಹಿಸಿಕೊಂಡು ಜೀವನ ಸಾಗಿಸುತ್ತೀದ್ದೇನೆ. ಮತ್ತು ನನ್ನ ಗಂಡ ರಾತ್ರಿ ಹೊತ್ತಿನಲ್ಲಿ ನನ್ನ
ಕೊಟ್ಟಿಗೆ ರೂಮನಲ್ಲಿ ಬಂದು ಬಾಗಿಲು ತಟ್ಟಿ ಎಬ್ಬಿಸಿ ಗಂಡ ಬೇಕಿದ್ದರೆ ನನ್ನೋಂದಿಗೆ ದಾಂಪತ್ಯ
ಜೀವನ ನಡೆಸಲು ಕರೆದಿರುತ್ತಾನೆ ಗಂಡನ ಮಾತಿನಂತೆ ನಾನು ನನ್ನ ಗಂಡನೊಂದಿಗೆ ದಾಂಪತ್ಯ ಜೀವನ
ನಡೆಸಿರುತ್ತೇನೆ. ನಂತರ ನಾನು ನನ್ನ ಗಂಡನಿಗೆ ಹೀಗೆಕೆ ಕದ್ದು ಮುಚ್ಚಿ ಬರುತ್ತಿ ಅಂತಾ
ಕೇಳಿದ್ದು. ನನ್ನ ತಾಯಿ ಬೈಯುತ್ತಾಳೆ ಎಂದು ಹೇಳಿರುತ್ತಾನೆ. ಹೀಗೆ ಹಲವು ಬಾರಿ ನಾನು ನನ್ನ
ಗಂಡನೊಂದಿಗೆ ಲೈಂಗಿಕ ಸುಖ ಅನುಭವಿಸಿರುತ್ತೇನೆ
ನಾನು ನನ್ನ ಗಂಡ ರಾತ್ರಿ ವೇಳೆಯಲ್ಲಿ ಮಲಗಿದಾಗ ನನ್ನ ಗಂಡ ಬೆಳಿಗ್ಗೆ ಯಾರಿಗೂ ಕಾಣದಂತೆ ಎದ್ದು
ನನಗೂ ತನಗೂ ಯಾವುದೇ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುವದನ್ನು ನೋಡಿ ನಾನು ಹೀಗೆಕೆ
ಮಾಡುತ್ತಿರಿ ಅಂದಾಗ ಸಧ್ಯ ನನ್ನ ತಂದೆ ತಾಯಿ ಸಿಟ್ಟಿನಲ್ಲಿ ಇದ್ದು ಅವರ ಸಿಟ್ಟು ಕಡಿಮೆಯಾದ ನಂತರ
ನಿನ್ನನ್ನು ಒಪ್ಪಿಕೊಳ್ಳುತ್ತಾರೆ ಅಲ್ಲಿಯ ವರೆಗೂ ಹೀಗೆ ಇರೋಣ ಅಂತಾ ಹೇಳುತ್ತಾ ಬಂದಿರುತ್ತಾನೆ. ಹೀಗೆ
ನನ್ನ ಜೀವನ ಸಾಗಿಸುತ್ತಿರಲು ನಾನು ಎಲ್ಲಿಗೆ ಹೋಗುವಾಗ ಯಾವುದೇ ವಿಷಯವಿದ್ದರೂ ನನ್ನ ಗಂಡನಿಗೆ
ಫೋನ್ ಮಾಡಿ ಅಥವಾ ಮೌಖಿಕವಾಗಿ ಮಕ್ಕಳ ಮುಖಾಂತರ ತಿಳಿಸುತ್ತ ಬಂದಿರುತ್ತೇನೆ.. ಅದೇ ರೀತಿ ನಾನು
ಸಹ ನನ್ನ ಮಾವನ ತಾಯಿ ಕಳೆದ ಮೂರು ದಿವಸಗಳಿಂದ ನನಗೆ ಊಟ ನೀಡಿಲ್ಲ ಎಂದು ನನ್ನ ಬಾಗಿಲ ಬಳಿ ಬಂದಾಗ
ಸಹಜವಾಗಿ ನಾನು ಅದನ್ನೆ ನನ್ನ ಅತ್ತೆಗೆ ವಿಚಾರಿಸಲಾಗಿ ನನ್ನ ಅತ್ತೆ ನನ್ನೊಂದಿಗೆ ರಂಪಾಟ ಮಾಡಿ
ನನ್ನ ಅತ್ತೆ ನನ್ನನ್ನು ಕುರಿತು ನೀನು ಗಂಡನ ಬಿಟ್ಟು 2 ವರ್ಷ ಎಲ್ಲಿ ಇದ್ದಿ ಏನೇನೂ ಮಾಡಿದ್ದಿ. ಬೀದರ ದವಾಖಾನೆಗೆ ಹೋಗಿ ಗರ್ಭಪಾತ
ಮಾಡಿಕೊಂಡಿದ್ದಿ ನನಗೆ ಏನು ಗೋತ್ತಿಲ್ಲ ಎಂದು ಅಂದುಕೊಂಡಿದ್ದೇನು ಅಂತಾ ನನ್ನ ನಡತೆಗೆ ದಕ್ಕೆ
ತರುವಂತೆ ಅವಾಚ್ಯ ಶಬ್ದಗಳಿಂದ ಬೈದು ಅದಕ್ಕಾಗಿಯೇ ನಿನ್ನನ್ನು ಮನೆಗೆ ಸೇರಿಸಿಕೊಂಡಿಲ್ಲ ನನ್ನ ಮಗ
ಮುಟ್ಟಿಲ್ಲ ಎಂದು ಹೇಳಿರುತ್ತಾಳೆ ದಿನಾಂಕ:05/11/2018 ರಂದು ಬೆಳಿಗ್ಗೆ 06 ಗಂಟೆಯ ಸುಮಾರಿಗೆ ನಾನು ನೀರು ತುಂಬುವ ಹಬ್ಬದಂದು ಗುಮ್ಮಿಯಿಂದ ನೀರು ತಂದು
ಬಟ್ಟೆ ಒಗೆಯುತ್ತಿರುವಾಗ ಸಿಂಟ್ಯಾಕ್ಷ್ ನೀರು ತೆಗೆದುಕೊಳ್ಳಬೇಡ ಎಂದು ನನ್ನ ಅತ್ತೆ ಅಂದಾಗ ನೀವು
ಹೀಗೆ ಹೇಳುತ್ತಿರಿ ಅಂತಾ ತಿಳಿದು ನಾನು ಗುಮ್ಮಿಯಿಂದ ನೀರು ತಂದು ಬಟ್ಟೆ ಒಗೆಯುತ್ತಿದ್ದೇನೆ
ಎಂದು ಹೇಳಿದ್ದೆ ಅಷ್ಟರಲ್ಲಿ ನನ್ನ ಗಂಡ ದಾಸಿಮಯ್ಯ ಬಂದು ಹೀನಾಮಾನವಾಗಿ ಬೈದು ನನ್ನ ಕುತ್ತಿಗೆ
ಹಿಡಿದು ನನ್ನ ಮುಖವನ್ನು ಗೋಡೆಗೆ ಬಡೆದು ನಿನು ನನ್ನ ತಾಯಿ ಜೋತೆಗೆ ಯಾಕೆ ಎದುರು ಮಾತನಾಡುತ್ತಿ
ಅವಳು ನಿನಗೆ ಏನು ಅಂದಾಳ ನನ್ನ ತಾಯಿ ವಿಷಯಕ್ಕೆ ಹೋದರೆ ನಿನಗೆ ಕೊಲ್ಲುತ್ತೇನೆ ಎಂದು ಬೈಯುತ್ತಾ
ನನ್ನ ಕುತ್ತಿಗೆ ಒತ್ತಿ ನನಗೆ ಕೊಲ್ಲಲ್ಲು ಪ್ರಯುತ್ನಿಸಿರುತ್ತಾನೆ. ಒಂದು ಕ್ಷಣ ನನಗೆ ಉಸಿರಾಟದ
ತೊಂದರೆಯಾಗಿ ಗಕ್ ಗಕ್ ಮಾಡಿದಾಗ ಬಿಟ್ಟಿರುತ್ತಾನೆ ನನ್ನ ಅತ್ತೆ ಕಣ್ಣೆದುರೆ ಇದ್ದರು ಬಿಡಿಸುವ
ಬದಲು ಸಿಕ್ಕಾಪಟ್ಟೆ ಬೈದಿರುತ್ತಾಳೆ ಏಳು ವರ್ಷದ ನನ್ನ ಮಗ ಗಾಬರಿಯಿಂದ ಬಾಗಿಲು ತೆರೆಯಲು ಹೋದರೆ
ನನ್ನ ಮಗನಿಗೆ ಬೆದರಿಸಿ ತಡೆದಿರುತ್ತಾಳೆ. ಮತ್ತು ನನಗೆ ನನ್ನ ಗಂಡ ಚಪ್ಪಲಿಯಿಂದ ಮುಖದ ಮೇಲೆ
ಹೊಡೆಬಡೆ ಮಾಡಿರುತ್ತಾನೆ ಪೊಲೀಸ್ ಸ್ಟೇಶನಗೆ ಹೋಗುತ್ತಿ ಅಂದರೆ ಹೋಗು ಪೊಲೀಸರು ನನಗೆ ಏನು
ಮಾಡಲ್ಲಾ ಎಷ್ಟು ನಿರ್ಲಜ್ಜ ಇದ್ದಿ ರಂಡಿ, ರಂಡಿ ಮಗಳೆ ಎಷ್ಟು ಬೈದರು ಇಲ್ಲಿಯೇ ಇರುತ್ತಿ ಮನೆಬಿಟ್ಟು ಹೋಗು ಎಂದು
ಗದರಿಸುತ್ತಾರೆ ನನಗೆ ಬುಗಟಿ ಬಂದು ಗಾಯವಾಗಿರುತ್ತದೆ ಕುತ್ತಿಗೆ ಸುತ್ತ ಕೆಂಪಾದ ಗಾಯವಾಗಿರುತ್ತದೆ.
ನನ್ನ ಅತ್ತೆ ನಿನ್ನ ಗಂಡಗ ನಿನಗ ಕೊಡಲ್ಲಾ, ನಿನಗೆ ಕೊಲ್ಲ ಹಾಕುತ್ತಿನಿ, ನಿನಗ ಸಾಯಿಸಿ ನಾನು ಜೈಲಿಗೆ ಹೋಗಲಿಕೆ ತಯಾರಿದ್ದಿನಿ ನಿಮ್ಮಬ್ಬರಿಗೆ
ಒಂದಾಗಿ ಬದಕಲಾಕ ಬಿಡಲ್ಲ ನೀ ಇಲ್ಲಿದ್ದರೆ ನಾವು ಟಾರ್ಚರ ಕೊಡದೇ ಗಟ್ಟಿ, ಹೋಗು ಎಲ್ಲಿಗಾದರೂ ಹೋಗು ಎಲ್ಲಾರ ಇರು ಎಂದು
ಹೇಳಿರುತ್ತಾಳೆ. ಇದೆಲ್ಲಾ ನಡೆದರೂ ನನ್ನ ಮಾವ ಮತ್ತು ಹಬ್ಬಕ್ಕೆ ಬಂದಿದ್ದ ನನ್ನ ನಾದನಿಯರಾದ
ಪ್ರೀತಿ ಮತ್ತು ಸವಿತಾ ಇವರು ಬಂದು ನೋಡಿ ಏನು ಹೇಳದೆ ಸುಮ್ಮನೆ ಹೋಗಿರುತ್ತಾರೆ. ಮತ್ತು ನನ್ನ
ಗಂಡ ನನಗೆ ಯಾವುದೇ ರೀತಿಯಿಂದ ಮುಟ್ಟಿಲ್ಲ ನಿನ್ನ ಜೊತೆ ಲೈಂಗಿಕ ಸಂಪರ್ಕ ಹೊಂದಿಲ್ಲ ಬೇಕಾದರೆ
ನನ್ನ ತಾಯಿ ಮೇಲೆ ಆಣೆ ಮಾಡುತೇನೆ ಎಂದು ಸುಳ್ಳು ಆಣೆ ಮಾಡಲು ಮುಂದಾಗಿರುತ್ತಾನೆ. ನಾನು
ಸತ್ಯವಾಗಿ ಹೇಳು ಎಂದರೆ ಸಾಕ್ಷಿ ಏನದ ಎಂದು ನನಗೆ ಪ್ರಶ್ನಿಸಿರುತ್ತಾನೆ. ಅಂಥಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಫರತಾಬಾದ ಠಾಣೆ : 12/11/18 ರಂದು ತಾಡತೆಗನೂರ ಕ್ರಾಸದಲ್ಲಿ ಆರೋಪಿತನು ತನ್ನ ವಶದಲ್ಲಿದ್ದ ಟಿಪ್ಪರ ನಂಬರ ಕೆಎ 36 ಬಿ-4727 ನೇದ್ದರಲ್ಲಿ ತನ್ನ ಮಾಲಿಕ
ಸೂಚನೆ ಮೇರೆಗೆ ಯಾವುದೇ ಪರವಾನಿಗೆ ಇಲ್ಲಿದ ಮರ ಳನ್ನು ಕಳ್ಳತನದಿಂದ ಸಾಗಿಸುತ್ತಿದ್ದಾಗ ನಾಗಬೂಷಣ
ಎಎಸ್ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ ದಾಳಿ
ಮಾಡಿ ಸುಮಾರು 6000/- ರೂಪಾಯಿಗಳು ಕಿಮ್ಮತ್ತಿನ ಮರಳು ಮತ್ತು 5 ಲಕ್ಷ ಕಿಮ್ಮತ್ತಿನ ವಾಹನವನ್ನು ವಶಕ್ಕೆ
ಪಡೆದುಕೊಂಡಿದ್ದು ಅದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ರಾವುತಪ್ಪ ತಂದೆ ಸಾಯಬಣ್ಣ ನಾಟೀಕಾರ ಸಾ|| ಕಣಮೇಶ್ವರ ಗ್ರಾಮ ತಾ|| ಜೇವರ್ಗಿ ರವರದು ತಮ್ಮೂರ ಸೀಮಾಂತರದಲ್ಲಿ
ನಮ್ಮ ತಂದೆಯ ಹೆಸರಿಗೆ ಹೊಲ ಇದ್ದು, ಅದರ ಸರ್ವೆ ನಂ 121 ನೇದ್ದರಲ್ಲಿ 7 ಎಕರೆ 23 ಗುಂಟೆ ಜಮೀನು
ಇರುತ್ತದೆ, ನಮ್ಮ ತಂದೆಯವರ ಹೆಸರಿಗೆ ಇದ್ದ ಹೊಲವನ್ನು ನಮ್ಮ ತಮ್ಮ ಶರಣಪ್ಪ
ಈತನು ನೋಡಿಕೊಳ್ಳುತ್ತಿದ್ದನು, ನಮ್ಮ ತಮ್ಮ ಹೊಲದ ಸಲುವಾಗಿ ಮಳ್ಳಿ ಕೆ.ಜಿ.ಬಿ ಬ್ಯಾಂಕನಲ್ಲಿ 1 ಲಕ್ಷ ರೂಪಾಯಿ
ಹಾಗು ಖಾಸಗಿಯಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದು ಇರುತ್ತದೆ, ನಮ್ಮ ತಮ್ಮ ಆಗಾಗ ನಮ್ಮ ಮುಂದೆ ನನಗೆ ಸಾಲ ಬಹಳಾಗಿದೆ ನಾನು ಜನರಲ್ಲಿ ತಲೆ ಎತ್ತಿ ತಿರುಗಾಡಲು
ಆಗುತ್ತಿಲ್ಲಾ ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೇ ಅಂತಾ ಅನ್ನುತ್ತಿದ್ದರು, ಈ ಬಗ್ಗೆ ನಮ್ಮ ತಮ್ಮನಿಗೆ ನಾವು ಸಮಾದಾನ ಹೇಳುತ್ತಾ ಬಂದಿರುತ್ತೇನೆ ದಿನಾಂಕ
10-11-2018 ರಂದು ಬೆಳಿಗ್ಗೆ ನಮ್ಮ ತಮ್ಮ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ
ಮನೆಯಿಂದ ಹಗ್ಗ ತೆಗೆದುಕೊಂಡು ಹೋದನು, ನಂತರ ಮದ್ಯಾಹ್ನ 1 ಗಂಟೆ ಸುಮಾರಿಗೆ ನಮ್ಮೂರ ಮಲ್ಕಪ್ಪ ನಾಟೀಕಾರ ರವರ ಹೊಲದ ಹತ್ತಿರ ಬೇವಿನ ಮರಕ್ಕೆ ನಮ್ಮ ತಮ್ಮ
ಶರಣಪ್ಪ ಈತನು ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ವಿಷಯ ಗೊತ್ತಾಗಿ ನಾನು ಮತ್ತು ನಮ್ಮ
ತಮ್ಮನ ಹೆಂಡತಿ ಮಹಾನಂದಾ ಹಾಗು ನಮ್ಮ ತಂದೆ ಸಾಯಬಣ್ಣ ಮತ್ತು ನಮ್ಮ ತಮ್ಮಂದಿರು ಕೂಡಿ ಸ್ಥಳಕ್ಕೆ ಹೋಗಿ
ನೋಡಿದಾಗ ನಮ್ಮ ತಮ್ಮನ ಶವ ಬೇವಿನ ಗಿಡಕ್ಕೆ ನೇತಾಡುತ್ತಿದ್ದನ್ನು ನೋಡಿ ನಾವು ಗುರುತಿಸಿರುತ್ತೇವೆ.
ನಮ್ಮ ತಮ್ಮ ಶರಣಪ್ಪ ಈತನು
ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು
ಇಂದು ದಿನಾಂಕ 10-11-2018 ರಂದು 11;00 ಎ.ಎಂ ದಿಂದ 1;00 ಪಿ.ಎಂ ಮದ್ಯದಲ್ಲಿ ನಮ್ಮೂರ
ಮಲ್ಕಪ್ಪ ನಾಟೀಕಾರ ರವರ ಹೊಲದ ಹತ್ತಿರ ಬೇವಿನ ಮರಕ್ಕೆ ನೂಲಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ,
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಫರತಾಬಾದ ಠಾಣೆ :
ಬಾಬು ತಂದೆ ಮರೆಪ್ಪ ಭಾಸಗಿ ಸಾಃ
ಜೊಗೂರ ಗ್ರಾಮ ರವರು ಒಕ್ಕಲುತನ ಕೆಲಸ ಮಾಡಿ ಕೊಂಡಿದ್ದು, ಜೊಗೂರ ಸೀಮಾಂತರದಲ್ಲಿ 3 ಎಕರೆ 20 ಗುಂಟೆ ಜಮೀನಿ ಇದ್ದು, ಸದರಿ ಜಮೀನಿನಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ಈಗ ಸುಮಾರು ವರ್ಷಗಳಿಂದ ಹೊಲದಲ್ಲಿ ಬೆಳೆ ಸರಿ ಯಾಗಿ
ಬಾರದೆ ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಲ್ಲಿ ಮತ್ತು ವೈಯಕ್ತಿಕ ಸಾಲ ಮಾಡಿಕೊಂಡಿದ್ದು, ಮಾಡಿದ ಸಾಲವನ್ನು & ಸಂಸಾರವನ್ನು ಹೇಗೆ ತಿರಿಸಿಬೇಕೆಂದು ಚಿಂತಿಸುತ್ತಾ
ದಿನಾಂಕ 11/11/18 ರಂದು 9.00 ಎ.ಎಮ ದಿಂದ ದಿನಾಂಕ 12/11/18 ರಂದು 6.00 ಎ.ಎಮದ ಅವಧಿಯಲ್ಲಿ ತನ್ನ
ಮನೆಯಲ್ಲಿ ಕಬ್ಬಿಣದ ಪೈಪಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಶ್ರೀ ಮರೆಪ್ಪ ತಂದೆ ನಿಂಗಪ್ಪ
ಭಾಸಗಿ ಸಾಃ ಜೋಗೂರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.