Police Bhavan Kalaburagi

Police Bhavan Kalaburagi

Sunday, September 13, 2020

BIDAR DISTRICT DAILY CRIME UPDATE 13-09-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 13-09-2020


ಜನವಾಡ ಪೊಲೀಸ್ ಠಾಣೆ  ಗುನ್ನೆ ನಂ. 59/2020  ಕಲಂ 279, 337, 338, 304 ()  ಐಪಿಸಿ ಜೋತೆ 187 ಎಮ್ ವಿ ಆಕ್ಟ್  :-

 

ದಿನಾಂಕ 12/09/2020 ರಂದು ಮುಂಜಾನೆ 0945 ಗಂಟೆಯ ಸುಮಾರಿಗೆ ಫಿರ್ಯಾದಿ ಗಾಯಳು  ಬಾಬು ತಂದೆ ನರಸಪ್ಪಾ ಸರಕುರ  ರವರು ನೀಡಿದರ ದೂರಿನ ಸಾರಾಂಶವೆನಂದರೆ ಫಿರ್ಯಾದಿ ಮತ್ತು ಗ್ರಾಮದ ಮಂಜೂನಾಥ ತಂದೆ ಲಕ್ಷ್ಮಣ ಭಾಲ್ಕೆಕರ ಹಾಗು ಸುಭಾಷ ತಂದೆ ಸಾಮುವೇಲ್ ಮೇತ್ರೆ ರವರು ಚಲಕಾಪೂರ ಗ್ರಾಮಕ್ಕೆ ಮನೆ ಕಟ್ಟಲು ಸುಭಾಷ ಮೇತ್ರೆ ರವರ ಹಿರೋ ಹೊಂಡಾ ಸ್ಪೆಲಂಡ್ ಮೋಟಾರ್ ಸೈಕಲ್ ನಂ ಕೆಎ-17/ಕ್ಯೂ-1024 ನೇದರ ಮೇಲೆ ಸಿಕಂದ್ರಾಪೂರ ದಿಂದ ಅಣದೂರ ಮಾರ್ಗವಾಗಿ ಚಳಕಾಪೂರ ಗ್ರಾಮಕ್ಕೆ ಹೊಗುತ್ತಿರುವಾಗ ಸುಭಾಷ ಮೇತ್ರೆ ರವರು ಮೋಟಾರ್ ಸೈಕಲ್ ಚಲಾಯಿಸುತ್ತಿದ್ದು, ಸಿಕಂದ್ರಾಪೂರಅಣದೂರ ರೋಡಿನ ಅಣದೂರ ಕೆರೆಯ ಹತ್ತಿರ ಬಂದಾಗ  ಎದುರುಗಡೆಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿ ಅತಿವೇಗ ಹಾಗು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮುಂಜಾನೆ 10:00 ಗಂಟೆಯ ಸುಮಾರಿಗೆ   ಮೋಟಾರ ಸೈಕಲಕ್ಕೆ ಎದುರುಗಡೆಯಿಂದ ಡಿಕ್ಕಿಪಡಿಸಿದ್ದರಿಂದ  ಎಡಕಾಲಿನ ಮೊಳಕಾಲು  ಮೇಲೆ ರಕ್ತಗಾಯ, ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಮಂಜೂನಾಥ ಭಾಲ್ಕೆಕರ ರವರಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಎಡಕಾಲಿನ ಮೊಣಕಾಲು ಮೇಳೆ ಮತ್ತು ತಲೆಯ ಹಿಂದನ ಭಾಗದಲ್ಲಿ ರಕ್ತಗಾಯವಾಗಿ ಮಾತನಾಡಲಾರದ ಸ್ಥಿತಿಯಲ್ಲಿ ಇದ್ದು ಸುಭಾಷ ಮೇತ್ರೆ ರವರಿಗೆ ನೋಡಲು ಅವರ ಹಣೆಯ ಬಲಭಾಗದಲ್ಲಿ ಎಡಕಣ್ಣಿನ ಕೆಳಗಡೆ ರಕ್ತಗಾಯ ಪಡಿಸಿದ್ದು  ಡಿಕ್ಕಿ ಪಡಿಸಿದ ಲಾರಿ ನಂ ನೋಡಲು ಎಮ್ ಹೆಚ್ -26/ಹೆಚ್ – 6050 ನೇದ್ದಾಗಿದ್ದು ಅಷ್ಟರಲ್ಲಿ ಲಾರಿ ಚಾಲಕ ತನ್ನ ಲಾರಿ ಸ್ಥಳದಲ್ಲಿ ಬಿಟ್ಟು ಓಡಿ  ಗಾಯಗೊಂಡ ಫಿರ್ಯಾದಿಗೆ ಮತ್ತು ಮಂಜುನಾಥ ಹಾಗು ಸುಭಾಷ ರವರಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಓಂಕಾರ ಮತ್ತು ವಿಶಾಲ ಕುಮಾರ ರವರು ಬೀದರದ ಗುರುನಾನಕ ಆಸ್ಪತ್ರೆಗೆ ತಂದು ಫಿರ್ಯಾದಿ ಮತ್ತು ಮಂಜುನಾಥ ರವರಿಗೆ ಶೇರಕ್ ಮಾಡಿದ್ದು ಸುಭಾಷ ಮೇತ್ರೆ ರವರಿಗೆ ವೈಧ್ಯರು ನೋಡಿ ಅವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು.  ಸದರಿ ಘಟನೆ ಲಾರಿ ನಂ ಎಮ್ ಹೆಚ್ -26/ಹೆಚ್ – 6050 ನೇದರ ಚಾಲಕ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದಲೆ ಸದರಿ ಘಟನೆ ಜರುಗಿದ್ದು ಲಾರಿ ಹಾಗು ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 32, 34 ಕೆ.ಇ. ಕಾಯ್ದೆ :-

 

ದಿನಾಂಕ:12-9-2020 ರಂದು ದೀನದಯಾಳ ನಗರ ಹತ್ತಿರ ಒಬ್ಬ ವ್ಯಕ್ತಿ ಯಾವುದೇ ಲೈಸನ್ಸ ಇಲ್ಲದೇ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ  ದೀನದಯಾಳ ನಗರ ಹತ್ತಿರ ಹೋಗಿ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ನೇತ್ರತ್ವದಲ್ಲಿ ಆರೋಪಿತನಾದ ವಿಲಾಸ ತಂದೆ ಅಬ್ದುಲ ರೆಹೆಮಾನ ಕಾಳೆ ವಯ:55 ವರ್ಷ ಜಾ;ಮಾಂಗರವಾಡಿ ಸಾ;ದೀನದಯಾಳ ನಗರ ಬೀದರ ಈತನನ್ನು ದಸ್ತಗಿರಿ ಮಾಡಿ ಸದರಿಯವನ ಹತ್ತಿರ ಇದ್ದ ಓರಿಜಿನಲ್ ಚಾಯ್ಸ ವಿಸ್ಕಿ ಟೆಟ್ರಾ ಪ್ಯಾಕ 90 ಎಮ,ಎಲ್ ಒಟ್ಟು 37 ಒಂದಕ್ಕೆ 35/-ರೂ ಒಟ್ಟು 1295/-ರೂ ಬೆಲೆಬಾಳುವ ಸರಾಯಿಯನ್ನು ಜಪ್ತಿ ಮಾಡಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 192/2020 ಕಲಂ 379 ಐಪಿಸಿ :-

ದಿನಾಂಕ 12/09/2020 ರಂದು 17:00 ಗಂಟೆಗೆ  ಫಿರ್ಯಾದಿ ಜೈರಾಜ ತಂದೆ ಷಣ್ಮುಖಪ್ಪಾ ಖಂಡ್ರೆ ವಯ: 50 ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಹಿರೆಮಠ ಗಲ್ಲಿ ಹಳೆ ಭಾಲ್ಕಿ.ರವರು ಠಾಣೆಗೆ ಹಾಜರಾಗಿ ಮೌಖಿತ ದೂರು ನೀಡಿದರ ಸಾರಾಂಶವೆನೆಂದರೆ ಭಾಲ್ಕಿ ಶಿವಾರ ಹೊಲ ಸರ್ವೆ ನಂ 72 ನೇದರಲ್ಲಿ ನನ್ನ ಅಣ್ಣ ಸುರೇಶ ತಂದೆ ಷಣ್ಮುಖಪ್ಪಾ ಖಂಡ್ರೆ ರವರ ಹೆಸರಿನಲ್ಲಿ ಒಟ್ಟು 11 ಎಕರೆ 15 ಗುಂಟೆ ಜಮೀನು ಇದ್ದು ಸದರಿ ಭೂಮಿಯ ವ್ಯವಹಾರ ಫಿರ್ಯಾದಿ ನೋಡಿಕೊಳ್ಳುತ್ತಿದ್ದು ಸದರಿ ಜಮೀನು ನಿಡೆಬಾನ ಗ್ರಾಮದ ಲಕ್ಷ್ಮಣ ತಂದೆ ನಾಗುರಾವ ರವರಿಗೆ 3 ವರ್ಷಗಳಿಂದ ಪಾಲದಿಂದ ಕೊಟ್ಟಿದ್ದು ಇರುತ್ತದೆ. ಅಲ್ಲದೆ ಸದರಿ ಜಮೀನಿನಲ್ಲಿ ಹೊಲದ ಬಂದಾರೆಗಳಿಗೆ ಸಾಗವಾನಿ, ಶ್ರೀಗಂಧದ ಮರಗಳು ನೆಡಿಸಿದ್ದು ಇರುತ್ತವೆ. ಹಿಗಿರಲು  ದಿನಾಂಕ 11/09/2020 ರಂದು  ಮಧ್ಯಾಹ್ನ 2 ಗಂಟೆಗೆ   ಹೊಲಕ್ಕೆ ಹೊದಾಗ ಎಲ್ಲಾ ಕಡೆಗೆ ಓಡಾಡಿ ನೊಡಿದ್ದು   ಹೊಲಗಳ ಬಂದಾರೆಗಳ ಮೇಲಿರುವ ಸಾಗವಾನಿ, ಶ್ರಿಗಂಧದ ಮರಗಳು ಸುರಕ್ಷಿತವಾಗಿ ಇದ್ದವು ಆದರೆ  ದಿನಾಂಕ 12/09/2020 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ   ಹೊಲಕ್ಕೆ ಹೊಗಿ ಸುತ್ತಾಡಿ ನೊಡಲು  ಹೊಲಗಳ ಬಂದಾರೆ ಮೇಲಿರುವ ಎರಡು ಶ್ರೀಗಂಧದ ಮರಗಳು ಕಡಿದಿದ್ದು ಇರುವುದರಿಂದ ನಮ್ಮ ಹೊಲದ ಪಕ್ಕದಲ್ಲಿರುವ ಆರೋಗ್ಯ ಮಾತಾ ಸೇವಾ ಕೇಂದ್ರ ಆಸ್ಪತ್ರೆಯಲ್ಲಿ ಹೊಗಿ ವಿಚಾರಿಸಲು ಆಸ್ಪತ್ರೆಯವರು ಕೂಡಾ ನಮ್ಮ ಕಂಪೌಂಡನಲ್ಲಿರುವ ಒಂದು ಶ್ರೀಗಂಧದ ಮರ ಕಡಿದು ಕೊಂಡು ಹೊಗಿದ್ದು ಇನೋಂದು ಮರ ಕಡಿಯಲು ಪ್ರಯತ್ನಿಸಿದ್ದು ಇರುತ್ತದೆ. ಅಂತ ತಿಳಿಸಿರುತ್ತಾರೆ.   ದಿನಾಂಕ 11/09/2020 ರಂದು ಮಧ್ಯಾಹ್ನ 2 ಗಂಟೆಯಿಂದ   ದಿನಾಂಕ 12/09/2020 ರಂದು ಮಧ್ಯಾಹ್ನ 3 ಗಂಟೆಯ ಅವಧಿಯಲ್ಲಿ ಯಾರೊ ಅಪರಿಚಿತರು  ಶ್ರೀಗಂಧದ  ಒಟ್ಟು ಮೂರು ಮರಗಳು ಅಂದಾಜು ಕಿಮ್ಮತ್ತು 21,000 ರೂ ದಷ್ಟು ಕಡಿದು ಕಳವು ಮಾಡಿಕೊಂಡು ಹೊಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

 

 ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 122/2020 ಕಲಂ 279, 304(ಎ) ಐಪಿಸಿ :-

 

ದಿನಾಂಕ 12/09/2020 ರಂದು ಮಧ್ಯಾನ ಗಾಯಳು ಶ್ರೀ. ಪ್ರಶಾಂತ ತಂದೆ ಎಕನಾಥರಾವ ಕಾಂಬಳೆ ಸಾ: ಥಾಮಗ್ಯಾಳ ರವರು ಹಾಗೂ ಅವರ ಅಜ್ಜಿ ಶೇಷಾಬಾಯಿ ಗಂಡ ಮಾರುತಿ ವಯ 70 ವರ್ಷ ಗ್ರಾಮ ಥಾಮಗ್ಯಾಳ ಇವರು ಮೋಟಾರ ಸೈಕಲ್ ನಂ. ಕೆಎ-39/ಕ್ಯೂ-9734 ನೇದರ ಮೇಲೆ ಕುಳಿತುಕೊಂಡು ಭಾಲ್ಕಿದಿಂದ ಥಾಮಗ್ಯಾಳ ಗ್ರಾಮಕ್ಕೆ ಹೋಗುವಾಗ ಭಾಲ್ಕಿ -ಭಾತಂಬ್ರಾ  ರೋಡಿನ ಮೇಲೆ ಸಿದ್ದಾಪೂರವಾಡಿ ಕ್ರಾಸ್ ಧಾಟಿ ಸ್ವಲ್ಪ ದೂರದಲ್ಲಿರುವ ಬ್ರಿಜ ಹತ್ತಿರ ಮಧ್ಯಾನ 1500 ಗಂಟೆ ಸುಮಾರಿಗೆ ಹಿಂದಿನಿಂದ ಅಂದರೆ ಭಾಲ್ಕಿ ಕಡೆಯಿಂದ ಮೋಟಾರ ಸೈಕಲ್ ಸಂ. ಕೆಎ-39/ಎಲ್-9352 ನೇದರ ಮೇಲೆ ಒಬ್ಬ ವ್ಯಕ್ತಿ ತನ್ನ ಮೋಟಾರ ಸೈಕಲ್ ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಮಾಡಿದ್ದರಿಂದ  ಹಿಂದೆ ಕುಳಿತಿದ್ದ ಫಿರ್ಯಾದಿಯ ಅಜ್ಜಿ ಶೇಷಾಬಾಯಿ ರವರು ಮೋಟಾರ ಸೈಕಲ ಸಮೇತ ರೋಡಿನ ಮೇಲೆ ಬಿದ್ದಿದ್ದರಿಂದ ಮತ್ತು ಡಿಕ್ಕಿ ಮಾಡಿದ ಮೋಟಾರ ಸೈಕಲ್ ವ್ಯಕ್ತಿ ಸಹ ವರ ಮೋಟಾರ ಸೈಕಲ್ ಸಮೇತ ಬಿದಿದ್ದನು. ಈ ಅಪಘಾತದಿಂದ ನನಗೆ ಬಲಗೈ ಮೊಳಕೈ ಹತ್ತಿರ ರಕ್ತಗಾಯ, ಬಲಗಾಲ ಪಾದದ ಮೇಲೆ ರಕ್ತಗಾಯ ಆಗಿರುತ್ತವೆ. ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತಿದ್ದ ಶೇಷಾಬಾಯಿ ಇವರಿಗೆ ಬಲಗೈ ಮೋಳಕೈ ಹತ್ತಿರ ರಕ್ತಗಾಯ, ಹೊಟ್ಟೆಯ ಮೇಲೆ ಭಾರಿ ರಕ್ತಗಾಯ, ಬಲಗಾಲ ಮೋಳಕಾಲಿನ ಮೇಲೆ ತರಚಿದ ರಕ್ತಗಾಯ, ಮತ್ತು ಇತರೆ ಕಡೆ ಗಾಯವಾಗಿರುತ್ತವೆ. ಚಿಕತ್ಸೆ ಕುರಿತು  ಭಾಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಕಾಲಕ್ಕೆ ಶೇಷಾಬಾಯಿ ಇವರು  ಚಿಕಿತ್ಸೆ ಫಲಕಾರಿಯಾಗದೆ ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ 1700 ಗಂಟೆಗೆ ಮ್ರತಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.