Police Bhavan Kalaburagi

Police Bhavan Kalaburagi

Monday, January 13, 2020

BIDAR DISTRICT DAILY CRIME UPDATE 13-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-01-2020

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 08/2020, ಕಲಂ. 366() ಐಪಿಸಿ :-
ದಿನಾಂಕ 09-01-2020 ರಂದು ಪಿüರ್ಯಾದಿ ಸಂಜುಕುಮಾರ ತಂದೆ ವಿಠ್ಠಲ ಶಿವನಾಯಕ ಸಾ: ಸಿಂದಬಂದಗಿ ರವರು ತನ್ನ ಹೆಂಡತಿಯ ಜೊತೆಯಲ್ಲಿ ಕೆಲಸಕ್ಕೆಂದು ನೆಯಿಂದ ಹೋರಗೆ ಹೋದಾ ಪಿüರ್ಯಾದಿಯವರ ಮಗಳಾದ ಮಿತಾ ಇವಳು ತಮ್ಮ ನೆಯ ತ್ತಿರ ಸಂಡಾಸಕ್ಕೆಂದು ಹೋದಾಗ ಅವಳಿಗೆ ಆರೋಪಿ ಶ್ಯಾಮವೆಲ್ ತಂದೆ ಚಂದ್ರಕಾಂತ ಹಲಗೆ : 20 ರ್ಷ, ಜಾತಿ: ಎಸ್.ಸಿ ಮಾದಿಗ ಸಾ: ಸಿಂದಬಂದಗಿ ಇತನು ಯಾವುದೋ ಉದ್ದೇಶದಿಂದ ಕಿಡ್ನಾಪ ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-01-2020 ರಂದು ಪ್ರ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 08/2020, ಕಲಂ. 392 ಐಪಿಸಿ :-
ದಿನಾಂಕ 12-01-2020 ರಂದು ಇಮಲಾಬಾಯಿ ಗಂಡ ಕಿಶನರಾವ ಎಂಕಾಜಿ ಪಾಟೀಲ ವಯ: 62 ವರ್ಷ, ಜಾತಿ: ಮರಾಠಾ, ಸಾ: ನೆಲವಾಡ (ಎಮ) ರವರು ತಮ್ಮ ಮನೆಯ ದನಗಳನ್ನು ಹೊಡೆದುಕೊಂಡು ತಮ್ಮ ಹೊಲಕ್ಕೆ ಹೊಗಿ ಹೊಲದಲ್ಲಿ ಮೇಯಿಸುತ್ತಾ ತಾನು ಹೊಲದಲ್ಲಿದ್ದ ಮಹಾದೇವ ಮಂದಿರದ ಮುಂದೆ ಕಟ್ಟೆಯ ಮೇಲೆ ಕುಳಿತುಕೊಂಡಾಗ ಅಂದಾಜು 1330 ಗಂಟೆಯಿಂದ 1400 ಗಂಟೆಯ ಅವಧಿಯಲ್ಲಿ ಅಂದಾಜು 40 ವರ್ಷ ವಯಸ್ಸಿನ ವ್ಯಕ್ತಿಯು ಬಂದು ಮಾಹಾದೇವಗೆ ನಮಸ್ಕಾರ ಮಾಡಿದಂತೆ ಮಾಡಿ ಒಮ್ಮೇಲೆ ಫಿರ್ಯಾದಿಯವರ ಕೊರಳಲ್ಲಿ ಕೈಹಾಕಿ ಕೊರಳ್ಳಿದ್ದ ಅಂದಾಜು 13 ಗ್ರಾಂ. ಬಂಗಾರದ ಬೋರಮಾಳ ಸರ ಅ.ಕಿ 40,000/- ನೇದನ್ನು ಕಿತ್ತುಕೊಂಡು ಅಪರಿಚಿತ ವ್ಯಕ್ತಿಯು ಅಲ್ಲೆ ರೋಡಿನ ಮೇಲೆ ನಿಲ್ಲಿಸಿದ ಮೋಟಾರ ಸೈಕಲ ಮೇಲೆ ಚಳಕಾಪೂರ ಕಡೆಗೆ ಹೊಗಿದ್ದು ಅವನ ಹಿಂದೆ ಮತ್ತೊಬ್ಬ ವ್ಯಕ್ತಿಯು ಸಹ ಇದ್ದನು ಅಂತ ನೀಡಿದ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 06/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 12-01-2020 ರಂದು ಫಿರ್ಯಾದಿ ರೇವಣಪ್ಪಾ ತಂದೆ ಶರಣಪ್ಪಾ ಮೈಲಾರೆ ವಯ: 28 ವರ್ಷ, ಜಾತಿ: ಕುರುಬ, ಸಾ: ಮಾವಿನಹಳ್ಳಿ ರವರು ತನ್ನ ಸೋದರ ಅಳಿಯ ಜ್ಞಾನೇಶ್ವರ ತಂದೆ ನವನಾಥ ಹಾಸಗೊಂಡೆ ವಯ: 19 ವರ್ಷ, ಜಾತಿ: ಕುರುಬ, ಸಾ: ರಾಜನಾಳ, ತಾ: ಬೀದರ ಇಬ್ಬರೂ ಕೂಡಿ ತನ್ನ ಮೋಟಾರ ಸೈಕಲ್ ನಂ. ಕೆಎ-39/ಕೆ-9740 ನೇದ್ದರ ಮೇಲೆ ಹೊಲಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ಅಪ್ಪಾರಾವ ಇವರ ಹೊಲದ ಹತ್ತಿರ ರಸ್ತೆಯ ಪಕ್ಕಕ್ಕೆ ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ ಮರಳಿ ಮೋಟಾರ ಸೈಕಲ್ ಹತ್ತಿರ ಬರುತ್ತಿರುವಾಗ ಮಾವಿನಹಳ್ಳಿ ಕಡೆಯಿಂದ ಆಟೋ ನಂ. ಕೆಎ-39/7739 ನೇದರ ಚಾಲಕನಾದ ಆರೋಪಿಯು ತನ್ನ ಆಟೋ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಡಿಕ್ಕಿ ಮಾಡಿ ಆಟೋ ಸ್ತಳದಲ್ಲಿ ನಿಲ್ಲಿಸಿ  ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಜ್ಞಾನೇಶ್ವರ ಇತನ ಬಲಗಣ್ಣಿನ ಮೇಲೆ ಹಣೆಗೆ ಭಾರಿ ರಕ್ತಗಾಯ, ಎಡ ಮತ್ತು ಬಲ ಭುಜಗಳಿಗೆ ಭಾರಿ ಗುಪ್ತಗಾಯ, ಬಲಗಾಲ ತೊಡೆಯ ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿರುತ್ತದೆ, ನಂತರ ಫಿರ್ಯಾದಿಯು ಜ್ಞಾನೇಶ್ವರ ಇತನಿಗೆ ಜೀಪಿನಲ್ಲಿ ಹಾಕಿಕೊಂಡು ಭಾಲ್ಕಿ ಸರಕಾರಿ ಆಸ್ಪತ್ರಗೆ ತರುವಾಗ ದಾರಿ ಮದ್ಯದಲ್ಲಿ ಗಾಯಗೊಂಡ ಜ್ಞಾನೇಶ್ವರ ಇವನು ಮರಣ ಹೊಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.