Police Bhavan Kalaburagi

Police Bhavan Kalaburagi

Thursday, June 25, 2020

BIDAR DISTRICT DAILY CRIME UPDATE 25-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-06-2020

ಮಹಿಳಾ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 25/2020, ಕಲಂ. 498(), 323, 504, 506 ಜೊತೆ 149 ಐಪಿಸಿ :-
ದಿನಾಂಕ 24-06-2020 ರಂದು ಫಿರ್ಯಾದಿ ಪ್ರೀಯಾ ಗಂಡ ವೆಂಕಟೇಶ ಘೆವರೆ ವಯ: 21 ವರ್ಷ, ಜಾತಿ: ಲಿಂಗಾಯತ, ಸಾ: ನೆಮತಾಬಾದ, ಸದ್ಯ: ಅಲ್ಲಂ ಪ್ರಭು ನಗರ, ಬೀದರ ರವರ ಮದುವೆಯು ನೆಮತಾಬಾದ ಗ್ರಾಮದ ರಾಜಕುಮಾರ ಘೆವರೆ ರವರ ಮಗನಾದ ವೆಂಕಟೇಶ ರವರ ಜೊತೆಯಲ್ಲಿ ದಿನಾಂಕ 11-02-2019 ರಂದು ಗುಂಪಾದ ಪೂಜಾ ಫಂಕ್ಷನ ಹಾಲದಲ್ಲಿ ಆಗಿರುತ್ತದೆ, ಮದುವೆಯಾದ ನಂತರ ಬೀದರದಲ್ಲಿ ಮನೆ ಮಾಡಿ ವಾಸವಾಗಿದ್ದು, ಸಮಯದಲ್ಲಿ ಅತ್ತೆಯಾದ ಶಾಂತಮ್ಮಾ, ಮಾವನಾದ ರಾಜಕುಮಾರ, ಮೈದುನನಾದ ಜಗನ್ನಾಥ ರವರು ಸಹ ಮೇಲಿಂದ ಮೇಲೆ ಬೀದರಗೆ ಬಂದು ಗಂಡನಿಗೆ ನೀನು ಅವಳಿಗೆ ಇಲ್ಲಿ ಮನೆ ಮಾಡಿ ಇಟ್ಟಿರುವೆ ಅವಳಿಗೆ ಮನೆಯಿಂದ ಹೊರಗೆ ಹಾಕು ಅವಳ ಗುಣನಡತೆ ಸರಿಯಾಗಿಲ್ಲ ಅಂತ ಕಿವಿ ತುಂಬುತ್ತಿದ್ದರು, ಆಗ ಗಂಡ ಅವರ ಮಾತು ಕೇಳಿ ಫಿರ್ಯಾದಿಗೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ನಾದಣಿಯಾದ ಗೀತಾ ಇವಳು ಸಹ ನನಗೆ ನೀನು ದರೀದ್ರ ಇದ್ದಿ ನನ್ನ ತಮ್ಮನಿಗೆ ಬೇಕಾದವರು ಹೆಣ್ಣು ಕೊಡುತ್ತಿದ್ದರು ನೀನು ಎಲ್ಲಿಂದ ಗಂಟು ಬಿದ್ದಿದಿ, ನೀನು ಸಂಸಾರ ಮಾಡಲು ಬಂದಿಲ್ಲ ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡಿ ತೊಂದರೆ ಕೊಟ್ಟಿರುತ್ತಾಳೆ, ನಂತರ ಗಂಡ ಬೀದರನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಫಿರ್ಯಾದಿಗೆ ತವರು ಮನೆಯಲ್ಲಿ ತಂದು ಬಿಟ್ಟು, ನಾನು ಸಹ ನಿಮ್ಮ ಮನೆಯಲ್ಲಿ ಇರುತ್ತೇನೆ ಅಂತ ಹೇಳಿ ಅಲ್ಲಂ ಪ್ರಭು ನಗರದ ತವರು ಮನೆಯಲ್ಲಿ ವಾಸವಾಗಿರುತ್ತಾನೆ, ಇಲ್ಲಿಯು ಸಹ ದಿನಾಲು ಫಿರ್ಯಾದಿಯ ಮೇಲೆ ಸಂಶಯ ಪಟ್ಟು, ನೀನು ಆವಾರಾ ಇದ್ದಿ, ನೀನು ಒಂದು ವೆಳೆ ಗರ್ಭವತಿ ಆದರೆ ನಿನಗೆ ಡಿ.ಎನ್. ಟೆಸ್ಟ್ಮಾಡಿಸುತ್ತೇನೆ ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಕೈಯಿಂದ ಕಪಾಳದ ಮೇಲೆ, ಎದೆಯ ಮೇಲೆ ಹೊಡೆದು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಫಿರ್ಯಾದಿಗೆ ಕಿರುಕುಳ ಕೊಡುವದನ್ನು ಮನೆಯಲ್ಲಿದ್ದ ತಾಯಿ, ತಂದೆ, ಸೋದರಮಾವ ಮತ್ತು ಅವರ ಹೆಂಡತಿಯಾದ ಸುಜಾತಾ ರವರಿಗೆ ತಿಳಿಸಿದಾಗ ಅವರು ಸಹ ಫಿರ್ಯಾದಿಯ ಗಂಡ ಹಾಗು ಅತ್ತೆ, ಮಾವ, ಮೈದುನ ಮತ್ತು ನಾದಣಿ ರವರಿಗೆ ಬುದ್ದಿವಾದ ಹೇಳಲು ಹೋದಾಗ, ಗಂಡ ಫಿರ್ಯಾದಿಯ ತಂದೆ ಅವಾಚ್ಯವಾಗಿ ಬೈದು ತಾಯಿಗೂ ಸಹ ನೀನು ಆವಾರ ಇದ್ದಿ, ನಿನ್ನ ಮಗಳಿಗೂ ಆವಾರಾ ಗುಣ ಕಲಿಸಿದಿ ಅಂತ ಬೈದು ಅವರ ಮಾತು ಕೇಳದೆ ಫಿರ್ಯಾದಿಗೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಟ್ಟು ಗಂಡ ನೆಮತಾಬಾದಕ್ಕೆ ಹೋಗಿರುತ್ತಾನೆ, ಹೀಗಿರುವಾಗ ದಿನಾಂಕ 02-06-2020 ರಂದು ಆರೋಪಿತರಾದ ಗಂಡ, ಅತ್ತೆ, ಮಾವ, ಮೈದುನ ರವರು ಫಿರ್ಯಾದಿಯ ತವರು ಮನೆಗೆ ಬಂದು ನೀನು ನಮ್ಮ ಮೇಲೆ ಪೊಲೀಸ ಕೇಸು ಮಾಡಿದರೆ ನೋಡು ನಿನಗೆ ಜೀವ ಸಮೇತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ತಲೆಯ ಕೂದಲು ಹಿಡಿದು ಕಪಾಳದ ಮೇಲೆ, ಬೆನ್ನಿನ ಮೇಲೆ ಹೊಡೆದಿರುತ್ತಾರೆ, ಅಷ್ಟರಲ್ಲಿ ಮನೆಯಲ್ಲಿದ್ದ ತಂದೆ, ತಾಯಿ ಮತ್ತು ಪಕ್ಕದ ಮನೆಯ ರಾಜಕುಮಾರ ಬಾವಗೆ, ಸಂತೋಷ ಹಣೆಗಾಂವ ರವರು ಬಂದು ಜಗಳವನ್ನು ಕಣ್ಣಾರೆ ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 47/2020, ಕಲಂ. 279, 338 ಐಪಿಸಿ :-
ದಿನಾಂಕ 24-06-2020 ರಂದು ಫಿರ್ಯಾದಿ ಮಾರುತಿ ತಂದೆ ಈರಪ್ಪಾ ಬಲಮೂರ, ವಯ: 35 ವರ್ಷ, ಜಾತಿ: ಕಬ್ಬಲಿಗ, ಸಾ: ಸಾಲೆ ಬಿರನಳ್ಳಿ, ತಾ: ಚಿಂಚೋಳಿ ರವರು ತಮ್ಮೂರ ವಾಸುದೇವ ಇಬ್ಬರು ಕೂಡಿ ಲಾರಿ ಮೇಲೆ ಹಮಾಲಿ ಕೆಲಸ ಕುರಿತು ಬೀದರಗೆ ಬಂದಿದ್ದು, ಬೀದರ ಗಾಂಧಿಗಂಜ ಹತ್ತಿರ ರೈಲ್ವೆ ಸ್ಟೆಷನದಲ್ಲಿ ಲಾರಿ ನಂ. ಎಮ್.ಹೆಚ್-44/6032 ನೇದ್ದರಲ್ಲಿ ರೈಲ್ವೆ ಸ್ಟೆಷನದಿಂದ ರೇಶನ ಅಕ್ಕಿ ತುಂಬಿಕೊಂಡು ಮೈಲೂರದಲ್ಲಿ ಖಾಲಿ ಮಾಡಲು ಹೋಗುತ್ತಿರುವಾಗ ಲಾರಿಯ ಒಳಗೆ ಕುಳಿತುಕೊಳ್ಳಲು ಲಾರಿ ಎರುತ್ತಿರುವಾಗ ಲಾರಿ ಚಾಲಕ ಮಹ್ಮದ ಸುಲ್ತಾನ ತಂದೆ ಹನ್ನುಸಾಬ ಸಾ: ಕನ್ನಳ್ಳಿ ಈತನು ಒಮ್ಮೆಲೆ ನಿಸ್ಕಾಳಜಿತನದಿಂದ ಲಾರಿ ಚಲಾಯಿಸಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದ ಪರಿಣಾಮ ಲಾರಿಯ ಮುಂದಿನ ಚಕ್ರ ಫಿರ್ಯಾದಿಯ ಎಡಗಾಲ ಮೊಳಕಾಲ ಕೆಳಗೆ ಪಾದದ ಮೇಲ್ಗಡೆ ಹಾದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ, ಆಗ ತಮ್ಮೂರ ವಾಸುದೇವ ತಂದೆ ದೇವಿಂದ್ರಪ್ಪಾ ಬುರಬುರೆ ಮತ್ತು ಆರೋಪಿ ಮಹ್ಮದ ಸುಲ್ತಾನ ತಂದೆ ಹನ್ನುಸಾಬ ಇಬ್ಬರು ಕೂಡಿ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುರುನಾನಕ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 102/2020, ಕಲಂ. 392 ಐಪಿಸಿ :-
ದಿನಾಂಕ 24-06-2020 ರಂದು ಬೀದರ ತಾಲೂಕಿನ ಸಾಂಗವಿ ಗ್ರಾಮದಲ್ಲಿ ಫಿರ್ಯಾದಿ ಭಾಗ್ಯಶ್ರೀ ಗಂಡ ಬಸ್ವರಾಜ ಕೊಡಂಬಲೆ ಸಾ: ವಡ್ಡನಕೇರಾ ರವರ ಗಂಡನ ಸೊದರ ಸೊಸೆಯ ಸಿಮಂತ ಕಾರ್ಯಕ್ರಮಕ್ಕೆ ಹೋಗಲು ಫಿರ್ಯಾದಿಯು ತನ್ನ ಗಂಡ ಬಸ್ವರಾಜ, ಮಗ ಸಂದೀಪ ರಡ್ಡಿ 12 ವರ್ಷ ಮೂವರು ವಡ್ಡನಕೇರಾ ಗ್ರಾಮದಿಂದ ಮೋಟಾರ ಸೈಕಲ ಮೇಲೆ ಹೊರಟು ಮಳಚಾಪೂರ ಗ್ರಾಮದ ಕಡೆಯಿಂದ ಖಾನಾಪೂರ ಮಾರ್ಗವಾಗಿ ಸಾಂಗವಿ ಗ್ರಾಮಕ್ಕೆ ಹೋಗುವಾಗ ದಾರಿಯಲ್ಲಿ ಮೈಲಾರ ಮಲ್ಲಣ್ಣಾ ದರ್ಶನ ಪಡೆಯುವ ಕುರಿತು ದೇವಸ್ಥಾನದಲ್ಲಿ ಹೊಗಿ ದೇವರ ದರ್ಶನ ಪಡೆದುಕೊಂಡು ಹೊರಗೆ ಬಂದು ಚಪ್ಪಲಿಗಳು ಹಾಕಿಕೊಳ್ಳುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಒಂದು ಪಲ್ಸರ ಮೋಟಾರ ಸೈಕಲ ಮೇಲೆ ಬಂದು ಫಿರ್ಯಾದಿಯವರ ಕೊರಳಲ್ಲಿ ಕೈ ಹಾಕಿ ಕೊರಳಲ್ಲಿದ್ದ ಎರಡು ವರೆ ತೊಲೆಯ ಬಂಗಾರದ ಚೈನ ಸರಾ ಹಾಗು ಒಂದು ತೊಲೆ ಬಂಗಾರದಲ್ಲಿ ಮಾಡಿದ 100 ಗುಂಡಾ ಮತ್ತು ಒಂದು ಹಗಲ ಕಾಯಿ ಹಾಗು ಎರಡು ತಾಳಿ ಇದ್ದ ಬಂಗಾರದ ತಾಳಿಯನ್ನು ಕಿತ್ತುಕೊಂಡು ಪಲ್ಸರ ಮೋಟಾರ ಸೈಕಲ ಮೇಲೆ ಓಡಿ ಹೊಗಿರುತ್ತಾರೆ, ಅಲ್ಲಿ ದೇವಸ್ಥಾನದ ಹತ್ತಿರ ಇದ್ದ ಜನರು ಅವರಿಗೆ ಹಿಡಿಯಲು ಪ್ರಯತ್ನ ಮಾಡಿದರು ಸಹ ಅವರು ಸಿಗಲಿಲ್ಲಾ, ಕಾರಣ ಎರಡು ವರೆ ಬಂಗಾರದ ಚೈನ ಸರಾ ಅಂದಾಜು 1,12,500/- ರೂ. ಹಾಗು ಬಂಗಾರದ ಗುಂಡಗಳು ಇದ್ದ ಒಂದು ತೊಲೆ ಬಂಗಾರದ ಮಂಗಳ ಸೂತ್ರ ಅಂದಾಜು 45,000/- ರೂ. ಒಟ್ಟು ಮೂರು ವರೆ ತೊಲೆ ಬಂಗಾರದ ವಡವೆಗಳು ಅಂದಾಜು ರೂ. 1,57,500/- ರೂಪಾಯಿ ಬಂಗಾರದ ವಡವೆಗಳು ದೊಚಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.