Police Bhavan Kalaburagi

Police Bhavan Kalaburagi

Tuesday, April 20, 2021

BIDAR DISTRICT DAILY CRIME UPDATE 20-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-04-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 60/2021, ಕಲಂ. 379 ಐಪಿಸಿ :-

ಫಿರ್ಯಾದಿ ದಿ ತಂದೆ ಅಶೋಕ ಗಾದಗೆ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 14-8-419 ಜೇರುಸಲೇಂ ಕಾಲೋನಿ, ಬೀದರ ರವರು ತನ್ನ ಅಪಾಚಿ ಆರ.ಟಿ.ಆರ ದ್ವಿಚಕ್ರ ವಾಹನ ಸಂ. KA-50/EE-5740, Engine No. DE5CL2X01318, Chessis No. MD637DE53L2C01299, ಮಾದರಿ 2020, ಬಣ್ಣ: ಬೀಳಿ/ಕಪ್ಪು ಬಣ್ಣದು ಹಾಗೂ .ಕಿ 1,00,000/- ರೂ. ನೇದನ್ನು ತನ್ನ ಮನೆಯ ಮುಂದೆ ನಿಲ್ಲಸಿರುವುದನ್ನು ದಿನಾಂಕ 23-03-2021 ರಂದು 2230 ಗಂಟೆಯಿಂದ ದಿನಾಂಕ 24-03-2021 ರಂದು 1000 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 43/2021, ಕಲಂ. 279, 338 ಐಪಿಸಿ :-

ದಿನಾಂಕ 19-04-2021 ರಂದು ಫಿರ್ಯಾದಿ ಮಹೇಶ ತಂದೆ ಗೋಪಿಚಂದ ಉಪಾಧ್ಯಾಯ ವಯ: 25 ವರ್ಷ, ಜಾತಿ: ಮಾಂಗರವಾಡಿ, ಸಾ: ದಿನದಯಾಳ ನಗರ, ಬೀದರ ರವರ ಸಂಬಂಧಿಕರಾದ ಟೈಗರ ತಂದೆ ಮಂಗಲ ಉಪಾಧ್ಯಾಯ ವಯ: 21 ವರ್ಷ, ಜಾತಿ: ಮಾಂಗರವಾಡಿ, ಸಾ: ಬಾಪುನಗರ ಕಲಬುರಗಿ ಇತನು ತನ್ನ ಮೋಟಾರ ಸೈಕಲ ನಂ. ಕೆಎ-32/ಇವೈ-1187 ನೇದನ್ನು ಚಲಾಯಿಸಿಕೊಂಡು ನಯಾಕಮಾನ ಒಳಗಿನಿಂದ ಸಿದ್ದಿ ತಾಲೀಮ ಮುಖಾಂತರ ದಿನದಯಾಳ ನಗರ ಬೀದರ ಕಡೆ ಹೋಗಲು ಕಸಬವಾಡಾ ಕ್ರಾಸ್ ಹತ್ತಿರ ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಸ್ಕೀಡ್ ಆಗಿ ಬಿದ್ದಿ ಪ್ರಯುಕ್ತ ಟೈಗರ ಇತನ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.