Police Bhavan Kalaburagi

Police Bhavan Kalaburagi

Saturday, July 31, 2021

BIDAR DISTRICT DAILY CRIME UPDATE 31-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-07-2021

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 132/2021, ಕಲಂ. 379 ಐಪಿಸಿ :-

ದಿನಾಂಕ 30-07-2021 ರಂದು 1030 ಗಂಟೆಗೆ ಫಿರ್ಯಾದಿ ಜಗನ್ನಾಥ ತಂದೆ ಮಾದಪ್ಪಾ ಸಾಗರ ವಯ: 63 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹೌಸಿಂಗ ಬೋರ್ಡ ಕಾಲೋನಿ ಹುಮನಾಬಾದ ರವರು ತಮ್ಮ ಮನೆಯಿಂದ ಹ್ಯಾಂಡವಾಶ ಖರೀದಿ ಮಾಡುವ ಕುರಿತು ಹುಮನಾಬಾದ ಅಂಬೇಡ್ಕರ ಚೌಕ ಹತ್ತಿರ ಇರುವ ಒಂದು ಅಂಗಡಿಗೆ 1100 ಗಂಟೆಗೆ ಬಂದು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-32/ಇ.ಕ್ಯೂ-0493, ಚಾಸಿಸ್ ನಂ. MBLHAR082HHC45733, ಇಂಜಿನ್ ನಂ. HA10AGHHCA9777, ಬಣ್ಣ: ಸಿಲ್ವರ್, ಮಾದರಿ 2017 ಹಾಗೂ ಅ.ಕಿ 33,000/- ರೂ. ನೇದನ್ನು ನಿಲ್ಲಿಸಿ ಅಂಗಡಿಯಲ್ಲಿ ಹೋಗಿ ಹ್ಯಾಂಡವಾಶ ಖರೀದಿ ಮಾಡಿಕೊಂಡು ಮರಳಿ ಬಂದು ತಾನು ನಿಲ್ಲಿಸಿದ ತನ್ನ ಮೋಟಾರ ಸೈಕಲ  ನೋಡಲು ಅದು ಇರಲಿಲ್ಲ, ಫಿರ್ಯಾದಿಯು ಗಾಬರಿಯಾಗಿ ಎಲ್ಲಾಕಡೆಗೆ ಹುಡಕಾಡಿ ನೋಡಲು ಎಲ್ಲಿಯೂ ಪತ್ತೆಯಾಗಿರುವುದಿಲ್ಲ, ಸದರಿ ಮೋಟಾರ ಸೈಕಲನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 85/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 30-07-2021 ರಂದು ಹಳ್ಳಿ ಶಿವಾರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸಾಯಿ ಪ್ಯಾರೇಡೈಸ ಲಾಡ್ಜಿನ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೇ ಅನಧೀಕೃತವಾಗಿ ತಮ್ಮ ಹತ್ತಿರ ಸರಾಯಿ ಇಟ್ಟಿಕೊಂಡು ಸಾರಾಯಿ ಮಾರಾಟ ಮಾಡುತ್ತಿದ್ದಾರೆಂದು ಕೀರಣ ಪಿ,ಎಸ, (ಕಾಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಖಾನಾಪೂರ ಕ್ರಾಸ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಸಾಯಿ ಪ್ಯಾರೆಡೈಸ್ ಲಾಡ್ಜಿನ ಹತ್ತಿರ ರಾಷ್ಟ್ರೀಯ ಹೆದ್ದಾರಿ 65 ನೇದರ ಪಕ್ಕದಲ್ಲಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಸಂಜುಕುಮಾರ ತಂದೆ ಸಿದ್ದಣ್ಣಾ ಚಿನ್ನಕೇರೆ ವಯ: 38 ವರ್ಷ, ಜಾತಿ: ಕುರುಬ, ಸಾ: ಧೂಮ್ಮನಸೂರ, ತಾ: ಹುಮನಾಬಾದ  ಹಾಗೂ 2) ಜೀತು ತಂದೆ ಶಿವಾಜಿ ಮಾಚನಾಳೆ  ವಯ: 27 ವರ್ಷ, ಜಾತಿ: ಮರಾಠಾ, ಸಾ: ಗುಂಡೂರು, ತಾ: ಬಸವಕಲ್ಯಾಣ ಇವರಿಬ್ಬರು ಒಂದು ಮೋಟಾರ ಸೈಕಲ ಮೇಲೆ ಕಾಟನಿನಲ್ಲಿ ಸರಾಯಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದು ಅವರ ವಶದಲ್ಲಿದ್ದ ಕಾಟನಗಳಲ್ಲಿನ ಸರಾಯಿಯನ್ನು ಪರಿಶೀಲಿಸಿ ನೋಡಲು ಅದರಲ್ಲಿ 1) ಕಿಂಗ್ ಫಿಶರ್ ಪ್ರೀಮಿಯಂ ಬಿಯರ್ 650 ಎಮ್.ಎಲ್ ವುಳ್ಳ 09 ಬಾಟಲಗಳು ಬೆಲೆ 1,440/- ರೂ., 2) ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ 650 ಎಮ್.ಎಲ್ ವುಳ್ಳ 10 ಬಾಟಲಗಳು ಬೆಲೆ 1,600/- ರೂ. & 3) ಒರಿಜಿನಲ್ ಚಾಯಿಸ್ 90 ಎಮ್.ಎಲ್ ವುಳ್ಳ 35 ಟೇಟ್ರಾ ಪ್ಯಾಕೇಟಗಳು ಬೆಲೆ 1,229/- ರೂ. ಇದ್ದು, ಸದರಿ ಮೋಟಾರ ಸೈಕಲ್ ಸ್ಲೆಂಡರ ಪ್ಲಸ್ ಕೆಎ-39/ಆರ್-0024 ಅ.ಕಿ 25,000/- ರೂ. ಇರುತ್ತದೆ, ನಂತರ ಸದರಿ ಆರೋಪಿತರಿಗೆ ಪುನಃ ನಿಮ್ಮ ಹತ್ತಿರ ಸರಕಾರದಿಂದ ಮಾರಾಟ ಮಾಡಲು ಪರವಾನಗಿ ಪಡೆದಿರುವ ಬಗ್ಗೆ ವಿಚಾರಣೆ ಮಾಡಲು ತಮ್ಮ ಹತ್ತಿರ ಯಾವುದೇ ಪರವಾನಗಿ ಇರುವುದಿಲ್ಲ ನಾವು ಇದೇ ಮೋಟಾರ ಸೈಕಲ ಮೇಲೆ ಸರಾಯಿ ತೆಗೆದುಕೊಂಡು ಬಂದು ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದರಿಂದ,  ಲ್ಲಾ ಸರಾಯಿ ಬಾಟಲಗಳನ್ನು ಹಾಗೂ ಮೋಟಾರ್ ಸೈಕಲನ್ನು ತಾಬೆಗೆ ತೆಗದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.