Police Bhavan Kalaburagi

Police Bhavan Kalaburagi

Wednesday, September 23, 2020

BIDAR DISTRICT DAILY CRIME UPDATE 23-09-2020

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-09-2020

 

ಬೀದರ ನೂತನ ನಗರ ಠಾಣೆ  ಅಪರಾಧ ಸಂಖ್ಯೆ 110/2020 ಕಲಂ 454,457,380 ಐಪಿಸಿ :-

ದಿನಾಂಕ 22/09/2020  ರಂದು 2045  ಗಂಟೆಗೆ ಫಿರ್ಯಾದಿ  ಬಾಬುರಾವ ತಂದೆ ಕಾಶೆಪ್ಪ ಪಾಟೀಲ ವಯ:39 ವರ್ಷ ಜಾತಿ:ಲಿಂಗಾಯತ ಉ:ಟಾವರ ಟೆಕ್ನಿಶಿಯನ ಸಾ/ಸಿದ್ದೇಶ್ವರ ಸಧ್ಯ ಶಿವನಗರ(ಉ) ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೇ, ಫಿರ್ಯಾದಿಯು ಎಟಿಸಿ ಟಾವರ ಟೆಕ್ನಿಶಿಯನ ಅಂತ ಕೆಲಸ  ಮಾಡಿಕೊಂಡು ಉಪಜೀವಿಸಿಕೊಂಡಿದ್ದು  ಶಿವನಗರ, ನೌಬಾದ ಮತ್ತು ಕೊಳಾರ ಪ್ರದೇಶಗಳಲ್ಲಿರುವ ಟಾವರಗಳ ಉಸ್ತುವಾರಿಯನ್ನು ಇವರು ನೋಡಿಕೊಳ್ಳುತ್ತಿದ್ದು  ದಿನಾಂಕ 23/08/2020 ರಂದು ರಾತ್ರಿ 9 ಗಂಟೆಗೆ ಮಾಧವನಗರದಲ್ಲಿ ಇರುವ ಎಟಿಸಿ ಟಾವರಗೆ ಭೇಟಿ ನೀಡಿದಾಗ ಟಾವರ ಚಲಾವಣೆಯಲ್ಲಿ ಇದ್ದು, ಟಾವರ ಎಸಿ ರೂಮಿನಲ್ಲಿ 24 ಬ್ಯಾಟರಿಗಳು ಇದ್ದವು. ದಿನಾಂಕ 24/08/2020 ರಂದು ಸಾಯಂಕಾಲ 1900 ಗಂಟೆಯ ಸಮಯಕ್ಕೆ  ಮತ್ತೆ ಮಾಧವನಗರದಲ್ಲಿರುವ ಟಾವರಗೆ ಭೇಟಿ ನೀಡಿ  ನೋಡಿದಾಗ ಟಾವರ ಎಸಿ ರೂಮಿನ ಕೀಲಿ ಮುರಿದಿದ್ದು, ಅದರಲ್ಲಿ ಇಟ್ಟಿದ್ದ 8 ಬ್ಯಾಟರಿಗಳು  ಯಾರೋ ಅಪರಿಚಿತರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ಬ್ಯಾಟರಿಗಳ ಅ.ಕಿ. 24,000/- ರೂ ಇರುತ್ತದೆ.   ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 131/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 22/09/2020 ರಂದು    ಕನಕಟ್ಟಾ ಗ್ರಾಮದಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ ಹೊಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಿದ್ದು ಒಬ್ಬನು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆ ಬರೆದು ಕೊಡುತ್ತಿರುವಾಗ ಸದರಿಯವರ ಮೇಲೆ 1145 ಗಂಟೆಗೆ ಪಿಎಸ್.ಐ ರವರು ಸಿಬ್ಬಂದಿಯೊಂದಿಗೆ ಹೋಗಿ  ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಅವನಿಗೆ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಜಕುಮಾರ ತಂದೆ ಭರತ ವಾಡೇಕರ, ವಯ 38 ವರ್ಷ, ಜಾ. ಕುರುಬರು, ಉ. ಹೋಟೆಲ ಕೆಲಸ, ಸಾ. ಕನಕಟ್ಟಾ ಅಂತ ತಿಳಿಸಿರುತ್ತಾನೆ ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 23,300=00 ರೂಪಾಯಿಗಳು, ಒಂದು ಬಾಲ ಪೇನ್ನ, ಹಾಗು 23 ಮಟಕಾ ಅಂಕಿ ಸಂಖ್ಯೆ ಬರೆದ ಚಿಟಿಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬೇಮಳಖೆಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 46/2020 ಕಲಂ 78(3) ಕೆ.ಪಿ. ಕಾಯ್ದೆ :-

 ದಿನಾಂಕ 22-09-2020 ರಂದು 11:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಚಾಂಗಲೇರಾ ಗ್ರಾಮದಲ್ಲಿನ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ  ಪಿಎಸ್ಐ ರವರು ಸಿಬ್ಬಂದಿಯೊಂದಿಗೆ  ಚಾಂಗಲೇರಾ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಹೋಗಿ ನೋಡಿದಾಗ  ನೋಡಿದಾಗ ಒಬ್ಬ ವ್ಯಕ್ತಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 1 ರೂಪಾಯಿಗೆ 100 ರೂಪಾಯಿಗಳು ಕೊಡುತ್ತೇನೆ. ಅಂತ ಹೇಳುತಾ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದುನ್ನು ಖಚಿತ ಪಡಿಸಿಕೊಂಡು  ಸದರಿ ವ್ಯಕ್ತಿಯ ಮೇಲೆ 16:30 ಗಂಟೆಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಅರುಣಕುಮಾರ ತಂದೆ ಕಾಶಿನಾಥ ಕುರಕೊಟಿ ವಯಃ30 ವರ್ಷ ಜಾತಿಃ ಎಸ್ ಸಿ ಹೊಲಿಯಾ ಉಃಕೂಲಿ ಕೆಲಸ ಸಾಃಉಡುಮನಳ್ಳಿ ಅಂತಾ ತಿಳಿಸಿದನು. ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1260/-ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 2 ಮಟಕಾ ಚೀಟಿ, ಹಾಗು ಒಂದು ಬಾಲ ಪೆನ್ನ, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 120/2020 ಕಲಂ 78(3) ಕೆಪಿ ಕಾಯ್ದೆ :-  

ದಿನಾಂಕ:22/09/2020 ರಂದು 11:00 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಹಳೆ ತಹಸೀಲ್ ಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ತಹಸೀಲ್ ಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು  ದಾಳಿಮಾಡಿ ಮೂವರು ಜನರಿಗೆ ಹಿಡಿದು   1] ವಿಜಯಕುಮಾರ ತಂದೆ ನಾಗನಾಥರಾವ ಡಾಂಗೆ ವಯಸ್ಸು//48 ವರ್ಷ ಇತನ ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 2250/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ. 2] ಪವನ ತಂದೆ ರಾಮ ಗಾಯಕವಾಡ ವಯಸ್ಸು//23 ವರ್ಷ  ಇತನ ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 2300/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ.3] ಇಮ್ರಾನ ತಂದೆ ಮನಸೂರ ಮಿಸ್ತ್ರಿ ವಯಸ್ಸು//21 ವರ್ಷ   ಇತನ ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 2200/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು ಜಪ್ತಿ ಮಾಡಿಕೊಂಡು ಆರೋಪಿತರನ್ನು  ಮಟಕಾ ಚೀಟಿ ಬರೆದುಕೊಂಡು ಸಂಗ್ರಹ ಮಾಡಿದ ಹಣ ಯಾರಿಗೆ ಕೊಡುತ್ತಿರಿ? ಅಂತ ವಿಚಾರಿಸಲು ತಾಹೇರ ತಂದೆ ಮಹೆತಾಬ ಪಟೇಲ್ ವಯಸ್ಸು//36 ವರ್ಷ ಜಾತಿ//ಮುಸ್ಲಿಂ // ಕೂಲಿಕೆಲಸ ಸಾ// ತಾಂಬೋಳ ವಾಡಿ (ಎಂ.ಎಸ್) ಇತನಿಗೆ ಕೊಡುತ್ತೆವೆ ಎಂದು ತಿಳಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 127/2020 ಕಲಂ 32, 34 ಕೆ.ಇ. ಕಾಯ್ದೆ :-

 ದಿನಾಂಕ: 22/09/2020 ಸಮಯ 1200 ಗಂಟೆಗೆ  ಮಹೇಂದ್ರಕುಮಾರ ಪಿ ಎಸ್. . (ಕಾಸೂ) ಠಾಣೆಯಲ್ಲಿದ್ದಾಗ  ಖಚಿತ  ಮಾಹಿತಿ ಬಾತ್ಮಿದಿದ್ದೆನೆಂದರೆ,   ಭಾಲ್ಕಿ.- ಉದಗೀರ ರೋಡಿಗೆ ಇರುವ ಕಳಸದಾಳ ಶಿವಾರದಲ್ಲಿರುವ ನ್ಯೂ ಬಂಜಾರಾ ಧಾಬಾದ ಹಿಂದೆ  ಒಬ್ಬ ವ್ಯಕ್ತಿ ಅಕ್ರಮವಾಗಿ ಸರಾಯಿ ಬಾಟಲಗಳನ್ನು ಮಾರಾಟ ಮಾಡುತಿದ್ದಾನೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ನ್ಯೂ ಬಂಜಾರಾ ಧಾಬಾದ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು  ಒಬ್ಬ ವ್ಯಕ್ತಿ  ತನ್ನ ಮುಂದೆ  ಎರಡು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲದಲ್ಲಿ  ಸರಾಯಿ ಬಾಟಲಗಳು  ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು  ನಿಂತಿರುವದನ್ನು ನೋಡಿ ಖಚಿತಪಡಿಸಿಕೊಂಡು    ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಸಂಜೀವ ತಂದೆ ಶೇಷೆರಾವ ಚವ್ಹಾನ ವಯ 34 ವರ್ಷ ಜಾ; ಲಮಾಣಿ ಉ; ವ್ಯಾಪಾರ ಸಾ; ಕಳಸದಾಳ ತಾ; ಭಾಲ್ಕಿ ಅಂತ ತಿಳಿಸಿರುತ್ತಾನೆ.   ಒಂದು ಬಿಳಿ ಬಣ್ಣದ ಚೀಲದಲ್ಲಿದ್ದ  ಸರಾಯಿ ಬಾಟಲಗಳು ಪರಿಶೀಲಿಸಿ ನೋಡಲು 180  ಎಂ. ಎಲ್. ವುಳ್ಳ 21 ಓಲ್ಡ ತವೇರನ ವಿಸ್ಕಿ ಸರಾಯಿ ವಿಸ್ಕಿ ಪೋಚಗಳು ಇದ್ದು  ಅದರ ಪ್ರತಿಯೊಂದು ಬಾಟಲ ಅ.ಕಿ; 87 /- ರೂ  ಇದ್ದು ಹೀಗೆ ಒಟ್ಟು  1827/-ರೂ, ಮತ್ತು 90 ಎಂ.ಎಲ್. ವುಳ್ಳ  19 ಯು.ಎಸ್. ವಿಸ್ಕಿ ಸರಾಯಿ ಬಾಟಲಗಳು ಇದ್ದು  ಅದರ ಪ್ರತಿಯೊಂದು ಬಾಟಲ ಅ;ಕಿ;36/-  ರೂ ಇದ್ದು ಹೀಗೆ ಒಟ್ಟು 684/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಇರುತ್ತವೆ.  ಮತ್ತು  180 ಎಂ. ಎಲ್ ವುಳ್ಳ 07 ಇಂಪಿರಿಯಲ್ ಬ್ಲೂ ವಿಸ್ಕಿ  ಸರಾಯಿ ಬಾಟಲಗಳು ಇದ್ದು ಪ್ರತಿಯೊಂದು ಬಾಟಲ್  ಅಕಿ;; 199/-ರೂ, ಇದ್ದು  ಹೀಗೆ ಎಲ್ಲಾ ಒಟ್ಟು 1393/- ರೂ ಬೇಲೆ ಬಾಳುವ ಸರಾಯಿ ಬಾಟಲಗಳು ಇರುತ್ತವೆ., ಮತ್ತು 180 ಎಂ.ಎಲ್ ವುಳ್ಳ 08 ಮೆಕಡಾಲ ವಿಸ್ಕಿ ಸರಾಯಿ ಬಾಟಲಗಳು ಇದ್ದು  ಪ್ರತಿಯೊಂದು ಬಾಟಲ್ ಅಕಿ;200/- ರೂ ಇದ್ದು ಹೀಗೆ ಎಲ್ಲಾ ಒಟ್ಟು 1600/-ರೂ, ಇದ್ದು ಮತ್ತು ಇನ್ನೊಂದು ಬಿಳಿ ಚಿಲದಲ್ಲಿ ಪರಿಶೀಲಿಸಿ ನೋಡಲು 650 ಎಂ. ಎಲ್. ವುಳ್ಳ 06 ಕಿಂಗ ಫೀಶರ ಪ್ರಿಮಿಯಮ ಬಿಯರ ಬಾಟಲಗಳು ಇದ್ದು ಪ್ರತಿಯೊಂದು ಬಾಟಲ  ಅಕಿ;; 150 /- ರೂ ಇದ್ದು ಹೀಗೆ ಎಲ್ಲಾ ಒಟ್ಟು 900/- ರೂ ಬಾಟಲಗಳು ಇರುತ್ತವೆ. ಹೀಗೆ ಈ ಮೇಲಿನ ಎಲ್ಲಾ ಒಟ್ಟು 6404/- ರೂ ಸರಾಯಿ ಬಾಟಲಗಳು ಹಾಗೂ ಬಿಯರ ಬಾಟಲಗಳು  ಜಪ್ತಿ ಮಾಡಿಕೊಂಡು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.