Police Bhavan Kalaburagi

Police Bhavan Kalaburagi

Sunday, February 14, 2021

BIDAR DISTRICT DAILY CRIME UPDATE 14-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-02-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 07/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಕಪೀಲ ತಂದೆ ದೇವಕಿನಂದನ ಶರ್ಮಾ ವಯ: 28 ವರ್ಷ, ಸಾ: ದೆಹಲಿ, ಸದ್ಯ: ಕುಂಬಾರವಾಡಾ, ಬೀದರ ರವರ ಅಣ್ಣನಾದ ನಿತಿನ್ ತಂದೆ ದೇವಕಿನಂದನ ವಯ: 34 ವರ್ಷ, ಸಾ: ದೆಹಲಿ, ಸದ್ಯ: ಮೈಲೂರ ಬಿದರ ಇತನಿಗೆ ಪಾನಿಪುರಿ ವ್ಯಾಪಾರದಲ್ಲಿ ಹಾನಿಯಾಗಿದ್ದು ಅಲ್ಲಲ್ಲಿ ಸಾಲ ಮಾಡಿ ತನ್ನ ವ್ಯಾಪಾರ ಸುಧಾರಿಸಿಕೊಳ್ಳುತ್ತಿದ್ದ, ಆದರೆ ವ್ಯಾಪಾರ ಸರಿಯಾಗಿ ಆಗದೆ ಇರುವದರಿಂದ ತಾನು ಮಾಡಿದ ಸಾಲ ಹೇಗೆ ತಿರಿಸಿಕೊಳ್ಳಲಿ ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12-02-2021 ರಂದು 1800 ಗಂಟೆಯಿಂದ 1900 ಗಂಟೆಯ ಅವಧಿಯಲ್ಲಿ ತಾನು ಬಾಡಿಗೆಯಿಂದ ವಾಸವಾಗಿರುವ ಮೈಲೂರಿನ ಮನೆಯಲ್ಲಿ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 07/2021, ಕಲಂ. ಮಹಿಳೆ ಕಾಣೆ :-

ದಿನಾಂಕ 23-05-2020 ರಂದು ಫಿರ್ಯಾದಿ ನಂದಕುಮಾರ ತಂದೆ ಜಗನ್ನಾಥರಾವ ಪಾಟೀಲ ವಯ: 33 ವರ್ಷ, ಸಾ: ಸಾಂಗ್ವಿ, ಸದ್ಯ: ಶಿವಾಜಿ ನಗರ ಗುಂಪಾ, ಬೀದರ ರವರ ಹೆಂಡತಿಯಾದ ತ್ರಿವೇಣೀ ಗಂಡ ನಂದಕುಮಾರ: 33 ವರ್ಷ, ಇವಳು ಬ್ಯೂಟಿ ಪಾರ್ಲರಗೆ ಹೋಗಿ ಬರುತ್ತೇನೆಂದು ಹೇಳಿ ತನ್ನ 2 ಜನ ಮಕ್ಕಳಾದ, 1) ಕು. ಶ್ರೀಶ್ಯಾ ತಂದೆ ನಂದಕುಮಾರ ವಯ: 8 ವರ್ಷ ಹಾಗೂ 2) ಕು.ವೇದ ತಂದೆ ನಂದಕುಮಾರ ವಯ: 6 ವರ್ಷ ರವರ ಜೊತೆಯಲ್ಲಿ ಹೋದವಳು ಮರಳಿ ಇಲ್ಲಿಯವರೆಗೆ ಬಂದಿರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 15/2021, ಕಲಂ. ಮನುಷ್ಯ ಕಾಣೆ :-

ಫಿರ್ಯಾದಿ ಚಂದ್ರಕಲಾ ಗಂಡ ನಾರಾಯನರಾವ ಬಿರಾದಾರ ಸಾ: ಶಾಸ್ತ್ರೀ ನಗರ ಮೈಲೂರ, ಬೀದರ ರವರ ಗಂಡನಾದ ನಾರಾಯಣರಾವ ಬಿರಾದಾರ ವಯ: 61 ವರ್ಷ ರವರು ದಿನಾಂಕ 12-02-2021 ರಂದು 1230 ಗಂಟೆಗೆ ಬೀದರ ಜಿಲ್ಲಾ ಆಸ್ಪತ್ರೆಯಿಂದ ಹೋದವರು ಮರಳಿ ಮನೆಗೆ ಬರದೇ ಕಾಣೆಯಾಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗ ದಿನಾಂಕ 13-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 07/2021, ಕಲಂ. 379 ಐಪಿಸಿ :-

ದಿನಾಂಕ 11-02-2021 ರಂದು 1530 ಗಂಟೆಯಿಂದ 1545 ಗಂಟೆಯ ಮದ್ಯಾವಧಿಯಲ್ಲಿ ಹಲಸಿ(ಎಲ್) ಮಹಾಲಕ್ಷ್ಮೀ ಮಂದಿರದ ಎದುರಿಗೆ ಫಿರ್ಯಾದಿ ಶಿವಕುಮಾರ ತಂದೆ ವಿಜಯಕುಮಾರ ಕಾರಭಾರಿ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಗೋರ ಚಿಂಚೋಳಿ, ತಾ: ಭಾಲ್ಕಿ ರವರು ನಿಲ್ಲಿಸಿದ ನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ ಮೋಟಾರ ಸೈಕಲ ನಂ. ಕೆಎ-39/ಕೆ-6890, ಅ.ಕಿ 35,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 13-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.