Police Bhavan Kalaburagi

Police Bhavan Kalaburagi

Sunday, January 31, 2021

BIDAR DISTRICT DAILY CRIME UPDATE 31-01-2021

 

                                        ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-02-2021

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 08/2021 ಕಲಂ 279, 304(ಎ) ಐಪಿಸಿ ಜೋತೆ 187 ಐಎಮವಿ ಎಕ್ಟ :-

ದಿನಾಂಕ 30/01/2021 ರಂದು 1245 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ಮಾಹಿತಿ ಬಂದ ಮೇರೆಗೆ ಬೀದರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ   ಅಲ್ಲಿ ಹಾಜರಿದ್ದ ಸುಲೋಚನಾ ಗಂಡ ಅಂಕುಶ ರವರ ಹೆಳಿಕೆ ಪಡೆದುಕೊಂಡಿದರ ಸಾರಂಶವೇನೆಂದರೆ,  ದಿನಾಂಕ 29/01/21 ರಂದು ಇವರ ಗಂಡ ಅಂಕುಶ ವಯ: 30 ವರ್ಷ, ರವರು ಚಾಂಬೋಳ ಗ್ರಾಮದ ಹೊಲಕ್ಕೆ ಹೋಗಿ ರಾಶಿ ಮಾಡಿ ದಿ: 30/01/2021 ರಂದು 1100 ಗಂಟೆ ಸುಮಾರಿಗೆ ಆಟೋ ಸಂ. ಕೆಎ-38/8924 ನೇದರಲ್ಲಿ ಬೀದರಕ್ಕೆ ಬರುವಾಗ ಬೀದರ-ಚಾಂಬೋಳ ರಸ್ತೆಯ ಮೇಲೆ ಕೊಟರಕಿ ಕಂಕರ ಮಷೀನ ಹತ್ತಿರ ಆಟೋ ಚಾಲಕನು ತನ್ನ ಆಟೋ ಅತೀವೇಗ ಹಗು ನಿಷ್ಕಾಳಜಿತನದಿಂದ ಚಲಾಸಿ ಆಟೋ ಪಲ್ಟಿ ಮಾಡಿರುತ್ತಾನೆ ಇದರಿಂದಾಗಿ ಫಿರ್ಯಾದಿ ಗಂಡನ ಎಡಭುಜದ ಮೇಲೆ ಹಾಗು ಎಡ ಮತ್ತು ಬಲ ಬೆನ್ನಿನ ಮೇಲೆ ಹಾಗೂ ಎದೆಯ ಮೇಲೆ ಭಕ್ಕಳಿಯಲ್ಲಿ ಭಾರಿ ಗುಪ್ತಗಾಯವಾಗಿ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗದ ಮಧ್ಯೆ ಮೃತ ಪಟ್ಟಿದ್ದು ಇರುತ್ತದೆ.  ಅಂತಾ ಮೃತನ ಪತ್ನಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 02/2021 ಕಲಂ  78(3) ಕೆ.ಪಿ. ಎಕ್ಟ :-

ದಿನಾಂಕ 30-01-2021 ರಂದು ಮನ್ನಳ್ಳಿ ಗ್ರಾಮದ ವಗದಾಳೆ ಪೆಟ್ರೋಲ ಬಂಕ ಹತ್ತಿರ ಎದುರು ಇರುವ ಹೋಟಲನ ಪಕ್ಕ ಇರುವ ಖುಲ್ಲಾ ಜಾಗೆಯಲ್ಲಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟಕಾ ಎಂಬ ನಸಿಬಿನ  ಚೀಟಿ ನಡೆಸುತಿದ್ದಾನೆ 1 ರೂಪಾಯಿಗೆ 100 ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೆರೆಗೆ ಸಿಬ್ಬಂದಿಯೊಂದಿಗೆ  ಮನ್ನಳ್ಳಿ ಗ್ರಾಮದ ವಗದಾಳೆ ಪೆಟ್ರೋಲ ಬಂಕ ಹತ್ತಿರ ಎಲ್ಲರು ಕೆಳಗಡೆ ಇಳಿದು ಮರೆಯಾಗಿ ನಿಂತು ನೋಡಲು ಎದುರುಗಡೆ ಇರುವ ಹೋಟೇಲ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ 1 ರೂ:ಗೆ 100/- ಕೊಡುವುದಾಗಿ ಕೂಗುತ್ತಾ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗ ಖಚಿತ ಪಡಿಸಿಕೊಂಡು ದಾಳಿ ನಡೆಯಿಸಿ ಅವನನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಫಯಾಜ ತಂದೆ ಗುಡುಸಾಬ ಫಕೀರ  ವಯ-27 ವರ್ಷ ಜಾತಿ ಮುಸ್ಲಿಂ ಉ, ಗಿಲಾವ ಕೆಲಸ ಸಾ; ಮನ್ನಳ್ಳಿ ತಾ  ಬೀದರ ಅಂತಾ ತಿಳಿಸಿದ್ದು ಮತ್ತು ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಮಿಲಿಂದ ತಂದೆ ಕಾಶಪ್ಪಾ ಸಾ ಮ್ನನಳ್ಳಿ ರವರಿಗೆ ನೀಡುತ್ತೆನೆ ಅಂತಾ ತಿಳಿಸಿದ್ದು ನಂತರ ಅವನ ಬಳಿ ಇದ್ದ ಒಟ್ಟು ನಗದು ಹಣ ರೂ: 1720/-ಎರಡು ಮಟಕಾ ಚಿಟಿಗಳು ಒಂದು ಬಾಲಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 03/2021 ಕಲಂ 78(3) ಕೆ.ಪಿ. ಎಕ್ಟ :-

ದಿನಾಂಕ 30-01-2021 ರಂದು  ಮನ್ನಳ್ಳಿ ಗ್ರಾಮದ ಅಂಬೇಡ್ಕರ ಪ್ರೌಢಶಾಲೆಯ ಹಿಂದುಗಡೆ ಇರುವ ಬಾಲಕರ ವಸತಿ ನಿಯದ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಮಟಕಾ ಎಂಬ ನಸಿಬಿನ  ಚೀಟಿ ನಡೆಸುತಿದ್ದಾನೆ 1 ರೂಪಾಯಿಗೆ 100 ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೆರೆಗೆ ಸಿಬ್ಬಂದಿಯೊಂದಿಗೆ ಅಂಬೇಡ್ಕರ ಪ್ರೌಢಶಾಲೆಯ ಹಿಂದುಗಡೆ ಇರುವ ಬಾಲಕರ ವಸತಿ ನಿಯದ ಹತ್ತಿರ ಇಳಿದು ಮರೆಯಾಗಿ ನಿಂತು ನೋಡಲು ವಸತಿ ನಿಲಯದ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ 1 ರೂ:ಗೆ 100/- ಕೊಡುವುದಾಗಿ ಕೂಗುತ್ತಾ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗ ಖಚಿತ ಪಡಿಸಿಕೊಂಡು ದಾಳಿ ನಡೆಯಿಸಿ ಅವನನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ರಾಜಕುಮಾರ ತಂದೆ ಪ್ರಭು ಔಂಟಿಗಿನೋರ  ವಯ-30 ವರ್ಷ ಜಾತಿ ಕಬ್ಬಲಿಗ ಉ, ಕೂಲಿ ಕೆಲಸ ಸಾ; ಮನ್ನಳ್ಳಿ ತಾ  ಬೀದರ ಅಂತಾ ತಿಳಿಸಿದ್ದು ಮತ್ತು ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಮಿಲಿಂದ ತಂದೆ ಕಾಶಪ್ಪಾ ಸಾ ಮ್ನನಳ್ಳಿ ರವರಿಗೆ ನೀಡುತ್ತೆನೆ ಅಂತಾ ತಿಳಿಸಿದ್ದು ನಂತರ ಅವನ ಬಳಿ ಇದ್ದ ಒಟ್ಟು ನಗದು ಹಣ ರೂ: 3100/-ಎರಡು ಮಟಕಾ ಚಿಟಿಗಳು ಒಂದು ಬಾಲಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 16/2021 ಕಲಂ 454, 457, 380 ಐಪಿಸಿ :-

ದಿನಾಂಕ 30/01/2021 ರಂದು 1100 ಗಂಟೆಗೆ ಫೀರ್ಯಾದಿ ಶ್ರೀ ಆಕಾಶ ತಂದೆ ಧನರಾಜ ಖಂಡೆ ವಯ-30 ಜಾ/ ಲಿಂಗಾಯತ ಉ/ ವ್ಯಾಪಾರ ಸಾ/ ಹೊಸ ಆದರ್ಶ ಕಾಲೋನಿ ಬೀದರ ನಿವಾಸಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯು ಬೀದರ ಹೊಸ ಆದರ್ಶ ಕಾಲೋನಿ ಯಲ್ಲಿ  ಸೋಮನಾಥ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕ 08/01/2021 ರಂದು 1600 ಗಂಟೆಗೆ ತನ್ನ ಕುಟುಂಬ ಸದಸ್ಯ ರೊಂದಿಗೆ  ಮನೆಗೆ ಬೀಗ ಹಾಕಿ ಹೈದ್ರಾಬಾದಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೊಗಿದ್ದು ದಿನಾಂಕ 09/01/2021 ರಂದು ಮುಂಜಾನೆ 0900 ಗಂಟೆಗೆ ನಮ್ಮ ಮನೆಯ ಮಾಲಿಕರಾದ ಸೋಮನಾಥ ರವರ ಮಗ ದಿಲೀಪ ಇತನು ನನಗೆ ಫೋನ ಮಾಡಿ ತಿಳಿಸಿದ್ದು ಎನೆಂದರೆ  ನಿಮ್ಮ ಮನೆಯ ಕೀಲಿ ಮುರಿದಿದ್ದು ಕಳವು ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ಅಂದೆ 1300 ಗಂಟೆಗೆ ಬೀದರಕ್ಕೆ ಮರಳಿ  ಬಂದು ನೊಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು  ನಂತರ ಮನೆಯ ಓಳಗೆ ಹೊಗಿ ನೋಡಲಾಗಿ ಮಲಗುವ ಕೋಣೆಯಲ್ಲಿ ಸೆಲ್ಫದಲ್ಲಿ ಇಟ್ಟಿದ 1) ನಗದು ಹಣ 60000=00 ರೂ 2) ಬಂಗಾರದ ಎರಡು 10 ಗ್ರಾಂ ಉಂಗುರ ಅಂ.ಕಿ. 40000=00 ರೂ 3) ಬಂಗಾರದ 09 ಗ್ರಾಂ ಕಿವಿಯ ಓಲೆ ಅಂ,ಕಿ. 35000=00 ರೂ. 4) ಐವಾ ಕಂಪನಿಯ ಎಲ್.ಸಿ.ಡಿ. ಟಿ.ವಿ 52 ಇಂಚ ಅಂ,ಕಿ, 14000=00 ರೂ, ಹಿಗೆ ಒಟ್ಟು  149000=00 ರೂಪಾಯಿ  ಮೌಲ್ಯದ ಬಂಗಾರದ ಆಭರಣಗಳು, ನಗದು ಹಣ ಮತ್ತು ಟಿ.ವಿ ಕಳವು ಆಗಿರುತ್ತದೆ.  ದಿ: 08/01/2021 ರಂದು 1600 ಗಂಟೆಯಿಂದಾ ದಿನಾಂಕ 09/01/2021 ರಂದು 0900 ಗಂಟೆಯ ಅವಧಿಯಲ್ಲಿ ಕಳ್ಳರು ನಾನು ಬಾಡಿಗೆಯಿಂದಾ  ವಾಸವಿದ್ದ ಮನೆಯ ಬಾಗಿಲಿನ  ಕೀಲಿ  ಮುರಿದು ಒಳಗೆ ಪ್ರವೇಶಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.