Police Bhavan Kalaburagi

Police Bhavan Kalaburagi

Wednesday, April 21, 2021

BIDAR DISTRICT DAILY CRIME UPDATE 21-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-04-2021

 

ಬಗದಲ ಪೊಲೀಸ ಠಾಣೆ ಬೀದರ ಅಪರಾಧ ಸಂ. 23/2021, ಕಲಂ. 302, 201 ಜೊತೆ 34 ಐಪಿಸಿ :-

ಫಿರ್ಯಾದಿ ಅನೀಲಕುಮಾರ ತಂದೆ ಕಲ್ಯಾಣರಾವ ಬಿರಾದರ ವಯ: 45 ವರ್ಷ, ಜಾತಿ:  ಲಿಂಗಾಯತ, ಸಾ: ಕೊನ ಮೇಳಕುಂದಾ ಗ್ರಾಮ, ತಾ: ಭಾಲ್ಕಿ, ಜಿ: ಬೀದರ ರವರ ಅಕ್ಕಳಾದ ಶೋಭಾವತಿ ರವರ ಮಗನಾದ ಆನಂದ ಇತನು ಹುಣಜಿ ಗ್ರಾಮದ ಧೂಳಪ್ಪಾ ಎಂಬುವವರ ಸಡುಕನ ಮಗಳಾದ ಅನುಸೇವಿ@ಅನುಸುಯಾ ವಯ: 19 ವರ್ಷ ಇವಳಿಗೆ ಪ್ರಿತಿ ಮಾಡುತ್ತಿದ್ದ ವಿಷಯ ಗೊತ್ತಿದ್ದು, ದಿನಾಂಕ 17-04-2021 ರಂದು 1100 ಗಂಟೆಗೆ ಆನಂದ ಇತನು ತಾನು ಪ್ರಿತಿ ಮಾಡುತ್ತಿರುವ ಅನುಸೇವಿ@ಅನುಸುಯಾ ಇವಳಿಗೆ ಕರೆದುಕೊಂಡು ಮನೆ ಬಿಟ್ಟು ಹೊಗಿರುತ್ತಾನೆಂದು ಅಕ್ಕಳಾದ ಶೋಭಾವತಿ ರವರು ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಫಿರ್ಯಾದಿಯು ಕುಡಲೇ ಹುಣಜಿ ಗ್ರಾಮಕ್ಕೆ ಹೊಗಿ ಅವರನ್ನು ಎಲ್ಲಾ ಕಡೆ ಹುಡುಕಾಡಿರೂ ಎಲ್ಲಿಯೂ ಸಿಕ್ಕಿರುವುದಿಲ್ಲಾ,  ನಂತರ ಅನುಸೇವಿ@ಅನುಸುಯಾ ರವರ ಕುಟುಂಬದವರಿಗೆ ದಿನಾಂಕ 18-04-2021 ರಂದು ಹುಡುಗ ಹುಡುಗಿ  ಚಿಂಚೋಳ್ಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿರುತ್ತಾರೆ ಅಂತ ವಿಷಯ ತಿಳಿದು ಅನುಸುಯಾ ಇವಳ ಚಿಕ್ಕಪ್ಪನಾದ ಧೂಳಪ್ಪಾ ತಂದೆ ಬಸಪ್ಪಾ ಮಚಕೂರಿ ವಯ: 50 ವರ್ಷ ರವರು ತನ್ನ ಮಕ್ಕಳಾದ 1) ಓಂಕಾರ ವಯ: 28 ವರ್ಷ, 2) ದತ್ತು ವಯ: 26 ವರ್ಷ, 3) ದಿಗಂಬರ ವಯ: 24 ವರ್ಷ ಹಾಗೂ 4) ಸಂತೋಷ ತಂದೆ ನರಸಿಂಗ ಮಚಕೂರಿ ವಯ: 25 ವರ್ಷ ರವರೆಲ್ಲರೂ ಹೋಗಿ ಹುಡುಗಿಗೆ ಮನೆಗೆ ಕರೆದುಕೊಂಡು ಬಂದಿರುತ್ತಾರೆ, ನಂತರ ಆನಂತ ಇತನು ಅನುಸೇವಿ ಇವಳಿಗೆ ಪ್ರೀತಿ ಮಾಡುತ್ತಿದ್ದ ಕಾರಣದಿಂದಾಗಿ ಆರೋಪಿತರಾದ 1) ಧೂಳಪ್ಪಾ ತಂದೆ ಬಸಪ್ಪಾ ಮಚಕೂರಿ ವಯ: 50 ವರ್ಷ, 2) ಓಂಕಾರ ವಯ: 28 ವರ್ಷ, 3) ದತ್ತು ವಯ: 26 ವರ್ಷ, 4) ದಿಗಂಬರ ವಯ: 24 ವರ್ಷ ಹಾಗೂ 5) ಸಂತೋಷ ತಂದೆ ನರಸಿಂಗ ಮಚಕೂರಿ ವಯ: 25 ವರ್ಷ ಇವರೆಲ್ಲರೂ ಸೇರಿ ಆನಂದನಿಗೆ ಹೊಡೆ ಬಡೆ ಮಾಡಿ ಹೊಡೆದು ಸಾಯಿಸಿ ಸಾಕ್ಷಿ ಪುರಾವೆ ಸಿಗಬಾರದೆಂದು, ರಂಜೋಳ ಬ್ರೀಡ್ಜನಲ್ಲಿ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 38/2021, ಕಲಂ. 279, 338 ಐಪಿಸಿ :-

ದಿನಾಂಕ 20-04-2021 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಶಂಕರ ಬಿರಾದರ, ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ತ್ರಿಪೂರಾಂತ ಬಸವಕಲ್ಯಾಣ ರವರ ಭಾವ ಧರ್ಮರಾಜ ರವರು ತನ್ನ ಮೋಟರ ಸೈಕಲ ನಂ. ಕೆಎ-56/ಹೆಚ್-7933 ನೇದನ್ನು ಚಲಾಯಿಸಿಕೊಂಡು ಬಸವಕಲ್ಯಾಣ ಕಡೆಯಿಂದ ಬಂಗ್ಲಾ ಕಡೆಗೆ ಹೋಗುವಾಗ ತ್ರಿಪೂರಾಂತ ಐ.ಬಿ ಎದುರಿಗೆ ಅವರ ಹಿಂದಿನಿಂದ ಅಂದರೆ ಬಸವಕಲ್ಯಾಣ ಕಡೆಯಿಂದ ಮೋಟರ ಸೈಕಲ ನಂ. ಎಮ್.ಹೆಚ್-14/ಸಿ.ಕ್ಯೂ-2909 ನೇದರ ಚಾಲಕನಾದ ಆರೋಪಿಯು ತನ್ನ ಮೋಟರ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಭಾವನ ಮೋಟರ ಸೈಕಲ ಹಿಂಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಭಾವನ ತಲೆಗೆ ಭಾರಿ ಗುಪ್ತಗಾಯ, ಬಲಗಣ್ಣಿಗೆ, ಮೂಗಿಗೆ ರಕ್ತಗಾಯ ಹಾಗೂ ಎರಡು ಮೊಳಕಾಲಿಗೆ ಮತ್ತು ಬೆರಳುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ನಂತರ ಗಾಯಗೊಂಡ ಭಾವ ಧರ್ಮರಾಜ ರವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 70/2021, ಕಲಂ. 419, 420, 468 ಐಪಿಸಿ :-  

ದಿನಾಂಕ 04-08-2016 ರಿಂದ 05-03-2021 ರ ಅವಧಿಯಲ್ಲಿ ಆರೋಪಿ ಸೈಯದ ಜುಬೇರ ತಂದೆ ಸೈಯದ ಸಲ್ಲಾವೋದ್ದಿನ ದಂತ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಚಿಟಗುಪ್ಪಾ, ಸಾ: ಬೀಬಿ ಗಲ್ಲಿ ಹುಮನಾಬಾದ ಇತನು ಅಂಗವಿಕಲತೆಯ ನಕಲಿ ಪ್ರಮಾಣ ಪತ್ರವನ್ನು ಸೃಷ್ಠಿಸಿ ದಂತ ವೈದ್ಯ ಅಧಿಕಾರಿ ಅಂತಾ ನೇಮಕಗೊಂಡು ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾನೆ, ಆರೋಪಿತನು ನಕಲಿ ಪ್ರಮಾಣ ಪತ್ರ ಸೃಷ್ಠಿಸಿ ಮೋಸದಿಂದ ನೇಮಕಗೊಂಡಿರುತ್ತಾನೆಂದು ಫಿರ್ಯಾದಿ ಸಕರಾಮ ತಂದೆ ಮಾಣಿಕರಾವ ಚವ್ಹಾಣ, ವಯ: 65 ವರ್ಷ, ಸಾ: ಹುಮನಾಬಾದ ರವರು ನೀಡಿದ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.