Police Bhavan Kalaburagi

Police Bhavan Kalaburagi

Saturday, June 13, 2020

BIDAR DISTRICT DAILY CRIME UPDATE 13-06-2020ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-06-2020

ಜನವಾಡ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 11-06-2020 ರಂದು 2000 ಗಂಟೆಯ ಸುಮಾರಿಗೆ ಹೊನ್ನಿಕೇರಿ ಗ್ರಾಮದ ವೈಜಿನಾಥ ತಂದೆ ದತ್ತಾತ್ರೆಯ ಚೇಲುವಾ ರವರು ಫಿರ್ಯಾದಿ ಭಗವಾನರಾವ ತಂದೆ ಗುಂಡೆರಾವ ಪಾಂಡ್ರೆ ಸಾ: ಜನವಾಡ ಗ್ರಾಮ, ತಾ: ಜಿ: ಬೀದರ ರವರಿಗೆ ಕರೆ ಮಾಡಿ ಹೊನ್ನಿಕೇರಿ ಗ್ರಾಮದ ಶೀವಾರದ ನಿಮ್ಮ ಹೊಲದ ಸರ್ವೆ ನಂ. 111 ನೇದ್ದರ ಜಮೀನಿನಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿದ್ದು ಅಂತಾ ತಿಳಿಸಿದ ತಕ್ಷಣ ಫಿರ್ಯಾದಿಯು ತನ್ನ ಮಗ ಅನೀಲ ಪಾಂಡ್ರೆ ರವರು ಸ್ಥಳಕ್ಕೆ ಬಂದು ನೋಡಲು ಒಬ್ಬ ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿದ್ದು, ಆತನು ಬಾಳಿ ಬಿದ್ದಿದ್ದು ಆತನ ಬಲಗೈ ಹೊಟ್ಟೆ ಬೆನ್ನು ಮುಖ ಕೀಟಗಳು ತಿಂದು ಮುಖ ಗುರುತು ಸಿಗದ ಹಾಗೆ ಕಂಡುಬಂದಿರುತ್ತದೆ, ಆತನ ಮೈಮೇಲೆ ಒಂದು ಬಿಳಿ ಬಣ್ಣದ ಪೈಜಾಮ ಮತ್ತು ಬಿಳಿ ಬಣ್ಣದ ಫೂಲ್ ಶರ್ಟ್ ಇದ್ದು, ಕಾಲಿನಲ್ಲಿ ಪ್ಲಾಸ್ಟಿಕ್ ಚಪ್ಪಲಿ ಹಾಗು ತಲೆಯ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದ ಸ್ವಲ್ಪ ಕೂದಲು ಕಂಡುಬಂದಿರುತ್ತವೆ, ಫಿರ್ಯಾದಿಯವರು ಸ್ಥಳಕ್ಕೆ ಹೊದಾಗ ವೈಜಿನಾಥ ಚೇಲವಾ ಅವರು ಸಹ ಹಾಜರಿದ್ದು ವ್ಯಕ್ತಿಯ ಪಕ್ಕದಲ್ಲಿ ಒಂದು ಬಟ್ಟೆಯ ಗಂಟಿನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ ಮತ್ತು ಕೂಲ ಡ್ರೀಂಕ್ಸ್ ಬಾಟಲ ಡಕ್ಕಣಗಳು ಬಿದ್ದಿರುತ್ತವೆ, ಸದರಿ ವ್ಯಕ್ತಿಯ ಸಾವಿನಲ್ಲಿ ಸಂಶಯ ಇರುತ್ತದೆ, ಸದರಿ ವ್ಯಕ್ತಿಯ ಅಂದಾಜು ವಯಸ್ಸು 40-45 ರಷ್ಟು ಇರಬಹುದು ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 12-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 70/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 12-06-2020 ರಂದು ಅಗ್ರಹಾರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ತನ್ನ ವಶದಲ್ಲಿ ಅನಧಿಕೃತವಾಗಿ ಮಧ್ಯದ ಪೇಪರ ಪೌಚಗಳು ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿದ್ದಾನೆಂದು ಸಿದ್ಧಲಿಂಗ ಪಿ.ಎಸ್. (ಕಾಸುಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಪಂಚರ ಸಮಕ್ಷಮ ಆರೋಪಿತನಾಶಿವಕುಮಾರ ತಂದೆ ಬಸಪ್ಪಾ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಅಗ್ರಹಾರ ಗ್ರಾಮ ಇತನ ಮೇಲೆ ದಾಳಿ ಮಾಡಿ ಹಿಡಿದು ಅವನ ವಶದಿಂದ ಟಾವರನ ವಿಸ್ಕಿ ಎಂಬ ಹೆಸರಿನ 180 ಎಂ.ಎಲ್ ದ ಒಟ್ಟು 26 ಮದ್ಯದ ಬಾಟಲಗಳು ಅ.ಕಿ 1927/- ರೂ. ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 77/2020, ಕಲಂ. 379 ಐಪಿಸಿ :-
ದಿನಾಂಕ 11-06-2020 ರಂದು 1800 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀಶೈಲ್ ತಂz ಚಂದ್ರಮಪ್ಪಾ ಕಾಚಪುರ ವಯ: 45 ವರ್ಷ, ಜಾತಿ: ಲಿಂಗಾಯತ, : ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ (ಟಿ.ಟಿ.ಡಬ್ಲೂ), ಸಾ: ಗೌರ (ಬಿ), ತಾ: ಅಪಜಲಪುರ, ಜಿಲ್ಲಾ: ಕಲಬುರಗಿ, ಸದ್ಯ: ಗಂಗಾ ಕಾಲೋನಿ ಬಸವಕಲ್ಯಾಣ ರವರು ಊಟ ಮಾಡುವ ಸಲುವಾಜಗಿ ತನ್ನ ಗೆಳೆಯರ ಜೊತೆಯಲ್ಲಿ ಬಸವಕಲ್ಯಾಣ ನಗರದ ಕಮಲಾ ರೇಸಿಡೆನ್ಸ್ಗೆ ತನ್ನ ಬಜಾಜ್ ಪ್ಲಾಟಿನಾ ಮೋಟಾರ್ ಸೈಕಲ್ ನಂ. ಕೆಎ-32/.ಎಕ್ಸ್‌-6323 ನೇದರ ಮೇಲೆ ಬಂದು ಕಮಲಾ ರೇಸಿಡೆನ್ಸ್ಹೋಟಲ್ ಎದುರುಗಡೆ ನಿಲ್ಲಿಸಿ ಊಟ ಮಾಡುವ ಸಲುವಾಗಿ ಒಳಗಡೆ ಹೋಗಿ ಊಟ ಮಾಡಿಕೊಂಡು 2000 ಗಂಟೆಯ ಸುಮಾರಿಗೆ ಹೋಟಲದಿಂದ ಹೊರಗಡೆ ಬಂದು ನೋಡಲು ಸದರಿ ಮೋಟಾರ ಸೈಕಲ್ ರಲಿಲ್ಲ, ಫಿರ್ಯಾದಿಯು ತನ್ನ ಗೆಳೆಯರ ಜೊತೆಯಲ್ಲಿ ಬಸವಕಲ್ಯಾಣ ನಗರದ ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸದರಿ ವಾಹನ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ವಾಹನದ ವಿವರ 1) ಬಜಾಜ ಪ್ಲಾಟಿನಾ ಮೋಟಾರ ಸೈಕಲ್ ನಂ.ಕೆಎ-32/ಇಎಕ್ಸ್‌-6323, 2) ಮಾಡಲ್ 2020 ಹಾಗು 3) .ಕಿ. 49,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.