Police Bhavan Kalaburagi

Police Bhavan Kalaburagi

Sunday, February 9, 2020

BIDAR DISTRICT DAILY CRIME UPDATE 09-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-02-2020

ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 05/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 12-01-2020 ರಂದು ಫಿರ್ಯಾದಿ ದತ್ತು ತಂದೆ ªÀiÁಣಿಕರಾವ ಸೂರ್ಯವಂಶಿ ವಯ: 57 ವರ್ಷ, ಜಾತಿ: ಮರಾಠಾ, ಸಾ: ಮಿರಕಲ, ತಾ: ಹುಲಸೂರ ರವರ ತಾಯಿ ಬಿಡಿ ಸೇದುವಾಗ ಆಕಸ್ಮಿಕವಾಗಿ ಬೆಂಕಿ ಕಿಡಿ ಮೈಮೇಲೆ ಬಿದ್ದು, ಮೈಗೆ ಬೆಂಕಿ ತಗುಲಿ, ಮೈಯಲ್ಲಿ ಭಾರಿ ಸುಟ್ಟ ಗಾಯಗಳಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಲಾತೂರ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 15-01-2020 ರಂದು ಫಿರ್ಯಾದಿಯವರ ತಾಯಿ ಹಿರಕನ¨Áಯಿ ರವರು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 06/2020, ಕಲಂ. 279, 337, 338 ಐಪಿಸಿ ಜೊತೆ 187 .ಎಂ.ವಿ ಕಾಯ್ದೆ :-
ದಿನಾಂಕ 08-02-2020 ರಂದು ಫಿರ್ಯಾದಿ ದೀಪಕ ತಂದೆ ಶೇಷೆಪ್ಪಾ ಸಾಯಿರೆಡ್ಡಿ ವಯ: 19 ವರ್ಷ, ಜಾತಿ: ರೆಡ್ಡಿ, ಸಾ: ಚಿಟ್ಟಾ ಗ್ರಾಮ ರವರು ರತ್ನಾಪೂರ ಗ್ರಾಮದಲ್ಲಿ ಭವಾನಿ ಜಾತ್ರೆ ಇದ್ದ ಪ್ರಯುಕ್ತ ಜಾತ್ರೆಗೆ ಮೊಟಾರ ಸೈಕಲ ನಂ. ಕೆಎ-38/ಆರ್-3661 ನೇದರ ಮೇಲೆ ತಮ್ಮೂರಿಂದ ಬೀದರಗೆ ಬಂದು ಬೀದರ ಹಾರೂರಗೇರಿಯ ನ್ನ ಗೆಳೆಯನಾದ ಭದ್ರಿನಾಥ ತಂದೆ ಸಂಗಶೆಟ್ಟಿ ಕುಶನೂರೆ ಇವನಿಗೆ ಜಾತ್ರೆಗೆ ಹೋಗಿ ಬರೋಣಾ ಅಂತ ಕರೆದುಕೊಂಡು ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಹೋಗುವಾಗ ಅಷ್ಟೂರ ಕ್ರಾಸ ಹತ್ತಿರ ರಿಂಗ ರೋಡಿನ ಮೇಲೆ ಹೋದಾಗ ಚಿಕಪೇಟ ಕಡೆಯಿಂದ ಟಿಪ್ಪರ ಲಾರಿ ನಂ. ಕೆಎ-38/7550 ನೇದ್ದರ ಚಾಲಕನಾದ ಆರೋಪಿಯು ತನ್ನ ಟಿಪ್ಪರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಟಿಪ್ಪರ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲ ಪಾದದ ಮೆಲೆ ಭಾರಿ ಗುಪ್ತಗಾಯ ಹಾಗೂ ತರಚಿದ ಗಾಯ, ಎಡಭುಜದ ಮೇಲೆ ತರಚಿದ ಗಾಯವಾಗಿರುತ್ತದೆ ಮತ್ತು ಹಿಂದುಗಡೆ ಕುಳಿತ ಭದ್ರಿನಾಥ ಕುಶನೂರೆ ಇವನಿಗೆ ಎಡಗೈ ಮೊಳಕೈ ಕೇಳಭಾಗದಲ್ಲಿ ಭಾರಿ ಗುಪ್ತಗಾಯ, ಎಡಗಾಲ ಕಿರು ಬೆರಳಿಗೆ ತರಚಿದ ಗಾಯವಾಗಿರುತ್ತದೆ, ಆಗ ತಾಜಲಾಪೂರ ಗ್ರಾಮದ ಸಂಬಂಧಿ ಈಶ್ವರ ತಂದೆ ಶಿವಪ್ಪಾ ರವರು ಸದರಿ ಘಟನೆಯನ್ನು ನೋಡಿ ಇಬ್ಬರಿಗೂ ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಗುರುನಾನಕ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 11/2020, ಕಲಂ. 504, 498 (), 324 ಐಪಿಸಿ :-
ಇತ್ತಿಚಿಗೆ ಕೇಲವು ದಿವಸಗಳಿಂದ ಫಿರ್ಯಾದಿ ಜರೀನಾ ಗಂಡ ಇಸಾಕ ಮುಲ್ಲಾ ವಯ: 35 ವರ್ಷ, ಜಾತಿ: ªÀÄÄಸ್ಲಿಂ, ಸಾ: ಭೋಸಗಾ, ತಾ: ಬಸವಕಲ್ಯಾಣ ರವರಿಗೆ ಗಂಡ ಇಸಾಕಂದೆ ಮಹೆಬೂಬಸಾಬ ಮುಲ್ಲಾ ಇವರು ಫಿರ್ಯಾದಿಯ ಶೀಲದ ಮೇಲೆ ವಿನಾಃ ಕಾರಣ ಸಂಶಯಪಟ್ಟು ಇಲ್ಲದೊಂದು ಕಾರಣ ಹಚ್ಚಿ ಜಗಳ ಮಾಡುತ್ತಾ ನೀನು ಚೆನ್ನಾಗಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಅವಾಚ್ಯವಾಗಿ ಬೈಯುತ್ತ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದು, ಹೀಗಿರುವಾಗ ದಿನಾಂಕ 08-02-2020 ರಂದು ಗಂಡ ಹೊರಗಡೆಯಿಂದ ಮನೆಗೆ ಬಂದು ಫಿರ್ಯಾದಿಗೆ ಮೇರೆ ಘರಸೆ ಬಾಹಾರ ನಿಖಲ್ ಇದರ ಮತ್ ರಹೋ ಮೇರಾ ಘರ ಹೈ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಅವರಿಗೆ ನಾನೇಕೆ ಇಲ್ಲಿಂದ ಹೋಗಲಿ ನಾನು ನಿಮ್ಮ ಹೆಂಡತಿ ಇದ್ದೇನೆ ಅಂತಾ ಹೇಳಿದಾಗ ಗಂಡ ಸಿಟ್ಟಿನಿಂದ £Àನಗೆ ಎದರು ಮಾತನಾಡುತ್ತಿ ನೀನು ಸುಮ್ಮನೆ ನಮ್ಮ ಮನೆ ಖಾಲಿ ಮಾಡುವ ಹಾಗೆ ಕಾಣಿಸಲ್ಲ ನಿನಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಅನ್ನುತ್ತಾ ಪಕ್ಕದಲ್ಲಿ ಬಿದ್ದ ಒಂದು ಕಲ್ಲು ತಗೆದುಕೊಂಡು ಸದರಿ ಕಲ್ಲಿನಿಂದ ಬಲಕಿವಿಯ ಹಿಂಭಾಗದಲ್ಲಿ ತಲೆಗೆ ಹೊಡೆದು ರಕ್ತಗಾಯ ಪಡಿಸಿದ£ÀÄ, ನಂತರ ಗಂಡ ತನ್ನ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅಲ್ಲೆ ಹಾಜರಿದ್ದ ಓಣಿಯ ಭಿಸ್ಮಿಲ್ಲಾ ಗಂಡ ಹಮೀದಸಾಬ ದಾವಲೆ ಮತ್ತು ಮೌಲಾಸಾಬ ತಂದೆ ಮುನ್ವರಸಾಬ ಬಡೂರೆ ಹಾಗು ಇತರರು ಮಧ್ಯದಲ್ಲಿ ಬಂದು ಗಂಡನಿಗೆ ತಿಳಿಸಿ ಹೇಳಿ ºÆಡೆಯುವದನ್ನು ಬಿಡಿಸಿದರು, ನಂತರ ಭಿಸ್ಮಿಲ್ಲಾ ದಾವಲೆ ಮತ್ತು ಮೌಲಾಸಾಬ ಬಡೂರೆ ಇವರಿಬ್ಬರು ಫಿರ್ಯಾದಿಗೆ ಆದ ಗಾಯಗಳು ನೋಡಿ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪv್ರೆಗ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 08-02-2020 ರಂದು ಚಳಕಾಪುರ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಹುಲೆಪ್ಪಾ ಪಿಎಸ್ಐ ಖಟಕಚಿಂಚೋಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಳಕಾಪೂರ ಗ್ರಾಮಕ್ಕೆ ಹೊಗಿ ವಾಲ್ಮೀಕಿ ಚೌಕ್ ಹತ್ತಿರ ಮರೆಯಾಗಿ ನಿಂತು ನೊಡಲು ಹನುಮಾನ ಮಂದಿರದ ಹತ್ತಿರ ರೋಡಿನ ಮೇಲೆ ಆರೋಪಿ ಶರಣಪ್ಪಾ ತಂದೆ ಮಲ್ಲಪ್ಪಾ ಬೂದಾರೆ ವಯ: 60 ವರ್ಷ, ಜಾತಿ: ಕುರುಬ, ಸಾ: ಚಳಕಾಪೂರ ಇತನು ಒಂದು ರೂಪಾಯಿಗೆ 80/- ರೂ. ಕೊಡುತ್ತೆವೆ ಅಂತಾ ಮಟಕಾ ನಸಿಬಿನ ಆಟ ಇರುತ್ತದೆ ಅಂತಾ ಜೋರಾಗಿ ಚೀರುತ್ತಿದ್ದನು, ಅದನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನ ಅಂಗ ಜಡ್ತಿ ಮಾಡಲು ಶರ್ಟಿನ ಜೆಬಿನಲ್ಲಿ 1 ಮಟಕಾ ನಂಬರ ಉಳ್ಳ ಚಿಟಿ ಮತ್ತು 660/- ರೂಪಾಯಿ ನಗದು ಹಣ ಹಾಗೂ 1 ಬಾಲ್ ಪೇನ್ ಸಿಕ್ಕಿದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿಗೆ ವಿಚಾರಿಸಲು ನಾನು ಮಟಕಾ ಬರೆದುಕೊಂಡು ತಮ್ಮೂರ ಬಲಭೀಮ ತಂದೆ ಕಲ್ಲಪ್ಪಾ ಕಬ್ಬಲಗೇರ ಇವರಿಗೆ ಕೊಡುತ್ತೆನೆ ಅಂತಾ ತಿಳಿಸಿದನು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.