Police Bhavan Kalaburagi

Police Bhavan Kalaburagi

Tuesday, January 12, 2021

BIDAR DISTRICT DAILY CRIME UPDATE 12-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-01-2021

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 07/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 11-01-2021 ರಂದು ಫಿರ್ಯಾದಿ ಶಿವಾಜಿ ತಂದೆ ಧನಸಿಂಗ ಜಾಧವ ಸಾ:  ಸೇವಾನಗರ ತಾಂಡಾ, ಧನ್ನೂರ (ಎಚ್), ತಾ: ಭಾಲ್ಕಿ ರವರು ನಂದಗಾಂವ ಶಿವಾರದ ಸತೀಶಕುಮಾರ ರಾಂಪೂರೆ ರವರ ಹೊಲದಲ್ಲಿ ಕಬ್ಬು ಕಟಾವು ಮಾಡಿ ನ್ನ 05 ವರ್ಷದ ಮೊಮ್ಮಗ ಆನಂದ ತಂದೆ ರಾಜಕುಮಾರ ರಾಠೋಡ ಇವನೊಂದಿಗೆ ಚಹಾ ಕುಡಿಯಲು ಜಲಸಂಗಿ ಶಿವಾರದ ಬಿ.ಎಸ್.ಎನ್.ಎಲ್ ಟಾವರ್ ಹತ್ತಿರದ ಹೋಟಲಗೆ ಬಂದು ಚಹಾ ಕುಡಿದು ರೋಡಿನ ಬದಿಯಲ್ಲಿ ಕಾಲ ನಡಿಗೆಯಲ್ಲಿ ನಡೆದುಕೊಂಡು ಮರಳಿ ಸತೀಶಕುಮಾರ ರಾಂಪೂರೆ ರವರ ಹೊಲದ ಕಡೆಗೆ ಹೋಗುತ್ತಿರುವಾಗ ರಾ.ಹೆ ನಂ. 50 ಹುಮನಾಬಾದ - ಬೀದರ ರೋಡಿನ ಮೇಲೆ ಹುಮನಾಬಾದ ಕಡೆಯಿಂದ ಒಂದು ಅಪರಿಚಿತ ಕಾರ್ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೊಮ್ಮಗ ಆನಂದ ಇವನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸ್ವಲ್ಪ ದೂರದಲ್ಲಿ ಹೋಗಿ ತನ್ನ ಕಾರನ್ನು ನಿಲ್ಲಿಸಿ ಕಾರಿನಿಂದ ಕೆಳಗಡೆ ಇಳಿದು ಆನಂದ ಇವನಿಗೆ ಗಾಯಗಳು ಆಗಿರುವುದನ್ನು ನೋಡಿ ತನ್ನ ಕಾರನ್ನು ನಿಲ್ಲಿಸದೇ ಕಾರ್ ಸಮೇತ ಓಡಿ ಹೋಗಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಆನಂದ ಇವನಿಗೆ ಎಡಕಿವಿಗೆ ತೀವ್ರ ರಕ್ತಗಾಯ,  ಮುಖದ ಎಡಗಡೆಗೆ,  ತಲೆಯ ಎಡಗಡೆಗೆ ಸಾದಾ ರಕ್ತಗಾಯ ಮತ್ತು ಸೊಂಟದ ಬಲಗಡೆಗೆ ಸಾದಾ ಗುಪ್ತಗಾಯಗಳು ಆಗಿರುತ್ತವೆ, ನಂತರ ಗಾಯಾಳುವಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ  ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 03/2021, ಕಲಂ. 427, 447 ಐಪಿಸಿ :-

ಆರೋಪಿ ಅನೀಲ ತಂದೆ ರಾಮರಾವ ಪಾಟೀಲ ವಯ: 45 ವರ್ಷ, ಜಾತಿ: ಮರಾಠಾ, ಸಾ: ಹಾಲಹಳ್ಳಿ ಇತನು ಫಿರ್ಯಾದಿ ಉಮಾಕಾಂತ ತಂದೆ ಸುಬ್ಬಾರಾವ ಪಾಟೀಲ್ ವಯ: 31 ವರ್ಷ, ಜಾತಿ: ಮರಾಠಾ, ಸಾ: ಹಾಲಹಳ್ಳಿ ರವರಿಗೆ ಕೇಡು ಮಾಡುವ ಉದ್ದೇಶದಿಂದ ದಿನಾಂಕ 10-01-2021 ರಂದು 2000 ಗಂಟೆಯಿಂದ 2100 ಗಂಟೆಯ ಅವಧಿಯಲ್ಲಿ ಹೊಲ ಸರ್ವೆ ನಂ. 32 ರಲ್ಲಿನ ಅಂದಾಜು 170 ರಿಂದ 200 ಸೀತಾಫಲ ಮತ್ತು ನುಗ್ಗೆಕಾಯಿ ಗಿಡಗಳು ಕಡಿದು ಅಂದಾಜು 85,000/- ರೂಪಾಯಿಗಳಷ್ಟು ಹಾನಿ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.