Police Bhavan Kalaburagi

Police Bhavan Kalaburagi

Monday, July 5, 2021

BIDAR DISTRICT DAILY CRIME UPDATE 05-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-07-2021

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 66/2021, ಕಲಂ. 15(J), 32(3) PÉ.E ಕಾಯ್ದೆ :-

ದಿನಾಂಕ 04-07-2021 ರಂದು ಭೋಸಗಾ ಗ್ರಾಮ ಶಿವಾರದಲ್ಲಿರುವ ಜೈಭವಾನಿ ಧಾಬಾ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಕು.ಜೈಶ್ರೀ ಪಿಎಸ್ಐ ಮಂಠಾಳ ಪೊಲೀಸ್ ಠಾಣೆ  ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿಯಂತೆ ಭೋಸಗಾ ಗ್ರಾಮ ಶಿವಾರದಲ್ಲಿರುವ ಜೈ ಭವಾನಿ ಧಾಬಾದ ಕಡೆಗೆ ಹೋಗಿ ರಾತ್ರಿ ಕತ್ತಲಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ನಾಗಣ್ಣಾ ತಂದೆ ಗುರುಪಾದಪ್ಪಾ ಇಂಡೆ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಭೋಸಗಾ ಗ್ರಾಮ ಇತನು ಜೈಭವಾನಿ ಧಾಬಾದ ಎದುರಗಡೆ ಇರುವ ಲೈಟಿನ ಬೇಳಕಿನಲ್ಲಿ ತನ್ನ ಹತ್ತಿರ ಒಂದು ಚೀಲದಲ್ಲಿ ಸರಾಯಿ ಪೌಚಗಳು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಾ ಸರಾಯಿ ಕುಡಿಯಲು ಅನುವು ಮಾಡಿಕೊಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಅಲ್ಲಿ ಸರಾಯಿ ಖರೀದಿ ಮಾಡಿ ಕುಡಿಯುತ್ತಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿತನಿಗೆ ಸದರಿ ಚೀಲದಲ್ಲಿ ಏನಿದೇ? ಅಂತ ವಿಚಾರಿಸಲು ಇದರಲ್ಲಿ ಸರಾಯಿ ಪೌಚಗಳು ಇರುತ್ತವೆ ಅಂತಾ ತಿಳಿಸಿದಾಗ ಪುನಃ ಅವನಿಗೆ ನಿನ್ನ ಹತ್ತಿರ ಸರಾಯಿ ಮಾರಾಟ ಮಾಡಲು ಸರಕಾರದಿಂದ ನೀಡಿರುವ ಪರವಾನಗಿ ಇದೆಯಾ ಅಂತಾ ವಿಚಾರಿಸಿದಾಗ ಅವನು ತಿಳಿಸಿದೇನೆಂದರೆ ನನ್ನ ಹತ್ತಿರ ಯಾವುದೇ ರೀತಿಯ ಸರಕಾರದಿಂದ ಪರವಾನಗಿ ಇಲ್ಲಾ ಅಂತಾ ತಿಳಿಸಿದನು, ನಂತರ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 90 ಎಂ.ಎಲ್ ನ 13 ಓರಿಜನಲ್ ಚಾಯಿಸ್ ವಿಸ್ಕಿ ಸರಾಯಿ ರಟ್ಟಿನ ಪೌಚಗಳು ಅ.ಕಿ 456/- ರೂ. ಸಿಕ್ಕಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

BIDAR DISTRICT DAILY CRIME UPDATE 04-07-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-07-2021

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 73/2021, ಕಲಂ. 457, 380 ಐಪಿಸಿ :-

ದಿನಾಂಕ 02-07-2021 ರಂದು 1000 ಗಂಟೆಯಿಂದ ದಿನಾಂಕ 03-07-2021 ರಂದು 0400 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ರಾಜಕುಮಾರ ತಂದೆ ಬಸಪ್ಪ ಖ್ಖೆಳ್ಳಿ ಸಾ: ದೇವಿ ಕಾಲೋನಿ ಬೀದರ ರವರ ಮನೆಯ ಅಲಮಾರಾದಲ್ಲಿದ್ದ 1) 35 ಗ್ರಾಂ. ತೂಕದ ಬಂಗಾರದ ಸರ, 2) 25 ಗ್ರಾಂ ಬಂಗಾರದ ನಾನ ಸರ, 3) 20 ಗ್ರಾಂ ಬಂಗಾರದ ಕೊರಳಲ್ಲಿನ ಚೈನ, 4) 10 ಗ್ರಾಂ ಬಂಗಾರದ ಕೊರಳಲ್ಲಿನ ಚೈನ, 5) 60 ಗ್ರಾಂ. ತೂಕದ ಒಟ್ಟು 6 ಬೆರಳಲ್ಲಿಯ ಉಂಗುರಗಳು ಮತ್ತು 3 ಲಕ್ಷ ನಗದು ಹಣ ಹೀಗೆ ಎಲ್ಲಾ ಸೇರಿ ಒಟ್ಟು 9 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.