ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-07-2021
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 66/2021, ಕಲಂ. 15(J), 32(3) PÉ.E ಕಾಯ್ದೆ :-
ದಿನಾಂಕ
04-07-2021 ರಂದು ಭೋಸಗಾ ಗ್ರಾಮ ಶಿವಾರದಲ್ಲಿರುವ ಜೈಭವಾನಿ ಧಾಬಾ ಹತ್ತಿರ ಸಾರ್ವಜನಿಕ ಖುಲ್ಲಾ
ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು
ಮಾಡಿಕೊಡುತ್ತಿದ್ದಾನೆಂದು ಕು.ಜೈಶ್ರೀ ಪಿಎಸ್ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು
ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿಯಂತೆ ಭೋಸಗಾ ಗ್ರಾಮ ಶಿವಾರದಲ್ಲಿರುವ ಜೈ ಭವಾನಿ ಧಾಬಾದ ಕಡೆಗೆ ಹೋಗಿ ರಾತ್ರಿ ಕತ್ತಲಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ನಾಗಣ್ಣಾ ತಂದೆ ಗುರುಪಾದಪ್ಪಾ ಇಂಡೆ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಭೋಸಗಾ ಗ್ರಾಮ ಇತನು ಜೈಭವಾನಿ ಧಾಬಾದ ಎದುರಗಡೆ ಇರುವ ಲೈಟಿನ ಬೇಳಕಿನಲ್ಲಿ ತನ್ನ ಹತ್ತಿರ ಒಂದು ಚೀಲದಲ್ಲಿ ಸರಾಯಿ ಪೌಚಗಳು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಾ ಸರಾಯಿ ಕುಡಿಯಲು
ಅನುವು ಮಾಡಿಕೊಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರ
ಸಹಾಯದಿಂದ ದಾಳಿ ಮಾಡಿದಾಗ ಅಲ್ಲಿ ಸರಾಯಿ ಖರೀದಿ ಮಾಡಿ ಕುಡಿಯುತ್ತಿದ್ದ ಜನರು ಓಡಿ ಹೋಗಿರುತ್ತಾರೆ,
ನಂತರ ಸದರಿ ಆರೋಪಿತನಿಗೆ ಸದರಿ ಚೀಲದಲ್ಲಿ ಏನಿದೇ? ಅಂತ ವಿಚಾರಿಸಲು ಇದರಲ್ಲಿ ಸರಾಯಿ ಪೌಚಗಳು
ಇರುತ್ತವೆ ಅಂತಾ ತಿಳಿಸಿದಾಗ ಪುನಃ ಅವನಿಗೆ ನಿನ್ನ ಹತ್ತಿರ ಸರಾಯಿ ಮಾರಾಟ
ಮಾಡಲು ಸರಕಾರದಿಂದ ನೀಡಿರುವ ಪರವಾನಗಿ ಇದೆಯಾ ಅಂತಾ ವಿಚಾರಿಸಿದಾಗ ಅವನು ತಿಳಿಸಿದೇನೆಂದರೆ ನನ್ನ ಹತ್ತಿರ
ಯಾವುದೇ ರೀತಿಯ ಸರಕಾರದಿಂದ ಪರವಾನಗಿ ಇಲ್ಲಾ ಅಂತಾ ತಿಳಿಸಿದನು, ನಂತರ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ
ನೋಡಲು ಅದರಲ್ಲಿ 90
ಎಂ.ಎಲ್ ನ
13
ಓರಿಜನಲ್ ಚಾಯಿಸ್ ವಿಸ್ಕಿ ಸರಾಯಿ ರಟ್ಟಿನ ಪೌಚಗಳು
ಅ.ಕಿ 456/- ರೂ. ಸಿಕ್ಕಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment