ಅಪಘಾತ ಪ್ರಕರಣಗಳು :
ಅಫಜಲಪೂರ
ಠಾಣೆ : ಶ್ರೀಮತಿ ಸಂಗೀತಾ ಗಂಡ ಶ್ರವಣಕುಮಾರು ಕ್ಷತ್ರಿ
ಸಾ: ಇಟಗಿ ತಾ: ಜೇವರ್ಗಿ ರವರು ದಿನಾಂಕ 30-10-2019 ರಂದು ನಾನು ಮತ್ತು
ನನ್ನ ಗಂಡ ಇಬ್ಬರು ಕೂಡಿಕೊಂಡು ನನ್ನ ತವರು ಗ್ರಾಮವಾದ ಮೈಂದರ್ಗಿ ಗ್ರಾಮದಿಂದ ಇಟಗಿ ಗ್ರಾಮಕ್ಕೆ ಹೋಗಬೇಕೆಂದು
ಮೈಂದರ್ಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕುಳಿತಾಗ ಸೊಲ್ಲಾಪೂರದಿಂದ ಗಾಣಗಾಪೂರಕ್ಕೆ ಹೋಗುವ ಸರಕಾರಿ
ಬಸ್ (ಮಹಾರಾಷ್ಟ್ರ ಬಸ್) ನಂ ಎಮ್.ಹೆಚ್-14-ಬಿಟಿ-3353 ನೇದ್ದು ಬಂದಿದ್ದರಿಂದ ನಾನು ಮತ್ತು ನನ್ನ ಗಂಡ ಗಾಣಗಾಪೂರದ ವರೆಗೆ
ಹೋಗಬೇಕೆಂದು ಹತ್ತಿ ಕುಳಿತೇವು ಸದರಿ ಬಸ್ ದುಧನಿ ಮಾರ್ಗವಾಗಿ ಅಫಜಲಪೂರಕ್ಕೆ ಬರುತ್ತಿರುವಾಗ ಮಾರ್ಗ
ಮಧ್ಯದಲ್ಲಿ ಅಫಜಲಪೂರ ದಾಟಿದ ನಂತರ ನಿಂಬಾಳ ಪೇಟ್ರೋಲ್ ಪಂಪ ಹತ್ತಿರ ಸಮಯ 12:00 ಪಿ.ಎಮ್ ಸುಮಾರಿಗೆ ಸದರಿ ಬಸ್ ಚಾಲಕನು ಬಸ್ಸನ್ನು
ಅತೀವೇಗವಾಗಿ ಮತ್ತು ನಿಸ್ಕಾಳಜಿತನಿಂದ ಚಲಾಯಿಸಿ ರೋಡಿಗೆ ಹೊಂದಿಕೊಂಡಿರುವ ಪೂಲಿನ ಗೋಡೆಗೆ (ಬ್ರೀಡ್ಜ)
ಗೆ ಡಿಕ್ಕಿ ಪಡೆಸಿದ್ದರಿಂದ ಬಸ್ಸಿನಲ್ಲಿ ಇರುವ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಮತ್ತು ನನಗೆ
ಬಲಕಿನ ಕಣ್ಣಿಗೆ ರಕ್ತಗಾಯವಾಗಿರುತ್ತದೆ. ಮತ್ತು ಎಡಕಿನ ಕಾಲಿಗೆ ಮೊಣಕಾಲ ಮೇಲೆ ರಕ್ತಗಾಯವಾಗಿದ್ದು
ಹಾಗೂ ನನ್ನ ಹೊಟ್ಟೆಗೆ ಭಾರಿ ಪೆಟ್ಟಾಗಿರುತ್ತದೆ ನಾನು ಗರ್ಭೀಣಿ ಇದ್ದಿದ್ದರಿಂದ ಭಾರಿ ತ್ರಾಸ್ ಆಗಿರುತ್ತದೆ
ನಂತರ ಅದೆ ಬಸ್ಸಿನಲ್ಲಿ ಅಫಜಲಪೂರ ಸರಕಾರಿ ಆಸ್ಪತ್ರೆ ಸೇರಿಸಿದ್ದು ನಂತರ ನನ್ನ ಗಂಡ 108 ವಾಹನದಿಂದ ಕಲಬುರಗಿಗೆ ತಂದು ಆಸ್ಪತ್ರೆಗೆ
ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ವಾಡಿ
ಠಾಣೆ : ಶ್ರೀ ಮನ್ಸೂರಅಲಿಬೇಗ ತಂದೆ ಮೌಲಾನಾಬೇಗ ಸಾ:ನಾಲವಾರ ಸ್ಟೇಷನ ರವರದೊಂದು ಮೊಟರ ಸೈಕಲ ನಂಬರ ಕೆಎ-32
ಇಡಿ-5248 ನೇದ್ದು ಇದ್ದು ಅದನ್ನು ನನ್ನ ಸ್ವಂತಕ್ಕೆ ಉಪಯೋಗಿಸುತ್ತೆನೆ. ದಿನಾಂಕ 17/09/2019 ರಂದು
ಬೆಳಗ್ಗೆ 09-00 ಗಂಟೆ ಸುಮಾರು ನನ್ನ ಮೊಟರ ಸೈಕಲ ನಂಬರ ಕೆಎ-32 ಇಡಿ-5248 ನೇದ್ದರ ಮೇಲೆ ವಾಡಿ ಪಟ್ಟಣಕ್ಕೆ
ಬಂದು ನನ್ನ ಕೆಲಸವನ್ನು ಮುಗಿಸಿಕೊಂಡು ಮರಳಿ 12-00 ಪಿ.ಎಮ್ ಸುಮಾರು ನಾಲವಾರ ಸ್ಟೇಷನಗೆ ಹೋಗುವ ಸಲುವಾಗಿ
ಕೊಂಚೂರ ಮುಖಾಂತರ ಹೊರಟು ಮುಂದೆ ಬಾಲಿ ಸಾಹುಕಾರ ಹೊಲದ ಹತ್ತಿರ ರೊಡಿಗೆ ಹೊರಟಾಗ ಎದರುಗಡೆಯಿಂದ ಒಬ್ಬನು
ಮೊಟರ ಸೈಕಲ ಅತಿವೇಗ ಹಾಗೂ ಅಲಕ್ಷತನದಿಂದ ಅಡ್ಡಾ ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನನ್ನ ಮೊಟರ ಸೈಕಲ
ಎಡಗಡೆ ಸೈಡಿಗೆ ಡಿಕ್ಕಿ ಪಡಿಸಿದನು. ಆಗ ನಾನು ಮೊಟರ ಸೈಕಲ ಸಮೇತ ಕೆಳಗಡೆ ಬಿದ್ದೆನು. ಆಗ ನನ್ನ ಹಿಂದೆ
ಮೊಟರ ಸೈಕಲ ಮೇಲೆ ಹೊರಟ ಅಜೀಜಬೇಗ ತಂದೆ ಮಹೇಬುಬಬೇಗ ಎನ್ನುವನು ಬಂದು ನನಗೆ ಎಬ್ಬಿಸಿ ರೊಡ ಪಕ್ಕದಲ್ಲಿ
ಕೂಡಿಸಿದನು. ನನ್ನ ಎಡಗಾಲ ಮೊಳಕಾಲ ಕೆಳಗಡೆ ಭಾರಿ ರಕ್ತಗಾಯವಾಗಿದ್ದು ಅಲ್ಲಲ್ಲಿ ಅಲ್ಪಗಾಯಗಳಾಗಿದ್ದವು.
ನನಗೆ ಡಿಕ್ಕಿ ಹೊಡೆದ ಮೊಟರ ಸೈಕಲ ಚಾಲಕ ನನ್ನ ಹತ್ತಿರ ಬಂದನು ಅವನ ಹೆಸರು ವಿಚಾರಿಸಲಾಗಿ ಅಬ್ದುಲರಹಿಮಾನ
ತಂದೆ ಉಸ್ಮಾನಸಾಬ ಮು:ಜೇವರ್ಗಿ ಅಂತಾ ಹೇಳಿದನು. ಆತನ ಮೊಟರ ಸೈಕಲ ನಂಬರ ನೋಡಲಾಗಿ ಕೆಎ-32 ಇಸಿ-1578
ಅಂತಾ ಬರೆದಿತ್ತು. ನಂತರ ಸದರಿ ವ್ಯಕ್ತಿ ಮತ್ತು ಅಜೀಜಬೇಗ ಕೂಡಿಕೊಂಡು ನನಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು
ಕಲಬುರಗಿಯ ಭಾವಗಿ ಆಸ್ಪತ್ರೆಗೆ ಸೇರಿಕೆ ಮಾಡಿದರು.
ಅಬ್ದುಲರಹಿಮಾನ ಇತನು ನಿನಗೆ ಉಪಚಾರದ ಖರ್ಚು ನೋಡಿಕೊಳ್ಳುತ್ತೆನೆ ನಾನು ಊರಿಗೆ ಹೋಗಿ ಹಣ ತರುತ್ತೆನೆ
ಅಂತಾ ಹೇಳಿ ಹೋದವನು. ಮರಳಿ ನನ್ನ ಹತ್ತಿರ ಬರಲಿಲ್ಲ. ನಾನು 03 ದಿವಸಗಳ ಕಾಲ ಭಾವಗಿ ಆಸ್ಪತ್ರೆಯಲ್ಲಿ
ಉಪಚಾರ ಪಡೆದು ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕುರಾಳ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಅಲ್ಲಿ
ವೈದ್ಯರು ನನಗೆ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಸುಮಾರು 8-10 ದಿವಸಗಳ ಕಾಲ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ವೈದ್ಯರ ಸಲಹೆ ಮೇರೆಗೆ
ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ನನಗೆ ಖರ್ಚಿಗೆ ಹಣ ಕೊಡುತ್ತೆನೆ ಅಂತಾ ಅಬ್ದುಲರಹಿಮಾನ ಇತನು
ಸುಳ್ಳು ಹೇಳಿ ಹೋದವನು ಮರಳಿ ಬಂದಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ
ನರೋಣಾ ಠಾಣೆ : ಶ್ರೀ ದಯಾನಂದ ತಂದೆ ಶಿವಪುತ್ರಪ್ಪಾ ಸಂಗೋಳಗಿ ಸಾ:ಲಾಡಚಿಂಚೋಳಿ ರವರು ದಿನಾಂಕ 01-11-2019
ರಂದು ಆಳಂದ ಪಟ್ಟಣದ ಸಂತೆ ಇದ್ದ ಪ್ರಯುಕ್ತ ನಮ್ಮ ಗ್ರಾಮದ ಪೀಕಪ್ ವಾಹನ ಸಿದ್ದಣ್ಣಾ ಪೂಜಾರಿ ಇವರ
ವಾಹನ ಸಂಖ್ಯೆ ಕೆಎ32-ಬಿ4788 ಇದರಲ್ಲಿ ತರಕಾರಿ ಸಾಮಾನು ತಗೆದುಕೊಂಡು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಹೋಗಿದ್ದು, ನಂತರ ಮರಳಿ ನಮ್ಮ ಗ್ರಾಮದ ಕಡೆಗೆ, ಬರುವಾಗ ಅಲ್ಲಿಯಿಂದ ಕಲಬುರಗಿ ಕಡೆಗೆ ಹೋಗಿ ಮತ್ತೆ ಕಲಬುರಗಿಯಿಂದ ಕಿರಾಣಿ ಸಾಮಾನು ತಗೆದುಕೊಂಡು
ನಮ್ಮ ಗ್ರಾಮಕ್ಕೆ ಬರುತ್ತಿದ್ದಾಗ, ದಿನಾಂಕ:31/10/2019 ರಂದು ಕಡಗಂಚಿ ಗ್ರಾಮ ದಾಟಿ ನಂದಿ ತೋಟದ ಹತ್ತಿರ ಎದುರುಗಡೆಯಿಂದ ಒಂದು ದೊಡ್ಡಲಾರಿ ಅದರ ಚಾಲಕ
ಅತೀವೇಗ ಮತ್ತು ನಿಸ್ಕಾಳಜಿತನಿಂದ ನಡೆಸಿಕೊಂಡು ಬಂದು ಡಿಕ್ಕಿಹೊಡೆದಿದ್ದು, ಅದರಿಂದ ನಮ್ಮ ಪೀಕಪ ವಾಹನ ಪಲ್ಟಿಯಾಗಿ ನನಗೆ ಬಲಗೈಯಿಗೆ ಮತ್ತು ತಲೆಗೆ ಎದೆಗೆ ಭಾರಿ ರಕ್ತಗಾಯವಾಗಿದ್ದು
ನಮ್ಮ ವಾಹನ ಚಾಲಕನಾದ ಶರಣಬಸಪ್ಪಾ ತಂದೆ ಪ್ರಭುಲಿಂಗ್ ಬಿಲಗುಂದಿ ಇವರಿಗೆ ಯಾವುದೇ ಗಾಯವಾಗಿರುವುದಿಲ್ಲ.
ಆಗ ಅಲ್ಲಿಯೇ ಇದ್ದ ಹೊಲದಲ್ಲಿನ ನಮ್ಮ ಗ್ರಾಮದ ನಾಗರಾಜ್ ತಂದೆ ಶಾಂತಪ್ಪಾ ಗೌರ, ಮಾಳಿಂಗರಾಯ ತಂದೆ ಸಿದ್ದಪ್ಪಾ ಚಂದ್ರಶ್ಯಾ ತಂದೆ ವಿಠಲ್ ಅರಬ್, ಪ್ರೇಮಯ್ಯ ತಂದೆ ಶಂಕ್ರಯ್ಯ ಸ್ವಾಮಿ, ಶಂಕರ ತಂದೆ ಹಣಮಂತರಾವ ಪಾಟೀಲ್
ಇವರು ಬಂದು ನನಗೆ ಅಂಬ್ಯೂಲೆನ್ಸಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಉಪಚಾರಕ್ಕಾಗಿ
ದಾಖಲಿಸಿದ್ದು,
ನಂತರ ಹೆಚ್ಚಿನ ಉಪಚರಕ್ಕಾಗಿ, ಕಾಮರೆಡ್ಡಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ. ನಂತರ ನನಗೆ ನಮ್ಮ ಸಂಬಂಧಿಕರಿಂದ ಗೊತ್ತಾಗಿದ್ದು
ಸದರಿ ಲಾರಿ ನಂಬರ್ ಎಂ.ಹೆಚ್20-ಡಿಇ7269 ಇದ್ದು ಅದರ ಚಾಲಕ ಶೇರಖಾನ ಅಂತಾ ತಿಳಿದು ಬಂದಿರುತ್ತದೆ. ಕಾರಣ ಸದರಿ ಲಾರಿಚಾಲಕನು ಅತೀವೇಗ
ಮತ್ತು ನಿಷ್ಕಾಳಜಿತನಿಂದ ನಡೆಸಿಕೊಂಡು ಬಂದು ನಾನು ಕುಳಿತ ವಾಹನಕ್ಕೆ ಡಿಕ್ಕಿಹೊಡೆದು ನನಗೆ ಈ ರೀತಿಯಾಗಿ
ತಿವ್ರ ಗಾಯಗೊಳಿಸಿದ ಬಗ್ಗೆ ಯೋಗ್ಯ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.