Police Bhavan Kalaburagi

Police Bhavan Kalaburagi

Sunday, June 11, 2017

Yadgir District Reported Crimes


                                                        Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 192/2017 ಕಲಂ 279. 337 304(ಎ) ಐಪಿಸಿ  ;- ದಿನಾಂಕ 09/06/2017 ರಂದು ಮದ್ಯಾಹ್ನ 14-15 ಗಂಟೆಗೆ  ಫಿರ್ಯಾದಿ ಶ್ರೀ ಮಡಿವಾಳಪ್ಪ ತಂದೆ ಬಸನಗೌಡ ಮಲ್ಲೇದ ವಯ 50 ವರ್ಷ ಜಾತಿ ಲಿಂಗಾಯತ ರೆಡ್ಡಿ ಉಃ ಒಕ್ಕಲುತನ ಸಾಃ ಬಿಂಜಲಬಾವಿ ತಾಃ ಸಿಂದಗಿ ಜಿಃ ವಿಜಯಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 09/06/2017 ರಂದು ಮುಂಜಾನೆ 06-30 ಗಂಟೆಗೆ ಬಿಂಜಲಬಾವಿ ಗ್ರಾಮದಿಂದ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಮೃತ ಲಕ್ಷ್ಮೀಬಾಯಿ ಹಾಗೂ ದೂರದ ಸಂಬಂಧಿಯಾದ ತಮ್ಮೂರ ಬಸನಗೌಡ ತಂದೆ ಮಡಿವಾಳಪ್ಪ ಚೌದ್ರಿ ರವರೆಲ್ಲರೂ ಕೂಡಿ ಶಹಾಪೂರ ತಾಲೂಕಿನ ದೋರನಳ್ಳಿ ಗ್ರಾಮದ ಸಿಮಿ ಮರೇಮ್ಮ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಮೊಟರ ಸೈಕಲ್ ಮೇಲೆ ತಳ್ಳಳ್ಳಿ ಗ್ರಾಮಕ್ಕೆ ಬಂದು ಫಿರ್ಯಾದಿಗೆ ಪರಿಚಯವಿರುವ ಶಾಂತಪ್ಪ ದೋರಿ ಈತನಿಗೆ ಭೇಟಿಯಾಗಿ ದೋರನಳ್ಳಿ ಗ್ರಾಮಕ್ಕೆ ಸಿಮಿ ಮರೆಮ್ಮ ದೇವರ ದರ್ಶನಕ್ಕೆ ಹೊಗೋಣ ಅಂತ ಹೇಳಿ ಕರೆದುಕೊಂಡು  ಆತನ ಮೋಟರ ಸೈಕಲ್ ನಂಬರ ಕೆಎ-33-ಆರ್-7668 ನೇದ್ದರ ಮೇಲೆ ಫಿರ್ಯಾದಿಯು ತನ್ನ ಹೆಂಡತಿಯನ್ನು ಕೂಡಿಸಿದ್ದು, ಮತ್ತು ಫಿರ್ಯಾದಿಯು, ಬಸನಗೌಡ ಈತನು ಚಲಾಯಿಸುತಿದ್ದ ಮೋಟರ ಸೈಕಲದ ಹಿಂದೆ ಕುಳಿತುಕೊಂಡು ಎಲ್ಲರೂ ಕೂಡಿ ದೇವರ ದರ್ಶನಕ್ಕೆ ಬರುತಿದ್ದಾಗ ಶಹಾಪೂರ-ಯಾದಗಿರಿ ಮುಖ್ಯೆ ರಸ್ತೆಯ ಮೇಲೆ ಬೇವಿನಹಳ್ಳಿ ಮುರಾಜರ್ಿ ಶಾಲೆ ದಾಟಿದ ನಂತರ ಶಾಂತಪ್ಪ ಈತನು ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂಜಾನೆ 09-00 ಗಂಟೆಗೆ  ಬೇವಿನಹಳ್ಳಿ ಕೇನಾಲ ಹತ್ತಿರ ಒಮ್ಮಿಂದಲೆ ಸ್ಕೀಡ್ಡಾಗಿ ಮೋಟರ ಸೈಕಲ ಸಮೇತ ರೋಡಿನ ಮೇಲೆ ಬಿದ್ದರು ಬಸನಗೌಡ ಮತ್ತು ಫಿರ್ಯಾದಿ ಅವರ ಹಿಂದಿನಿಂದಲೆ ಮೋಟರ ಸೈಕಲ್ ಚಲಾಯಿಸಿಕೊಂಡು ಹೋಗುತಿದ್ದರಿಂದ ಅಪಘಾತವಾಗಿದ್ದನ್ನು ನೋಡಿ ಅವರ ಮೋಟರ ಸೈಕಲ್ ರೋಡಿನ ಬದಿಗೆ ನಿಲ್ಲಿಸಿ ಅಪಘಾತವಾಗಿ ರೋಡನ ಮೇಲೆ ಬಿದ್ದವರ ಹತ್ತಿರ ಹೋಗಿ ನೋಡಲಾಗಿ ಫಿರ್ಯಾದಿಯ ಹೆಂಡತಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬರುತಿತ್ತು. ಮತ್ತು ಹಣೆಯ ಮೇಲೆ ಭಾರಿ ಗುಪ್ತಗಾಯವಾಗಿ ಹಣೆ ಉಬ್ಬಿತ್ತು. ಶಾಂತಪ್ಪ ದೊರೆ ಈತನಿಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲ ಗಾಯಗೊಂಡ ಲಕ್ಷ್ಮೀಬಾಯಿ ಇವಳನ್ನು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಮುಂದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಲಕ್ಷ್ಮೀಬಾಯಿ ಇವಳನ್ನು ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು  ಉಪಚಾರ ಪಡೆಯುತ್ತಾ ಮುಂಜಾನೆ 11-30 ಗಂಟೆಗೆ ಲಕ್ಷ್ಮೀಬಾಯಿ ಇವಳು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ ಸದರಿ ತನ್ನ ಹೆಂಡತಿ ಲಕ್ಷ್ಮೀಬಾಯಿ ಇವಳ ಸಾವಿಗೆ ಶಾಂತಪ್ಪ ದೋರಿ ಸಾಃ ತಳ್ಳಳ್ಳಿ ಈತನು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನಿಂದ ಚಲಾಯಿಸಿದ್ದರಿಂದ ಈ ಘಟನೆ ಜರುಗಿರುತ್ತದೆ ಸದರಿಯವನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 192/2017 ಕಲಂ 279 304[ಎ] ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.     

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 99/2017 ಕಲಂ 435 ಐಪಿಸಿ;- ಹಂಪನಗೌಡ ತಂದೆ ಚಂದ್ರಾಮಗೌಡ ಪೊಲೀಸ್ ಪಾಟೀಲ್ ವ|| 56 ವರ್ಷ  ಉ|| ಒಕ್ಕಲುತನ ಸಾ|| ಬೇಳಗುಂದಿ ತಾ||ಜಿ|| ಯಾದಗಿರಿ ಬರೆದುಕೊಂಡುವದೆನೆಂದರೆ ನನ್ನದೊಂದು ಹೊಲ ಸವರ್ೆ ನಂ.1 ನೆದ್ದು ನಮ್ಮೂರ ಸೀಮಾಂತರದಲ್ಲಿ ಭೀಮಾ ನದಿಯ ದಂಡೆಗೆ ಹೊಂದಿ ಇರುತ್ತದೆ ಅದರ ಪಕ್ಕದಲಿದ್ದ ನನ್ನ ಹೊಲ ಸವರ್ೆ ನಂ. 184 ಕ್ಕೆ ನೀರಾವರಿ ಮಾಡುವ ಕುರಿತು ನಾನು ನನ್ನ ಹೊಲ ಸವರ್ೆ ನಂ.1 ರಲ್ಲಿ ಎರಡು ಮೋಟರಗಳನ್ನು ಕೂಡಿಸಿ ಪೈಪ ಲೈನ್ ಮಾಡಿಕೊಂಡಿದ್ದು ಇರುತ್ತದೆ. ನನ್ನಂತೆ ನಮ್ಮೂರಿನ ವೆಂಕಟರೆಡ್ಡಿ ತಂದೆ ಬಸನಗೌಡ ಮತ್ತು ಬಸವರಾಜಪ್ಪಗೌಡ ತಂದೆ ವೀರಭದ್ರಪ್ಪಗೌಡ ಇವರು ಸಹ ತಮ್ಮ ಹೊಲಗಳಿಗೆ ಪೈಪ ಲೈನ್ ಮಾಡಿಕೊಳಲು ನನ್ನ ಹೊಲ ಸವರ್ೆ ನಂ.1 ರಲ್ಲಿ ಮೋಟರ ಕೂಡಿಸುತ್ತೆವೆ ಅಂತಾ ಅಂದಾಗ ನಾನು  ತಕರಾರು  ಮಾಡಿದ್ದು ಆಗ ಅವರು ಊರಿನ ಬುದ್ದಿವಂತರ ಸಮಕ್ಷಮದಲ್ಲಿ ಮಾತು ಕಥೆಯಾಡಿ 2004 ನೇ ಸಾಲಿನಲ್ಲಿ ವೆಂಕಟರೆಡ್ಡಿ ತಂದೆ ಬಸನಗೌಡ ಎರಡು ಮೋಟರಗಳನ್ನು ಮತ್ತು ಬಸವರಾಜಪ್ಪಗೌಡನಿಗೆ ಮೋಟರ ಇಟ್ಟುಕೊಳಲು ಪರವಾನಿಗೆ ನೀಡುವಂತೆ ಬುದ್ದಿವಂತರು ಹೇಳಿದ್ದರಿಂದ ನಾನು ಅವರಿಗೆ ಅನುಕೂಲ ಮಾಡಿಕೊಟ್ಟಿದ್ದೆನು
   ನಾನು ಅನುಕೂಲ ಮಾಡಿಕೊಟ್ಟ ನಂತರ ವೆಂಕಟರೆಡ್ಡಿ ತಂದೆ ಬಸನಗೌಡ ಇತನು ಎರಡು ಮೋಟಾರು ಇಟ್ಟುಕೊಳ್ಳುತ್ತೇನೆ ಅಂತಾ ಹೇಳಿ ಈಗ ಒಟ್ಟು 5 ಮೋಟರಗಳನ್ನು ಇಟ್ಟುಕೊಂಡು ತನ್ನ ಹೊಲಗಳಿಗೆ ನಿರಾವರಿ ಮಾಡಿಕೊಂಡಿರುತ್ತಾನೆ ಇದರಿಂದಾಗಿ ನದಿ ದಂಡೆಗಿದ್ದ ನನ್ನ ಹೊಲದಲ್ಲಿ ನಾನು ಸಾಗುವಳಿ ಮಾಡಲು ತೊಂದರೆಯಾಗಿದ್ದು ಆದರೂ ನಾನು ಯಾರೀಗೂ ಏನು ಹೇಳಿರುವದಿಲ್ಲ  ಇದಾದ ನಂತರ ನಾನು ನನ್ನ ಹೊಲವನ್ನು ಈಗ ಸುಮಾರು ದಿವಸಗಳಿಂದ ಬೆಳಗುಂದಿ ಬಸನಗೌಡ ಎಂಬಾತನಿಗೆ ಲೀಜಿಗೆ ಕೊಟ್ಟಿದ್ದು ಆದರೆ ಈ ವರ್ಷ ಆತನು ಮಾಡುವದಿಲ್ಲ ಅಂತಾ ಹೇಳಿದ್ದರಿಂದ ನಾನು ಈಗ ನಾಗೇಶ ಎಂಬಾತನಿಗೆ ಲೀಜಿಗೆ ಕೊಟ್ಟಿರುತ್ತೆನೆ.ಕಳೆದವಾರ ನಾನು ನನ್ನ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ಮೊನ್ನೆ ದಿನಾಂಕ-08/06/2017 ರಂದು ವಾಪಸ ಬಂದಿದ್ದು ಆಗ ನಾನು ನಿರಾವರಿ ಮಾಡಿದ ನನ್ನ ಹೊಲ ಸವರ್ೆ ನಂ.184 ರ ಕಡೆಗೆ ಹೋಗಿ ನೋಡಲು ನನ್ನ ಹೊಲದಲ್ಲಿಯ 20 ಪೀಟಿನ 6 ಪೈಪ್ ಗಳು ಮತ್ತು 80 ಪೀಟಿನಷ್ಟು ಉದ್ದದ ಕೇಬಲ್ ವೈರ್ ಸುಟ್ಟುದ್ದು ಕಂಡು ಬಂದಿತು.ಈ ಘಟನೆಯು ದಿನಾಂಕ-06/06/2017 ಮತ್ತು 07/06/2017 ರ ಅವಧಿಯಲ್ಲಿ ಆಗಿರುತ್ತದೆ,
   ಯಾರೋ ನನಗೆ ಆಗದವರು ನಾನು ಮಾಡಿದ ನೀರಾವರಿ ಭೂಮಿಗೆ ನೀರು ತಲುಪದಂತೆ ಮಾಡಿ ನನಗೆ ಹಾನಿ ಮಾಡಬೇಕೆಂಬ ಉದೇಶದಿಂದ ನನ್ನ ಪೈಪ್ ಮತ್ತು ವೈರನ್ನು ಸುಟ್ಟು ಸುಮಾರು 15 ಸಾವಿರಗಳಷ್ಟು ಹಾನಿ  ಮಾಡಿದ್ದು ಇರುತ್ತದೆ ನನ್ನ ಹೊಲದಲ್ಲಿಯ ಪೈಪ್ ಮತ್ತು ವೈರನ್ನು ಸುಟ್ಟವರು ಯಾರೆಂಬುದು ಪತ್ತೆ ಮಾಡಿ ನನಗೆ ನ್ಯಾಯಾ ದೊರಕಿಸಿಕೊಡಬೇಕಾಗಿ ವಿನಂತಿ

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ. 8(ಸಿ), 20(ಬಿ) ಎನ್.ಡಿ.ಪಿ.ಎಸ್. ಆ್ಯಕ್ಟ 1985 ;- ದಿನಾಂಕ 10/06/2017 ರಂದು 2-45 ಪಿಎಂಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಜಪ್ತಿ ಪಂಚನಾಮೆ ಮತ್ತು ವರದಿಯನ್ನು ಹಾಜರಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯ ಪಿ.ಎಸ್.ಐ ಸಾಹೆಬರು 12-45 ಪಿಎಂಕ್ಕೆ ಠಾಣೆಯಲಿದ್ದಾಗ  ಹತ್ತಿಕುಣಿ ರೋಡಿನ ಮೇಲೆ ಕಾಳಪ್ಪ ಕಟ್ಟಗಿ ಅಡ್ಡದ ಹತ್ತಿರ ಯಾರೋ ಇಬ್ಬರೂ ಗಾಂಜಾವನ್ನು ತೆಗೆದುಕೊಂಡು ನಿಂತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ವೈದ್ಯಾಧಿಕಾರಿಗಳು, ಪಂಚರೊಂದಿಗೆ ಹೋಗಿ 1-30 ಪಿಎಂಕ್ಕೆ ದಾಳಿ ಮಾಡುವಷ್ಟರಲ್ಲಿ ಒಬ್ಬನು ಪೊಲಿಸ್ ಜೀಪನ್ನು ನೋಡಿ ಓಡಿ ಹೋಗಿದ್ದು ಒಬ್ಬನು ಕೈಗೆ ಸಿಕ್ಕಿ ಬಿದ್ದಿದು ಸದರಿಯವನ ಹತ್ತಿರ ಒಟ್ಟು 326 ಗ್ರಾಂ ಗಾಂಜಾ ಅಂ.ಕಿ 600/- ರೂ ದಷ್ಟು ಗಾಂಜಾ ಸಿಕ್ಕಿದ್ದು ಜಪ್ತಿ ಪಂಚನಾಮೆ ಕೈಕೊಂಡು ಠಾಣೆಗೆ 2-45 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆ ಸಂಗಡ ವರದಿಯನ್ನು ಕೊಟ್ಟಿದ್ದು ಸದರಿ ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಠಾಣೆ ಗುನ್ನೆ ನಂ.98/2017 ಕಲಂ. 8(ಸಿ), 20(ಬಿ) ಎನ್.ಡಿ.ಪಿ.ಎಸ್. ಆ್ಯಕ್ಟ 1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

BIDAR DISTRICT DAILY CRIME UPDATE 11-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-06-2017

ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 60/2017, ಕಲಂ. 279, 338 ಐಪಿಸಿ :-
ದಿನಾಂಕ 10/06/2017 ರಂದು ಫಿರ್ಯಾದಿ ಶ್ರೀ ರಾಜು ತಂದೆ ಗುಂಡಪ್ಪಾ ಎರನಳ್ಳಿಕರ ವಯ 32 ವರ್ಷ ಜಾತಿ ಲಿಂಗಾಯತ || ವ್ಯಾಪಾರ ಸಾ||ಕೆ.ಎಚ್.ಬಿ. ಕಾಲೋನಿ ಬೀದರ ಮತ್ತು ಗೆಳೆಯ ವಿರೇಶ ಚಟನಳ್ಳಿ ಸಾ|| ಬಕಚೋಡಿ ಇಬ್ಬರೂ ಕನ್ನಾಡಂಬೆ ಸರ್ಕಲ ನೆಹರು ಸ್ಟೇಡಿಯಂ ಹತ್ತಿರ ಮಾತಾಡುತ್ತಾ ರೋಡಿನ ಪಕ್ಕದಲ್ಲಿ ನಿಂತಿದ್ದು ಸಮಯ ಮುಂಜಾನೆ 10:00 ಗಂಟೆಯ ಸುಮಾರಿಗೆ ಬೀದರ ಮಡಿವಾಳ ಸರ್ಕಲ ಕಡೆಯಿಂದ ಕನ್ನಾಡಂಬೆ ಸರ್ಕಲ ಕಡೆ ಒಂದು ಮೋಟಾರ ಸೈಕಲ ನಂ KA-32-K-1583 ನೇದ್ದರ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಕನ್ನಾಡಂಬೆ ಸರ್ಕಲ ದೇನಾ ಬ್ಯಾಂಕ ಹತ್ತಿರ ಇರುವ ಚರಂಡಿಯಲ್ಲಿ ಬಿದ್ದಿರುತ್ತಾನೆ  ನಾಲಿಗೆಗೆ ರಕ್ತಗಾಯ, ಮೂಗಿಗೆ ಭಾರಿ ರಕ್ತಗಾಯವಾಗಿ ರಕ್ತ ಬಂದಿರುತ್ತದೆ. ಇರುತ್ತದೆ. ಕೂಡಲೇ ಫಿರ್ಯಾದಿ ಮತ್ತು ವಿರೇಶ ಇಬ್ಬರೂ ಕೂಡಿ ಮಲ್ಲಿಕಾರ್ಜುನನಿಗೆ ಚಿಕಿತ್ಸೆ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿರುತ್ತೇವೆ. ನಿಷ್ಕಾಳಜೀತನದಿಂದ ಚಲಾಯಿಸಿ ಡಿಕ್ಕಿಗೆ ಒಳ್ಳಪಟ್ಟ ಮಲ್ಲಿಕಾರ್ಜುನ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ, ಅಂತಾ ಫೀರ್ಯಾದಿ ಹೇಳಿಕೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹಳ್ಳಿಖೆಡ ಪೊಲೀಸ್ ಠಾಣೆ ಗುನ್ನೆ ನಂ. 83/2017, ಕಲಂ. 279, 337 ಐಪಿಸಿ ಜೊತೆ 187 ಐಎಮ್.ವಿ.ಕಾಯ್ದೆ ;-
ದಿನಾಂಕ :10/06/2017 ರಂದು ರಾತ್ರಿ 1940 ಗಂಟೆಗೆ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ  ಬಂಡೆಪ್ಪಾ ಸಿಹೆಚ್.ಸಿ-581 ಹಳ್ಳಿಖೇಡ (ಬಿ) ಆಸ್ಪತ್ರೆಗೆ 1950 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ದಾವಿದ ತಂದೆ ದಯಾನಂದ ನಾಗನಕೇರೆ ವಯ: 9 ವರ್ಷ ಸಾ: ಅಲ್ಲೂರ ಈತನ ಹತ್ತಿರ ಇದ್ದ ಅವನ ತಾಯಿಯಾದ ದೀನಾ ಗಂಡ ದಯಾನಂದ ಸಾ: ಅಲ್ಲೂರ ರವರ ಮೌಖಿಕ ಹೇಳಿಕೆ ಬರೆದುಕೊಂಡಿದ್ದರ ಸಾರಾಂಶವೇನೆಂದರೆ,   ದಿನಾಂಕ: 10/06/2017 ರಂದು ಸಾಯಂಕಾಲ ಅಂದಾಜು 6:30 ಗಂಟೆ ಸುಮಾರಿಗೆ ಫಿರ್ಯಾದಿ ಮಗನಾದ ದಾವಿದ ಈತನು ಗ್ರಾಮದ ಡಾ// ಬಿ.ಆರ್ ಅಂಬೇಡ್ಕರ ಮೂರ್ತಿ ಹತ್ತಿರ ರೋಡಿನ ಮೇಲೆ ಅವರ ಗೆಳೆಯರ ಜೊತೆಯಲ್ಲಿ ಆಟ ಆಡುತ್ತಿದ್ದು,  ಅದೆ ಸಮಯಕ್ಕೆ ಕಬಿರಾಬಾದವಾಡಿ ಕ್ರಾಸ ಕಡೆಯಿಂದ ಒಂದು ಮೋಟಾರ ಸೈಕಲ ನೇದ್ದರ ಚಾಲಕ ಸದರಿ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು   ಮಗನಿಗೆ ಡಿಕ್ಕಿ ಮಾಡಿ ಸದರಿ ಮೋಟಾರ ಸೈಕಲ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ದಾವಿದ ಈತನಿಗೆ ಡಿಕ್ಕಿಯಿಂದ ಹಣೆಗೆ, ಹೊಟ್ಟೆಗೆ ಹತ್ತಿ ತರಚಿದ ರಕ್ತಗಾಯ ಮತ್ತು ಎಡಗಾಲ ಮೊಳಕಾಲ ಕೆಳಗೆ ಹತ್ತಿ ರಕ್ತಗಾಯ ಆಗಿರುತ್ತವೆ ನಂತರ ಡಿಕ್ಕಿ ಮಾಡಿ ಮೋಟಾರ ಸೈಕಲ ನೋಡಲು ಹಿರೋ ಸ್ಪ್ಲೆಂಡರ್ ಮೋಟಾರ ಸೈಕಲ ಇದ್ದು ಅದರ ನಂ: ಕೆ.-39/ಎಲ್-8605 ಇರುತ್ತದೆ, ಅದರ ಚಾಲಕನ ಹೆಸರು ತಿಳಿದುಕೊಳ್ಳಲು ದತ್ತು ತಂದೆ ಗಿರೆಪ್ಪಾ ಮೇತ್ರೆ ಸಾ: ಚಂದನಹಳ್ಳಿ ಅಂತ ಗೋತ್ತಾಗಿರುತ್ತದೆ, ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 73/2017, ಕಲಂ. 143,147,148,341,323,504,506,441 ಜೊತೆ 149 ಐಪಿಸಿ ಮತ್ತು ಕಲಂ  3(1)(Dgï),3(1)(ಎಸ್.ಸಿ./ಎಸ್.ಟಿ.) ಕಾಯ್ದೆ 1989 :-
¢£ÁAPÀ 10/06/2017 gÀAzÀÄ 2300 UÀAmÉUÉ ¦üAiÀiÁð¢zÁgÀgÁzÀ §®©üêÀÄ vÀAzÉ «±Àé£ÁxÀ ªÁ£ÀSÉÃqÉ  ªÀAiÀĸÀÄì: 40 ªÀµÀð eÁw: J¸ï.¹.ºÉÆðAiÀiÁ G : UÀæAxÀ ¥Á®PÀ PÉ®¸À ªÀÄÄ: vÉÆÃUÀ®ÆgÀ gÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ªÀÄ»§Ä§ ¥ÀmÉî EªÀgÀÄ vÉÆÃUÀ®Æj£À UÁæªÀÄ ¥ÀAZÁAiÀÄvÀ CzÀåPÀëgÁV ºÁ° ¸ÀzÀ¸ÀågÁVgÀÄvÁÛgÉ EªÀjUÉ ¦üAiÀiÁð¢AiÀÄÄ ¥Àj²µÀÖ eÁwAiÀĪÀ£ÉAzÀÄ UÉÆÃvÀÄÛ. EªÀgÀ ªÀÄPÀ̽UÉ  ªÀÄvÀÄÛ Hj£À°èAiÀÄÄ ¸ÀºÀ UÉÆÃvÀÄÛ.  ¢£ÁAPÀ 10/06/2017 gÀAzÀÄ  ¦ügÁå¢AiÀÄÄ UÀ°èAiÀÄ ¥ÀPÀÌzÀ°ègÀĪÀ §¸ÀªÉøÀégÀ UÀÄrAiÀÄ ºÀwÛgÀ ¤AwzÀÄÝ ¸ÀzÀj UÀÄrAiÀÄ Q°AiÀÄ£ÀÄß ¸ÀĤî vÀAzÉ ZÀAzÀæPÁAvÀ ºÁ¸ÀUÉÆAqÀ EvÀ£ÀÄ PÀ°è¤AzÀ MqÉzÀÄ ºÁQzÁ£ÉAzÀÄ £ÀªÀÄä UÁæªÀÄzÀ ²æà ¹zÁæªÀÄ¥Áà ©gÁzÁgÀ EªÀgÀÄ ¸ÀĤ® ºÁ¸ÀUÉÆAqÀ EvÀ£À CtÚ£ÁzÀ C¤Ã® ºÁ¸ÀUÉÆAqÀ EvÀ¤UÉ PÉüÀÄwzÀÝgÀÄ D ªÉüÉAiÀÄ°è dUÀ£ÁßxÀ vÀAzÉ ®PÀëöät EvÀ£À ªÀÄUÀ UÀÄgÀÄ£ÁxÀ ºÁ¸ÀUÉÆÃAqÀ EvÀ£ÉÆA¢UÉ Q° MqÉzÀ §UÉÎ «ZÁj¸ÀÄwÛzÀgÀÄ DUÀ ¦üAiÀiÁð¢AiÀÄÄ CªÀj§âgÀ vÀPÀgÁj£À ªÀÄzÉå ¥ÀæªÉò¹ AiÀiÁPÉ vÀPÀgÁgÀÄ ªÀÄrPÉƼÀÄîw¢Ýj CAvÀ ºÉýzÁUÀ  dUÀ£ÁßxÀ vÀAzÉ ®PÀëöät EvÀ£À ªÀÄUÀ£ÁzÀ UÀÄgÀÄ£ÁxÀ EvÀ£ÀÄ   ¤£ÉPÉ F vÀPÀgÁj£À°è §gÀÄwÛ¢ CA¢zÀPÉÌ ¸ÀĪÀÄä£ÁzÉ£ÀÄ. £ÀAvÀgÀ C°èAzÀ £ÀªÀÄÆägÀ ªÀÄÄRå ©¢¬ÄAzÀ £ÀªÀÄä ªÀÄ£ÉPÀqÉUÉ ºÉÆÃUÀÄwÛzÁÝUÀ ¢£ÁAPÀ 10/06/2017 gÀAzÀÄ gÁwæ 8-25 UÀAmÉUÉ ®Qëöä UÀÄr ºÀwÛgÀ EgÀĪÁUÀ  UÁæªÀÄ ¥ÀAZÁAiÀÄvÀ ¸ÀzÀ¸ÀågÁzÀ ²æà ªÀÄ»§Ä§ vÀAzÉ RªÀÄgÉƢݣÀ ¥ÀmÉî ªÀAiÀĸÀÄì: 45 ªÀµÀð EvÀ£À ªÀÄPÀ̼ÁzÀ RAiÀÄÄA vÀAzÉ ªÀÄ»§Ä§ ¥ÀmÉî  ªÀAiÀĸÀÄì 20 ªÀµÀð, £ÀAiÀÄĪÀÄ vÀAz ªÀÄ»§Ä§ ¥ÀmÉî ªÀAiÀĸÀÄì 18 ªÀµÀð, £À£ÀÄß«ÄAiÀiÁå vÀAzÉ zÀ¸ÀÛVÃgÀ ¥ÀmÉî ªÀAiÀĸÀÄì:20 ªÀµÀð, UÀÄgÀÄ£ÁxÀ vÀAzÉ dUÀ£ÁxÀ ºÁ¸ÀUÉÆÃAqÀ ªÀAiÀĸÀÄì 21 ªÀµÀð,Dj¥sÀ vÀAzÉ £ÀÆgÉÆâݣÀ ¥ÀmÉî ªÀAiÀĸÀÄì:18 ªÀµÀð EvÀgÀgÀÄ CPÀæªÀÄ UÀÄA¥ÀÄ PÀnÖPÉÆAqÀÄ F ºÉƯÁå ¸ÀÆ¼É ªÀÄUÀ ¥ÀAZÁAiÀÄvÀ CzsÀåPÀë ZÀÄ£ÁªÀuÉAiÀÄ°è vÀªÀÄUÉ ¸ÀºÁAiÀÄ ªÀiÁr¯Á JAzÀÄ ªÀÄ»§Ä§ ¥ÀmÉî EvÀ JzÀgÀÄ ¤AvÀÄ ªÀiÁgÉÆà ¸Á¯ÉPÀÄ DUÉ ºÉƣɪÁ¯Á zÉTAUÉ CAvÀ CªÁZÀåªÁV eÁw ¤A¢¹ ¨ÉÊzÀgÀÄ RAiÀÄÄA EvÀ PÀ°è¤AzÀ £À£Àß JqÀUÉÊ »A§¢ bÉ¥ÉAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹zÀ£ÀÄ. £ÀAiÀÄĪÀÄ EvÀ£ÀÄ ¨Éð֤AzÀ JqÀQ«,JgÀqÀÄ PÀtÄÚUÀ¼À PɼÀUÉ ºÉÆqÉzÀÄ ºÀ¯Éè ªÀiÁrgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ:09-06-2017 ರಂದು ರಾತ್ರಿ ನಾನು ಮತ್ತು ನಮ್ಮ ತಂಗಿಯಾದ ಯಲ್ಲಮ್ಮ ಮನೆಯಲ್ಲಿದ್ದಾಗ ನಮ್ಮ ತಂದೆಯಾದ ಪಾಂಡರಂಗ ತಂದೆ ಭೀಮರಾಯ ರಾವುರ ಇವರು ಮನೆಯಲ್ಲಿ ಊಟ ಮಾಡಿದ ನಂತರ ಮೂತ್ರ ವಿಸರ್ಜನೆ ಕುರಿತು ನಮ್ಮ ಮನೆಯ ಎದುರುಗಡೆ ಇದ್ದ ಸೇಡಂ-ಕೊಡಂಗಲ್ ರೋಡ ದಾಟಿ ಹೊದರು, ಮೂತ್ರ ವಿಸರ್ಜನೆ ಮಾಡಿ ಮರಳಿ ಮನೆಗೆ ರೋಡ ದಾಟಿ ಬರುವಾಗ ಕೊಡಂಗಲ್ ಕಡೆಯಿಂದ ಒಬ್ಬ ಮೊಟಾರು ಸೈಕಲ್ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿಪಡೆಯಿಸಿದನು ಅಲ್ಲಿಯೇ ಇದ್ದ ನಾವು ಹೋಗಿ ನೋಡಲು ಮೊಟಾರು ಸೈಕಲ್ ನಂ-KA32 EM-6545 ನೇದ್ದು ಇತ್ತು. ಮೊಟಾರ ಸೈಕಲ್ ಸವಾರನು ವಾಹನ ನಿಲ್ಲಿಸದೇ ಅಲ್ಲಿಂದ ಓಡಿಹೋದನು. ಆತನಿಗೆ ನೋಡಲು ನಾವು ಗುರುತಿಸುತ್ತೇವೆ. ನಮ್ಮ ತಂದೆಗೆ ನೋಡಲು ಎಡ ಮೊಳಕಾಲ ಕೆಳಗೆ ಮುರಿದಿದ್ದು, ಬಲಹುಬ್ಬಿನ ಮೇಲೆ ಭಾರಿ ರಕ್ತಗಾಯ, ಮೂಗಿನ ಮೇಲೆ ತರಚಿದ ಗಾಯ, ಬಲಗಾಲ ಮೊಳಕಾಲಿಗೆ ತರಚಿದ ಗಾಯವಾಗಿತ್ತು. ನಂತರ 108 ಅಂಬ್ಯೂಲೆನ್ಸಗೆ ಕರೆಯಿಸಿ ಸೇಡಂ ಸರಕಾರಿ ಆಸ್ಪತ್ರೆಗೆ ನಂತರ ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ಇಲ್ಲಿ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:10-06-2017 ರಂದು 03-15 ಎ.ಎಮ್.ಕ್ಕೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ ಸುರೇಶ ತಂದೆ ಪಾಂಡರಂಗ ರಾವುರ ಸಾ:ಬಟಗೆರಾ (ಕೆ) ಗೇಟ್, ತಾ:ಸೇಡಂ. ರವರು ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ದಿನಾಂಕ: 10-06-2017 ರಂದು ನಮ್ಮ ತಂದೆ ಮರಿಸ್ವಾಮಿ ಇವರು ಕಾನಾಗಡ್ಡಾ ಪಶು ಆಸ್ಪತ್ರೆಗೆ ಕರ್ತವ್ಯಕ್ಕೆ ಹೋಗುವದಾಗಿ ಹೇಳಿ ಮನೆಯಿಂದ ತಮ್ಮ ಮೊ/ಸೈ ನಂ ಕೆಎ/33-ಆರ್-6984 ನೇದ್ದರ ಮೇಲೆ ಹೋಗಿದ್ದು ಇರುತ್ತದೆ ನಂತರ ನಾನು ಹಾಗು ನಮ್ಮ ತಾಯಿ ಶಿವಮ್ಮ ಮತ್ತು ನಮ್ಮ ತಮ್ಮ ಸಿದ್ರಾಮೇಶ ಮನೆಯಲ್ಲಿದ್ದಾಗ ನಮ್ಮ ಮನೆಯ ಮಾಲಿಕರಾದ ನಾಗೇಶ ಚೌಧರಿ ಇವರು ನಮ್ಮ ಮನೆಯಲ್ಲಿ ಬಂದು ತಿಳಿಸಿದ್ದೆನೆಂದರೆ, ನಿಮ್ಮ ತಂದೆ ಮರಿಸ್ವಾಮಿ ಇವರಿಗೆ ಗುರುಮಠಕಲದಿಂದ ಕರ್ತವ್ಯಕ್ಕೆ ಹೋಗುವಾಗ ಚಂಡ್ರಕಿ ಕ್ರಾಸ ಸಮೀಪದಲ್ಲಿ ಅಪಘಾತವಾಗಿದೆ ಅಂತಾ ನಮಗೆ ಪರಿಚಯವಿರುವ ಬಸ್ಸರೆಡ್ಡಿ ಬುರುಗಪಲ್ಲಿ ಇವರು ನಮಗೆ ಫೋನ ಮಾಡಿ ತಿಳಿಸಿದ್ದಾರೆ ಅಂತಾ ಹೇಳಿದರು ನಂತರ ಹಾಗು ನಮ್ಮ ತಾಯಿ ಮತ್ತು ನಮ್ಮ ತಮ್ಮ ಎಲ್ಲರೂ ಕೂಡಿ ಇಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ಗುರುಮಠಕಲದಿಂದ ಯಾನಾಗುಂದಿಗೆ ಹೋಗುವ ಚಂಡ್ರಕಿ ಕ್ರಾಸ ಹತ್ತಿರ ಬಂದು ನೋಡಲಾಗಿ ನಮ್ಮ ತಂದೆ ಮರಿಸ್ವಾಮಿ ಇವರು ರಸ್ತೆಯ ಎಡಬದಿಯಲ್ಲಿ ಅಪಘಾತದಲ್ಲಿ ಬಾರಿ ಗಾಯಹೊಂದಿ ಮೃತ ಪಟ್ಟಿದ್ದು ನಮ್ಮ ತಂದೆಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಬಂದಿದ್ದು ಹಾಗು ಎರಡು ಕಾಲುಗಳಿಗೆ ತರುಚಿದ ರಕ್ತಗಾಯಾಗಳಾಗಿದ್ದು ಇವರು ಮೃತ ಪಟ್ಟಿದ್ದು ಅಲ್ಲೆ ರಸ್ತೆಯ ಪಕ್ಕದಲ್ಲಿ ನಮ್ಮ ತಂದೆಯ ಮೊ/ಸೈ ಬಿದಿದ್ದು ಈ ಬಗ್ಗೆ ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ತಿಳಿಸಿದೆನೆಂದರೆ, ಇಂದು ಬೆಳಗ್ಗೆ 0930 ಗಂಟೆ ಸುಮಾರಿಗೆ ಸದರಿ ಮೃತ ಮರಿಸ್ವಾಮಿ ಇವರು ತಮ್ಮ  ಮೊ/ಸೈ ನಂಬರ ಕೆಎ33/ಆರ್-6984 ನೇದ್ದರ ಮೇಲೆ ಕುಳಿತು ಗುರುಮಠಕಲ ಕಡೆಯಿಂದ ಯಾನಾಗುಂದಿ ಕಡೆಗೆ ರಸ್ತೆಯ ಎಡಬದಿಯಿಂದ ಹೋಗುತ್ತಿದ್ದಾಗ ಹಿಂದುಗಡೆಯಿಂದ ಒಂದು ಜೀಪನ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗು ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಹೋಗುತ್ತಿದ್ದ ನಿಮ್ಮ ತಂದೆ ಮರಿಸ್ವಾಮಿ ಇವರ ಮೊ/ಸೈಗೆ ಹಿಂದುಗಡೆಯಿಂದ ಡಿಕ್ಕಿ ಪಡಿಸಿದ್ದು ಸದರಿ ಜೀಪನಲ್ಲಿ ಪ್ರಯಾಣಿಕರಿದ್ದು ಸದರಿ ಜೀಪ ನಂಬರ ಸರಿಯಾಗಿ ಕಾಣಿಸಿರುವದಿಲ್ಲಾ ಅದನ್ನು ನೋಡಿದರೆ ಗುರುತಿಸುತ್ತೇವೆ ಸದರಿ ಜೀಪ ಚಾಲಕ ಅಪಘಾತ ಪಡಿಸಿ ತನ್ನ ಜೀಪನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಮಹೇಶ ತಂದೆ ಮರಿ ಸ್ವಾಮಿ ಮೇದರ ಸಾ: ಜಗರಕಲ್ ತಾ:ಜಿ: ರಾಯಚುರ ಹಾವ|| ಲಕ್ಷ್ಮಿನಗರ ಗುರುಮಠಕಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 10.06.2017 ರಂದು ರಾತ್ರಿ-10-30 ಗಂಟೆ ಸುಮಾರಿಗೆ ಮೃತ ಅಣವೀರ ಇತನು ತನ್ನ ಗೆಳೆಯ ಶ್ರೀಕಾಂತ ಇತನಿಗೆ ಕೇಂಧ್ರ ಬಸ್ಸ ನಿಲ್ದಾಣಕ್ಕೆ ಬಿಟ್ಟು ಬರುವ ಸಲುವಾಗಿ ತಾನೂ ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-32-ಇಎಲ್-5799 ನೇದ್ದರ ಹಿಂದುಗಡೆ ಶ್ರೀಕಾಂತ ಮತ್ತು ರಾಘವೇಂದ್ರ ಇತನನ್ನು ಕೂಡಿಸಿಕೊಂಡು ಖರ್ಗೆ ಪೆಟ್ರೊಲ ಪಂಪದಿಂದ ಎಸವಿಪಿ ಸರ್ಕಲ ಮುಖಾಂತರವಾಗಿ ಕೇಂದ್ರ ಬಸ್ಸ ನಿಲ್ದಾಣಕ್ಕೆ ಹೋಗುವಾಗ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿ ರೋಡ ಎಡ ಬಲ ಕಟ್ ಹೊಡದು ಹೋಗಿ ದಾರಿ ಮದ್ಯ ಸರ್ಕಾರಿ  ಐಟಿಐ ಕಾಲೇಜ್ ಎದುರಿನ ರೋಡ ಡಿವೈಡರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಹಿಂದುಗಡೆ ಕುಳಿತಿದ್ದ ಶ್ರೀಕಾಂತ ಮತ್ತು ರಾಘವೇಂಧ್ರ ಇವರಿಗೆ ಗಾಯಗೊಳಿಸಿ ತಾನೂ ಭಾರಿಗಾಯಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.
ಶ್ರೀ ಶ್ರೀಕಾಂತ ತಂದೆ ಅನಂತಯ್ಯಾ ಗುತ್ತೇದಾರ ಸಾ: ಲಕ್ಷ್ಮಿ ಟೆಂಪಲ ಹತ್ತೀರ ರಾಮ ನಗರ ಹುಮನಾಬಾದ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಚೇಂದ್ರ ತಂದೆ ಮಲ್ಲಿಕಾರ್ಜುನ @ ಗ್ರಾಮೀಣ ಠಾಣೆ : ಶ್ರೀ ಮಲ್ಲಪ್ಪ ಕಾಳನೂರ ಸಾ : ಉಪಳಾಂವ ತಾ:ಜಿ: ಕಲಬುರಗಿ ರವರು ದಿನಾಂಕ 09/06/2017 ಸಂಜೆ ಕಾರ ಹುಣ್ಣಿಮೆ ನಿಮಿತ್ಯ ತಮ್ಮಕಾಕಾ ನಾಗೇಂದ್ರ ತಂದೆ ಭೀಮಶ್ಯಾ ಕಾಳನೂರ ಇವರ ಎತ್ತುಗಳು ಮೆರವಣಿಗೆ ಮಾಡಿಸಲು ನಮ್ಮೂರಿನ ಲಕ್ಷ್ಮೀ ಗುಡಿ ಎದುರುಗಡೆ ಎತ್ತುಗಳು ಮೆರವಣಿಗೆ ಮಾಡಲು ಹೋದಾಗ ಮಾಹಾಂತಪ್ಪ ಟೆಂಗಳಿ ಇತನು  ನೋಡಿ ಫಿರ್ಯಾದಿಗೆ ಎ ಹೊಲೆ ಸೂಳೆ ಮಗನೇ ನಿಮ್ಮ ಎತ್ತುಗಳು ಊರಲ್ಲಿ ಮೆರವಣಿಗೆ ಮಾಡಬೇಡಾ ಅಂತಾ ಹೇಳಿದನು. ಅದಕ್ಕೆ ಫಿರ್ಯಾದಿ ನಾವೇಕೆ ಮೆರವಣಿಗೆ ಮಾಡಬಾರದು ಅಂದಿದ್ದಕ್ಕೆ ಮಾಹಾಂತಪ್ಪ ಟೆಂಗಳಿ ಇತನು ನನಗೆ ಹೊಲೆ ಸೂಳೇ ಮಗನೇ ನನಗೆ ಎದುರು ಮಾತಾಡುತ್ತೀ ಭೋಸಡಿ ಮಗನೇ ಅಂತಾ ಬೈದು ಅಲ್ಲೇ ಹತ್ತಿರದಲ್ಲಿ ಇರುವ ತನ್ನ ಮನೆಯಲ್ಲಿ ಹೋಗಿ ಒಂದು ರಾಡು ತೆಗೆದುಕೊಂಡು ಬಂದು ನನ್ನ ಬಲ ಟೊಂಕದ ಮೇಲೆ ಮತ್ತು ಕೆಳೆಗಡೆ ಹೊಡೆದು ಗುಪ್ತಗಾಯಗೊಳಿಸಿದೆನು. ತಮ್ಮ ಅವನ ತಮ್ಮಂದಿರರಾದ ಪೀರಪ್ಪ,ಆಶ್ವಿನ, ರಾಜು ಇವರು ಕೂಡಾ ಬಡಿಗೆ ಮತ್ತು ಬೆಲ್ಟನಿಂದ  ಎಡ ಮತ್ತು ಬಲ ಬೆನ್ನ ಮೇಲೆ ಎಡ ತಲೆಯ ಕಿವಿಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿ, ಇನ್ನೊಮ್ಮೆ ನಾವು ಹೇಳಿದ ಮಾತು ಕೇಳದೇ ಹೋದರೆ ಜೀವ ಸಹಿತ ಬಿಡುವುದಿಲ್ಲಾ ಜೀವ ಭಯ ಹಾಕಿ ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪಿಂಟು ತಂದೆ ಹರಿಶ್ಚಂದ್ರ ಪವಾರ  ಸಾ; ಖಣದಾಳ ತಾಂಡಾ ರವರು ದಿನಾಂಕ 09-03-2017 ರಂದು ತನ್ನ ಮೋ ಸೈಕಲ ಮೇಲೆ ತಾಂಡಾಕ್ಕೆ ಹೊಗುತ್ತಿದ್ದಾಗ ಊರ ಇನ್ನೂ 1 ಕಿಮಿ ದೂರವಿದ್ದಾಗ  1) ರಾಮು ಪವಾರ  2) ಸುಸೀಲಾಬಾಯಿ ಗಂಡ ರಾಮು ಪವಾರ  3) ವೆಂಕಟೇಶ ತಂದೆ ರಾಮು ಪವಾರ ಸಾ; ಎಲ್ಲರೂ ಖಣದಾಳ ತಾಂಡ ರವರು ಫಿರ್ಯಾದಿಗೆ ತಡೆದು ನಿಲ್ಲಿಸಿ ದಿನಾಲು ನಮ್ಮ ಮನೆಯ ಮುಂದೆ ಹೋಗುವಾಗಿ ನನ್ನ ಮಗಳಿಗೆ ಕೇಣಕುತ್ತಿ ರಂಡಿ ಮಗ ನೇ ಅಂತಾ ಅವ್ಯಾಚ್ಚವಾಗಿ ಬೈದು ಕೈಗಳಿಂದ ಹೊಡೆದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದು  ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.