Police Bhavan Kalaburagi

Police Bhavan Kalaburagi

Tuesday, June 4, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-02/06/2019 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮಹ್ಮದ ಯುನುಸ್ ಈತನು ತನ್ನ ಹೊಸ ಮೋಟಾರ ಸೈಕಲ ಚಸ್ಸಿ  MBLHAW091K5C02257 ನೇದ್ದರ ಮೇಲೆ ಹಿಂದುಗಡೆ ಶ್ರೀಮತಿ ಸಮೀನಾ ಗಂಡ ಸಮದ ಅಹ್ಮದ ಸಾ : ಮುಗುಟಾ ತಾ ಚಿತ್ತಾಪೂರ ಹಾ.ವ. ಉಮರ ಕಾಲೂನಿ ಆಜಾದ ಪೂರ ರೋಡ ಕಲಬುರಗಿ ರವರ  ಗಂಡ ಸಮದ ಅಹ್ಮದ  ಈತನಿಗೆ ಕೂಡಿಸಿಕೊಂಡು ಪಟ್ಟಣ ಕ್ರಾಸ್ ದಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಟ್ಟಣ ಕ್ರಾಸ್ ಸಮೀಪ ರೋಡ ಮೇಲೆ ಒಮ್ಮೆಲೆ ಮೋಟಾರ ಸೈಕಲ ಬ್ರೇಕ್ ಹಿಡಿದು ಸಮದ ಅಹ್ಮದ ಈತನಿಗೆ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿ ಸಮದ ಅಹ್ಮದ ಈತನಿಗೆ ಬಾರಿಗಾಯಗೊಳಿಸಿದರಿಂದ ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯವನು ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ-03/06/2019 ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಗುನ್ನೆ ನಂ 86/2019 ಕಲಂ 279, 337, 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶರಣಬಸಪ್ಪ ತಂದೆ ಬಾಬು ಕಟಬರ ಸಾ:ಕೊರಳ್ಳಿ ತಾ:ಆಳಂದ ರವರು ಒಂದು ವರ್ಷದಿಂದ ಭೂಸನೂರ ಗ್ರಾಮದ ಬಸವರಾಜ ತಂದೆ ಕಲ್ಯಾಣರಾವ ಪಾಟೀಲ ರವರ ಬುಲೆರೊ ವಾಹನ ನಂಬರ MH-13 AZ-8294 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತೇನೆ ದಿನಾಂಕ: 02/06/2019 ರಂದು ಬೆಳಿಗ್ಗೆ ನನ್ನ ಮಾಲಕರಾದ ಬಸವರಾಜ ಪಾಟೀಲ ರವರು ನನಗೆ ತಿಳಿಸಿದ್ದೆನಂದರೆ ಸಾಲೋಟಗಿ ಗ್ರಾಮದಲ್ಲಿ ನಮ್ಮ ಸಂಭಂದಿಕರ ನಿಚ್ಚಿತಾರ್ಥ ಕಾರ್ಯಕ್ರವವಿದೆ ಹೋಗಿ ಬರೋಣ ಅಂತ ಹೇಳಿ ತಮ್ಮ ಸಂಗಂಡ ಭೂಸನೂರ ಗ್ರಾಮದವರಾದ 1)ಚಂದಪ್ಪ ತಂದೆ ಮಲ್ಲಪ್ಪ ಯಂಕಂಚಿ 2)ಹಣಮಂತ ತಂದೆ ಶರಣಪ್ಪ ಪ್ಯಾಟಿ 3)ಶಂಕರಾವ ತಂದೆ ಸಿದ್ದಣ್ಣ ಪಾಟೀಲ ರವರೂಗಳಿಗೆ ಕರೆದು 9-30 .ಎಮ್.ಸುಮಾರಿಗೆ ಭುಸನೂರ ಗ್ರಾಮದಿಂದ ಬುಲೆರೊ ವಾಹನ ನಂಬರ MH-13 AZ-8294 ನೇದ್ದರಲ್ಲಿ ಹೋಗಿರುತ್ತೇವೆ ಅಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಆಲಮೇಲ ಅಫಜಲಪೂರ ಮಾರ್ಗವಾಗಿ ಭೂಸನೂರ ಗ್ರಾಮಕ್ಕೆ ಹೋಗುತ್ತೀರುವಾಗ 4-00 ಪಿ,ಎಮ್.ಸುಮಾರಿಗೆ ಮಾರ್ಗ ಮಧ್ಯದಲ್ಲಿ ಮಾತೋಳಿ ಗ್ರಾಮ ಸಮೀಪ ಹೋಗುತ್ತಿರುವಾಗ ನಾನು ಚಲಾಯಿಸುತ್ತಿದ್ದ ಬುಲೆರೊ ವಾಹನಕ್ಕೆ ಬಲಗಡೆ ಹೊಲದ ದಾರಿಯಿಂದ ಮುಖ್ಯ ರಸ್ತೆ ಮೇಲೆ ಅಡ್ಡಲಾಗಿ ಟ್ರ್ಯಾಕ್ಟರ ಚಾಲಕ ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಬುಲೆರೊ ವಾಹನಕ್ಕೆ ಡಿಕ್ಕಿ ಪಡಿಸಿ ನಮಗೆ ನೋಡಿ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ನಂತರ ಟ್ರ್ಯಾಕ್ಟರ ನಂಬರ ನೋಡಲಾಗಿ KA-32 TB-3516 ನೇದ್ದು ಇದ್ದು ಅದು ಮಹಿಂದ್ರಾ ಕಂಪನಿಯದು ಇರುತ್ತದೆ. ಸದರಿ ಅಪಘಾತದಲ್ಲಿ ನನಗೆ ತಲೆಗೆ ರಕ್ತಗಾಯ ಮತ್ತು ಎದಗೆ ಒಳಪೆಟ್ಟು ಆಗಿರುತ್ತದೆ ನನ್ನಂತೆ ಬುಲೆರೊ ವಾಹನದಲ್ಲಿ ಕುಳಿತಿದ್ದ ಬಸವರಾಜ ಪಾಟೀಲ ರವರಿಗೆ ತಲೆಯ ಬಲ ಭಾಗಕ್ಕೆ ರಕ್ತಗಾಯವಾಗಿರುತ್ತದೆ ಚಂದಪ್ಪ ರವರಿಗೆ ಎಡಗೈ ಮುರಿದಿರುತ್ತದೆ ಹಣಮಂತರವರಿಗೆ ಎಡಗೈ ಮುರಿದು ತಲೆಯ ಬಲ ಭಾಗಕ್ಕೆ ಭಾರಿ ರಕ್ತಗಾಯವಾಗಿರುತ್ತದೆ ಶಂಕರರಾವ ರವರಿಗೆ ತಲೆಗೆ ರಕ್ತಗಾಯವಾಗಿರುತ್ತದೆ.ಮತ್ತು ಬುಲೆರೊ ವಾಹನದ ಮುಂದಿನ ಭಾಗ ಜಖಂಗೊಂಡಿರುತ್ತದೆ ನಂತರ 108 ವಾಹನಕ್ಕೆ ಕರೆಯಿಸಿಕೊಂಡು ನಾವೆಲ್ಲರು ಅದರಲ್ಲಿ ಉಪಚಾರ ಕುರಿತು ಕಲಬುರರ್ಗಿಯ ಪಿ.ಜಿ.ಶಹಾ ಆಸ್ಪತ್ರೇಯಲ್ಲಿ ಸಾಯಂಕಾಲ 6 ಗಂಟೆ ಸುಮಾರಿಗೆ ಸೇರಿಕೆಯಾಗಿರುತ್ತೇವೆ. ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಗುನ್ನೆ ನಂ 76/2019 ಕಲಂ 279, 337, 338 ಐಪಿಸಿ ಮತ್ತು 187 .ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.