ಆಕ್ರಮವಾಗಿ ನಾಡ ಪಿಸ್ತೂಲ ಹೊಂದಿದವರ ಬಂಧನ
ಅಫಜಲಪೂರ ಠಾಣೆ :
ದಿನಾಂಕ 08-01-2017 ರಂದು ಬೆಳಿಗ್ಗೆ ಅಫಜಲಪೂರ
– ದುಧನಿ ರಸ್ತೆಗೆ
ಇರುವ ಬಳೂರ್ಗಿ ಗ್ರಾಮ ದಾಟಿ ಮುಂದೆ ಹೊರವಲಯದಲ್ಲಿ ಎರಡು ಜನರು ನಿಂತುಕೊಂಡು ಪಿಸ್ತೂಲ ಮಾರಾಟ ಮಾಡುವ
ವ್ಯವಹಾರ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ Sfri ಶ್ರೀ ಸಿದ್ದರಾಯ ಭೋಸಗಿ sಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಬಳೂರ್ಗಿ ಗ್ರಾಮ ದಾಟಿ ಬಸವಣ್ಣ ದೇವರ ಗುಡಿಯಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಬಸವಣ್ಣ ದೇವರ ಗುಡಿಯ ಹತ್ತಿರ ರೋಡಿನ ಮೇಲೆ ಎರಡು ಜನರು ನಿಂತಿದ್ದು, ಇಬ್ಬರ ಹತ್ತಿರ
ಒಂದೊಂದು ಪಿಸ್ತೂಲುಗಳು ಇದ್ದವು. ಇಬ್ಬರು ಪಿಸ್ತೂಲುಗಳನ್ನು ತಮ್ಮ ಕೈಯಲ್ಲಿ ಹಿಡಿದು ಪರಿಶೀಲನೆ ಮಾಡುತ್ತಿದ್ದಾಗ ದಾಳಿ ಮಾಡಿ ಇಬ್ಬರನ್ನು
ಹಿಡಿದು ಹೆಸರು ವಿಳಾಸ ವಿಚಾರಿಸಿಲಾಗಿ 1)
ನಾಗೇಂದ್ರಪ್ಪ ತಂದೆ ಮೋನಪ್ಪ ಸೋನಾರ ಸಾ|| ಜಳಕಿ (ಕೆ) ತಾ|| ಆಳಂದ ಅಂತಾ ತಿಳಿಸಿದ್ದು,
ಸದರಿಯವನ ಹತ್ತಿರ
ಒಂದು ನಾಡ ಪಿಸ್ತೂಲು ದೊರೆತಿದ್ದು, ಹಾಗೂ ಸದರಿಯವನನ್ನು ಚೆಕ್ ಮಾಡಲಾಗಿ ಅವನ ಪ್ಯಾಂಟಿನ ಜೇಬಿನಲ್ಲಿ
ಪಿಸ್ತೂಲಿನ 03 ಜಿವಂತ ಗುಂಡುಗಳು ದೊರೆತವು. 2) ಶಿವಶರಣ ತಂದೆ ಸೂರ್ಯಕಾಂತ ಬಾಸಗಿ ಸಾ|| ಜಳಕಿ
(ಕೆ) ತಾ|| ಆಳಂದ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಒಂದು ನಾಡ ಪಿಸ್ತೂಲು
ದೊರೆತಿದ್ದು, ಹಾಗೂ ಸದರಿಯವನನ್ನು ಚೆಕ್
ಮಾಡಲಾಗಿ ಅವನ ಪ್ಯಾಂಟಿನ ಜೇಬಿನಲ್ಲಿ ಪಿಸ್ತೂಲಿನ 02 ಜಿವಂತ ಗುಂಡುಗಳು ದೊರೆತವು. ಸದರಿಯವರಿಗೆ ಪಿಸ್ತೂಲುಗಳು ಹಾಗೂ ಗುಂಡುಗಳ ಬಗ್ಗೆ ವಿಚಾರಿಸಿದಾಗ, ಸದರಿಯವರು ಇವು ನಾಡ ಪಿಸ್ತೂಲುಗಳು
ಇದ್ದು, 05 ಜೀವಂತ ಗುಂಡುಗಳಿರುತ್ತವೆ. ಹಾಗೂ
ಇವುಗಳಿಗೆ ಯಾವುದೆ ಲೈಸನ್ಸ
ಇರುವುದಿಲ್ಲ. ಅಂತಾ ತಿಳಿಸಿದರು. ಸದರಿ
ನಾಡ ಪಿಸ್ತೂಲುಗಳನ್ನು ಎಲ್ಲಿಂದ ಬಂದಿದ್ದು ಎಂಬ ಬಗ್ಗೆ ವಿಚಾರಿಸಿದಾಗ, ಸದರಿಯವುಗಳನ್ನು 3) ಸೈಪನಸಾಬ
ಶೀರೂರ ಸಾ|| ಜಳಕಿ (ಕೆ) ತಾ|| ಆಳಂದ ಈತನು ನಮಗೆ ಕೊಟ್ಟಿರುತ್ತಾನೆ ಅಂತಾ ತಿಳಿಸಿದರು.
ಸದರಿ ಆರೋಪಿತರು ಅಕ್ರಮವಾಗಿ ಇಟ್ಟುಕೊಂಡ ಎರಡು ನಾಡ ಪಿಸ್ತೂಲುಗಳು ಅ||ಕಿ|| 60,000/- ರೂ ಮತ್ತು ಸದರಿ ನಾಡ
ಪಿಸ್ತೂಲುಗಳ 05 ಜಿವಂತ ಗುಂಡುಗಳು ಅ||ಕಿ|| 500/- ರೂ
ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :
ಶ್ರೀಮತಿ ಮಹಾದೇವಿ ಗಂಡ
ದಿಃ ಪೀರಪ್ಪ ಕುಂಟನೂರ ಸಾ : ಸೀತನೂರ ಇವರ ಮಗಳಾದ ಲಕ್ಷ್ಮೀ ಇವಳು ದಿನಾಂಕ 7/1/2017 ರಂದು ಪ್ರತಿ ದಿವಸದಂತೆ
ಬೆಳಿಗ್ಗೆ ಕೆಲಸಕ್ಕೆಂದು ಕಲಬುರಗಿಗೆ ಮನೆಯಿಂದ ಹೋದವಳು ರಾತ್ರಿಯಾದರು ಮನೆಗೆ ಮರಳಿ
ಬಂದಿರುವದಿಲ್ಲ ದಿನಾಂಕ 8/1/2017 ರಂದು ಬೆಳಗ್ಗಿನ ಜಾವ ನಮ್ಮ ಅಣ್ಣತಮ್ಮಕಿಯ ಶ್ರಿಮಂತ ತಂದೆ
ನಾಗಪ್ಪ ಕುಂಟನೂರ ಇತನು ತಿಳಿಸಿದ್ದೇನೆಂದರೆ, ಲಕ್ಷ್ಮಿ ಹತ್ತಿರ ಇರುವ
ಮೊಬೈಲದಿಂದ ಯಾರೋ ತನಗೆ ಪೊನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಸದರಿ ಲಕ್ಷ್ಮಿ ಇವಳು ಮನೆಗೆ ಬರುವಾಗ ಕಲಬುರಗಿಯಿಂದ ಯಾವುದೋ ವಾಹನದಲ್ಲಿ
ಬಂದು ಜೇವರಗಿ ಕಡೆಗೆ ಹೋಗುವ ರೋಡಿನ ಕೇಂದ್ರ ಕಾರಾಗೃಹ ದಾಟಿ ನಾಕಣ್ಣ ಕುಲ್ಲಾ ಪ್ಲಾಟ ಇಳಿದು
ನಡೆದುಕೊಂಡು ರೋಡಿನ ಎಡ ಬದಿಯಿಂದ ನಡೆದುಕೊಂಡು ಹೋಗುವಾದ ಯಾವುದೋ ವಾಹನದ ಚಾಲಕ ತನ್ನ ವಾಹನ ಅತೀ
ವೇಗದಿಂದ ಹಾಗು ಅಲಕ್ಷತನದಿಂದ ನಡೆಯಿಸಿ ಸದರಿ ಲಕ್ಷ್ಮಿ ಡಿಕ್ಕಿ ಪಡೆಯಿಸಿ ವಾಹನ ನಿಲ್ಲಿಸಿದೇ
ಹೋಗಿದ್ದು ಅಪಘಾತದಿಂದ ಲಕ್ಷ್ಮಿಯ ತಲೆ ಒಡೆದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಸದರಿ ಘಟನೆ ದಿನಾಂಕ 8/1/2017 ರಂದು 0030 ಗಂಟೆಯಿಂದ 0100 ಎಎಂದಲ್ಲಿ
ಆಗಿರಬಹುದೆಂದು ತಿಳಿಸಿದ್ದು ಆಕೆಯ ಶವವು ಫರಹತಾಬಾದ ಪೊಲೀಸರಿಗೆ ಮಾಹಿತಿ ತಿಳಿದು ಸರಕಾರಿ
ಆಸ್ಪತ್ರೆಗೆ ತಂದಿರುತ್ತಾರೆ ಹೋಗೊಣಾ ನಡಿ ಎಂದು ಹೇಳಿದ್ದಕ್ಕೆ ನಾನು ಮತ್ತು ನಮ್ಮ ಸಂಬಂಧಿ
ಶ್ರೀಮಂತ ತಂದೆ ನಾಗಪ್ಪ, ಹುಲೇಪ್ಪ ತಂದೆ ಪೀರಪ್ಪ ಕೂಡಿ
ಬಂದು ನೋಡಲಾಗಿ ರಸ್ತೆ ಅಪಘಾತದಲ್ಲಿ ಯಾವುದೋ ವಾಹನ ನನ್ನ ಮಗಳಿಗೆ ಡಿಕ್ಕಿ ಪಡೆಯಿಸಿ ಅಪಘಾತ
ಮಾಡಿದ ಪರಿಣಾಮ ಆಕೆಯ ತಲೆ ಒಡೆದು ಸಾವು ಸಂಭವಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.