Police Bhavan Kalaburagi

Police Bhavan Kalaburagi

Friday, June 5, 2020

BIDAR DISTRICT DAILY CRIME UPDATE 05-06-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-06-2020

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಾಲನ ಬೆಗಂ ಗಂಡ ಎಂ.ಡಿ ಸಲೀಂ ಮುಬಾರಕ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಕಮಠಾಣಾ, ತಾ: & ಜಿ: ಬೀದರ ರವರ ಅತ್ತೆಯಾದ ಮಹಮದಿ ಬೇಗಂ ಗಂಡ ಹನ್ನುಮಿಯ್ಯಾ ಇವರ ಹೆಸರಿನಲ್ಲಿ ಕಮಠಾಣಾ ಗ್ರಾಮದ ಸರ್ವೆ ನಂ. 332/2, 333/01 ನೇದರಲ್ಲಿ ಒಟ್ಟು 3 ಎಕರೆ 4 ಗುಂಟೆ ಜಮೀನು ಇರುತ್ತದೆ, ಸದರಿ ಜಮೀನಿನಲ್ಲಿ ಫಿರ್ಯಾದಿಯವರ ಗಂಡ ಸಲೀಂ ತಂದೆ ಹನ್ನುಮಿಯ್ಯಾ ರವರು ಸಾಗುವಳಿ ಮಾಡಿಕೊಂಡು ಉಪಜೀವಿಸಿಕೊಂಡಿದ್ದು, ಸದರಿ ಜಮೀನಿನಲ್ಲಿ ಕಬ್ಬು ಹಾಕಿದ್ದು ಮತ್ತು ಇತರೆ ಸಮಿಶ್ರ ಬೆಳೆ ಹಾಕಿದ್ದು, ಬೆಳೆಗೆ ನೀರು ಇಲ್ಲದೆ ಯಾವುದೇ ಬೆಳೆ ಬಾರದ ಕಾರಣ ಗಂಡ ಮಾನಸಿಕವಾಗಿ ಮನನೊಂದು ಬೆಳೆ ನಮಗೆ ಲಾಭ ತರುತ್ತಿಲ್ಲಾ ನಾನು ಖಾಸಗಿಯಾಗಿ ಕೈಕಡವಾಗಿ ಅಲ್ಲಲ್ಲಿ ಸಾಲ ಮಾಡಿದ್ದು ಸಾಲ ನಾನು ಹೇಗೆ ತಿರಿಸಲಿ ಅಂತ ಆವಾಗಾವಾಗ ಹೇಳುತ್ತಿದ್ದರು, ಈಗ ಕಳೆದ 2 ತಿಂಗಳಿನಿಂದ ಲಾಕ್ಡೌನ್ ಆಗಿದ್ದು ಕೈಕಡ ತಂದಿರುವಂತಹ ಸಾಲ ಕೊಡುವುದಕ್ಕೆ ಆಗದೇ ಇರುವುದರಿಂದ ಮತ್ತು  ಹೊಲದಲ್ಲಿ ಯಾವುದೇ ಬೆಳೆ ಬೆಳೆಯದೇ ಇರುವುದರಿಂದ ಗಂಡ ಬಹಳಷ್ಟು ಮನನೊಂದು ಹಾಗೂ ಸಾಲದ ಭಾದೆಯಿಂದ ದಿನಾಂಕ 04-06-2020 ರಂದು ಗಂಡ ಮನ್ನಳ್ಳಿ ಗ್ರಾಮ ಶಿವಾರದ ಗೊವಿಂದರಾವ ಕಾಮತಿಕರ ರವರ ಹೊಲದ ಬಾವಿಯಲ್ಲಿ ಹಾರಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 39/2020, ಕಲಂ. 279, 304() ಐಪಿಸಿ :-
ದಿನಾಂಕ 04-06-2020 ರಂದು ಫಿರ್ಯಾದಿ ಬಾಲಾಜಿ ತಂದೆ ಶಿವಬಸಪ್ಪಾ ವಡಜಿ ಸಾ: ಮರಕಲ, ತಾ & ಜಿಲ್ಲೆ: ಬೀದರ ರವರ ತಮ್ಮನಾದ ಜೀತೇಂದ್ರ ಇತನು ತನ್ನ ಟಾಟಾ ಇಂಡಿಕಾ ಕಾರ್ ಸಂ. ಎಮ್.ಹೆಚ್-01/ಪಿಎ-6004 ನೇದನ್ನು ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಕಲಬುರಗಿ ಕಡೆಯಿಂದ ಹುಮನಾಬಾದ ಕಡೆಗೆ ಬರುತ್ತಿರುವಾಗ  ಅದೇ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ ನಂ. 50 ಕಲಬುರಗಿ - ಹುಮನಾಬಾದ ರೋಡಿನ ಮೇಲೆ ಎದುರಿನಿಂದ ಅಂದರೆ ಹುಮನಾಬಾದ ಕಡೆಯಿಂದ ಟಿಪ್ಪರ್ ಸಂಖ್ಯೆ. ಕೆಎ-39/8524 ನೇದರ ಚಾಲಕನಾದ ಆರೋಪಿ ಬಸವರಾಜ ತಂದೆ ಯಂಕಪ್ಪಾ ಚವ್ಹಾಣ ಸಾ: ಮುಸ್ತಾಪೂರ, ತಾ: ಹುಮನಾಬಾದ ಇವನು ತಾನು ಚಲಾಯಿಸುತ್ತಿದ್ದ ಟಿಪ್ಪರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೀತೇಂದ್ರ ಇವನು  ಚಲಾಯಿಸುತ್ತಿದ್ದ ಕಾರಿನ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಜೀತೇಂದ್ರ ಇವನಿಗೆ ತಲೆಗೆ, ಎಡಗೈಗೆ ಮತ್ತು ಎದೆಗೆ ತೀವ್ರ ಗುಪ್ತಗಾಯಗಳು ಮತ್ತು ತಲೆಯ ಎಡಗಡೆಗೆ ಸಾದಾ ರಕ್ತಗಾಯಗಳು ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 47/2020, ಕಲಂ. 304(ಎ) ಐಪಿಸಿ :-
ದಿನಾಂಕ 04-06-2020 ಫಿರ್ಯಾದಿ ಬಾಲಾಜಿ ತಂದೆ ಮಾರುತಿ ಚವ್ಹಾನ ವಯ: 35 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಓಲ್ಡ ಕ್ರೀಶ್ಚನ ಕಾಲೋನಿ ಕಮಲನಗರ ರವರ ಊರಿನ 1) ನಾಗುಬಾಯಿ ಗಂಡ ತುಳಸಿರಾಮ ಭೊಸ್ಲೆ ವಯ: 60 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಅಶೋಕ ನಗರ ಕಮಲನಗರ, 2) ಸಂಗಾಬಾಯಿ ಗಂಡ ನಾಗಪ್ಪಾ ಗಾಯಕವಾಡ, 3) ತೇಜಸ್ವೀನಿ  ತಂದೆ ಶಾಂತಕುಮಾರ ಗಾಯಕವಾಡ, 4) ಚಂದ್ರಕಲಾ ಗಂಡ ಬಾಬುರಾವ ಗಾಯಕವಾಡ, 5) ಉಜ್ವಲಾ ಗಂಡ ಗಣಪತಿ ಗಾಯಕವಾಡ, 6) ಅಶ್ವೀನಿ ತಂದೆ ಶಾಂತಕುಮಾರ ಗಾಯಕವಾಡ ರವರೆಲ್ಲರು ಹೋಲದಲ್ಲಿ ಕೊಯ್ಲು ಆಯಲು ಕೂಲಿ ಕೇಲಸಕ್ಕೆ ತಮ್ಮೂರ ವೈಜಿನಾಥ ತಂದೆ ವಿಠ್ಠಲರಾವ ನವಾಡೆ  ರವರ ಹೊಲದಲ್ಲಿ ಕೂಲಿ ಕೇಲಸ ಮಾಡುವಾಗ ಹೊಲದಲ್ಲಿಂದ ಹಾದೂ ಹೋದ ವಿದ್ಯೂತ ತಂತಿ ಕಡಿದು ನಾಗಾಬಾಯಿ ಭೊಸ್ಲೆ ರವರ ಮೈಮೆಲೆ ಬಿದ್ದು ವಿದ್ಯೂತ ಸ್ಪರ್ಶದಿಂದ ಮೈ ಪೂರ್ತಿ ಸುಟ್ಟು ಅವರು ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾರೆ, ಈ ಘಟನೆಯು ಆರೋಪಿತರಾದ ಜೇಸ್ಕಾಂಮೀನ ಎ.ಇ.ಇ ಔರಾದ (ಬಾ), ಜೆಇಇ ಕಮಲನಗರ ಶಾಖೆ ಮತ್ತು ಸಂಬಂಧಪಟ್ಟ  ಲೈನಮ್ಯಾನಗಳ ನಿರ್ಲಕ್ಷತನದಿಂದ ಘಟನೆಯು ಜರುಗಿದ್ದು, ಮೃತಳಿಗೆ ಒಬ್ಬನೆ ತಾನಾಜಿ ತಂದೆ ತುಳಸಿರಾಮ ಎಂಬ ಮಗನಿರುತ್ತಾನೆ, ಕಾರಣ ಕೆಇಬಿ (ಜೇಸ್ಕಾಂ)ನ ಸದರಿ ಆರೋಪಿತರು ಸುಮಾರು ದವಸಗಳಿಂದ ಘಟನೆ ಜರುಗಿದ ಹೊಲದಲ್ಲಿಂದ ಹಾದು ಹೋದ ವಿದ್ಯುತ ತಂತಿಗಳು ಪೂರ್ತಿ ಸಡಿಲಾಗಿ ನೆಲದಿಂದ ಕೇವಲ 5-6 ಫೀಟ ಅಂತರದಲ್ಲಿ ಇದ್ದರೂ ಕೂಡ ಸಂಬಂಧಪಟ್ಟ ಇಲಾಖೆಯವರು ಕಾಳಜಿ ವಹಿಸಿರುವುದಿಲ್ಲ, ಅಲ್ಲದೇ ಈ ಬಗ್ಗೆ ಹೊಲದ ಮಾಲಿಕರು ಕೂಡ ತಂತಿಗಳು ಸರಿ ಪಡಿಸುವಂತೆ ಜೆ.ಇ ಕಮಲನಗರ ರವರಿಗೆ ಅರ್ಜಿ ನೀಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 39/2020, ಕಲಂ. 32, 34 ಕೆ. ಕಾಯ್ದೆ :-
ದಿನಾಂಕ 04-06-2020 ರಂದು ಬೇಲೂರ ಗ್ರಾಮದ ಹೀರೊಡೆ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮದ್ಯ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇಲೂರ ಗ್ರಾಮದ ಸೈದು ದರ್ಗಾದ ಹತ್ತಿರ ಹೋಗಿ ಮನೆಗಳ ಮರೆಯಾಗಿ ನಿಂತು ನೋಡಲು ಬೇಲೂರ ಗ್ರಾಮದ ಹೀರೊಡೆ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿದ್ರಾಮ ತಂದೆ ದೇಶಮುಖ ವಕಾರೆ ವಯ: 20 ವರ್ಷ, ಜಾತಿ: ಲಿಂಗಾಯತ, ಸಾ: ಬೇಲೂರ ಇತನು 2 ಕಾಟನ ಬಾಕ್ಸಗಳು ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಎಲ್ಲರು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಹತ್ತಿರವಿರುವ ಕಾಟನ್ ಬಾಕ್ಸಗಳಲ್ಲಿ ಎನಿದೇ? ಅಂತ ವಿಚಾರಿಸಲಾಗಿ ಬಿಯರ್ ಮತ್ತು ವಿಸ್ಕಿ ಇದ್ದು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ, ಬಿಯರ ಮತ್ತು ವಿಸ್ಕಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುವುದಕ್ಕೆ ಸರಕಾರಿಂದ ಯಾವುದಾದರೂ ಪರವಾನಿಗೆ ವಗೈರೆ ಇದ್ದರೆ ಹಾಜರು ಪಡಿಸು ಅಂತ ತಿಳಿಸಿದಾಗ ಆತನು ಸರಕಾರದ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ, ನಂತರ ಅವನ ಹತ್ತಿರವಿದ್ದ ಕಾಟನ್ ಬಾಕ್ಸ್‌ ಪಂಚರ ಸಮಕ್ಷಮದಲ್ಲಿ ತೆರೆದು ನೋಡಲಾಗಿ ಒಂದು ಕಾಟನ್ ಬಾಕ್ಸದಲ್ಲಿ 1) ಕಿಂಗ್ಫೀಶರ್ ಬೀಯರ 650 ಎಮ್.ಎಲ್ ನ 5 ಬಾಟಲಗಳು ಅ.ಕಿ 750/- ರೂಪಾಯಿಗಳು., ಮತ್ತೊಂದು ಕಾಟನ್ ಬಾಕ್ಸದಲ್ಲಿ 2) ಓಟಿ ವಿಸ್ಕಿ ಟೆಟ್ರ್ಯಾ ಪ್ಯಾಕವುಳ್ಳ 180 ಎಮ್.ಎಲ್ ನ 15 ಪೌಚಗಳು ಅ.ಕಿ 1290/- ರೂಪಾಯಿಗಳು ಮತ್ತು  ಅದೇ ಬಾಕ್ಸದಲ್ಲಿದ್ದ 3) ಯು.ಎಸ್ ವಿಸ್ಕಿ 90 ಎಮ್.ಎಲ್ನ 10 ಪ್ಲಾಸ್ಟಿಕ್ ಬಾಟಲಗಳು ಅ.ಕಿ 465/- ರೂಪಾಯಿಗಳು ಹೀಗೆ ಒಟ್ಟು ಅ.ಕಿ 2505/- ರೂಪಾಯಿಗಳು ಇರುತ್ತದೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರನ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 40/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 04-06-2020 ರಂದು ನಾಗೂರ(ಎಮ್) ಗ್ರಾಮದ ಬಾಬು ಮೇತ್ರೆ ಇತನು ತನ್ನ ಕಿರಾಣಿ ಅಂಗಡಿಯ ಮುಂದೆ ಸರಾಯಿ ತಂದು ಮಾರಾಟ ಮಾಡುತ್ತಿದ್ದಾನೆಂದು ಪ್ರಭಕರ್ ಪಾಟೀಲ್ ಪಿಎಸ್ಐ (ಕಾಸೂ) ಸಂತಪುರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜಂಬಗಿ - ಸಂತಪುರ ರೋಡಿನ ಹತ್ತಿರ ಭವಾನಿ ಮಂದಿರ ಹಿಂದೆ ಮರೆಯಾಗಿ ನಿಂತು ನೋಡಲು ಒಂದು ತಗಡದ ಶಟರಿನ್ ಕಿರಾಣಿ ಅಂಗಡಿ ಇದ್ದು ಅಲ್ಲಿ ಆರೋಪಿ ಬಾಬು ತಂದೆ ಕಲ್ಲಪ್ಪಾ ಮೇತ್ರೆ ಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ನಾಗೂರ(ಎಮ್) ಇತನು ತನ್ನ ಹತ್ತಿರ ಕಾಟನಗಳು ಇಟ್ಟುಕೊಂಡು ನಿಂತ್ತಿದ್ದು ಅದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಆತನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇಟ್ಟುಕೊಂಡು ಕಾಟನದಲ್ಲಿ ಎನಿದೆ? ಅಂತ ವಿಚಾರಿಸಿದಾಗ ಸರಾಯಿ ಕಾಟನಗಳು ಇವೆ ಅಂತ ತಿಳಿಸಿದ್ದು ಪಂಚರ ಸಮಕ್ಷಮ ಪರಿಶಿಲಿಸಿ ಒಂದೊಂದಾಗಿ ನೋಡಲಾಗಿ 1) ಎರಡು ಕಾಟನದಲ್ಲಿ 650 ಎಮ್.ಎಲ್ ಕಿಂಗ ಫೀಶರ್ ಸ್ರ್ಟಾಂಗ ಬಿಯರ್ 24 ಗಾಜಿನ ಬಾಟಲಗಳು ಅ.ಕಿ 3480/- ರೂ., 2) ಒಂದು ಕಾಟನದಲ್ಲಿ 330 ಎಮ್.ಎಲ್ ನಾಕೌಟ್ ಕಿಂಗ ಫೀಶರ್ ಸ್ರ್ಟಾಂಗ ಬಿಯರ್ 13 ಗಾಜಿನ ಬಾಟಲಗಳು ಅ.ಕಿ 1040/- ರೂ., 3) 330 ಎಂ.ಎಲ ವುಳ್ಳ 24 ಕಿಂಗ ಫೀಶರ್ ಸ್ರ್ಟಾಂಗ ಟಿನ್ ಅ.ಕಿ 1920/- ರೂ., 4) 90 ಎಮ್.ಎಲ್ ವುಳ್ಳ 96 ಓರಜಿನಲ್ ಚೌಯಿಸ್ ಪಾಕೆಟ್ ಇದ್ದು ಅ.ಕಿ 3372.48 ರೂ., ಇದ್ದವು, ನಂತರ ಆರೋಪಿತನಿಗೆ ಪಂಚರ ಸಮಕ್ಷಮ ಅಂಗ ಝಡತಿ ಮಾಡಿದಾಗ ಸರಾಯಿ ಮಾರಟ ಮಾಡಿದ ನಗದು ಹಣ 2600/- ರೂ. ಇರುತ್ತವೆ, ನಂತರ ಆರೋಪಿಗೆ ನಿನ್ನ ಹತ್ತಿರ ಸರಕಾರದಿಂದ ಅನುಮತಿ ಪತ್ರ ಇದೆಯೇ ಅಂತ ವಿಚಾರಿಸಿದಾಗ ನನ್ನ ಹತ್ತಿರ ಯಾವುದೆ ಸರಕಾರ ಅನುಮತಿ ಪತ್ರ ಇರುವದಿಲ್ಲಾ ಕಳ್ಳ ಸಂತೆಯಿಂದ ತಂದು ಮಾರಾಟ ಮಾರಾಟ ಮಾಡುತ್ತಿದೆನೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಸರಾಯಿ ಹಾಗು ನಗದು ಹಣವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 50/2020, ಕಲಂ. 279, 338 ಐಪಿಸಿ :-
ದಿನಾಂಕ 04-06-2020 ರಂದು ಫಿರ್ಯಾದಿ ಧೊಂಡಿಬಾ ತಂದೆ ಈರಪ್ಪಾ ಪಾಂಚಾಳ ಸಾ: ಗೌಂಡಗಾಂವ ರವರಿಗೆ ಆರಾಮ ಇಲ್ಲದ ಕಾರಣ ನ್ನ ಹೆಂಡತಿ ಕ್ಷ್ಮೀಬಾಯಿ ಇಬ್ಬರು ಔರಾದ ಪಟ್ಟಣದಲ್ಲಿರುವ ಉಪ್ಪೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಮರಳಿ ಮ್ಮೂರಿಗೆ ಹೋಗಲು ಮ್ಮೂರಿಗೆ ಹೋಗುವ ವಾಹನಗಳು ನಿಲ್ಲುವ ಸ್ಥಳದ ಕಡೆಗೆ ನಡೆದುಕೊಂಡು ಹೋಗುವಾಗ ಬಸ್ಸ ನಿಲ್ದಾಣದ ರೋಡಿನ ಮೇಲೆ ರೆಡ್ಡಿ ಖಾನಾವಳಿ ಕಡೆಗೆ ಹೊಗುವ ರೋಡಿನ ಕಡೆಗೆ ರೋಡ ದಾಟುತ್ತಿದ್ದಾಗ ಹಿಂದಿನಿಂದ ಅಂದರೆ ಬಸವೇಶ್ವರ ಚೌಕ ಕಡೆಯಿಂದ ಮೊಟಾರ ಸೈಕಲ್ ನಂ. ಎಂಎಚ್-13/ಎಸ್-9299 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಹೆಂಡತಿಯ ಬಲಗಾಲಗೆ ಡಿಕ್ಕಿ ಹೊಡೆದಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಹೆಚಿಡತಿಬಲಗಾಲ ಮೊಣಕಾಲ ಕೆಳಗೆ ಮೂಳೆ ಮುರಿದು ಭಾರಿ ಗುಪ್ತಗಾಯವಾಗಿದ್ದರಿಂದ ಆಟೊದಲ್ಲಿ ನನ್ನ ಹೆಂಡತಿಗೆ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.