ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-07-2020
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 52/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 28-07-2020 ರಂದು ಫಿರ್ಯಾದಿ ನಾಗರಾಜ ತಂದೆ ಧರ್ಮರಾಜ ಸ್ವಾಮಿ ವಯ: 29 ವರ್ಷ, ಜಾತಿ: ಸ್ವಾಮಿ, ಸಾ: ಧನ್ನೂರ
(ಹೆಚ್), ತಾ: ಭಾಲ್ಕಿ, ಜಿ: ಬೀದರ ರವರ ತಂದೆಯಾದ ಧರ್ಮರಾಜ ತಂದೆ ಮಲ್ಲಿಕಾರ್ಜುನ ಸ್ವಾಮಿ, ವಯ: 50
ವರ್ಷ, ಬೀದರ ರವರು ಮೊಟಾರ ಸೈಕಲ ನಂ. ಕೆಎ-01/ಇ.ಎಫ್-2447 ನೇದ್ದನ್ನು ಚಲಾಯಿಸಿಕೊಂಡು ಬೀದರ
ಕಡೆಯಿಂದ ಧನ್ನೂರಕ್ಕೆ ಹೋಗಲು ನೌಬಾದ ಬಸವೇಶ್ವರ ವೃತ್ತದ ಹತ್ತಿರ ಭಾಲ್ಕಿ ರೋಡಿಗೆ ಬಂದಾಗ ಬೀದರ
ಕಡೆಯಿಂದ ಭಾಲ್ಕಿ ಕಡೆಗೆ ಟಿಪ್ಪರ ನಂ. ಎಪಿ-13/ಎಕ್ಸ್-5460 ನೇದ್ದರ ಚಾಲಕನಾದ ಆರೋಪಿಯು ತನ್ನ
ಟಿಪ್ಪರನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಎರಡು
ತೊಡೆಗಳ ಮೇಲೆ, ಕೆಳ ಹೊಟ್ಟೆಯ ಮೇಲೆ ಭಾರಿ ಗುಪ್ತಗಾಯ, ಬಲ ಮೊಳಕೈ ಹತ್ತಿರ ತರಚಿದ ಗಾಯ ಮತ್ತು
ವೃಷಣ (ಚೆರ್) ಹತ್ತಿರ ಭಾರಿ ರಕ್ತಗಾಯವಾಗಿ, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆರೊಪಿಯು ತನ್ನ
ತನ್ನ ಟಿಪ್ಪರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಅವರಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಆರೋಗ್ಯ ಆಸ್ಪತ್ರೆಯಲ್ಲಿ ದಾಖಲು
ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ
ಪೊಲೀಸ್ ಠಾಣೆ ಅಪರಾಧ ಸಂ. 61/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 28-07-2020 ರಂದು
ಗುಂಡೂರು ತಾಂಡಾದ ಭವಾನಿ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್.ಐ ಮಂಠಾಳ ಪೊಲೀಸ್ ಠಾಣೆ
ರವರಿಗೆ ಖಚಿತ ಬಾತ್ಮಿ
ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಮನೆಯ ಗೋಡೆಯ
ಮರೆಯಾಗಿ ನಿಂತು ನೋಡಲು ಅಲ್ಲಿ ಗುಂಡೂರು ತಾಂಡಾದ ಭವಾನಿ ಮಂದಿರದ ಹತ್ತಿರ ಆರೋಪಿ ಶಾಂತಕುಮಾರ
ತಂದೆ ಘಮ್ಮುಸಾಬ ರಾಠೋಡ ವಯ: 30 ವರ್ಷ, ಜಾತಿ: ಲಮಾಣಿ, ಸಾ: ಗುಂಡೂರು ತಾಂಡಾ, ತಾ: ಬಸವಕಲ್ಯಾಣ
ಇತನು ಮಟಕಾ
ಎಂಬ ಜೂಜಾಟದ ನಂಬರ ಬರೆಯಿಸಿ ಒಂದು ರೂಪಾಯಿಗೆ 80/- ರೂಪಾಯಿ
ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ
ದಾಳಿ ಮಾಡಿ ಅವನಿಗೆ ಹಿಡಿದು ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ನಾನು ಸಾರ್ವಜನಿಕರಿಂದ
ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಈ ಹಣವನ್ನು ರಾಜಕುಂಮಾರ ತಂದೆ
ಶ್ರೀಮಂತ ಮಾನೆ ಸಾ: ತ್ರಿಪುರಾಂತ ಬಸವಕಲ್ಯಾಣ
ಇವನಿಗೆ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ
ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 2640/- ರೂಪಾಯಿ,
2) ಎರಡು ಮಟಕಾ ಚೀಟಿಗಳು ಮತ್ತು ಒಂದು ಬಾಲ್ ಪೆನ್ನ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 165/2020, ಕಲಂ. 454, 380 ಐಪಿಸಿ
:-
ದಿನಾಂಕ: 28-07-2020 ರಂದು
ಫಿರ್ಯಾದಿ ಸುಭಾಷ ತಂದೆ ಸಂಗ್ರಾಮ ಸಾಯಗಾಂವೆ ಸಾ: ಇಂಚೂರ, ಸದ್ಯ: ಸುಭಾಷ ಚೌಕ
ಹತ್ತಿರ ಭಾಲ್ಕಿ ರವರು ತನ್ನ ಹೆಂಡತಿ ಭಾರತಬಾಯಿ, ಮೊಮ್ಮಗ ವಿಷ್ಣುಕಾಂತ ಮೂವರು ಧಾರಜವಾಡಿ
ಗ್ರಾಮದ ಶಿವಾರದಲ್ಲಿರುವ ತಮ್ಮ
ಹೊಲಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ
ಹೋದಾಗ ಯಾರೋ
ಅಪರಿಚೀತ ಕಳ್ಳರು ಫಿರ್ಯಾದಿಯವರ ಮನೆಯ ಬಾಗೀಲ ಕೀಲಿ ಮುರಿದು ಮನೆಯಲ್ಲಿ ಹೋಗಿ ಬೆಡರೂಮ ಕೀಲಿ ಮುರಿದು ಒಳಗೆ ಹೋಗಿ ಬೆಡರೂಮದಲ್ಲಿದ್ದ ಅಲಮಾರಾ ಕೀಲಿ ಸಹ ಮುರಿದು ಅಲಮಾರಾದಲ್ಲಿದ್ದ 1) 25 ಗ್ರಾಂ. ಬಂಗಾರದ ಪಾಟ್ಲಿ, 2) 10 ಗ್ರಾಂ. ಬಂಗಾರದ ಸರ, 3) ಒಂದು
ಜೊತೆ ಝುಮ್ಕಾ 12 ಗ್ರಾಂ ಎಲ್ಲಾ ಸೇರಿ ಅ.ಕಿ 2,35,000/- ರೂಪಾಯಿ, 4) 100 ಗ್ರಾಮದ ಬೆಳ್ಳಿ ಚೈನ ಅ.ಕಿ 4,000/- ರೂ. ಮತ್ತು ನಗದು ಹಣ 50,000/- ರೂ. ನೇದ್ದವುಳನ್ನು
ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.