Police Bhavan Kalaburagi

Police Bhavan Kalaburagi

Tuesday, January 15, 2019

BIDAR DISTRICT DAILY CRIME UPDATE 15-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-01-2019

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 12/2019, PÀ®A. 394 L¦¹ :-
ಫಿರ್ಯಾದಿ ಜಗದೀಶ ತಂದೆ ಮಲ್ಲಣ್ಣಾ ಭಾವಿ ಸಾ: ಮನೆ ನಂ. 8-11-511, ಜ್ಯೋತಿ ಕಾಲೋನಿ, ಬೀದರ ರವರು ಬೀದರ ನಗರದ ರಂಗಮಂದಿರದ ರೋಡಿನಲ್ಲಿ ಕೊಕಾ-ಕೋಲಾ, ಏರಟೆಲ್ ಹಾಗು ಪಾಲೇ ಬಿಸ್ಕೀಟಿನ ಡಿಸ್ಟ್ರೀಬ್ಯೂಟರ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 14-01-2019 ರಂದು ಫಿರ್ಯಾದಿಯು ತಮ್ಮ ಅಂಗಡಿಯನ್ನು ಮುಚ್ಚಿ ದಿನದ ಕಲೆಕ್ಷನ ಆದ ಸುಮಾರು 2 ಲಕ್ಷ 5 ಸಾವಿರ ಹಣವನ್ನು ಒಂದು ಬ್ಯಾಗಿನಲ್ಲಿ ಹಾಕಿಕೊಂಡು ತಮ್ಮ ಹೀರೊ ಮೆಸ್ಟ್ರೋ ಸ್ಕೂಟಿಯ ಮುಂದುಗಡೆ ಇಟ್ಟುಕೊಂಡು ಮನೆಗೆ ಹೋಗುವಾಗ ಜ್ಯೋತಿ ಕಾಲೋನಿ ಕ್ರಾಸದಲ್ಲಿ ಶಂಕರ ಗಾದಾರವರ ಮನೆಯ ಹತ್ತಿರ ಸ್ಟೀಡ ಬ್ರೀಕರ ಇದ್ದು ಮೊಟರ ಸೈಕಲ ವೇಗ ಸ್ವಲ್ಪ ಕಡಿಮೆ ಮಾಡಿದಾಗ ಸ್ಟೀಡ ಬ್ರೇಕರ ಹತ್ತಿರ ನಿಂತ್ತಿದ್ದ ಇಬ್ಬರು ವ್ಯಕ್ತಿಗಳು ಫಿರ್ಯಾದಿಯ ಹತ್ತಿರ ಬಂದು ಫಿರ್ಯಾದಿಯ ಕಣ್ಣಿನಲ್ಲಿ ಪುಡಿಖಾರ ಹಾಕಿ ಸದರಿ ಹಣದ ಬ್ಯಾಗನ್ನು ಕಸಿದುಕೊಂಡು ಕತ್ತಲಲ್ಲಿ ಓಡಿ ಹೋಗಿರುತ್ತಾರೆ, ಅವರ ಅಂದಾಜು ವಯಸ್ಸು 20-25 ವರ್ಷ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 05/2019, ಕಲಂ. ಹುಡುಗಿ ಕಾಣೆ :-
ದಿನಾಂಕ 13-01-2019 ರಂದು 1430 ಗಂಟೆಯಿಂದ 1530 ಗಂಟೆಯ ಮದ್ಯದ ಅವಧಿಯಲ್ಲಿ ಬಗದಲ ಗ್ರಾಮದ ಫಿರ್ಯಾದಿ ರೇಣುಕಾ ಗಂಡ ಕಂಟೆಪ್ಪಾ ನಿಂಬೂರೆ ಸಾ: ಬಗದಲ ರವರ ಮನೆಯಿಂದ ಫಿರ್ಯಾದಿಯವರ ಮಗಳಾದ ಪೂಜಾ ಇವಳು ಫಿರ್ಯಾದಿಗೆ ಹೇಳದೇ ಕೇಳದೆ ಎಲ್ಲಿ ಹೋಗಿದ್ದಾಳೆಂದು ಗೊತ್ತಿರುವುದಿಲ್ಲಾ, ಅವಳು ಕಾಣೆಯಾಗಿರುತ್ತಾಳೆ, ಕಾಣೆಯಾದ ಮಗಳ ಚಹರಾ ಪಟ್ಟಿ 1) ಕು. ಪೂಜಾ ತಂದೆ ಕಂಟೆಪ್ಪಾ ನಿಂಬೂರೆ, ವಯ: 22 ವರ್ಷ, ಜಾತಿ: ಎಸ್.ಟಿ. ಗೊಂಡ, 2) ಚಹರೆ: ದುಂಡನೆಯ ಮುಖ, ಸಾಧಾರಣ ಮೈಕಟ್ಟು, ಗೊಧಿ ವರ್ಣ ಮೈ ಬಣ್ಣ, ಅಗಲವಾದ ಹಣೆ, 3) ಗುರುತು: ಹಣೆಯ ಮೇಲೆ ಒಂದು ಸಣ್ಣ ದುಂಡಾಕಾರದ ಹಚ್ಚೆ ಬಟ್ಟ ಇರುತ್ತದೆ, 4) ಎತ್ತರ: 4 ಫೀಟ್ 5 ಇಂಚ್ ಎತ್ತರ, 5) ಮಾತನಾಡುವ ಭಾಷೆ: ಕನ್ನಡ, ಹಿಂದಿ ಮತ್ತು ಅಲ್ಪ ಸ್ವಲ್ಪ ಇಂಗ್ಲೀಷ ಬರುತ್ತದೆ, 5) ಧರಿಸಿದ ಬಟ್ಟೆಗಳು ಕ್ರಿಮ ಕಲರ್ ಚುಡಿದಾರ, ಕಪ್ಪು ಬಣ್ಣದ ಪೈಜಾಮಾ, ಕಪ್ಪು ಬಣ್ಣದ ಓಡಣಿ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 01/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 14-01-2019 ರಂದು ಯರನಳ್ಳಿ ಗ್ರಾಮದ ಮಾಣಿಕೇಶ್ವರ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಕುಮಾರಿ ಸವಿತಾ ಪ್ರಿಯಂಕಾ ಪಿ.ಎಸ್.ಐ ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಯರನಳ್ಳಿ ಗ್ರಾಮದ ಮಾಣಿಕೇಶ್ವರ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಇಸಾಕ  ತಂದೆ ಹೈಯದ ಖಾನ ಬಾಲಕುಂದೆ,  2) ರಜಾಕಸಾಬ ತಂದೆ ಮತಾಬಸಾಬ ಮೋಜನ, 3) ಶಿವಕುಮಾರ ತಂದೆ ಶಂಕರ ಈರಗೊಂಡ, 4) ರಮೇಶ ತಂದೆ ಕಾಶಪ್ಪಾ ಪರ್ಬಾನೋರ, 5) ಬಸಪ್ಪಾ ತಂದೆ ಝೆರೆಪ್ಪಾ ಚಾಂಬೋಳೆ, 6) ಭೀಮಣ್ಣಾ ತಂದೆ ತಿಪ್ಪಣ್ಣಾ ರಾಂಪೂರೆ, 7) ಸಂಜುಕುಮಾರ ತಮದೆ ವಿಠಲ್ ಚಾಂಬೋಳೆ, 8) ಹಮೀದಸಾಬ ತಂದೆ ಮಕ್ಸೂದಸಾಬ ಮೋಜನ,  9) ಜಗನಾಥ ತಂದೆ ಮಾರುತಿ ಪರ್ಬಾನೋರ, 10) ಭೀಮಣ್ಣಾ ತಂದೆ ಬೀರಪ್ಪಾ ಖಂಡೆ ಹಾಗೂ 11) ರಾಚಯ್ಯಾ ತಂದೆ ವೀರಭದ್ರಯ್ಯಾ ಸ್ವಾಮಿ ಎಲ್ಲರೂ ಸಾ: ಯರನಳ್ಳಿ ಗ್ರಾಮ ಇವರೆಲ್ಲರ ಮೇಲೆ ದಾಳಿ ಮಾಡಿ ಸದರಿಯವರಿಗೆ ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 3300/- ರೂ. ಮತ್ತು 108 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 04/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 14-01-2019 ರಂದು ಬಸವಕಲ್ಯಾಣ ನಗರದ ತ್ರಿಪುರಾಂತ .ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆದು ಸುನಿಲಕುಮಾರ ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸದರಿ ತ್ರಿಪುರಾಂತ .ಬಿದಿಂದ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ತ್ರಿಪುರಾಂತ .ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಿವಾಜಿ ತಂದೆ ಲಕ್ಷ್ಮಣ ವಾಡೆಕರ  ವಯ: 40 ವರ್ಷ, ಜಾತಿ: ಮರಾಠಾ, ಸಾ: ಲಾಲ ತಲಾಬ ಕಾಲೋನಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆರೋಪಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 5820/- ರೂ. ಮತ್ತು 03 ಮಟಕಾ ಚೀಟಿಗಳು, ಒಂದು ಬಾಲ ಪೆನ್ ಸಿಕ್ಕಿದ್ದು ನೇದವುಗಳು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 05/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 14-01-2019 ರಂದು ಬಸವಕಲ್ಯಾಣ ನಗರದ ಎಸ.ಎಸ್ ಖೋಬಾ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂ. ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆದು ಸುನಿಲಕುಮಾರ ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಎಸ.ಎಸ್ ಖೋಬಾ ಕಾಲೇಜದಿಂದ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸದರಿ ಎಸ.ಎಸ್ ಖೋಬಾ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚಂದ್ರಕಾಂತ ತಂದೆ ವಿಶ್ವನಾಥಯ್ಯಾ ವರವಟ್ಟೆ ವಯ 63 ವರ್ಷ, ಜಾತಿ: ಲಿಂಗಾಯತ, ಸಾ: ತ್ರಿಪುರಾಂತ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವದನ್ನು ನೋಡಿ ಎಲ್ಲರು ಒಮ್ಮಲೆ ದಾಳಿ ಮಾಡಿದಾಗ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1900/- ರೂ ಮತ್ತು 03 ಮಟಕಾ ಚೀಟಿಗಳು, ಒಂದು ಬಾಲ ಪೆನ್ ಸಿಕ್ಕಿದ್ದು ನೇದವುಗಳು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ರೇವೂರ ಠಾಣೆ : ದಿನಾಂಕ:20-12-2018 ರಂದು ಮಲ್ಲಿಕಾರ್ಜುನ  @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಎಂಬಾತನು ತಾನು ನಡೆಸುವ ಟಂಟಂ ತಗೆದುಕೊಂಡು ಬಂದು ನಿಮ್ಮ ಮನೆಯ ಹತ್ತಿರ ನಿಲ್ಲಿಸಿ ನನ್ನ ಮಗಳನ್ನು ಹೆದರಿಸಿ ಅಪಹರಿಕೊಂಡು ಹೋಗಿದ್ದು ದಿನಾಂಕ:14-01-2019 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಕಲಬುರಗಿಗೆ ಹೋದಾಗ ನಮ್ಮ ಪೊಲೀಸ್ ಬಾತ್ಮಿದಾರನು ಬಸ್ಟ್ಯಾಂಡನಲ್ಲಿ ಕುಳಿತಿದ್ದ ಕುಮಾರಿ ಇವಳಿಗೆ ತೋರಿಸಿದ್ದು, ಆಗ ಅವರು ಸದರಿಯವಳಿಗೆ ವಿಚಾರಿಸಿದಾಗ ಅವಳು ನನಗೆ ದಿನಾಂಕ:20-12-2018 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಮಲ್ಲಿಕಾರ್ಜುನ @ ಮಲ್ಲಪ್ಪ ತಂ/ಸಿದ್ದಮಾಳಪ್ಪ ನಿಂಬರಗಿ ಎಂಬಾತನು ನಮ್ಮ ಮನೆಯ ಮುಂದೆ ಟಂಟಂ ತಂದು ನಿಲ್ಲಿಸಿ ಹಾರ್ನ ಹೊಡೆದಿದ್ದರಿಂದ ನಾನು ಯಾರು ಬಂದಿದ್ದಾರೆ ಅಂತ ಹೊರಗೆ ಬಂದಾಗ ಅವನು ನನಗೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಿನ್ನೊಂದಿಗೆ ಮದುವೆ ಮಾಡಿಕೊಳ್ಳುತ್ತೇನೆ ನನ್ನೊಂದಿಗೆ ನಡೆ ಅಂತ ಹೇಳಿದನು. ಆಗ ನಾನು ಬರುವುದಿಲ್ಲ ಅಂತ ಹೇಳಿದಾಗ ನನಗೆ ಹೆದರಿಸಿ ಒತ್ತಾಯಪೂರ್ವಕವಾಗಿ ಟಂಟಂ ದಲ್ಲಿ ಅಪಹರಿಸಿಕೊಂಡು ಗೊಬ್ಬೂರ ಕಡೆಗೆ ಹೋಗುವ ರೋಡಿಗೆ ಕರೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿರುವ ಹಳ್ಳದಲ್ಲಿ ನನಗೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ನಂತರ ಟಂಟಂ ದಲ್ಲಿಯೆ ಕಲಬುರಗಿಗೆ ಕರೆದುಕೊಂಡು ಬಂದು ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ದೇವಸ್ಥಾನಗಳಿಗೆ ಮತ್ತು ಪಾರ್ಕಗಳಿಗೆ ಸುತ್ತಾಡಿ ಅವನಲ್ಲಿದ್ದ ಹಣ ಖರ್ಚಾದ ನಂತರ ಮರಳಿ ಊರಿಗೆ ಹೋಗಿ ನಾನು ಹಣ ತೆಗೆದುಕೊಂಡು ಬರುತ್ತೇನೆ ಅಂತ ಹೇಳಿ ಕರೆದುಕೊಂಡು ಬಂದು ನನಗೆ ಇಲ್ಲಿ ಬಸ್ಟ್ಯಾಂಡನಲ್ಲಿ ಕೂಡಿಸಿ ಹೋದವನು ಮರಳಿ ಬಂದಿರುವುದಿಲ್ಲ ಅಂತ ತಿಳಿಸಿದಳು. ಅಪ್ರಾಪ್ತ ವಯಸ್ಕಳಾದ ನನ್ನನ್ನು ಪುಸಲಾಯಿಸಿ ಟಂಟಂ ದಲ್ಲಿ ಅಪಹರಿಸಿಕೊಂಡು ಹೋಗಿ ನನಗೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯವೆಸಗಿರುತ್ತಾನೆ ಅಂತ ತಿಳಿಸಿರುತ್ತಾಳೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಜಗದೇವಿ ಗಂಡ ಶ್ಯಾಮರಾವ ಶೇಟ್ಟಿ ಸಾ :: ಓಕಳಿ, ತಾ: ಕಮಲಾಪೂರ ರವರ ಮಗನಾದ ವಿಜಯಕುಮಾರ ಇವನ ಹತ್ತಿರ 70,000/- ರೂಪಾಯಿಗಳನ್ನು  ನಮ್ಮ ಗ್ರಾಮದ, ನಮ್ಮ ಓಣಿಯವನೆಯಾದ ರಾಜಕುಮಾರ ತಂದೆ ಹಣಮಂತ ನಿಡಗುಂದಿ ಇವರು ತೆಗೆದುಕೊಂಡಿದ್ದು, ಇಲ್ಲಿಯವರೆಗು ಹಣ ವಾಪಸ್ಸು ನೀಡಿರುವುದಿಲ್ಲ. ಹೀಗಿದ್ದು, ದಿನಾಂಕ 12/01/2019 ರಂದು ಬೆಳಿಗ್ಗೆ ನಾನು, ರಾಜಕುಮಾರ ನಿಡಗುಂದಿ ಇವರಿಗೆ ನನ್ನ ಮಗನ ಹಣ ಕೇಳಲು ಮನೆಗೆ ಹೋದಾಗ, ರಾಜಕುಮಾರನು ಮನೆಯಲ್ಲಿ ಇರಲಿಲ್ಲ. ಆಗ ನಾನು ರಾಜಕುಮಾರನ ಹೆಂಡತಿಯಾದ ಸಂಗೀತಾ ಇವಳಿಗೆ, ವಿಷಯವನ್ನು ತಿಳಿಸಿ, ನನ್ನ ಮಗನ ಹಣವನ್ನು ವಾಪಸ್ಸು ನೀಡುವಂತೆ ನಿನ್ನ ಗಂಡನಿಗೆ ಹೇಳು ಅಂತ ಹೇಳಿ, ನನ್ನ ಮನೆಗೆ ವಾಪಸ್ಸಾಗಿರುತ್ತೇನೆ. ಮುಂದೆ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಕಂಪೌಂಡಿನಲ್ಲಿ ಬಟ್ಟೆ ತೊಳೆಯುತ್ತಿದ್ದೆನು. ನನ್ನ ಮಗನಾದ ಉದಯಕುಮಾರ ಈತನು ನಮ್ಮ ಕಿರಾಣಿ ಅಂಗಡಿಯ ಮುಂದೆ ಮಲಗಿಕೊಂಡಿದ್ದು, ಅಲ್ಲಿಗೆ ರಾಜಕುಮಾರ ಈತನು ಚೀರಾಡುತ್ತಾ, ನನ್ನ ಮನೆಗೆ ಬಂದು, ನನಗೆ  ಏ ರಂಡಿ, ನಿನ್ನ ಮಗನಿಗೆ ನಾನು ಯಾವುದು ರೊಕ್ಕ ಕೊಡುವುದಿದೆ, ರೊಕ್ಕ ಕೊಡು ಅಂತ ಹೇಳಿ ನಮ್ಮ ಮನೆಗೆ ಬಂದಿದ್ದಿ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕೈಯಿಂದ ಬಲಗೈ ರಟ್ಟೆಯ ಮೇಲೆ ಮತ್ತು ಬೆನ್ನ ಮೇಲೆ ಜೋರಾಗಿ ಹೊಡೆದು, ಕಾಲಿನಿಂದ ನನ್ನ ಎಡಗಾಲ ಮೇಲೆ ಒದ್ದನು. ನಾನು ಚೀರಾಡುವುದನ್ನು ಕೇಳಿ ಅಲ್ಲಿಯೆ ಮಲಗಿರುವ ನನ್ನ  ಮಗ ಉದಯಕುಮಾರ ಈತನು ಎಚ್ಚರಗೊಂಡು, ಯಾಕೆ ನಮ್ಮ ತಾಯಿಗೆ ಹೊಡೆಯುತ್ತಿದ್ದಿ ಅಂತ ಕೇಳಿದಕ್ಕೆ, ರಂಡಿ ಮಗನೆ, ನಿನೇನು ಕೇಳುತ್ತಿ, ನಿನಗೂ, ನಿನ್ನ ಅವ್ವನಿಗು ಮತ್ತು ನಿನ್ನ ಎಲ್ಲಾ ಅಣ್ಣ ತಮ್ಮಂದಿರಿಗು ಹೊಡೆಯುತ್ತೇನೆ ಬೋಸಡಿ ಮಗನೆ ಅಂತ ಬೈಯುತ್ತಾ ಕೈಯಿಂದ, ನನ್ನ ಮಗನ ಕಪಾಳೆ ಹೊಡೆದಾಗ, ನನ್ನ ಮಗನು ನೆಲಕ್ಕೆ ಬಿದ್ದನು. ಆಗ ರಾಜಕುಮಾರನು ಹಾಗೆ ನನ್ನ ಮಗನಿಗೆ ತನ್ನ ಕಾಲಿನಿಂದ, ಅವನ ಕಾಲುಗಳ ಮೇಲೆ, ಪಕ್ಕೆಲುಬಿಗೆ ಒದ್ದನು. ಇದರಿಂದ ನನ್ನ ಮಗನ ಮುಖದ ಮೇಲೆ ತರಚಿದ ಗಾಯಗಳು ಆದವು. ಹಾಗೆ ಎಡಗಾಲಿನ ಪಾದದ ಮೇಲೆ ಗುಪ್ತಾಗಾಯ ಮತ್ತು ಎಡಗೈ ಮೇಲೆ ತರಚಿದ ಗಾಯ, ಎಡ ಪಕ್ಕೆಲುಬಿನ ಮೇಲೆ ಗುಪ್ತಗಾಯಗಳಾಗಿ ನರಳಾಡುತ್ತಾ ಬಿದ್ದನು. ಅಷ್ಟರಲ್ಲಿ ರಾಜಕುಮಾರನ ಹೆಂಡತಿ ಸಂಗೀತಾ ಇವಳು ಕೂಡಾ ಬಂದು, ಇವರದು ಬಹಳ ಅಗ್ಯಾದ, ಸುಮ್ಮನೆ ನಮ್ಮ ಮನೆಗೆ ಬಂದು ರೊಕ್ಕ ಕೊಡು ಅಂತ ಕೇಳುತ್ತಿ ಬೋಸಡಿ ಅಂತ ಅನ್ನುತ್ತಾ ನನ್ನ ಕೂದಲು ಹಿಡಿದು ಎಳೆದಾಡಿದಳು. ಆಗ ರಾಜಕುಮಾರನು ತನ್ನ ಮನೆಯ ಕಡೆಗೆ ಓಡಿ ಹೋಗಿ, ಮನೆಯಲ್ಲಿದ್ದ ಒಂದು ಚೂರಿಯನ್ನು ತೆಗೆದುಕೊಂಡು ಬಂದವನೆ,  ಇವತ್ತು, ಈ ರಂಡಿ ಮಗ ಉದ್ಯಾನಿಗೆ ಖಲ್ಲಾಸ್ ಮಾಡಿ ಬಿಡುತ್ತೇನೆ ಅಂತ ಅನ್ನುತ್ತಾ ಚೂರಿಯಿಂದ ನನ್ನ ಮಗನಿಗೆ ಹೊಡೆಯಲು ಬಂದಾಗ, ನನ್ನ ಮಗ ತಪ್ಪಿಸಿಕೊಂಡನು. ಮತ್ತೆ ಹೊಡೆಯಲು ಬಂದಾಗ, ದಾರಿಯಲ್ಲಿ ಮೋಟರ ಸೈಕಲ್ಲಿನ ಮೇಲೆ ಹೋಗುತ್ತಿದ್ದ ಯಾರೋ ಅವರ ಹೆಸರು, ವಿಳಾಸ ಗೊತ್ತಿರುವುದಿಲ್ಲ, ಅವರು ಬಂದು ರಾಜಕುಮಾರನಿಗೆ ತಡೆದು ನಿಲ್ಲಿಸಿದರು. ಇಲ್ಲದಿದ್ದರೆ ರಾಜಕುಮಾರನು ನನ್ನ ಮಗನಿಗೆ ಖಲ್ಲಾಸ್ ಮಾಡಿವೆ ಬಿಡುತ್ತಿದ್ದನು. ನಾವು ಜಗಳವಾಡುವುದನ್ನು ನೋಡಿ ನಮ್ಮ ಓಣಿಯ ದೇವಪ್ಪ ತಂದೆ ಶರಣಪ್ಪ ಧನ್ನಿ ಮತ್ತು ಸುಭಾಸ ತಂದೆ ಶಿವಶರಣಪ್ಪ ಜ್ಯೋತಿ ಇವರು ಬಂದು ಜಗಳವನ್ನು ಬಿಡಿಸಿದರು. ಆಗ ರಾಜಕುಮಾರ ಮತ್ತು ಆತನ ಹೆಂಡತಿ ಸಂಗೀತಾ ಇವರು ಇವತ್ತು ಉಳಿದಿರಿ ಮಕ್ಕಳ್ಯಾ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಮತ್ತು ನಿಮ್ಮ ಮನೆಯವರಿಗೆ ಯಾರಿಗು ಬಿಡುವುದಿಲ್ಲ ಬೋಸಡಿ ಮಕ್ಕಳೆ ಅಂತ ಅನ್ನುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.