Police Bhavan Kalaburagi

Police Bhavan Kalaburagi

Tuesday, July 7, 2020

BIDAR DISTRICT DAILY CRIME UPDATE 07-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-07-2020

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 76/2020 ಕಲಂ 379 ಐಪಿಸಿ :-

ದಿನಾಂಕ 06/07/2020  ರಂದು 1915 ಗಂಟೆಗೆ ಫಿರ್ಯಾದಿ  ಶ್ರೀ. ನರಸಿಂಹ ಮೈಸೂರ ತಂದೆ ನಾರಾಯಣರಾವ ಮೈಸೂರ ವಯ:35 ವರ್ಷ ಜಾತಿ:ಪದ್ಮಶಾಲಿ(ನೇಕಾರ) ಉ:ಖಾಸಗಿ ನೌಕರಿ  ಸಾ/ವಿದ್ಯಾನಗರ ಕಾಲೋನಿ 11 ನೇ ಕ್ರಾಸ  ಬೀದರ  ರವರು ಠಾಣೆಗೆ ಹಾಜರಾಗಿ ತನ್ನದೊಂದು ಕನ್ನಡದಲ್ಲಿ ಲಿಖಿತ  ದೂರನ್ನು ಸಲ್ಲಿಸಿದ್ದು ಸ್ವೀಕರಿಸಿಕೊಂಡಿದ್ದು, ದೂರಿನ ಸಾರಾಂಶವೇನಂದರೆ, ಫಿರ್ಯಾದಿಯು ಲಾಹೋಟಿ ಷೋರೂಮನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ ಅಂತ ಕೆಲಸ ಮಾಡಿಕೊಂಡು  ಉಪಜೀವಿಸಿಕೊಂಡಿದ್ದು  2017  ನೇ ಸಾಲಿನಲ್ಲಿ ಒಂದು  ಹೊಂಡಾ ಶೈನ  ಮೋಟರ ಸೈಕಲ  ನಂ ಕೆಎ38ಯು4888 ನೇದ್ದನ್ನು  ಖರಿದಿಸಿದ್ದು ಇರುತ್ತದೆ.     ಹೀಗಿರುವಾಗ ದಿನಾಂಕ 23/06/2020  ರಂದು ಬೆಳಿಗ್ಗೆ 11:00 ಎ.ಎಮ. ಗಂಟೆಗೆ ತನ್ನ ಮೊಟರ ಸೈಕಲನ್ನು ಪ್ರತಾಪನಗರ ದಲ್ಲಿರುವ ಲಾಹೋಟಿ ಷೋರೂಮಿನ ಮುಂದೆ ನಿಲ್ಲಿಸಿ ಷೋರೂಮನಲ್ಲಿ ಕೆಲಸಕ್ಕಾಗಿ ಹೋಗಿದ್ದು, 11:30 ಗಂಟೆಯ ಸಮಯಕ್ಕೆ ಷೊರೂಮಿನಿಂದ ಹೊರಗೆ ಬಂದು ನೋಡುವಷ್ಟರಲ್ಲಿ    ಮೊಟರ ಸೈಕಲ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ.      ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ, ಸಿಗದಿದ್ದಾಗ  ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಮೋ.ಸೈಕಲನ ಅಂ.ಕಿ. 30,000/- ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 88/2020 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ:06/07/2020 ರಂದು 11:30 ಗಂಟೆಗೆ ಪಿಎಸ್ಐ ರವರು ಪೊಲೀಸ್ ಠಾಣೆಯಲ್ಲಿರುವಾಗ ಬಸವ ಕಲ್ಯಾಣ ನಗರದ ಮುಂಡೆಪಾಳಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಬಂದಿದರ ಮೇರೆಗೆ ಸಿಬ್ಬಂದಿಯೊಂದಿಗೆ  ಹೋಗಿ ನೋಡಿದಾಗ ಮುಂಡೆಪಾಳಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 16:00 ಗಂಟೆಗೆ   ದಾಳಿಮಾಡಿ ತಾಜ ತಂದೆ ಸುಲ್ತಾನಸಾಬ ಸೈಯದ ವಯಸ್ಸು//22 ವರ್ಷ ಜಾತಿ//ಮುಸ್ಲಿಂ //ಕೂಲಿಕೆಲಸ ಸಾ//ರೀಕ್ಷಾ ಕಾಲೋನಿ ಬಸವಕಲ್ಯಾಣ ಇತನನ್ನು ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 1250/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ. ನೇದ್ದವುಗಳು ಒಂದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/2020 ಕಲಂ 174 ಸಿಆರ್.ಪಿ.ಸಿ:-

ದಿನಾಂಕ 6-7-2020 ರಂದು 0900 ಗಂಟೆಗೆ ಶ್ರೀ ದೇವಿದಾಸ ತಂದೆ ಧನಾಜಿ ಜಟಗೋಂಡ ವಯ 50 ವರ್ಷ ಜಾ// ಕುರುಬ ಉ// ಓಕ್ಕಲುತನ ಸಾ//ಸಂಗನಾಳ ರವರು ಠಾಣೆಗೆ ಹಾಜರಾಗಿ   ಲಿಖತ ದೂರು ಅರ್ಜಿ ಸಲ್ಲಿಸಿದರ ಸಾರಾಂಶವೆನೆಂದರೆ ಇವರ ತಮ್ಮ ಲಕ್ಷ್ಮಣ ತಂದೆ ಧನಾಜಿ ಜಟಗೊಂಡ ವಯ// 35 ವರ್ಷ ಸಾ// ಸಂಗನಾಳ ಗ್ರಾಮದ ನಿವಾಸಿಯಾಗಿದ್ದು ಇವರಿಗೆ 3 ಎಕ್ಕರೆ 15 ಗುಂಟೆ  ಜಮೀನು ಇದ್ದು ಓಕ್ಕಲುತನ ಕೆಲಸ ಮಾಡಿಕೊಂಡು ಇರುತ್ತಾನೆ. ಎರಡು ಸಲ ಸೋಯಾಬೀನ  ಬೀಜ ಬಿತ್ತಿದ್ದರು ಮಳಕೆ ಎಳಲಿಲ್ಲ ಬ್ಯಾಂಕೀನ ಸಾಲ ಕೂಡ ಆಗಿದೆ ಸಾಲ ಹೇಗೆ ತಿರಿಸುವುದು ಹೆಂಡತಿ ಮಕ್ಕಳಿಗೆ ಹೇಗೆ ಸಾಕುವುದು ಅಂತ ಮನಸ್ಸಿನಲ್ಲಿ ವಿಚಾರ ಮಾಡುತ್ತಾ ಆಗಾಗ  ಫಿರ್ಯಾದಿಗೆ ಸಿಕ್ಕಾಗ ತಿಳಿಸಿತ್ತಾ ಇದ್ದನ್ನು . ಈ ಮೇಲಿನ ವಿಷಯಕ್ಕೆ ಮನ ನೊಂದು  ದಿನಾಂಕ 5-7-2020 ರಂದು 1600 ಗಂಟೆ ಸೂಮಾರಿಗೆ ತನ್ನ ಮನೆಯಲ್ಲಿ ಯಾರು ಇಲ್ಲದಿದ್ದಾಗ 4 ಪಿ.ಎಮ. ಗಂಟೆಗೆ ವಿಷ ಕುಡಿದಿದರಿಂದ ಚಿಕಿತ್ಸೆ ಕುರಿತು ಔರಾದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಕರಿತು ಬೀದರ ಜೀಲ್ಲಾ ಆಸ್ಪತ್ರೆಗೆ ಕಳಸಿದ್ದು. ಬೀದರ ಜೀಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿ ಆಗದೆ   ದಿನಾಂಕ 6/7/2020 ರಂದು ನಸುಕಿನ ಜಾವ 0330 ಗಂಟೆಗೆ ಮೃತ್ತ ಪಟ್ಟಿದ್ದು ಇರುತ್ತದೆ. ಫಿರ್ಯಾದಿ ತಮ್ಮ ಲಕ್ಷ್ಮಣ ಬ್ಯಾಂಕೀನ ಸಾಲ ಹಾಗೂ ತನ್ನ ಹೋಲದಲ್ಲಿ ಎರಡು ಸಲ ಸೋಯಾಬೀನ ಬೀಜ ಬಿತ್ತಿದ್ದರು ಕೂಡ ಏಳಲೀಲ್ಲ ಮತ್ತು 125000/- ರೂ. ಬ್ಯಾಂಕ್ ಸಾಲ ಕೂಡ ಆಗಿದೆ ಎಂದು  ಮನನೊಂದು ವಿಷ ಕುಡಿದು ಆತ್ಮ ಹತ್ಯೆ  ಮಾಡಿಕೊಂಡಿರುತ್ತಾನೆ. ಇತನ ಮರಣ ಬಗ್ಗೆ ಯಾರ ಮೆಲೆಯು ಯಾವದೇ ಸಂಶಯ ಇರುವುದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.