Police Bhavan Kalaburagi

Police Bhavan Kalaburagi

Friday, June 14, 2019

KALABURAGI DISTRICT REPORTED CRIMES


ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 13/06/2019 ರಂದು ಮಧ್ಯಾಹ್ನ ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ  ಕಲಬುರಗಿ ನಗರದ ರಿಂಗ ರೋಡಿಗೆ ಇರುವ  ಮಹ್ಮದ ರಫೀಕ ಚೌಕ ಕ್ರಾಸನಲ್ಲಿ ಮೂರು ಜನರು ನಿಂತುಕೊಂಡು ಮತ್ತು ತಿರುಗಾಡುತ್ತಾ ಹೋಗು-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಅಂಕಿ ಸಂಖ್ಯೆ ಚೀಟಿ ಬರೆದುಕೊಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀಮತಿ ಗೀತಾ ಪ್ರೊ.ಡಿ.ಎಸ್.ಪಿ. ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಕಲಬುರಗಿ ನಗರದ ರಿಂಗ ರೋಡಿಗೆ ಇರುವ ಮಹ್ಮದ ರಫೀಕ ಕ್ರಾಸನಲ್ಲಿ  ನಿಂತಿರುವ ಆಟೋರಿಕ್ಷಾಗಳ ಮರೆಯಲ್ಲಿ ನಿಂತು ನೋಡಲು  ಮೂರು ಜನರು ಕಲಬುರಗಿ ನಗರದ ರಿಂಗ ರೋಡಿಗೆ ಇರುವ ಮಹ್ಮದ ರಫೀಕ ಚೌಕ  ಕ್ರಾಸನಲ್ಲಿ ಇರುವ  ಖುಲ್ಲಾ ಜಾಗೆಯಲ್ಲಿ ನಿಂತುಕೊಂಡು ಮತ್ತು ತಿರುಗಾಡುತ್ತಾ ಹೋಗಿ-ಬರುವ ಸಾರ್ವಜನಿಕರಿಗೆ 01 ರೂ.ಗೆ 80 ರೂ.ಗೆಲ್ಲಿರಿ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಅವರಿಗೆ  ಮಟಕಾ ಅಂಕಿ ಸಂಖ್ಯೆ ಚೀಟಿಗಳು ಬರೆದುಕೊಡುತ್ತಿದ್ದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿಯಲು ಮಟಕಾ ಅಂಕಿ ಸಂಖ್ಯೆ ಬರೆಯಿಸಲು ಬಂದ ಜನರು ಅಲ್ಲಿಂದ ಓಡಿ ಹೋದರು. ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ಮೂರು ಜನರಿಗೆ ನಾನು ಮತ್ತು ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡು  ಅವನ ಹೆಸರು ವಿಳಾಸ ವಿಚಾರಿಸಲೂ  ಅವರಲ್ಲಿ ಒಬ್ಬನು ತನ್ನ ಹೆಸರು 1)ಅಕ್ಬರ ತಂದೆ  ಮಕಬೂಲಸಾಬ  ಮೂಲಗೆ ಸಾ: ಬಂದೇನವಾಜ ಮಜೀದ ಹತ್ತಿರ ಮಿಲ್ಲತ ನಗರ ಕಲಬುರಗಿ. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1240/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. 2)ರುಕ್ಕಮೋದ್ದಿನ ತಂದೆ ಮಶಾಕಸಾಬ  ಪಿಂಜಾರ ಸಾ: ಜಂಜಂ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1860/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. 3) ಮಹ್ಮದ ಸದ್ದಾಂ ತಂದೆ ಸತ್ತಾರಮಿಯ್ಯಾ  ಸಾ:  ನೂರಾನಿ ಮೊಹಲ್ಲಾ ಕಲಬುರಗಿ ಅಂತಾ ತಿಳಿಸಿದನು. ಇತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 1780/- ರೂ. 2)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಅ:ಕಿ: 00 ರೂ.  3) ಒಂದು ಬಾಲಪೆನ್ನು ಅ:ಕಿ:00 ರೂ.. ದೊರೆತವು. ನಂತರ  ಅಕ್ಬರ, ರುಕ್ಕಮೋದ್ದಿನ, ಮಹ್ಮದ ಸದ್ದಾಂ ಮೂರು ಜನರಿಗೆ ಮಟಕಾ ಚೀಟಿಗಳು ಯಾರಿಗೆ ಒಯ್ದು ಕೊಡುತ್ತೀ  ಅಂತಾ ಕೇಳಲಾಗಿ ಮೂರು ಜನರು ಶಬ್ಬೀರ ಅಲಿ ತಂದೆ ರುಕ್ಕಮೋದ್ದಿನ  ಸಾ: ನೂರಾನಿ ಮೊಹಲ್ಲಾ ಕಲಬುರಗಿ ಇತನಿಗೆ ಒಯ್ದು ಕೊಡುವುದಾಗಿ ತಿಳಿಸಿದರು. ಈ ಮೇಲಿನ ಮುದ್ದೆ ಮಾಲನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಠಾಣೆ ಗುನ್ನೆ ನಂ.161/2019 ಕಲಂ 78 (3) ಕೆ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 11/06/2019 ರಂದು ಸಾಯಂಕಾಲ 7-30 ಪಿ.ಎಮ್ ಗಂಟೆಗೆ ಶ್ರೀ ಮಂಜುನಾಥ ತಂದೆ ಚಂದ್ರಾಮಪ್ಪ ಕೆರೂರ ಸಾ|| ಇಜೇರಿ ಗ್ರಾಮದಲ್ಲಿ ಊರ ಹೊರವಲಯದಲ್ಲಿ ಸಂಡಾಸಕ್ಕೆ ಹೋಗಿ ಮರಳಿ ಮನೆಯ ಕಡೆಗೆ ರೋಡಿನ ಪಕ್ಕದಲ್ಲಿ ಯಡ್ರಾಮಿ ಚಿಗರಳ್ಳಿ ರೋಡಿನ ಮೂಲಕ ನಡೆದುಕೊಂಡು ಇಜೇರಿ ಗ್ರಾಮದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಯಡ್ರಾಮಿ ಕಡೆಯಿಂದ ಒಂದು ಹಿರೋ ಹೊಂಡಾ ಶೈನ್ ಮೋಟಾರ ಸೈಕಲ್ ನೇದ್ದರ ಚಾಲಕನು ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನನಗೆ ಎದುರಿಗೆ ಡಿಕ್ಕಿ ಪಡಿಸಿದನು. ಆಗ ನಾನು ಕೆಳಗಡೆ ಬಿದ್ದುದ್ದರಿಂದ ನನಗೆ ಎಡ ಕಿವಿಯ ಮೇಲೆ ತಲೆಗೆ ಹಾಗು ತಲೆಯ ಹಿಂದೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಮತ್ತು ಎಡ ಕೈ ಭುಜದ ಮೇಲೆ, ಬೆನ್ನಿಗೆ, ಬಲ ಕೈ ಮುಂಗೈಗೆ ಬಲ ಕಾಲಿನ ಮೊಳಕಾಲಿನ ಹಿಂದೆ ತರಚಿದ ರಕ್ತಘಾಯವಾಗಿರುತ್ತದೆ. ನಂತರ ಸ್ವಲ್ಪ ಮುಂದೆ ಹೋಗಿ ಅವನು ಮೋಟಾರ ಸೈಕಲ್ ಮೇಲಿಂದ ಬಿದ್ದಿರುತ್ತಾನೆ. ಆಗ ನಾನು ಮೋಟಾರ ಸೈಕಲ್ ನಂಬರ್ ನೋಡಲಾಗಿ ಕೆ.-32-.ಜೆ.-6282 ಇದ್ದು, ಚಾಲಕನ ಹೆಸರು ವಿಳಾಸ ವಿಚಾರಿಸಲು ವಿರೇಶ ತಂದೆ ಮಲ್ಲಪ್ಪ ಮದರಿ ಸಾ; ಜೈನಾಪೂರ ಎಂದು ಗೊತ್ತಾಗಿರುತ್ತದೆ. ನಂತರ ಅವನು ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ  ಠಾಣೆ ಗುನ್ನೆ ನಂ 121/2019 ಕಲಂ 279. 337 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ಕುಮಾರಗೌಡ ತಂದೆ ಶಿವಲಿಂಗಪ್ಪ ಪಾಟೀಲ್ ಸಾ|| ಅಫಜಲಪೂರ ರವರ ತಂದೆಯವರು ಕಳೆದ 7 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸದ್ಯ ನಾನು ನಮ್ಮ ತಾಯಿ ಇಂದುಮತಿ ಇವರೊಂದಿಗೆ ವಾಸವಾಗಿರುತ್ತೇನೆ. ಊದನೂರ ಗ್ರಾಮದ ಸಾಗರ ತಂದೆ ಲಕ್ಷ್ಮಣ @ ಲಚ್ಚಪ್ಪ ರಾಠೋಡ ಇವನು ನನಗೆ ಸುಮಾರು 2 ವರ್ಷಗಳಿಂದ ಪರಿಚಯ ಇರುತ್ತಾನೆ. ಸಾಗರ ಇತನು  ತನ್ನ ಕೆಟ್ಟ ಚಟಗಳ ಸಲುವಾಗಿ ಬೇರೆಯವರ ಹತ್ತಿರ ಸಾಲ ಮಾಡಿಕೊಂಡಿದ್ದು, ಸಾಲಗಾರರು ಹಣ ಕೇಳುತ್ತಿರುವುದರಿಂದ ಅವನು ಒಂದು ತಿಂಗಳುಗಳಿಂದ ಊದನೂರ ಗ್ರಾಮಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ತಿರುಗಾಡುತ್ತಿದ್ದು, ಅವನು ನನಗೆ ಅನೇಕ ಸಲ ಕೈಗಡ ರೂಪದಲ್ಲಿ ಹಣ ಕೊಡು ಅಂತ ಹೇಳಿದ್ದು ಅದಕ್ಕೆ ನಾನು ನನ್ನ ಹತ್ತಿರ ಹಣ ಇರುವುದಿಲ್ಲ ಅಂತ ಹೇಳುತ್ತಾ ಬಂದಿದ್ದು ಇರುತ್ತದೆ. ದಿನಾಂಕ:12.06.2019 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ಕಲಬುರಗಿ ನಗರದ ಎಸ್.ಬಿ.. ಕಾಲೋನಿಯಲ್ಲಿರುವ ನಮ್ಮ ಮಾವನವರಾದ ಅಶೋಕ ಪಾಟೀಲ್ ಇವರ ಮನೆಯಲ್ಲಿ ಇದ್ದಾಗ ಸಾಗರ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಈಗತಾನೇ ಹೈದ್ರಾಬಾದನಿಂದ ಕಲಬುರಗಿಗೆ ಬಂದಿರುತ್ತೇನೆ ನನಗೆ ಊರಿಗೆ ಹೋಗುವ ಸಲುವಾಗಿ ಹಣ ಇರುವುದಿಲ್ಲ ನೀನು ಕನಕ ತ್ರಿಶೂಲ್ ಲಾಡ್ಜ ಹತ್ತಿರ ಬಂದು ಸ್ವಲ್ಪ ಹಣ ಕೊಟ್ಟು ಹೋಗು ಅಂತ ತಿಳಿಸಿದ ಮೇರೆಗೆ ನಾನು ಬೆಳಿಗ್ಗೆ 11:00 ಗಂಟೆಗೆ ಕನಕ ತ್ರಿಶೂಲ್ ಲಾಡ್ಜಿಗೆ ಬಂದಿದ್ದು ಅಲ್ಲಿ ಸಾಗರ ಇತನು ತನ್ನ ಸಂಗಡ ಇತರೆ 4-5 ಜನರೊಂದಿಗೆ ನಿಂತಿದ್ದು, ಆಗ ಅವರು ನನಗೆ ಲಾಡ್ಜ ಒಳಗೆ ಒಂದು ರೂಮಿನಲ್ಲಿ ಕರೆದುಕೊಂಡು ಹೋಗಿ ಕೂಡಿ ಹಾಕಿ ಎಷ್ಟು ಹಣ ತಂದಿದ್ದಿಯಾ ಅಂತ ಕೇಳಿದನು. ಅದಕ್ಕೆ ನಾನು ನಿನಗೆ ಊರಿಗೆ ಹೋಗುವ ಸಲುವಾಗಿ ರೂ. 200/- ಗಳನ್ನು ತಂದಿರುತ್ತೇನೆ ಅಂತ ಅಂದಿದ್ದಕ್ಕೆ ಸಾಗರ ಇತನು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಭೋಸಡಿ ಮಗನಾ ಕೇವಲ 200/- ರೂಪಾಯಿ ಏತಕ್ಕೆ ಸಾಲುತ್ತವೆ ಅಂತ ಅನ್ನುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎಡಗಡೆ ಕಿವಿಯ ಮೇಲೆ ಜೋರಾಗಿ ಹೊಡೆದಿದ್ದು ಇದರಿಂದ ಗುಪ್ತ ಪೆಟ್ಟಾಗಿದ್ದು ಇರುತ್ತದೆ. ಅವನೊಂದಿಗೆ ಇದ್ದ ಇತರೆ 4 ಜನರು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಈ ಮಗನಿಗೆ ಸುಮ್ಮನೆ ಬಿಡಬಾರದು ಅವರು ಕೂಡ ಕೈಯಿಂದ ಹೊಡೆದಿದ್ದಲ್ಲದೆ ಕಾಲಿನಿಂದ ಒದ್ದಿರುತ್ತಾರೆ. ಅಷ್ಟರಲ್ಲಿ ಈ ವಿಷಯ ನಮ್ಮ ಮಾವ ಅಶೋಕ ಪಾಟೀಲ್ ಇವರಿಗೆ ಗೊತ್ತಾಗಿ ಅವರು ಬಂದ ನಂತರ ಸಾಗರ ಮತ್ತು ಅವನೊಂದಿಗೆ ಇದ್ದ ಇತರರು ಅಲ್ಲಿಂದ ಓಡಿ ಹೋದರು. ಎಲ್ಲರೂ ಕೂಡಿ ಓಡಿ ಹೋಗುವಾಗ ಈ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ನನಗೆ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆ ಗುನ್ನೆ ನಂ. 46/2019 ಕಲಂ 143, 147, 342, 323, 504, 506 ಸಂಗಡ 149 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಉಮರ ತಂದೆ ಅಹ್ಮೆದ ಅಪುಲ ಸಾ:ಮಿಜಬಾ ನಗರ ಎಮ್‌ಎಸ್‌ಕೆ ಮಿಲ್‌ ಕಲಬುರಗಿ ರವರ ಮನೆಯ ಸಂಸಾರ ವಿಷಯದಲ್ಲಿ ನನ್ನ ಮತ್ತು ನನ್ನ ಹೇಂಡ್ತಿ ಮದ್ಯ ಜಗಳವಾಗಿದ್ದು ನಾನು ಅವಳನ್ನು ಬೈದು ಬೇದರಿಸಿದ್ದು ದಿನಾಂಕ 12/06/2019 ರಂದು ಮದ್ಯಾಹ್ನ ನಾನು ಮತ್ತು ನನ್ನ ಹೇಂಡ್ತಿ ಜಗಳವಾಡಿದ್ದರಿಂದ ನನ್ನ ಹೇಂಡ್ತಿ ಅವರ ತಂದೆಗೆ ಮತ್ತು ಅವರ ಅಣ್ಣಂದಿರರಿಗೆ ಪೋನ ಮಾಡಿ ನಾನು ಅವಳನ್ನು ಹೊಡೆದಿರುತ್ತೇನೆ ಅಂತಾ ಪೋನ ಮಾಡಿದ್ದರಿಂದ ಅವರು ನಾವು ಇರುವ ಮಿಜಬಾ ನಗರ ಮನೆಗೆ ಸಾಯಾಂಕಾಲ 1) ಇರ್ಮಾನ ತಂದೆ ಶಾಲಿಪೀರ 2) ಮುಶಾ ಸೇಹಿಲ್‌ ತಂದೆ ಶಾಲಿಪೀರ 3) ಆರೀಫ್‌ ತಂದೆ ಮಹ್ಮದ 4) ಅಚರಕಾರ್ದಿ ತಂದೆ ರಹೆಮಾನ ಸಾ: ಎಲ್ಲರೂ ಬೀದರ ಇವರು ಬಂದು ನನಗೆ ತಡೆದು ಏ ರಂಡಿ ಮಗನೇ ನಮ್ಮ ಅಕ್ಕನಿಗೆ ಹೊಡೆಯುತ್ತಿರಿ ಅಂತಾ ನಮ್ಮ ಮನೆಗೆ ಬಂದು ನನಗೆ ಕೈಯಿಂದ ಹೊಡೆಬಡೆ ಮಾಡಿ ನೇಲಕ್ಕೆ ಹಾಕಿ ಹೊಡೆದು ಬೆನ್ನಿಗೆ , ಎದೆಗೆ ಗುಪ್ತಗಾಯ ಮಾಡಿದ್ದು ಮತ್ತು ಚೆಪ್ಪಿಗೆ ಇಂಜೆಕ್ಷನ ಮಾಡಿದಂತೆ ಚುಚ್ಚಿ ಗಾಯಮಾಡಿದ್ದು ಮತ್ತು ಏ ರಂಡಿ ಮಗನೇ ಇನ್ನೊಮ್ಮೆ ನಮ್ಮ ಅಕ್ಕನಿಗೆ ಏನಾದರೂ ಕಿರಿ ಕಿರಿ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ  ನನ್ನ ಹೇಂಡ್ತಿಯನ್ನು ಅವರೊಂದಿಗೆ ಕರೆದುಕೊಂಡು ಹೋಗಿರುತ್ತಾರೆ ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ  ಗುನ್ನೆ ನಂ 160/2019 ಕಲಂ 323 324 341 504 506 ಸಂ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಹಿಬೂಬ್ ತಂದೆ ದಾವುಲ್ ಸಾಬ್ ನಾಶಿ ಸಾ; ಗುಡೂರ (ಎಸ್.) ತಾ; ಜೇವರಗಿ ಜಿ; ಕಲಬುರಗಿ ರವರು ದಿನಾಂಕ; 12/06/2019 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ಅಮೀರಬೀ ಮತ್ತು ಮಗ ಶರ್ಮೋದ್ದಿನ್ ಕೂಡಿಕೊಂಡು ನಮ್ಮ ಹೊಲ ಸರ್ವೆ ನಂ: 67 ರಲ್ಲಿ ಕಸ ತೆಗೆಯುತ್ತಿದ್ದಾಗ ಸಾಯಂಕಾಲ 4-00 ಗಂಟೆಯ ಸುಮಾರಿಗೆ ಕಸದಲ್ಲಿ ಇದ್ದ ಹಾವು ಹರಿದಾಡುತ್ತ ಬಂದು ನನ್ನ ಹೆಂಡತಿ ಅಮೀರಬೀ ಇವಳ ಎಡ ಕಾಲಿನ ಹೆಬ್ಬರಳಿಗೆ ಕಚ್ಚಿದ್ದರಿಂದ ಕಾಲಿಗೆ ರಕ್ತ ಹರಿದು ಹಲ್ಲು ನಟ್ಟ ಗುರುತು ಕಂಡಿದ್ದು ಇದೆ. ನಾನು ನನ್ನ ಹೆಂಡತಿ ನೋಡಿ ನಂತರ ಊರಿಗೆ ಕರೆದುಕೊಂಡು ಬಂದು ಊರಲ್ಲಿ ಗೌಂಟಿ ಔಷಧಿ ಕೊಡಿಸಿರುತ್ತೇನೆ.ನನ್ನ ಹೆಂಡತಿ ರಾತ್ರಿ ಚನ್ನಾಗಿದ್ದಳು.ಇಂದು ದಿನಾಂಕ; 13/06/2019 ರಂದು ಬೆಳಿಗ್ಗೆ ಯಾಕೋ ಸುಸ್ತಾಗಿರುತ್ತದೆ. ಮಾತು ಸರಿಯಾಗಿ ಹೊರಡುತ್ತಿಲ್ಲ ಅಂತಾ ತಿಳಿಸಿದ್ದರಿಂದ ನಾನು ನನ್ನ ಹೆಂಡತಿ ಚಿಕಿತ್ಸೆ ಕುರಿತು ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 12-00 ಘಂಟೆಯ ಸುಮಾರಿಗೆ ಮಾರ್ಗ ಮದ್ಯದಲ್ಲಿ ಅಂದರೆ ವಿಜಯಪೂರ ಕ್ರಾಸ್ ಹತ್ತಿರ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆ ಯು.ಡಿ.ಆರ್. ನಂ  10/2019 ಕಲಂ; 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ಧಾಖಲಿಸಲಾಗಿದೆ.