ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ:
07-05-2020
ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 51/2020 ಕಲಂ
3 & 7 ಇ.ಸಿ. ಕಾಯ್ದೆ ;-
ದಿನಾಂಕ 05/05/2020
ರಂದು 2145 ಗಂಟೆಗೆ ಶ್ರೀ ಅರುಣಕುಮಾರ, ಆಹಾರ ನಿರೀಕ್ಷಕರು, ತಹಸೀಲ ಕಛೇರಿ ಬೀದರ ರವರು ಠಾಣೆಗೆ ಹಾಜರಾಗಿ
ತಮ್ಮದೊಂದು ದೂರು ಅರ್ಜಿ ಜೊತೆ ಜಪ್ತಿ ಪಂಚನಾಮೆಯನ್ನು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನೆಂದರ
ದಿನಾಂಕ 05/05/2020
ರಂದು ಖಚಿತ
ಬಾತ್ಮಿ ಮೇರೆಗೆ ಪಂಚರ ಸಮಕ್ಷಮ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಅಮ್ಮ ಎಂಟರಪ್ರೈಸೆಸ ಎಂಬ
ಹೆಸರಿನ ಕಂಪನಿಯ ಮೇಲೆ ದಾಳಿ ಮಾಡಿ ಅಲ್ಲಿ ಸಂಗ್ರಹಿಸಿ ಇಟ್ಟಿದ್ದ 28660 ಕೆಜಿ ಅಕ್ಕಿ ಮತ್ತು ಅಂದಾಜು 7500 ಕೆಜಿ ಗೋಧಿಯನ್ನು ಮತ್ತು ಕೃತ್ಯಕ್ಕೆ
ಬಳಸಲಾಗುತ್ತಿದ್ದ ಒಂದು ಮಹಿಂದ್ರಾ ಮ್ಯಾಕ್ಸ್ ಪಿಕ್ ಅಪ್ ವಾಹನ ಸಂಖ್ಯೆ ಎಪಿ-28/ಟಿಬಿ-8292 ನೇದನ್ನು ಜಪ್ತಿಪಡಿಸಿಕೊಂಡಿದ್ದು, ಜಪ್ತಿಪಡಿಸಿಕೊಳ್ಳಲಾದ ಅಕ್ಕಿ ಮತ್ತು
ಗೋಧಿಯನ್ನು ಬಾಡಿಗೆಗೆ ಪಡೆದುಕೊಳ್ಳಲಾದ ಲಾರಿ ನಂ-ಲಾರಿ ನಂ-ಎಪಿ-31/ಟಿಟಿ-9183, ಲಾರಿ ನಂ-ಎಮ್ವೈಐ-3105 ಮತ್ತು ಲಾರಿ ನಂ-ಎಪಿ-13/ಎಕ್ಸ-3353 ನೇದವುಗಳಲ್ಲಿ ಲೋಡ್ ಮಾಡಿಕೊಂಡು ಈ ಬಗ್ಗೆ
ಒಂದು ವಿವರವಾದ ಜಪ್ತಿ ಪಂಚನಾಮೆಯನ್ನು ತಯಾರಿಸಿದ್ದು, ಕಾರಣ ಮುದ್ದೆಮಾಲನ್ನು ಅಕ್ಕಿ ಮತ್ತು ಗೋಧಿ, ಶ್ಯಾಂಪಲ ಅಕ್ಕಿ ಮತ್ತು ಗೋಧಿ ಮತ್ತು
ಮಹಿಂದ್ರಾ ಮ್ಯಾಕ್ಸ ವಾಹನವನ್ನು ನಿಮ್ಮ ವಶಕ್ಕೆ ಪಡೆದುಕೊಂಡು ಪಡಿತರ ಅಕ್ಕಿ ಮತ್ತು ಗೋಧಿಯನ್ನು
ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಅಮ್ಮ ಎಂಟರಪ್ರೈಸೆಸ್ ನೇದರ ಪ್ರೋಪರೇಟರ/ಮಾಲಿಕರ ವಿರುಧ್ಧ ಕಲಂ 3 & 7 ಇ.ಸಿ ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು
ತಮ್ಮಲ್ಲಿ ಕೋರಿದೆ ಎಂದು ಇರುವ ದೂರನ್ನು ಪಡೆದುಕೊಂಡು ಸದರಿ ದೂರಿನ ಸಾರಾಂಶದ ಆಧಾರದ ಮೇಲೆ ನೂತನ
ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 51/2020
ಕಲಂ 3 & 7 ಇ.ಸಿ ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 115/2020 ಕಲಂ 379 ಐಪಿಸಿ :-
ದಿನಾಂಕ 06/05/2020 ರಂದು 10:00 ಗಂಟೆಗೆ ಫಿರ್ಯಾದಿ
ಸೂರ್ಯಕಾಂತ ತಂದೆ ಮಾಣಿಕಪ್ಪಾ ಮೇತ್ರೆ ಸಾ:ಕುಂಟಾ ಸಿಸರ್ಿ ರವರು ತಮ್ಮ ಹಿರೋ ಹೊಂಡಾ ಸ್ಪ್ಲೇಂಡರ
ಪಲ್ಸ ಮೋಟಾರ ಸೈಕಲ ನಂ ಕೆ.ಎ 39 ಹೆಚ್ 3239 ನೇದ್ದನ್ನು
ಭಾಲ್ಕಿಯ ಧೂಳಪೇಟ ಏರಿಯಾದಲ್ಲಿ ಇವರ ಮನೆ ಹತ್ತಿರ
ಜನ ಸಂದಣಿ ಬಹಳ ಇರುವದರಿಂದ ವಾಮನರಾವ ರವರ ಮನೆಯ ಹತ್ತಿರ ಮೋಟಾರ ಸೈಕಲ ನಿಲ್ಲಿಸಿ ಮದ್ಯಾಹ್ನ 1 ಗಂಟೆಗೆ
ಮನೆಯಿಂದ ಹೋರಗೆ ಬಂದು ನೋಡಲು ಮೋಟಾರ ಸೈಕಲ
ಇರಲಿಲ್ಲಾ ಎಲ್ಲಾ ಕಡೆ ಹುಡುಕಾಡಿ ನೋಡಲು ಮೋಟಾರ
ಸೈಕಲ ಸಿಕ್ಕಿರುವದಿಲ್ಲ ದಿನಾಂಕ 05/05/2020 ರಂದು ಮುಂಜಾನೆ
9 ಗಂಟೆಗೆ ವಾಮನರಾವ ರವರ ಮನೆಯ ಹತ್ತಿರ ಮೋಟಾರ ಸೈಕಲ ನಿಲ್ಲಿಸಿ
ಹೋಗುವದನ್ನು ನೋಡಿ ಯಾರೋ ಅಪರಿಚೀತ ಕಳ್ಳರು ಅ:ಕಿ: 24,000 ರೂ ಬೆಲೆಯ
ನನ್ನ ಮೋಟಾರ ಸೈಕಲ ನಂ ಕೆ.ಎ 39 ಹೆಚ್ಚ 3239 ನೆದನ್ನು ಕಳವು
ಮಾಡಿಕೊಂಡು ಹೊಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 279, 338,
304(ಎ) ಐಪಿಸಿ :-
ದಿನಾಂಕ 05/05/2020 ರಂದು ಫಿರ್ಯಾದಿ ಗೌತಮ ತಂದೆ
ಘಾಳೆಪ್ಪಾ ವಯ:
27 ವರ್ಷ, ಉ: ವಡಗಾಂವ ವೈನ್ಸ್
ಮ್ಯಾನೆಜರ್ ಸಾ: ಜನವಾಡ ರವರು ನೀಡಿದ ದೂರಿನ
ಸಾರಾಂಶವೆನೆಂದರೆ ಇವರ ಜೊತೆ ನಮ್ಮೂರ ಪ್ರಕಾಶ ತಂದೆ ಮೋಹನ ಕಾಂಬಳೆ ಈ ತನು ಕೂಡ ಅದೇ ವೈನ್ಸ
ಶಾಪನಲ್ಲಿ ನಾಲ್ಕು ತಿಂಗಳಿಂದ ಕೆಲಸ ಮಾಡುತ್ತಿದ್ದು ಮತ್ತು ಇನ್ನೊಬ್ಬ ವ್ಯಕ್ತಿಯಾದ ಶಿವಕುಮಾರ
ತಂದೆ ರಾಜೆಪ್ಪಾ ಸಾ!! ಕುಂಬಾರ ಚಿಂಚೋಳಿ ಈತನು ಕೂಡ ಅದೆ ವೈನ್ಸನಲ್ಲಿ ಕೆಲಸ ಮಾಡುತ್ತಿರುತ್ತಾನೆ ಹೀಗಿರುವಾಗ ರಾತ್ರಿ 0800 ಗಂಟೆ ಸುಮಾರಿಗೆ
ವಡಗಾಂವ್ ಜೈಭವಾನಿ ವೈನ್ಸನ್ನು ಮುಚ್ಚಿ ಜನವಾಡಗೆ
ಹೊಗಲು ಫಿರ್ಯಾದಿ ಮ್ತು ಅಶೋಕ ಕಂದಗೊಳ ಇಬ್ಬರು ಕಾರ್ ನಂ. ಎಮ್ ಎಚ್ 01 ಎ ಎನ್ 7635 ನೇದರಲ್ಲಿ
ಕುಳಿತು ಹೋಗುವಾಗ ಹಿಂದೆ ಇವರ ವೈನ್ಸ ಶಾಪನಲ್ಲಿ ಕೆಲಸ ಮಾಡಿತ್ತಿದ್ದ ಪ್ರಕಾಶ ಹಾಗು ಶಿವಕುಮಾರ ಇಬ್ಬರು
ಮೋಟರ್ ಸೈಕಲ್ ನಂ. ಕೆಎ 38 ಎಸ್ 9996 ನೇದರ ಮೇಲೆ ಕುಳಿತು
ಪ್ರಕಾಶ ನಡೆಸುತ್ತಿದ್ದು, ಅವರು ಸಹ ಜನವಾಡ ಕಡೆಗೆ ಬರುತ್ತಿದ್ದು ನಂತರ ರಾತ್ರಿ 0800 ಸುಮಾರಿಗೆ
ಶಿವಕುಮಾರ ಈತನು ವಡಗಾಂವ್ ಕೌಠಾ ರಸ್ತೆಯ ಬೇಲೂರ ಶಿವಾರದಲ್ಲಿ ಬರುವ ಅರಣ್ಯ ಪ್ರದೇಶದ ಹತ್ತಿರ
ಬಂದು ಬ್ರಿಜ್ ಹತ್ತಿರ ಬಂದು ಬಿದ್ದಿರುತ್ತೇವೆ ಅಂತ ತಿಳಿಸಿದ ತಕ್ಷಣ ಫಿರ್ಯಾದಿ
ಮತ್ತು ಅಶೋಕ ಇಬ್ಬರು ಕಾರನ್ನು ಹಿಂದಕ್ಕೆ ತಿರುಗಿಸಿ ಘಟನಾ ಸ್ಥಳಕ್ಕೆ ಹೋಗಿ ನೊಡಿದಾಗ ಪ್ರಕಾಶ
ಈತನು ಮಾತನಾಡಲಿಲ್ಲ ಶಿವಕುಮಾರ ಈತನು ಮಾತಾಡಿದ್ದು ವಿಚಾರಿಸಿದಾಗ ಪ್ರಕಾಶ ವಯ: 25 ವರ್ಷ, ಈತನು ಮೋಟಾರ್
ಸೈಕಲ್ ಅನ್ನು ಅತಿವೇಗದಿಂದ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಒಮ್ಮೇಲೆ ಹಿಡಿತ ತಪ್ಪಿ
ರೋಡಿನ ಎಡಗಡೆ ಬಿದ್ದಿದ್ದು ಅಂತ ತಿಳಿಸಿದಾಗ ಪ್ರಕಾಶ ಈತನಿಗೆ ನೋಡಿದ್ದು ಎಡಗಡೆ ಕಣ್ಣಿನ ಕೆಳಗೆ
ಮೂಗಿನ ಹತ್ತಿರ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು ಚಿಕಿತ್ಸೆ ಕುರಿತು ಕಾರಿನಲ್ಲಿ ಹಾಕಿಕೊಂಡು ಬೀದರ
ಬ್ರಿಮ್ಸ್ ಆಸ್ಪತ್ರೆಗೆ ತಂದು ಸೇರಿಸಿದ್ದು ಚಿಕಿತ್ಸೆ ಕಾಲಕ್ಕೆ ರಾತ್ರಿ 10;30 ಗಂಟೆಗೆ ಪ್ರಕಾಶ
ಮೃತಪಟ್ಟಿರುತ್ತಾನೆ. ಗಾಯಗೊಂಡ ಶಿವಕುಮಾರ ಈತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಗೆ
ಕಳುಹಿಸಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.