Police Bhavan Kalaburagi

Police Bhavan Kalaburagi

Monday, December 2, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ:30/11/2019 ರಂದು ಬೆಳಗ್ಗೆ ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ  ಸನ್ನತಿ ಗ್ರಾಮದ  ಬಸಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ಸನ್ನತಿ ಗ್ರಾಮದ ಸಮೀಪ ಹೋಗಿ ಬಸಸ್ಟ್ಯಾಂಡ ಸಮೀಪ ರೊಡಿಗೆ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು  ವಿಜಯಕುಮಾರ ತಂದೆ ಮಲ್ಲಣ್ಣಾ ನಾಟೀಕರ ಸಾ:ಸನ್ನತಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 750 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 29-11-2019 ರಂದು ಕ್ಕೆ ಶ್ರೀ ಶಬ್ಬಿರ ಅಹ್ಮದ ದಿಡಗೂರ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಕಲಬುರಗಿ ರವರು ಅನದಿಕೃತ ಸಾದಾ ಮರಳು ಸಾಗಾಣಿಕೆ ಮಾಡುತ್ತಿರುವ ವಾಹನ ಸಂಖ್ಯೆ ಕೆಎ-32-ಡಿ-0944 ದ ಮೇಲೆ ಕಾನೂನು ಕ್ರಮ ಕೈಕೊಳ್ಳುವ ಬಗ್ಗೆ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸಹಾಯಕ ಆಯುಕ್ತರು ಕಲಬುರಗಿ ರವರು ಉಪ ನಿದೇರ್ಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರಗಿ ರವರಿಗೆ ದೂರವಾಣಿ ಮೂಲಕ ಸೂಚಿಸಿರುವ ಮೇರೆಗೆ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರು ಮೌಖಿಕವಾದ ಆದೇಶದ ಮೇರೆಗೆ ನಾನು ಶಬ್ಬಿರ ಅಹ್ಮದ ದಿಡಗೂರ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರು ಅಫಜಲಪೂರ ತಾಲೂಕೀನ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವೀಣ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ಆಯುಕ್ತರು ಕಲಬುರಗಿ ಹಾಗೂ ತನಿಶಿಲ್ದಾರರು ಅಫಜಲಪೂರ ರವರು ಸೇರಿಕೊಂಡು ತಪಾಸಣೆ ನಡೆಸುತ್ತಿರುವಾಗ ಬಳೂರ್ಗಿ ಹೋಗುವ ರಸ್ತೆಯಲ್ಲಿ ಅಂದಾಜು ಅಫಜಲಪೂರ ದಿಂದ 8 ಕಿ.ಎಮ್ ಅಂತರದಲ್ಲಿ ಒಂದು ಮರಳು ತುಂಬಿದ ವಾಹನ ನಿಂತಿರುತ್ತದೆ ವಾಹನದಲ್ಲಿ ಯಾವುದೇ ಚಾಲಕರು ಇರುವುದಿಲ್ಲಾ ಹಾಗೂ ವಾಹನವನ್ನು ಸದರಿ ಪ್ರದೇಶದಲ್ಲಿ ಬಿಟ್ಟು ಚಾಲಕನು ಹೋಗಿರುತ್ತಾನೆ ವಾಹದಲ್ಲಿ ತಪಾಸಣೆ ನಡೆಸಿದಾಗ ಯಾವುದೇ ಮರಳು ರವಾನೆ ಪರವಾನಿಗೆ ಇರುವುದಿಲ್ಲ ಇದರಿಂದ ವಾಹನದಲ್ಲಿರುವ ಮರಳನ್ನು ಅನದಿಕೃತವಾಗಿ ಸಾಗಿಸುತ್ತಿರುವುದು ದೃಡಪಟ್ಟಿರುತ್ತದೆ. ವಾಹನದಲ್ಲಿ ಅಂದಾಜು 20 ಮೇಟ್ರೀಕ್ ಟನ್ ರಷ್ಟು ಮರಳು ಇರುವುದು ಕಂಡು ಬಂದಿರುತ್ತದೆ ಇದರ ಮಾರುಕಟ್ಟೆಯ ಬೆಲೆಯ ರೂ 15000/- ರೂ ಇರುತ್ತದೆ ಸದರಿ ವಾಹನದ ಅಂದಾಜು ಬೆಲೆಯು 8,00000/- (8 ಲಕ್ಷ) ರೂ ಇರುತ್ತದೆ ನಂತರ ವಾಹನವನ್ನು ಪರಿಶೀಲಿಸಿದಾಗ ಸದರಿ ವಾಹನದ ಸಂಖ್ಯೆ ಕೆಎ-32-ಡಿ-0944 ಇರುವುದು ಕಂಡು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಮದುರಾಜ ತಹಸಿಲ್ದಾರ ಮತ್ತು ತಾಲೂಕ ದಂಡಾಧಿಕಾರಿ ಅಫಜಲಪೂರ ತಾಲೂಕ  ರವರು ದಿನಾಂಕ 29/11/2019 ರಂದು 8:00 ಪಿ ಎಮ್ ಕ್ಕೆ  ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರು ಮತ್ತು ನಾನು ಹಾಗೂ ವಿಠ್ಠಲ ತಂದೆ ಹಣಮಂತ ಭೋವಿ ಇಂಗಳಗಿ (ಕೆ) ಗ್ರಾಮ ಲೇಕ್ಕಾಧಿಕಾರಿ ಮತ್ತು ಮಲ್ಲಿಕಾರ್ಜುನ ತಂದೆ ಲಕ್ಕಪ್ಪ ಚಂಗಿನ್ ಮತ್ತು ಶೀವಪುತ್ರ ತಂದೆ ಅವ್ವಣ್ಣ ಜಮಾದಾರ ಗ್ರಾಮ ಸಹಾಯಕ  ಇಂಗಳಗಿ (ಕೆ) ಗ್ರಾಮ ಇದ್ದು ಇಂಗಳಗಿ (ಕೆ) ಗ್ರಾಮಕ್ಕೆ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರದಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ಬರುತ್ತಿರುವದನ್ನು ಕಂಡು ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸಲು ಕೈ ಸೂಚನೆ ಕೊಟ್ಟಿದ್ದು ಆಗ ನಾವು ಟಿಪ್ಪರ ಹತ್ತಿರ ಹೋಗಿ ಸದರಿ ಚಾಲಕನಿಗೆ ದಾಖಲಾತಿಗಳನ್ನು ವಿಚಾರಿಸಿದಾಗ ತಪ್ಪು ದಾಖಲಾತಿಗಳನ್ನು ನೀಡಿ ವಾಹನ ಚಾಲಕನು ಪರಾರಿಯಾಗಿರುತ್ತಾನೆ. ನಾವು ಟಿಪ್ಪರ ಹತ್ತಿರ ಹೋಗಿ ನೋಡಲಾಗಿ ಭಾರತ ಬೆಂಜ್ ಕಂಪನಿಯದು ಇದ್ದು ಅದರ ನೊಂದಣೀ ಸಂಖ್ಯೆ ಕೆಎ-28-ಸಿ-3125 ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು ಮತ್ತು  ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು ಕಾರಣ ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿರವರ ಸಹಾಯದಿಂದ ಠಾಣೆಗೆ ತಂದಿದ್ದು ಕಾರಣ ಸದರಿ ಟಿಪ್ಪರ ವಾಹನದಲ್ಲಿ ಅಕ್ರಮವಾಗಿ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ 29/11/2019 ರಂದು ಮದ್ಯಾಹ್ನ ನಾನು ನಮ್ಮೂರಿನಲ್ಲಿದ್ದಾಗ ನನ್ನ ಮೊಬೈಲಿಗೆ ನಮ್ಮೂರಿನ ವಿಠ್ಠಲ ತಂದೆ ಚಂದಪ್ಪಾ ಕೊಣೆಕರ ಇವರು ಫೊನಮಾಡಿ ಗೊಳಾ(ಬಿ) ಕ್ರಾಸ್ ದಾಟಿ ನರೋಣಾ ಕಡೆಗೆ ಹೊಗುವ ಡಾಂಬರ ರೊಡಿನ ಮೇಲೆ ಒಬ್ಬ ಕಾರ ಚಾಲಕನು ರಾಚಣ್ಣಾ ಮತ್ತು ರಾಜಕುಮಾರ @ ರಾಜಶೇಖರ ತಂದೆ ಅಪ್ಪಾರಾವ ಮಾಲೀಪಾಟಿಲ ಸಾ: ಬಟ್ಟರ್ಗಾ ಇವರು ಹೊರಟಂತಹ ಮೊಟರ ಸೈಕಲಿಗೆ ಅಪಘಾತಪಡಿಸಿರುತ್ತಾನೆ. ಹೀಗಾಗಿ ಇಬ್ಬರಿಗೂ ಗಂಭೀರ ರಕ್ತಗಾಯ ಗುಪ್ತ ಗಾಯಗಳಾಗಿವೆ ಅವರಿಗೆ ಉಪಚಾರಕ್ಕಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಯ್ಯುತ್ತಿದ್ದೆವೆ ಅಂತಾ ತಿಳಿಸಿದ ಮೆರೆಗೆ ಗಾಬರಿಯಾಗಿ ನಾನು ಹಾಗು ನಮ್ಮೂರಿನ ಕಲ್ಲಯ್ಯಾ ತಂದೆ ಶಂಕ್ರಯ್ಯಾ ಮಠಪತಿ, ಸೂರ್ಯಕಾಂತ ಚಿಂಚನಸೂರ, ಹಾಲಣ್ಣಾ ಸನಗುಂದಿ ಎಲ್ಲರೂ ಸೇರಿ ಒಂದು ವಾಹನ ಬಾಡಿಗೆ ಮಾಡಿಕೊಂಡು ನೇರವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರ್ಗಿಗೆ ಬಂದು ನೊಡಿದಾಗ ನನ್ನ ತಮ್ಮ ರಾಚಣ್ಣಾ ಈತನಿಗೆ ತಲೆಗೆ ಹಾಗು ಮುಖಕ್ಕೆ ಗಂಭೀರ ರಕ್ತಗಾಯ, ಕೈಕಾಲುಗಳಿಗೆ ರಕ್ತಗಾಯ, ಗುಪ್ತಗಾಯಗಳಾಗಿ ಭಾರಿ ರಕ್ತ ಹೋಗಿ ಮೃತಪಟ್ಟಿದ್ದು ಇದರ ಬಗ್ಗೆ ಆಸ್ಪತ್ರೆಯಲ್ಲಿದ್ದ ವಿಠ್ಠಲ ತಂದೆ ಚಂದಪ್ಪಾ ಕೊಣೆಕರ ಇವರಿಗೆ ವಿಚಾರ ಮಾಡಿದಾಗ ಅವರು ನನಗೆ ತಿಳಿಸಿದ್ದೆನೆಂದರೆ ನರೊಣಾ ಗ್ರಾಮದಲ್ಲಿ ಕೆಲಸವಿದ್ದ ಪ್ರಯುಕ್ತ ನಾನು ಹಾಗು ರಾಚಣ್ಣಾ, ರಾಜಶೇಖರ ತಂದೆ ಅಪ್ಪಾರಾವ ಮಾಲೀಪಾಟಿಲ ಸಾ: ಬಟ್ಟರ್ಗಾ ಎಲ್ಲರೂ ಸೇರಿ ಕಡಗಂಚಿ ವರೆಗೆ ರಾಚಣ್ಣಾ ಹಾಗು ರಾಜಶೇಖರ ಮೊಟರ ಸೈಕಲ ನಂ ಕೆಎ-32, ಎಸ್-8848 ನೆದ್ದರ ಮೇಲೆ ನಾನು ನನ್ನ ಮೊಟರ ಸೈಕಲ ಮೇಲೆ ಹೊಗಿರುತ್ತೆವೆ. ಕಡಗಂಚಿಯಲ್ಲಿ ನಮ್ಮ ಪರಿಚಯದವರಾದ ಸತೀಶಕುಮಾರ ತಂದೆ ಚನ್ನಪ್ಪಾ ಪನಶೇಟ್ಟಿ ಇವರು ನನ್ನ ಮೊಟರ ಸೈಕಲ ಮೇಲೆ ಹತ್ತಿದ್ದು, ಕೆಎ-32, ಎಸ್-8848 ನೆದ್ದನ್ನು ರಾಜಶೇಖರನು ಚಲಾಯಿಸುತ್ತಿದ್ದು ಆತನ ಹಿಂದುಗಡೆ ರಾಚಣ್ಣಾ ಇವರು ಕುಳಿತಿದ್ದರು ನನ್ನ ಮೊಟರ ಸೈಕಲನ್ನು ನಾನು ಚಲಾಯಿಸುತ್ತಿದ್ದು ನನ್ನ ಹಿಂದೆ ಸತೀಶಕುಮಾರ ಇವರು ಕುಳಿತಿದ್ದು ಗೊಳಾ(ಬಿ) ಕ್ರಾಸ ದಾಟಿ ಅರ್ಧ ಕಿಲೊ ಮಿಟರ್ ಅಂತರದಲ್ಲಿ ನರೋಣಾ ಕಡೆಗೆ ಹೊಗುವ ರೋಡಿನ ಮೇಲೆ ನನ್ನ ಮೊಟರ ಸೈಕಲ ಮುಂದೆ ಸ್ವಲ್ಪ ಅಂತರದಲ್ಲಿ ಇರುವ ಮೊಟರ ಸೈಕಲ ನಂ ಕೆಎ-32, ಎಸ್-8848 ನೆದ್ದಕ್ಕೆ 2-00 ಪಿ,ಎಮ್,ಕ್ಕೆ ಎದುರಿನಿಂದ ಒಬ್ಬ ಕಾರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದವನೆ ಒಮ್ಮಿದೊಮ್ಮೆಲೆ ಕಟ್ ಹೊಡೆದಿದ್ದರಿಂದ ಆತನ ವಾಹನದ ಬಲಭಾಗ ಮೊಟರ ಸೈಕಲಿಗೆ ತೆರಚಿ ಕೆಎ-32, ಎಸ್-8848 ನೆದ್ದರ ಮೇಲಿಂದ ರಾಚಣ್ಣಾ ಹಾಗು ರಾಜಶೇಖರ ಇಬ್ಬರು ಒಮ್ಮೆಲೆ ನೆಲಕ್ಕೆ ಬಿದ್ದಿದ್ದರಿಂದ ನಾನು ನನ್ನ ಮೊಟರ ಸೈಕಲನ್ನು ಪಕ್ಕಕ್ಕೆ ನಿಲ್ಲಿಸಿ ನಾನು ಹಾಗು ಸತೀಶಕುಮಾರ ಇಬ್ಬರು ರಾಚಣ್ಣಾ ಹಾಗು ರಾಜಶೇಖರ ಇವರಿಗೆ ಎತ್ತಿ ರೊಡಿನ ಪಕ್ಕಕ್ಕೆ ಹಾಕುವಾಗ ಕಾರ ಚಾಲಕನು ತನ್ನ ಕಾರನ್ನು ರೊಡಿನ ಪಕ್ಕಕ್ಕೆ ನಿಲ್ಲಿಸಿದ್ದು ಅದರ ನಂಬರ ಪರಿಶೀಲಿಸಲಾಗಿ ಕೆಎ-02, ಎಮ್,ಕೆ-3420 ಇರುತ್ತದೆ. ಕಾರ ಚಾಲಕನು ನಾವು ಗಾಯಾಳುದಾರರಿಗೆ ಎತ್ತಿ ಹಾಕುವಾಗ ತನ್ನ ಕಾರನ್ನು ಮತ್ತೆ ಚಾಲು ಮಾಡಿಕೊಂಡು ವೇಗವಾಗಿ ಕಡಗಂಚಿ ಕಡೆಗೆ ಹೊಗಿರುತ್ತಾನೆ. ಅಂಥಾ ತೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ವೈಜನಾಥ ತಂದೆ ಮಲಕಾಜಪ್ಪ ಕಲಶೇಟ್ಟಿ ಸಾ: ಆನೂರ ರವರು ಅಫಜಲಪೂರ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯ ಪರಿಕ್ಷಕರು ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ.ನಮ್ಮ ಆಸ್ಪತ್ರೇಗೆ ನಮ್ಮ ಇಲಾಖೆ ವತಿಯಿಂದ ಒಂದು ಟಾಟಾ ಸುಮಾ ಕೊಟ್ಟಿದ್ದು ಅದರ ನೊಂದಣಿ ಸಂಖ್ಯೆ ಕೆ,ಎ-32 ಜಿ-0848 ಅಂತ ಇರುತ್ತದೆ ಸದರಿ ಟಾಟಾ ಸುಮೊದ ಮೇಲೆ ಶಬ್ಬಿರ ತಂದೆ ಗಾಲಿಬಸಾಬ ಸವಾರ ಸಾ||ದೇಸಾಯಿ ಕಲ್ಲೂರ ಎಂಬಾತನು ತಾತ್ಕಾಲಿಕವಾಗಿ ಇಲಾಖೆ ವತಿಯಂದ ನೇಮಕಗೊಂಡು ಚಾಲಕ ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾನೆ. ದಿನಾಂಕ:30/11/2019 ರಂದು ಅಫಜಲಪೂರ ಪಟ್ಟಣದ ಶ್ರೀ ಶೈಲ ಬಳೂರ್ಗಿ ರವರ ಹೊಲದಲ್ಲಿ ಇರುವ ಆಕಳಿಗೆ ಕೆಚ್ಚಲುಬಾವು ಬಂದಿದ್ದರಿಂದ ತಾಲೂಕ ಪಶು ವೈಧ್ಯಾಧಿಕಾರಿಗಳಾದ ಎಮ್,ಎಸ್,ಗಂಗನಳ್ಳಿ ರವರ ಆದೇಶದ ಮೇರೆಗೆ ನಾನು ಮತ್ತು ಚಾಲಕ ಶಬ್ಬಿರ ಇಬ್ಬರು ಕೂಡಿ ಇಲಾಖಾ ಜೀಪ ನಂಬರ ಕೆ,ಎ-32 ಜಿ-0848 ನೇದ್ದನ್ನು ತಗೆದುಕೊಂಡು ಶ್ರೀಶೈಲ ಬಳೂರ್ಗಿರವರ ಹೊಲಕ್ಕೆ ಹೋಗಿ ಅವರ ಆಕಳಿಗೆ ಉಪಚಾರ ಮಾಡಿ ಮರಳಿ ಅಫಜಲಪೂರಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಿದ್ರಾಮಪ್ಪ ಮನ್ಮಿ ರವರ ಹೊಲದ ಹತ್ತಿರ ಆನೂರ ಅಫಜಲಪೂರ ರೊಡಿನ ಮೇಲೆ ಶಬ್ಬಿರನು ಟಾಟಾ ಸುಮೊವನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಟಾಟಾ ಸುಮೊದ ಬಲಗಡೆಯ ಹಿಂದಿನ ಟೈರ ಬ್ಲಾಸ್ಟ ಆಗಿ ಟಾಟಾ ಸುಮೊ ಚಾಲಕನ ಬಲಗಡೆ ಪಲ್ಟಿ ಆಗಿರುತ್ತದೆ ಆಗ ರೊಡ ಮೇಲೆ ಹೊಗುತ್ತಿದ್ದ ನಮ್ಮ ಗ್ರಾಮದ ಪುಂಡಲಿಕ ತಳವಾರ ಈತನು ಬಂದು ನಮಗೆ ಟಾಟಾ ಸುಮೊದಿಂದ ಹೊರಗಡೆ ತಗೆದಿರುತ್ತಾನೆ ಸದರಿ ಅಪಘಾತದಲ್ಲಿ ನನಗೆ ಯಾವುದೆ ರಿತಿಯ ಗಾಯಗಳಾಗಿರುವದಿಲ್ಲ ಚಾಲಕ ಶಬ್ಬಿರ ಈತನಿಗೆ  ಎಡಗಾಲ ಮೊಳಕಾಲಿಗೆ ಸಾಧಾಗಾಯ ವಾಗಿರುತ್ತದೆ ನಂತರ ನಾನು ಮತ್ತು ಪುಂಡಲಿಕ ಇಬ್ಬರು ಕೂಡಿ ಒಂದು ಖಾಸಗಿ ವಾಹನದಲ್ಲಿ ಶಬ್ಬಿರನಿಗೆ ಹಾಕಿಕೊಂಡು ಬಂದು ಅಫಜಲಪೂರ ಸರಕಾರಿ ಆಸ್ಪತ್ರೇಗೆ ಸೇರಿಸಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಜಗದೇವಿ ತಂದೆ ಸೈಬಣ್ಣಾ ಚಿಮ್ಮಾಯಿ ಸಾ : ನರೋಣಾ  ರವರು ದಿನಾಂಕ :29/11/2019 ರಂದು 4-30 ಪಿ.ಎಂ ಗಂಟೆಗೆ ನಮ್ಮ  ಹೊಲ ಸರ್ವೇ ನಂ  436 ನೇದ್ದರಿನ ಬಂದಾರಿ ಬದುವನಲ್ಲಿ ಹುಲ್ಲು ಕೊಯುತ್ತಿದ್ದಾಗ ಆಕಸ್ಮಿಕವಾಗಿ ಹಾವು ಕಚ್ಚಿದ್ದರಿಂದ ಆಕೆಯನ್ನು ನಾಟಿ ವೈದಲ್ಲಿ ತೋರಿಸಿ ನಾಟಿ ಔಷದಿ ಕೊಡಿಸಿದ್ದು. ದಿನಾಂಕ:30/11/19 ರಂದು ಮನೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಗುಂಡಪ್ಪಾ ತಂದೆ ಸೈಬಣ್ಣಾ ಚಿಮ್ಮಾಯಿ ಸಾ : ನರೋಣಾ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಿಟ್ಟುಸಾಬ ತಂದೆ ಇಮಾಮಸಾಬ ಜೇರಟಗಿ ಸಾ: ಆನೂರ ರವರು ದಿನಾಂಕ 29-11-2019 ರಂದು  ನಮ್ಮ ಮನೆಯ ಮುಂದೆ ಕುಳಿತಿರುವಾಗ ನಮ್ಮ ಮನೆಯ ಹಿಂದಿನ ಹೊಲದವರು ತಮ್ಮ ಹೊಲದಲ್ಲಿ ಏರಟೇಲ್ ಕಂಪನಿಯ ಟವರ ಕೂಡಿಸಲು ಕೆಲಸ ಪ್ರಾರಂಬಿಸಿದಾಗ ಸದರಿ ಏರಟೇಲ್ ಟವರ ನಮ್ಮ ಮನೆಯ ಹಿಂದು ಗಡೆ ಕೂಡಿಸುವ ಸಲುವಾಗಿ ಗಾರೆ ಹೊಡೆಯುತ್ತಿದ್ದಾಗ ಅದಕ್ಕೆ ನಾನು ನಮ್ಮ ಮನೆಯ ಹತ್ತಿರ ಕೂಡಿಸಬೇಡಿ ಅಂತಾ ನಮ್ಮೂರಿನ ಬಲಭೀಮ ತಂದೆ ಮೈಲಪ್ಪ ಬಳೂಂಡಗಿ ಇವರಿಗೆ ನಾನು ಹೇಳುತ್ತಿದ್ದಾಗ ಅಶೋಕ ತಂದೆ ಮೈಲಪ್ಪ ಬಳೂಂಡಗಿ, ಮಲ್ಲು ತಂದೆ ಮೈಲಪ್ಪ ಬಳೂಂಡಗಿ, ಸಚೀನ ತಂದೆ ಬಲಭೀಮ ಬಳೂಂಡಗಿ ಇವರೆಲ್ಲರೂ ಸೇರಿಕೊಂಡು ನಮ್ಮ ಮನಗೆ ಬಂದು ಏರಟೇಲ ಟವರ ನಮ್ಮ ಹೊಲದಲ್ಲಿ ಕೂಡಿಸುತ್ತೇವೆ ನೀನು ಏನು ಕೇಳುತ್ತಿಯಾ ಭೋಸಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು ಏಕೆ ಹೊಲಸು ಶಬ್ದಗಳಿಂದ ಬೈಯುತ್ತಿರಿ ಅಂತಾ ಕೇಳಿದಕ್ಕೆ ನನ್ನ ಹಿಡೆದು ನಮ್ಮ ಹೊಲದಲ್ಲಿ ಟವರ ಕೂಡಿಸಿದಕ್ಕೆ ನಿನಗೆ ಏನು ತೊಂದರೆ ಆಗುತ್ತಿದೆ ಸುಮ್ಮನೆ ಹೋಗು ಸುಳೆ ಮಗನೆ ಅಂತಾ ಮಲ್ಲು ಇತನು ನನಗೆ ಕೇಳಗೆ ಕೆಡವಿ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ಬೆನ್ನಿನ ಮೇಲೆ, ಕಪಾಳ ಮೇಲೆ ಹೊಡೆದಿರುತ್ತಾನೆ. ಮತ್ತು ಬಲಭೀಮ ಇತನು ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ. ಅಶೋಕ ಬಡಿಯಿಗೆಯಿಂದ ಬೆನ್ನಿನ ಮೇಲೆ ಹೊಡೆದು ಸಚೀನ ಇತನು ರಾಡಿನಿಂದ ನನ್ನ ಎಡಗಾಲಿನ ಪಾದದ ಮೇಲೆ ಹೊಡೆದು ಗುಪ್ತಗಾಯ ಪಡೆಸಿರುತ್ತಾನೆ ಎಲ್ಲರೂ ಕೂಡಿ ಕೇಳಗೆ ಕೆಡವಿ ಹೊಡೆಯುತ್ತಿರುವಾಗ ನಾನು ಚೀರಾಡುವುದನ್ನು ಕೇಳಿ ನನ್ನ ಹೆಂಡತಿ ಹನ್ನುಮಾ ಓಡಿ ಬಂದು ಜಗಳ ಬಿಡಿಸಲು ಬಂದಾಗ ನನ್ನ ಹೆಂಡತಿಗೆ ಸಚೀನ ಇತನು ಬಲಕಿನ ಕೈ ಹಿಡೆದು ಒಡ್ಡಮುರಿದಿರುತ್ತಾನೆ. ಮತ್ತು ಬಲಭೀಮ ಇತನು ನನ್ನ ಹೆಂಡತಿಗೆ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಬಲಭೀಮ ಇತನು ನನಗೆ ಇವತ್ತು ನೀನು ಉಳಿದಿಕೊಂಡಿದ್ದಿಯಾ ಮಗನೇ ಇಲ್ಲವಾದರೆ ನೀನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಭಯ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.