ದಿನಂಪ್ರತಿ ಅಪರಾಧಗಳ
ಮಾಹಿತಿ ದಿನಾಂಕ: 06-05-2020
ಮುಡಬಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ 34/2020 ಕಲಂ 302 ಜೊತೆ 149 ಐಪಿಸಿ ;-
ದಿನಾಂಕ: 05-05-2020
ರಂದು
1900
ಗಂಟೆಗೆ ಫಿರ್ಯಾದಿ ಎಮ್.ಡಿ. ಮಸ್ತಾನ ತಂದೆ
ಚಾಂದಸಾಬ ಝಂಡಾ ವಯ 32 ವರ್ಷ ಉ: ಕೂಲಿ ಕೆಲಸ
ಸಾ: ಹರಸೂರ ತಾ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಂಶವೆನೆಂದರೆ ಇವರ ಅಕ್ಕ ಹಫೀಜಾ ಮತ್ತು ಭಾವ ಬಾಬುಮೀಯ್ಯಾ ಇವರು 40 ವರ್ಷಗಳಿಂದ ಮುಂಬೈಯಲ್ಲಿ
ಕೂಲಿ ಮಾಡಿಕೊಂಡು ವಾಸವಾಗಿರುತ್ತಾರೆ. ಅವರ ಮಗಳು ಅಫಸಾನಾ ಇವಳಿಗೆ ಸುಮಾರು 10 ವರ್ಷಗಳ ಹಿಂದೆ
ಹಣಮಂತವಾಡಿ ಗ್ರಾಮದ ಚಾಂದಪಾಶಾ ಇವರಿಗೆ ಕೋಟ್ಟು
ಮದುವೆ ಮಾಡಿದ್ದು ಅವರಿಗೆ 3 ಮಕ್ಕಳು ಇರುತ್ತಾರೆ.
ಅಫಸಾನಾ ಇವಳ ಗಂಡ ಕಾಯಿಲೆಯಿಂದ ದಿನಾಂಕ: 24-04-2020 ರಂದು ಮೃತ
ಪಟ್ಟಿರುತ್ತಾನೆ. ಅಫಸಾನಾ ಇವಳು ತನ್ನ 3 ಮಕ್ಕಳೊಂದಿಗೆ
ಹಣಮಂತವಾಡಿ ಗ್ರಾಮದಲ್ಲಿ ಇದ್ದಳು. ಅಫಸಾನಾ ಇವಳ ಗಂಡ ತೀರಿಕೊಂಡ ನಂತರ ಸ್ವಸಾಯ ಸಂಘದಿಂದ ತನ್ನ
ಗಂಡ ತೀರಿಕೊಂಡ ನಂತರ ಬರುವ ಮಾಪಿ ಲೋನ ಹಣ ಬರುವದಿದ್ದು ಆ ಹಣದಲ್ಲಿ ನನಗು ಪಾಲು ಬೇಕು ಅಂತ
ಅಫಸಾನಾ ಇವಳಿಗೆ ಅವಳ ಭಾವ ಮದರಸಾಬ ಮತ್ತು ಅವನ ಹೆಂಡತಿ ರಿಯಾನಾ ಹಾಗು ಅವರ ಮಗ ನಬಿ ಮತ್ತು
ಗಲ್ಲಿಯ ದಸ್ತೆಗಿರ ಹಾಗೂ ಚಹಾ ಅಂಗಡಿಯವನ ಮಗನಾದ ಬಾಬಾ ಇವರೆಲ್ಲರೂ ಹಣದಲ್ಲಿ ನಮಗೆ ಪಾಲು
ಕೊಡದ್ದಿದರೆ ನಿನಗೆ ಕೊಲೆ ಮಾಡಿಬಿಡುತ್ತೆವೆ ಅಂತ ಹೆದರಿಸುತ್ತಿದ್ದರು ಈ ವಿಷಯವನ್ನು ಅಫಸಾನಾ
ಇವಳು ಫಿರ್ಯಾದಿ ಅಕ್ಕ ಹಾಗೂ ತಾಯಿ ಹಾಫೀಜಾ
ಇವಳಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ದಿನಾಂಕ: 04-05-2020 ರಂದು ಸಾಯಂಕಾಲ ದಿಂದ
ರಾತ್ರಿಯವರೆಗೆ ಅಫಸಾನಾ ಇವಳಿಗೆ ಹಣದ ಪಾಲಿನ ಬಗ್ಗೆ ಜಗಳ ತೇಗೆದು ನಿನು ಪಾಲು ಕೊಡದ್ದಿದರೆ
ನಾವೇಲ್ಲರು ಸೇರಿ ನಿನಗೆ ಇವತ್ತೆ ಖತಮ ಮಾಡಿ ಬಂದ ಹಣ ನಾವು ಹಂಚಿಕೊಳ್ಳುತ್ತೆವೆ. ಅಂತ
ಜಗಳಮಾಡಿದ್ದನ್ನು ದಿನಾಂಕ: 05-05-2020 ರಂದು ಮುಂಜಾನೆ 9-00 ಗಂಟೆಗೆ ಅಫಸಾನಾ ಇವಳು
ತನ್ನ ತಾಯಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ಸಂಶಯ ಬಂದ ಮೇರೆಗೆ ಹಣಮಂತವಾಡಿ ಗ್ರಾಮಕ್ಕೆ ಹೋಗಿ
ನೊಡಿದಾಗ ಅಫಸಾನಾ ಇವಳು ತನ್ನ ಮನೆಯ ತಗಡಿನ
ಶೇಡಿನಲ್ಲಿ ಒಳಗೆ ಸತ್ತು ಬಿದ್ದಿರುತ್ತಾಳೆ ಮತ್ತು ತಗಡದ ಕೇಳಗಿನ ಕಬ್ಬಿಣದ ದಂಟೆಗೆ ಒಂದು ನೇಣು
ಹಾಕಿಕೊಂಡಂತೆ ಸೀರೆ ಜೋತು ಬಿದ್ದಿರುತ್ತದೆ. ಘಟನೆಯ ಬಗ್ಗೆ ಗಲ್ಲಿಯ ಮಹೇಬುಬ ಇತನಿಗೆ
ವಿಚಾರಿಸಿದಾಗ ಇವನು ತಿಳಿಸಿದೆನೆಂದರೆ ಮುಂಜಾನೆ 11:30 ಗಂಟೆ ಸುಮಾರಿಗೆ ರಿಯಾನಾ
ಮತ್ತು ಮದರಸಾಬ ಇವರು ಕೂಗಿದಾಗ ಅಫಸಾನಾ ಇವಳ ಮನೆಗೆ ಹೋಗಿ ಮನೆಯಲ್ಲಿ ನೊಡಿದಾಗ ಅಫಸಾನಾ ಇವಳು
ನೇಣುಹಾಕಿಕೊಂಡಿರುವುದು ಕಂಡು ನನ್ನ ಮಗ ಕುತ್ತಿಗೆಯ ನೇಣು ತೆಗೆದು ನೇಲಕ್ಕೆ ಮಲಗಿಸಿ ನೋಡಲು
ಅಫಸಾನಾ ಇವಳು ಮೃತ್ತ ಪಟ್ಟಿರುತ್ತಾಳೆ ಅಂತ ತಿಳಿಸಿರುತ್ತಾನೆ. ಅಫಸಾನಾ ಇವಳಿಗೆ ತನ್ನ ಗಂಡ
ಮೃತ್ತ ಪಟಿರುವುದರಿಂದ ಸಂಘದಿಂದ ಬರುವ ಮಾಪಿ ಲೋನನ ಹಣದಲ್ಲಿ ಪಾಲು ಕೊಡುವ ಬಗ್ಗೆ ಮದರಸಾಬ ಮತ್ತು
ಆತನ ಹೆಂಡತಿ ರಿಯಾನಾ ಹಾಗೂ ಮಗ ನಬಿ ಮತ್ತು ಗಲ್ಲಿಯ ದಸ್ತೆಗೀರ ಹಾಗೂ ಬಾಬಾ ಇವರೆ ಕೂಡಿಕೊಂಡು
ನಮ್ಮ ಅಕ್ಕನ ಮಗಳಾದ ಅಫಸಾನಾ ಇವಳಿಗೆ ಹಣದ ಪಾಲು ಕೊಡುವುದಿಲ್ಲಾ ಅಂತ ಅವಳಿಗೆ ನೇಣು ಹಾಕಿ ಕೊಲೆ
ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.