Police Bhavan Kalaburagi

Police Bhavan Kalaburagi

Monday, December 23, 2019

KALABURAGI DISTRICT REPORTED CRIMES

ಶ್ರೀಗಂಧದ ಕಟ್ಟಿಗೆಯನ್ನು ಕಳವುಮಾಡುತ್ತಿದ್ದವರ ಬಂಧನ :
ನರೋಣಾ ಠಾಣೆ : ದಿನಾಂಕ:22/12/2019 ರಂದು ಮುಂಜಾನೆ ಬಸವನಸಂಗೋಳಗಿ ಗ್ರಾಮ ಸೀಮಾಂತರದಲ್ಲಿ ಬರುವ ಬಸವನಸಂಗೋಳಗಿ ಮತ್ತು ಗುಂಜಬಬಲಾದ ರೋಡಿಗೆ ಇರುವ ಮಲ್ಲಯ್ಯ ಮುತ್ಯಾನ ಗುಂಪಾದ ಕಮಾನ್ ಹತ್ತಿರ ಎಲ್ಲರೂ ಸೇರಿ, ರೋಡಿಗೆ ಹೋಗಿ ಬರುವ ವಾಹನಗಳಿಗೆ ಮೊಟಾರ್ ವಾಹನ ಕಾಯ್ದೆ ಅಡಿಯಲ್ಲಿ ದಂಡ ವಿಧಿಸುವ ಕರ್ತವ್ಯಕ್ಕಾಗಿ ತಪಾಸಣೆ ಮಾಡುತ್ತಾ ನಿಂತಾಗ ಬಸವನಸಂಗೋಳಗಿ ಕಡೆಯಿಂದ ಒಂದು ಮೊಟಾರ್ ಸೈಕಲ್ ಮೇಲೆ ಎರಡು ಜನ ವ್ಯಕ್ತಿಗಳು ಒಬ್ಬರ ಹಿಂದೆ ಒಬ್ಬರು ಕುಳಿತಕೊಂಡು ಹೊರಟಿದ್ದು ನಾವು ಕೈಮಾಡಿ ನಿಲ್ಲಿಸಿದಾಗ ಮೊಟಾರ್ ಸೈಕಲ್ ಮೇಲೆ ಬಂದ ವ್ಯಕ್ತಿಗಳು ಮೊಟಾರ್ ಸೈಕಲ್ ನಿಲ್ಲಿಸಿದ್ದು ಮೊಟಾರ್ ಸೈಕಲ್ ಮೇಲೆ ನಡುವೆ ಒಂದು ಕೊಡಲಿ ಹಾಗೂ ಒಂದು ಬಟ್ಟೆಯಿಂದ ಸುತ್ತಿದ ಗಂಟು ಇದ್ದು,  ಇಬ್ಬರು ಮೊಟಾರ್ ಸೈಕಲ್ ಮೇಲಿದ್ದ ಗಂಟು ಮತ್ತು ಕೊಡಲಿ ಹಾಗೂ ಮೊಟಾರ್ ಸೈಕಲ್ ಇವುಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಲು ಪ್ರಾರಂಭಿಸಿದರು, ಸಂಶಯ ಬಂದು ನಾನು ಮತ್ತು ಸಿಬ್ಬಂದಿಯವರು ಎಲ್ಲರೂ ಸೇರಿ ಓಡಿಹೊಗುತ್ತಿರುವ ಎರಡುಜನ ವ್ಯಕ್ತಿಗಳಿಗೆ ಬೆನ್ನಹತ್ತಿ ಹಿಡಿದು ವಿಚಾರಿಸಿದಾಗ ತಮ್ಮ ಹೆಸರು 1)ವಿಜಯಕುಮಾರ ತಂದೆ ಸುಭಾಷ ಮಾನೆ, ಸಾ:ಮಂಠಾಳ, ತಾ:ಬಸವಕಲ್ಯಾಣ, ಜಿಲ್ಲಾ:ಬೀದರ, 2)ಸಂದೀಪ ತಂದೆ ಗುರುನಾಥ ಜಾದವ್, ಸಾ:ವಿಶ್ವನಗರ ಬಸವಕಲ್ಯಾಣ ಪಟ್ಟಣ, ಜಿಲ್ಲಾ:ಬೀದರ ಅಂತಾ ತಿಳಿಸಿದರು. ಅವರು ಮೊಟಾರ್ ಸೈಕಲ್ ಮೇಲೆ ತಂದಂತಹ ಬಟ್ಟೆಗಂಟು ಅವರಿಂದ ಬಿಚ್ಚಿಸಿ ನೋಡಿದಾಗ ಅದರಲ್ಲಿ ಸಣ್ಣಸಣ್ಣ ಕಟ್ಟಿಗೆಯ 6 ತುಂಡುಗಳಿದ್ದು, ಪರಿಶೀಲಿಸಲಗಿ ಶ್ರೀಗಂಧ ಕಟ್ಟೆಗೆಯ ವಾಸನೆ ಬರುತ್ತಿದ್ದು. ಅದೇ ಗಂಟಿನಲ್ಲಿ ಎರಡು ಛಾನಾ, ಎರಡು ಕಾವುಯಿಲ್ಲದ ಕೊಡಲಿಗಳು ಇದ್ದು, ಅವರನ್ನು ವಿಚಾರಿಸಿದಾಗ ಅವರು ಬಸವನಸಂಗೋಳಗಿ ಸೀಮಾಂತರದಲ್ಲಿ ಬೆಳೆದ ಶ್ರೀಗಂಧ ಕಟ್ಟೆಗೆಯ ಗಿಡವನ್ನು ಬೆಳಿಗ್ಗೆ 6-30 ಗಂಟೆಗೆ ಯಾವುದೇ ಅನುಮತಿ ಇಲ್ಲದೆ ಕಳ್ಳತನದಿಂದ ಕಡಿದು ಅದರಲ್ಲಿರುವ ಶ್ರೀಗಂಧದ ಅಂಶವಿರುವ ತುಂಡುಗಳನ್ನ ಮಾತ್ರ ಬೇರ್ಪಡಿಸಿಕೊಂಡು ಇವುಗಳನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದೇವೆ. ಅಂತಾ ತಿಳಿಸಿದ್ದು.  ಇದರ ಬಗ್ಗೆ ನಾನು ಮಾನ್ಯ ಡಿ.ವೈ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿಪಿಐ ಸಾಹೇಬರು ಆಳಂದ ರವರಿಗೆ ಮಾಹಿತಿ ನೀಡಿ ಅವರ ಮಾರ್ಗದರ್ಶನದಲ್ಲಿ ಸದರಿ ಶ್ರೀಗಂಧದ ಕಟ್ಟಿಗೆಯನ್ನು ಜಪ್ತಿ ಮಾಡುವ ಸಲುವಾಗಿ ಇಬ್ಬರು ಪಂಚರನ್ನು  ಬರಮಾಡಿಕೊಂಡಿದ್ದು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಿ, ಜಪ್ತಿ ಪಂಚನಾಮೆ ನೆರವೆರಿಸಿಕೊಡಲು ಕೇಳಿಕೊಂಡ ಮೇರೆಗೆ ಸದರಿಯವರು ಒಪ್ಪಿಕೊಂಡಿದ್ದು, ಪಂಚರ ಸಮಕ್ಷಮದಲ್ಲಿ ಆಪಾದೀತರಿಂದ 1)ಒಂದು ಸುಮಾರು 13 ಇಂಚನಷ್ಟು ಉದ್ದ ಮತ್ತು 9 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 1 ಕೆ.ಜಿ ಯಷ್ಟು ಇರುತ್ತದೆ. 2)ಒಂದು ಸುಮಾರು 16 ಇಂಚನಷ್ಟು ಉದ್ದ ಮತ್ತು 8 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 1 ಕೆ.ಜಿ ಯಷ್ಟು ಇರುತ್ತದೆ. 3)ಒಂದು ಸುಮಾರು 15 ಇಂಚನಷ್ಟು ಉದ್ದ ಮತ್ತು 7 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 500 ಗ್ರಾಮನಷ್ಟು ಇರುತ್ತದೆ. 4)ಒಂದು ಸುಮಾರು 14 ಇಂಚನಷ್ಟು ಉದ್ದ ಮತ್ತು 7 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 500 ಗ್ರಾಮದಷ್ಟು ಇರುತ್ತದೆ. 5)ಒಂದು ಸುಮಾರು 16 ಇಂಚನಷ್ಟು ಉದ್ದ ಮತ್ತು 9 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 800 ಗ್ರಾಮದಷ್ಟು ಇರುತ್ತದೆ. 6)ಒಂದು ಸುಮಾರು 17 ಇಂಚನಷ್ಟು ಉದ್ದ ಮತ್ತು 6 ಇಂಚನಷ್ಟು ಸುತ್ತಳತೆ ಹೊಂದಿದ್ದ ಶ್ರೀಗಂಧದ ಕಟ್ಟಿಗೆ ತೂಕಮಾಡಿ ನೋಡಿದಾಗ 700 ಗ್ರಾಮದಷ್ಟು ಇರುತ್ತದೆ. ಎಲ್ಲವುಗಳನ್ನು ಒಟ್ಟಿಗೆ ತೂಕಮಾಡಿದಾಗ ಅಂದಾಜು 4.5 ಕೆ.ಜಿ ಯಷ್ಟಿದ್ದು ಒಟ್ಟು ಶ್ರೀಗಂಧದ ಕಟ್ಟಿಗೆಗಳ ಅಂ.ಕಿ 13500/- ರಾಪಾಯಿ ಆಗುತ್ತದೆ ನಂತರ ಬಟ್ಟೆ ಗಂಟಿನಲ್ಲಿದ್ದ 7)ಎರಡು ಛಾನಾ ಅಂ.ಕಿ ಇರುವುದಿಲ್ಲ. ಹಾಗೂ 8)ಕಾವುಯಿಲ್ಲದ ಎರಡು ಕೊಡಲಿಗಳು ಅಂ.ಕಿ ಇರುವುದಿಲ್ಲ. ಹಾಗೂ 9)ಕಾವು ಸಮೇತ ಒಂದು ಕೊಡಲಿ ಅಂ.ಕಿ ಇರುವುದಿಲ್ಲ. 10)ಹಿರೋ ಕಂಪನಿಯ ಸ್ಪೈಂಡರ್ ಪ್ಲಸ್ ಮೊಟಾರ್ ಸೈಕಲ್ ಸಿಲವರ್ ಬಣ್ಣದ್ದು, ಅದರ ನಂಬರ್ ಕೆಎ56-ಹೆಚ್7842 ಅಂ.ಕಿ 20000/- ರೂಪಾಯಿ ಇವುಗಳನ್ನು ಪಂಚರ ಸಮಕ್ಷಮದಲ್ಲಿ ಆಪಾದೀತರಿಂದ ಜಪ್ತಿ ಪಡಿಸಿಕೊಂಡು ಸದರಿವರನ್ನು ವಶಕ್ಕೆ ಪಡೆದು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ:21/12/2019 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ ಅಂಬಲಗಾ ಗ್ರಾಮದಲ್ಲಿರುವ ಕರಲಿಂಗೇಶ್ವರ ದೇವಸ್ಥಾನದ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿ.ಪಿ. ಸಾಹೇಬರು ಆಳಂದರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಂಬಲಗಾ ಗ್ರಾಮದಲ್ಲಿರುವ ಕರಲಿಂಗೇಶ್ವರ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಕರಲಿಂಗೇಶ್ವರ ದೇವಸ್ಥಾನದ ಕಟ್ಟೆಯ ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಕಾಳಪ್ಪಾ ತಂದೆ ಚನ್ನಪ್ಪಾ ಯಳವಂತಗಿ, ಸಾ:ಅಂಬಲಗಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 10,050/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ನರೋಣಾ ಪೊಲೀಸ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀಕುಪ್ಪಣ್ಣ ತಂದೆ ಶಾಂತಪ್ಪ ತಳವಾರ ಸಾ:ಕಲ್ಲೂರ(ಬಿ) ತಾ:ಜೇವರಗಿ ಜಿ:ಕಲಬುರಗಿ ರವರ ಮಗ ದಿನಾಂಕ: 22-12-2019 ರಂದು ಸಾಯಂಕಾಲ-3.30 ಗಂಟೆಯ ಸುಮಾರಿಗೆ ನನ್ನ ಮಗ ಸಚೀನ ಇತನು ನಮ್ಮೂರಿನಿಂದ ಖಾಸಗಿ ಕೆಲಸದ ಪ್ರಯುಕ್ತ ಮಂದೆವಾಲ ಗ್ರಾಮಕ್ಕೆ ಮೋಟಾರ ಸೈಕಲ ನಂ. KA-32 EU-2119 ನೇದ್ದರ ಮೇಲೆ ಕಲ್ಲೂರ(ಬಿ) ಗ್ರಾಮದಿಂದ ಹೋಗುತ್ತಿದ್ದಾಗ, ಕಲ್ಲೂರ(ಕೆ) ಬಸ್ ನಿಲ್ದಾಣದ ಹತ್ತೀರ ಒಬ್ಬ ಅಪರಿಚಿತ ವ್ಯಕ್ತಿ ಮಂದೆವಾಲ ಗ್ರಾಮದವರೆಗೆ ಬರುವದಾಗಿ ಹೇಳಿ ನನ್ನ ಮಗನ ಮೋಟಾರ ಸೈಕಲನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಹೋಗಿರುತ್ತಾನೆ. ನನ್ನ ಮಗ ಸಚೀನ ಇತನು ಮೋಟಾರ ಸೈಕಲನ್ನು  ಚಲಾಯಿಸಿಕೊಂಡು ಹೊದ ಸ್ವಲ್ಪ ಸಮಯದ ನಂತರ ನಮ್ಮೂರಿನ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ ತಾಳಿಕೋಟಿ ಇತನು ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೇ, ಮಂದೆವಾಲ ಗ್ರಾಮದ ಹತ್ತೀರ ಭಾಗವಾನ ಇವರ ತೊಟದ ಹತ್ತೀರ ಮಂದೆವಾಲ-ಕಲ್ಲೂರ(ಕೆ) ರೋಡಿನ ಮೇಲೆ ನನ್ನ ಮಗ ಸಚೀನ ಇತನ ಮೋಟಾರ ಸೈಕಲ ಅಪಘಾತವಾಗಿರುತ್ತದೆ ಅಂತಾ ತಿಳಿಸಿದ್ದರಿಂದ  ನಾನು ಮತ್ತು ನಮ್ಮೂರಿನ ಮಲ್ಲಿನಾಥ ತಂದೆ ಸಾಹೇಬಗೌಡ ಪ್ಯಾಟಿ, ರಾಜಕುಮಾರ ತಂದೆ ಭುತಾಳೆಪ್ಪ ಓಡೆಯರ ಹಾಗೂ ನನ್ನ ಅಣ್ಣನ ಮಗನಾದ ಶಿವರಾಜ ತಂದೆ ಮಲ್ಕಣ್ಣ ತಳವಾರ ಎಲ್ಲರೂ ಗಾಭರಿಯಾಗಿ ಹೋಗಿ ನೋಡಲಾಗಿ, ವಿಷಯ ನಿಜವಿದ್ದು ಸಚೀನ ಇತನಿಗೆ ತಲೆಗೆ ಭಾರಿ ರಕ್ತಗಾಯ, ಬಲಗಡೆ ಕಪಾಳಕ್ಕೆ ರಕ್ತಗಾಯ ಹಾಗೂ ಎದೆಗೆ ಗುಪ್ತಗಾಯವಾಗಿದ್ದು, ನನ್ನ ಮಗನ ಹಿಂದಿನ ಸೀಟಿನಲ್ಲಿ ಕುಳಿತ ವ್ಯಕ್ತಿಗೆ ತಲೆಗೆ, ಎಡಗೈಗೆ ರಕ್ತಗಾಯಗಳಾಗಿದ್ದು ಅವನ ಹೆಸರು ವಿಚಾರಿಸಲಾಗಿ ಮರೆಪ್ಪ ತಂದೆ ಅಮಲಪ್ಪ ಸಾ:ಮುದಬಾಳ(ಬಿ) ತಾ;ಜೇವರಗಿ ಅಂತಾ ಗೊತ್ತಾಗಿದ್ದು, ನನ್ನ ಮಗನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಮಹಿಂದ್ರಾ ಪಿಕಾಪ್ ವಾಹನ ಸಂಖ್ಯೆ KA-32 D-0318 ವಾಹನ ಕೂಡಾ ಘಟನಾ ಸ್ಥಳದಲ್ಲಿಯೇ ನಿಂತಿತ್ತು. ಕೂಡಲೆ ನಾವು ನನ್ನ ಮಗನಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ  ಮಂದೆವಾಲಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡ್ಸಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ತೆಗೆದುಕೊಂಡು ಹೋಗುವಾಗ ಕಲಬುರಗಿ ಸಮೀಪ ಮಾರ್ಗ ಮಧ್ಯದಲ್ಲಿ ಸಾಯಂಕಾಲ ನನ್ನ ಮಗ ಸಚೀನ ಇತನು ಮೃತಪಟ್ಟಿರುತ್ತಾನೆ. ದಿನಾಂಕ: 22-12-2019 ರಂದು ಸಾಯಂಕಾಲ ನನ್ನ ಮಗ ಸಚೀನ ಇತನು ಮೋಟಾರ ಸೈಕಲ ನಂ. KA-32 EU-2119 ನೇದ್ದನ್ನು ಚಲಾಯಿಸಿಕೊಂಡು ಮಂದೆವಾಲ ಗ್ರಾಮಕ್ಕೆ ಹೋಗುತ್ತಿದ್ದಾಗ ಮಂದೆವಾಲ ಗ್ರಾಮದ ಹತ್ತೀರ  ಮಂದೆವಾಲ-ಕಲ್ಲೂರ(ಕೆ) ರೋಡಿನ ಮೇಲೆ ಎದುರಿನಿಂದ ಒಂದು ಮಹಿಂದ್ರಾ ಪಿಕಾಪ್ ವಾಹನ ಸಂಖ್ಯೆ KA-32 D-0318 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನಿಗೆ ತಲೆಗೆ, ಮುಖಕ್ಕೆ ಹಾಗೂ ಎದೆಗೆ ಭಾರಿ ರಕ್ತ & ಗುಪ್ತಗಾಯಗಳಾಗಿ ಮೃತ ಪಟ್ಟಿರುತ್ತಾನೆ ಮತ್ತು ನನ್ನ ಮಗನ ಮೋಟಾರ ಸೈಕಲ ಹಿಂದೆ ಕುಳಿತಿರುವ ಮರೆಪ್ಪ ತಂದೆ ಅಮಲಪ್ಪ ಸಾ:ಮುದಬಾಳ(ಬಿ) ಇತನಿಗೆ ತಲೆಗೆ, ಎಡಗೈಗೆ ಗಾಯಗಳಾಗಿರುತ್ತವೆ. ಈ ಘಟನೆಯ ನಂತರ ನನ್ನ ಮಗನ ಮೋಟಾರ ಸೈಕಲಗೆ  ಡಿಕ್ಕಿಪಡಿಸಿದ ಮಹಿಂದ್ರಾ ಪಿಕಾಪ್ ವಾಹನ ಸಂಖ್ಯೆ KA-32 D-0318 ನೇದ್ದರ ಚಾಲಕನು ತನ್ನ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ವೈಶಾಲಿ ಗಂಡ ದೇವರಾಜ ಜಮಾದಾರ ಸಾ|| ಹೊನ್ನಳ್ಳಿ ತಾ|| ಆಳಂದ ರವರ ಗಂಡ ದೇವರಾಜ ಇವರು ಜೆಸಿಬಿ ಆಪರೇಟರ್ ಇದ್ದು ಬೇರೆ ಕಡೆಗೆ ಕೆಲಸಕ್ಕೆ ಹೋಗಿ ಬಂದು ಮಾಡುತ್ತಿರುತ್ತಾರೆ. ಈಗ 05 ದಿವಸಗಳ ಹಿಂದೆ ನನ್ನ ಗಂಡ ಉಮರ್ಗಾಕ್ಕೆ ಜೆಸಿಬಿ ಆಪರೇಟರ್ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ನಾನು ಮಕ್ಕಳು & ಮಾವ ನಾಗನಾಥ ಇರುತ್ತೆವೆ, ದಿನಾಂಕ 22/12/2019 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನಾನು ಮನೆಯ ಮುಂದುಗಡೆ ಕೆಲಸ ಮಾಡುವಾಗ ನನ್ನ ಮಗ ದಿಗ್ವಿಜಯ ಇತನು ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಆಟವಾಡುತ್ತಾ ಹೋಗಿದ್ದು ಅದೇ ಸಮಯಕ್ಕೆ ನಮ್ಮೂರಿನ ರಾಜೇಂದ್ರ ಹದರೆ ರವರ ಅಶೋಕ ಲೇಲಂಡ ಮೀನಿ ಗೂಡ್ಸ ವಾಹನ ನಂ ಕೆಎ 32 ಡಿ 0426 ನೇದ್ದನ್ನು ಚಾಲಕ ನಡೆಸಿಕೊಂಡು ಬಂದು ನಮ್ಮ ಮನೆಯ ಮುಂದುಗಡೆ ನಿಲ್ಲಿಸಿದಾಗ ನನ್ನ ಮಗನು ವಾಹನದ ಮುಂದೆ ಆಟವಾಡುತ್ತಾ ಹೋದಾಗ ವಾಹನದ ಚಾಲಕ ಹಿಂದೆ ಮುಂದೆ ನೋಡದೆ ವಾಹನವನ್ನು ಚಾಲು ಮಾಡಿ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ನನ್ನ ಮಗನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗ ವಾಹನದ ಕೆಳಗಡೆ ಸಿಕ್ಕಿ ಬಿದ್ದಿದ್ದು ಕೂಡಲೆ ನಾನು ಹಾಗೂ ನನ್ನ ಮಾವ ನಾಗನಾಥ & ಪಕ್ಕದ ಮನೆಯ ಶರಣಪ್ಪ ತಂದೆ ಭೀಮಶಾ ಕಾಮಣೆ ಎಲ್ಲರೂ ಕೂಡಿ ಓಡಿ ಹೋಗಿ ನನ್ನ ಮಗನಿಗೆ ಗೂಡ್ಸ ವಾಹನದ ಕೆಳಗಡೆಯಿಂದ ಹೊರಗೆ ತೆಗೆದು ನೋಡಲಾಗಿ ಆತನ ಬಲಭಾಗದ ಮೆಲಕಿನ ಹತ್ತಿರ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಎದೆಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಪಘಾತ ಪಡಿಸಿದ ಗೂಡ್ಸ ವಾಹನದ ಚಾಲಕ ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಆತನ ಹೆಸರು ವಿಚಾರಿಸಲಾಗಿ ಚಂದ್ರಕಾಂತ ತಂದೆ ಅಣ್ಣಪ್ಪ ನಿರಗುಡಿ ಸಾ|| ಕಿಣ್ಣಿಸುಲ್ತಾನ ತಾ|| ಆಳಂದ ಗೊತ್ತಾಗಿರುತ್ತದೆ.ನಂತರ ನನ್ನ ಮಗನಿಗೆ ನಾವೆಲ್ಲರೂ ಹಾಗೂ ನಮ್ಮ ಗ್ರಾಮದ ದತ್ತಾ ತಂದೆ ಸೈಬಣ್ಣಾ ಅಟ್ಟೂರ, ದತ್ತಾತ್ರೇಯ ರಾಹುಸಾಬ ಜಮಾದಾರ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಳಂದ ಸರ್ಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಇಟ್ಟಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಕರಬಸಯ್ಯಾ ತಂದೆ ಸೋಮನಾತಯ್ಯಾ ಹಿರೇಮಠ ಸಾ|| ಬಿಳವಾರ ಗ್ರಾಮ ರವರು ದಿನಾಂಕ 22-12-2019 ರಂದು ಮದ್ಯಾಹ್ನ 1;00 ಗಂಟೆಯಿಂದ 1;30 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಸೋದರ ಅತ್ತೆ ಸರಸ್ವತಿ ಹಿರೇಮಠ ರವರ ಮನೆಯ ಬಾಗಿಲ ಕೀಲಿಯನ್ನು ಮುರಿದು, ಒಳಗೆ ಪ್ರವೇಶ ಮಾಡಿ ಕಬ್ಬಿಣದ ಪೆಟ್ಟಿಗಿಯನ್ನು ಹೊರಗೆ ತೆಗೆದುಕೋಂಡು ಹೋಗಿ ಅದರ ಕೊಂಡಿಯನ್ನು ಮುರಿದು ಅದರಲ್ಲಿದ್ದ ಒಟ್ಟು 50,000/- ರೂ ಕಿಮ್ಮತ್ತಿನ ಬಂಗಾರದ ಸಾಮಾನುಗಳು ಮತ್ತು 19,000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಬಂಗಾರದ ಸಾಮಾನುಗಳನ್ನು ಪತ್ತೆಮಾಡಿ ಕೊಡಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಆಣೆ : ಶ್ರೀ ಬಲಭೀಮ ತಂದೆ ಮೇಲಪ್ಪ ಬಳೂಂಡಗಿ ಸಾ|| ಆನೂರ ರವರು ದಿನಾಂಕ 22-12-2019 ರಂದು ರವಿವಾರ ದಿವಸ ಸಂಜೆ 6:00 ಗಂಟೆಯ ಸಮಯದಲ್ಲಿ ನಮ್ಮೂರಿನ ಬಸವೇಶ್ವರ ಚೌಕದಿಂದ ನನ್ನ ಮನೆಯ ಕಡೆಗೆ  ಬರುತ್ತಿರುವಾಗ ಆನೂರ ಗ್ರಾಮದವರೆ ಆದ 1) ಜಾವುದ್ದಿನ್ ತಂದೆ ಮಿಟ್ಟುಸಾಬ ಜೇರಟಗಿ ಹಾಗೂ ಆತನ ತಂದೆಯಾದ 2) ಮಿಟ್ಟುಸಾಬ ತಂದೆ ಇಮಾಮಸಾಬ ಜೇರಟಗಿ ಇವರಿಬ್ಬರು ಕೂಡಿಕೊಂಡು ನನ್ನನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಅಂಗಿಯ ಕಾಲರನ್ನು ಹಿಡಿದು ಜಗ್ಗುತ್ತಾ ಕೈಯಿಂದ ಹೊಡೆದು ಬೋಸಡಿ ಮಗನೆ ನನ್ನ ಮನೆಯ ಹಿಂದಿನ ಭಾಗದಲ್ಲಿ ಏರಟೇಲ ಟವರ ಕೂಡಿಸುತ್ತಿಯಾ ಮಗನೆ ಅಂತಾ ಕೈಯಿಂದ ಹೊಡೆಯುವುದಲ್ಲದೆ ನನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜಗ್ಗಾಡ ಹತ್ತಿದರು. ಆಗ ಅಲ್ಲಿಯೆ ಹತ್ತಿರದಲ್ಲಿದ್ದ ಕಾಳಪ್ಪ ತಂದೆ ಮಲಕಪ್ಪ ಮಾಂಗ (ಸಾ|| ಆನೂರ) ಈತನು ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.