ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-06-2021
ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 04-06-2021 ರಂದು ಫಿರ್ಯಾದಿ ಅಂಬಾದಾಸ ತಂದೆ ರಾವಸಾಬ ಬಿರಾದಾರ ಸಾ: ಲಾಡವಂತಿ ರವರ ಮಗನಾದ ತಂದೆ ಅಂಬಾದಾಸ ಬಿರಾದಾರ ವಯ: 18 ವರ್ಷ, ಜಾತಿ: ಮರಾಠಾ, ಸಾ: ಲಾಡವಂತಿ ಇತನು ಗ್ರಾಮದ ಬಲಭೀವÄ ತಂದೆ ಗೋವಿಂದ ಶಿಂಧೆ ವಯ: 18 ವರ್ಷ ಹಾಗೂ ಸುಮೀತ ತಂದೆ ಲಕ್ಷ್ಮಣ ಜಾಧವ ಇವರೆ ಜೊತೆಯಲ್ಲಿ ತಮ್ಮೂರ ಗ್ರಾಮ ಶಿವಾರದಲ್ಲಿರುವ ಇಂದುಬಾಯಿ ಗಂಡ ಅಶೋಕ ಜೋಗದನಕರ ರವರ ಹೊಲದಲ್ಲಿನ ಬಾವಿಯಲ್ಲಿ ಈಜಾಡಲು ಹೋಗಿ ಅಮೀತ ಇತನು ಬಾವಿಯಲ್ಲಿ ಈಜು ಕಲಿಯುವ ವೇಳೆಯಲ್ಲಿ ಆಕಸ್ಮಿಕವಾಗಿ ಬಾವಿಯ ನೀರನಲ್ಲಿ ಮುಳಗಿ ಮ್ರತಪಟ್ಟಿರುತ್ತಾನೆ, ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ತನ್ನ ಮಗನ ಸಾವಿನಲ್ಲಿ ನಮಗೆ ಯಾರ ಮೇಲೆಯು ಯಾವುದೇ ರೀತಿಯಾದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೇಟ್ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 32/2021, ಕಲಮ. 379 ಐಪಿಸಿ :-
ಫಿರ್ಯಾದಿ ನಾಗಯ್ಯಾ ಸ್ವಾವಿÄ ತಂದೆ ರಾಚಯ್ಯಾ ಸ್ವಾಮಿ ವಯ: 60 ವರ್ಷ, ಜಾತಿ: ಸ್ವಾಮಿ, ಸಾ: ರಾಂಪುರೆ ಕಾಲೋನಿ ಬೀದರ ರವರು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಸಂ. ಕೆ.ಎ-38/ವ್ಹಿ-3401, ಚಾಸಿಸ್ ನಂ. MBLHAR07XJHE37267, ಇಂಜಿನ್ ನಂ. HA10AGJHE42045, ಬಣ್ಣ: ಸಿಲ್ವರ್, ಮಾಡಲ್ 2018 ಹಾಗೂ ಅ.ಕಿ 48,000/- ರೂ., ನೇದನ್ನು ದಿನಾಂಕ 03-06-2021 ರಂದು 1230 ಗಂಟೆಯಿಂದ 1300 ಗಂಟೆಯ ಅವಧಿಯಲ್ಲಿ ಬೀದರ ನಗರದ ಯುವ ಕ್ರಾಂತಿ ಗಣೇಶ ಮಂದಿರ ಹತ್ತಿರ ಇರುವ ಫಿರ್ಯಾದಿಯವರ ಸಂಬಂಧಿಕರ ಮನೆಯ ಮುಂದೆ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 111/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 04-06-2021 ರಂದು ಫಿರ್ಯಾದಿ ಹಣಮಂತ ತಂದೆ ನರಸಪ್ಪಾ ವಡೆಪಲ್ಲಿ, ವಯ: 50 ವರ್ಷ, ಜಾತಿ: ಉಪಾರ, ಸಾ: ಬನ್ನಳ್ಳಿ ರವರು ತಮ್ಮೂರ ನರಸಪ್ಪಾ ತಂದೆ ತಿಪಣ್ಣಾ ಬೇಮಳಗಿ, ವಯ: 57 ವರ್ಷ ಇಬ್ಬರೂ ಫಾತ್ಮಾಪೂರದಲ್ಲಿ ಮನೆ ಕಟ್ಟಲು ಹೊಂಡಾ ಶೈನ ಮೋಟಾರ ಸೈಕಲ್ ನಂ. ಕೆಎ-39/ಎಲ್-2312 ನೇದರ ಮೇಲೆ ತಮ್ಮೂರಿಂದ ಫಾತ್ಮಾಪೂರಕ್ಕೆ ಹೋಗುವಾಗ ರಾ.ಹೆದ್ದಾರಿ ನಂ. 75 ಚಿಟಗುಪ್ಪಾ-ಹುಡಗಿ ರೋಡ ಮೇಲೆ ಚಿಟಗುಪ್ಪಾದ ಚಾಮರೆಡ್ಡಿ ರವರ ಹೋಲದ ಹತ್ತಿರ ತಿರುವಿನಲ್ಲಿ ಹಿಂದಿನಿಂದ ಬಂದ ಮೋಟರ ಸೈಕಲ ಚಾಲಕನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಮೋಟಾರ ಸೈಕಲದೊಂದಿಗೆ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯವರ ಬಲಗಾಲ ಹತ್ತಿರ ರಕ್ತಗಾಯ, ಬಲಮೊಳಕೈಗೆ, ಬಲಗಡೆ ಭುಜಕ್ಕೆ ತರಚಿದ ಗಾಯ, ಬಲಗಡೆ ತಲೆಗೆ ಗುಪ್ತಗಾಯವಾಗಿರುತ್ತದೆ ಹಾಗೂ ನರಸಪ್ಪಾ ರವರಿಗೆ ಬಲಗಾಲ ಮೊಳಕಾಲ ಕೆಳಗಡೆ ಭಾರಿ ರಕ್ತಗಾಯ, ಬಲಗೈ ಮುಂಗೈಗೆ ಗುಪ್ತಗಾಯವಾಗಿರುತ್ತದೆ, ನಂತರ ದಾರಿ ಹೋಕರು 108 ಅಂಬುಲೇನ್ಸ್ ಗೆ ಕರೆ ಅದರಲ್ಲಿ ಗಯಾಗೊಂಡ ಇಬ್ಬರು ಚಿಕಿತ್ಸೆಗಾಗಿ ಚಿಟಗುಪ್ಪಾ ಸರ್ಕಾರಿ ಆಸ್ಪತ್ರಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 49/2021, ಕಲಂ. 420 ಐಪಿಸಿ :-
ದಿನಾಂಕ 04-06-2021 ರಂದು ಫಿರ್ಯಾದಿ ಅನ್ಸಾರಿ ಎಮ್.ಎ.ಕೆ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಜಂಟಿ ಕೃಷಿ ನಿರ್ದೇಶಕರ ಕಛೇರಿ ಬೀದರ ರವರು ಮಂಠಾಳ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಸಲ್ಲಿಸಿದ್ದು ಅದನ್ನು ಪರಿಶೀಲಿಸಿ ನೋಡಲು ದಿನಾಂಕ 02-06-2021 ರಂದು ಬಸವಕಲ್ಯಾಣ ತಾಲ್ಲೂಕಿನ ಯಲ್ಲದಗುಂಡಿ ಗ್ರಾಮದ ಮಹಾದೇವ ತಂದೆ ಭೀಮರಾವ ರವರ ಗೋದಾಮಿನಲ್ಲಿ ಭೀಮಾ ಕೃಷ್ಣಾ ಕೇಮಿಕಲ್ಸ್ & ಫರ್ಟಿಲೈಜರ್ಸ್ ಪ್ರಾವೀಟ್ ಲಿ. ಕಲಬುರ್ಗಿ ರವರ soil Conditioner (Ca:Mg:S:20:05:20) ಅನ್ನು ರಸಗೊಬ್ಬರವೆಂದು ಉಮೇಶ ತಂದೆ ಮಾಹಾದೇವ ಸಾ: ಜಲಸಂಗಿ sales Executive ಮತ್ತು ಭಿಮಾ ಕೃಷ್ಣಾ ಕೆಮಿಕಲ್ಸ್ ಮತ್ತು ಫರ್ಟಿಲೈಜರ್ಸ್ ಕಲಬುರ್ಗಿ ರವರು ಮಾರಾಟ ಮಡುತ್ತಿರುವುದನ್ನು ಪತ್ತೆ ಮಾಡಿ ರಸಗೊಬ್ಬರ ನಿಯಂತ್ರಣ ಆದೇಶ 1985 ರ ಕಲಂ. 28 (3) ಹಾಗು ಕಲಂ. 19(c) (vi) ರ ಅಧಿಕಾರಿ ಪದಾರ್ಥವನ್ನು ಜಪ್ತಿ ಮಾಡಲಾಗಿರುವ ವರದಿಯನ್ನು ಅಗತ್ಯ ಸರಕು ಸೇವೆಗಳ ಕಾಯ್ದೆ 1955 ರನ್ವಯ ಮಾನ್ಯ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಾಗಿರುತ್ತದೆ, ಪ್ರಯುಕ್ತ ಉಲ್ಲೇಖಿತ ಪತ್ರದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಸದರಿ ಪದಾರ್ಥವನ್ನು ಮುಟ್ಟುಗೋಲು ಹಾಕಿಕೊಂಡು ಹಾಗೂ ಸದರಿ ಪ್ರಕರಣವನ್ನು ಕಲಂ. 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿರುತ್ತಾರೆ, ರೈತರಿಗೆ ಮೋಸ ಮಾಡುವ ಉದ್ದೇಶದಿಂದ ಈ ಕೃತ್ಯ ಏಸಗಿರುತ್ತಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ, ಆರೋಪಿತರಾದ 1) ಭೀಮಾ ಕೃಷ್ಣಾ ಕೇಮಿಕಲ್ಸ್ & ¥sÀರ್ಟಿಲೈಜರ್ಸ್ ಪ್ರಾವೀಟ್ ಲಿ. ಶಾಪ್ ನಂ. 1, 2& 3 ಸಮರ್ಥ ಕಾಂಪ್ಲೆಕ್ಸ್ ರಾಮ ಮಂದಿರ ಎದುರುಗಡೆ ಜವರ್ಗಿ ರೋಡ ಕಲಬುರ್ಗಿ, 2) ಉಮೇಶ ತಂದೆ ಮಹಾದೇವ ಸಾ: ಜಲಸಂಗಿ ಗ್ರಾಮ ಹಾಗೂ 3) ಮಹಾದೇವ ತಂದೆ ಬೀಮರಾವ ಜಂಗಾಲೆ ಸಾ: ಯಲ್ಲದಗುಂಡಿ ಗ್ರಾಮ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 101/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 04-06-2021 ರಂದು ಬಸವಕಲ್ಯಾಣ ನಗರದ ಸಂಗಮೇಶ್ವರ ಕಾಲೋನಿಯಲ್ಲಿ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಶಿವರಾಜ ಎ.ಎಸ್.ಐ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಎ.ಎಸ್.ಐರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿವಯರೊಡನೆ ಬಸವಕಲ್ಯಾಣ ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ಹನುಮಾನ ಮಂದಿರದ ಹತ್ತಿರದಿಂದ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸಂಗಮೇಶ್ವರ ಕಾಲೋನಿಯಲ್ಲಿರುವ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಆಕೀಬ ತಂದೆ ಅನ್ವರ ಖಾನ ವಯ: 19 ವರ್ಷ, ಜಾತಿ: ಮುಸ್ಲಿಂ ಹಾಗೂ 2) ಖಲೀಲ್ ತಂದೆ ದಸ್ತಗೀರ ಶೇಖ ವಯ: 19 ವರ್ಷ, ಜಾತಿ: ಮುಸ್ಲಿಂ ಇಬ್ಬರು ಸಾ: ತಾಜ ಕಾಲೋನಿ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಅವರಿಂದ 1) ನಗದು ಹಣ 1200/- ರೂ., 2) 2 ಮಟಕಾ ಚೀಟಿ ಹಾಗೂ 3) 2 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.