ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-08-2020
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 63/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 17-08-2020 ರಂದು ಮುಡಬಿ ಗ್ರಾಮದಲ್ಲಿನ ಕಲಬುರಗಿ ರೋಡಿನ ಹತ್ತಿರ ಸರಕಾರಿ ಆಸ್ಪತ್ರೆಗೆ ಹೋಗುವ ದಾರಿಯ ಸಾರ್ವಜನಿಕ ಸ್ಥಳದಲ್ಲಿ ವಿನೋದ ತಂದೆ ತುಕಾರಾಮ ನಾಣಾಪೂರ ಎಂಬುವವನು ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುವದು ಮಾಡುತ್ತಿದ್ದಾನೆಂದು ಅರುಣಕುಮಾರ ಪಿ.ಎಸ್.ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಡಬಿ ಗ್ರಾಮದ ವಾಲ್ಮೀಕಿ ಚೌಕ ಹತ್ತಿರ ಹೋಗಿ ಒಂದು ಕಟ್ಟಡದ ಮರೆಯಾಗಿ ನಿಂತು ನೋಡಲು ಅಲ್ಲಿ ಸರಕಾರಿ ಆಸ್ಪತ್ರೆಗೆ ಹೋಗುವ ದಾರಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಿನೋದ ತಂದೆ ತುಕಾರಾಮ ನಾಣಾಪೂರ ಸಾ: ರೇಕುಳಗಿ, ಸದ್ಯ: ಮುಡಬಿ ಇತನು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ 01/- ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿರುವುದನ್ನು ನೋಡಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನನ್ನು ಹಿಡಿದು ಆತನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 3320/- ರೂಪಾಯಿ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಹಾಗೂ ಎರಡು ನೋಟ ಬುಕ್ ಹಾಳೆಯ ಎರಡು ಚೀಟಿಗಳು ಅದರ ಮೇಲೆ ಮಟಕಾ ನಂಬರ ಬರೆದದ್ದು ಸಿಕ್ಕಿದ್ದು, ಅವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 76/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 17-08-2020 ರಂದು ಮನ್ನಳ್ಳಿ ಬಾರ್ಡರ ಹತ್ತಿರ ಇರುವ ಗಣೇಶ ಎಂಬುವವರ ಮೌಲಿ ಧಾಬಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಕಾನೂನು ಬಾಹಿರವಾಗಿ ಅಂದರ ಬಾಹರ ಎಂಬ ಇಸ್ಪಿಟ ಎಲೆಗಳ ನಶೀಬಿನ ಜೂಜಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಆಟವಾಡುತ್ತಿದ್ದಾರೆಂದು ಕರೆ ಮುಖಾಂತರ ಕು: ಜೈಶ್ರೀ ಪಿಎಸ್ಐ ಮಂಠಾಳ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ತಿಳಿದು ಬಂದ ಮೆರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮನ್ನಳ್ಳಿ ಬಾರ್ಡರ ಹತ್ತಿರ ಇರುವ ಮೌಲಿ ಧಾಬಾದ ಹತ್ತಿರ ಹೋಗಿ ನೋಡಲು ಬಾತ್ಮಿಯಂತೆ ಆರೋಪಿತರಾದ 1) ಮನೋಜ ತಂದೆ ಮಹಾದು ಮೋರೆ ವಯ: 25 ವರ್ಷ, ಜಾತಿ: ಮರಾಠಾ, ಸಾ: ತಳಮೋಡ, ತಾ: ಉಮರ್ಗಾ (ಎಮ್.ಹೆಚ್), 2) ನವನಾಥ ತಂದೆ ರಾಜೇಂದ್ರ ಮೋರೆ ವಯ: 28 ವರ್ಷ, ಜಾತಿ: ಮರಾಠಾ, ಸಾ: ತಳಮೋಡ, ತಾ: ಉಮರ್ಗಾ (ಎಮ್.ಹೆಚ್), 3) ಜ್ಞಾನೇಶ್ವರ ತಂದೆ ಲಕ್ಷ್ಮಣ ಬಗದೂರೆ ವಯ: 32 ವರ್ಷ, ಜಾತಿ: ಮರಾಠಾ, ಸಾ: ಮನ್ನಳ್ಳಿ, ತಾ: ಬಸವಕಲ್ಯಾಣ, 4) ದೀಪಕ ತಂದೆ ಬಾಲಾಜಿ ಜವಳಗೆ ವಯ: 25 ವರ್ಷ, ಜಾತಿ: ಮರಾಠಾ, ಸಾ: ಮಿರಗಾಳಿ, ತಾ: ನೀಲಂಗಾ (ಎಮ್.ಹೆಚ್), 5) ತುಕಾರಾಮ ತಂದೆ ದಾದಾರಾವ ಮುಗಳೆ ವಯ: 27 ವರ್ಷ, ಜಾತಿ: ಮರಾಠಾ, ಸಾ: ಸಿರಗೂರ, ತಾ: ಬಸವಕಲ್ಯಾಣ ಹಾಗೂ 6) ಮಹೇಶ ತಂದೆ ಶ್ರೀಮಂತ ಜಮಾದಾರ ವಯ: 30 ವರ್ಷ, ಜಾತಿ: ಎಸ್.ಟಿ ಬೇಡರ್, ಸಾ: ಭಕನಾಳ, ತಾ: ಬಸವಕಲ್ಯಾಣ ಇವರೆಲ್ಲರೂ ಕೂಡಿ ಸದರಿ ಮೌಲಿ ಧಾಬಾದ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಗೋಲಾಕಾರವಾಗಿ ಕುಳಿತು ಇಸ್ಪಿಟ ಎಲೆಗಳ ಅಂದರ ಬಾಹರ ನಶೀಬಿನ ಜೂಜಾಟವನ್ನು ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ನೋಡಿ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 14,840/- ರೂ. ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 174/2020, ಕಲಂ. 457, 380 ಐಪಿಸಿ :-
ದಿನಾಂಕ 16-08-2020 ರಂದು 2300 ಗಂಟೆಯಿಂದ ದಿನಾಂಕ 17-08-2020 ರಂದು 0600 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ರಮೇಶ ತಂದೆ ಕಂಟೆಪ್ಪ ಕಮಲಾಪುರೆ, ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ತಳವಾಡಿ(ಕೆ) ರವರ ಅಂಗಡಿಯ ಶೆಟರ ತೆಗೆದು ಅಂಗಡಿಯಲ್ಲಿ ಪ್ರವೇಶ ಮಾಡಿ ಸಿಸಿ ಟಿವಿ ಕ್ಯಾಮಾರಾ ಮತ್ತು ನಗದು ಹಣ ಹೀಗೆ ಒಟ್ಟು 12,000/- ರೂ. ಬೆಲೆ ಬಾಳುವದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.